ಓಮ್ನಿ ಗೆ ಲಾರಿ ಡಿಕ್ಕಿ ಗ್ರೇಸಿಯನ್ ವೇಗಸ್ ಅವರಿಗೆ ಗಂಭೀರ ಗಾಯ

0

ಬೆಳ್ತಂಗಡಿ; ಉಜಿರೆ-ಧರ್ಮಸ್ಥಳ ರಸ್ತೆಯ ನೀರ ಚಿಲುಮೆಯ ಸಮೀಪ ಮೀನು ಸಾಗಾಟದ ಲಾರಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದು ಕಾರಿನ ಚಾಲಕ ಗಾಯಗೊಂಡ ಘಟನೆ ಭಾನುವಾರ ನಡೆಯಿತು.ಧರ್ಮಸ್ಥಳ ದಿಂದ ಉಜಿರೆ ಕಡೆಗೆ ಬರುತ್ತಿದ್ದ ಓಮ್ನಿ ಕಾರಿಗೆ ಲಾರಿ ಡಿಕ್ಕಿಹೊಡೆದಿದೆ.ಓಮ್ನಿ ಚಾಲಕ ಕಾಂಗ್ರೆಸ್ ಮುಖಂಡ ಗ್ರೇಸಿಯಸ್ ವೇಗಸ್ ಎಂಬವರು ಅಪಘಾತದಲ್ಲಿ ಗಾಯಗೊಂಡಿದ್ದು ಅವರಿಗೆ ಉಜಿರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆಅಪಘಾತದಿಂದ ಲಾರಿ ಚರಂಡಿಗೆ ಇಳಿದರೆ, ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೆಳ್ತಂಗಡಿ; ಉಜಿರೆ-ಧರ್ಮಸ್ಥಳ ರಸ್ತೆಯ ನೀರ ಚಿಲುಮೆಯ ಸಮೀಪ ಮೀನು ಸಾಗಾಟದ ಲಾರಿ...

ಇಂದು ಕಾಂಗ್ರೆಸ್ ಪಕ್ಷದಿಂದ “ನನ್ನ ಬೂತ್ ನನ್ನ ಜವಾಬ್ದಾರಿ” ಕಾರ್ಯಕ್ರಮ

0

ಬೆಳ್ತಂಗಡಿ; ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಸಮಿತಿಗಳ ನೇತೃತ್ವದಲ್ಲಿಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 241 ಬೂತ್ ಗಳಲ್ಲಿ ಎ 21ಭಾನುವಾರದಂದು "ನನ್ನ ಬೂತ್ ನನ್ನ ಜವಾಬ್ದಾರಿ" ಎಂಬ ಶಿರ್ಷಿಕೆಯೊಂದಿಗೆ ಮನೆ ಬೇಟಿ ಮತ್ತು ಬೂತ್ ಸಭೆಗಳು ನಡೆಯಲಿದೆ. ಪಕ್ಷದ ಎಲ್ಲ ಮುಖಂಡರು ,ಕಾರ್ಯಕರ್ತರು ತಮ್ಮ ತಮ್ಮ ಬೂತ್ ನಲ್ಲಿ ಬೂತ್ ಪದಾಧಿಕಾರಿಗಳೊಂದಿಗೆ ಒಟ್ಟಿಗೆ ಸೇರಿಕೊಂಡು ತಮ್ಮ ಬೂತ್ ನಲ್ಲಿ ಮತಯಾಚನೆ ಮಾಡಲಿದ್ದಾರೆ.ಒಂದೇ ದಿನದಲ್ಲಿ ತಾಲೂಕಿನ ಎಲ್ಲ ಬೂತ್ ಗಳಲ್ಲಿ ಎಲ್ಲ ಮನೆಗಳನ್ನೂ ತಲುಪುವ ಹಾಗೂ ಪಕ್ಷದ...

ನಡ್ತಿಕಲ್ಲು ಮನೆಗೆ ಸಿಡಲು ಬಡಿದು ಬಾಲಕಿಗೆ ಗಾಯ

0

ಹೊಸಂಗಡಿ: ಬಡಕೋಡಿ ಗ್ರಾಮದ ನಡ್ತಿಕಲ್ಲು ಎಂಬಲ್ಲಿ ಮನೆಗೆ ಸಿಡಲು ಬಡಿದು ಬಾಲಕಿಯೊಬ್ಬಳು ಗಾಯಗೊಂಡ ಘಟನೆ ಸಂಭವಿಸಿದೆ.ಸ್ಥಳೀಯ ನಿವಾಸಿ ನಾಗೇಶ್ ನಾಯ್ಕ ಇವರ ಮನೆಗೆ ಎ.19ರಂದು ರಾತ್ರಿ ಬಂದ ಸಿಡಿಲು ಮಳೆಯ ಸಂದರ್ಭದಲ್ಲಿ ಸಿಡಲು ಬಡಿದಿದೆ ಮನೆಯಲ್ಲಿದ್ದ ಬಾಲಕಿ ಭಾನ್ವಿ ಕಾಲಿಗೆ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಮನೆಯ ಗೋಡೆಯು ಸಿಡಿಲಿನ ಅಬ್ಬರಕ್ಕೆ ಬಿರುಕು ಬಿದ್ದಿದೆ.

ಉಜಿರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ; ಬೃಹತ್ ರೋಡ್ ಶೋ

0

ಬೆಳ್ತಂಗಡಿ:"ದೇಶದ ಪ್ರಜ್ಞಾವಂತಮತದಾರರು ಭಾರತದ ಬೆಳವಣಿಗೆಗೆ ಕಾತುರರಾಗಿದ್ದಾರೆ. ನೀಡಿದ ಭರವಸೆಗಳನ್ನು ಈಡೇರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿ ಪ್ರದಾನಿಯಾಗುವುದನ್ನು ಯಾವ ದುಷ್ಟಶಕ್ತಿಯಿಂದ ಸಾಧ್ಯವಿಲ್ಲ.ದ.ಕ ಜಿಲ್ಲೆಯ ಕಾರ್ಯಕರ್ತರ ಉತ್ಸಾಹ ನೋಡಿದರೆ 3 ಲಕ್ಷಕ್ಕು ಅಧಿಕ ಮತಗಳಿಂದ ಬಿಜೆಪಿ ಗೆಲುವು ಖಚಿತ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅವರು ಶನಿವಾರ ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಪರ ಮತಯಾಚನೆಗೆ ಉಜಿರೆಯಲ್ಲಿ ಬೃಹತ್ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದರು. "ರಾಜ್ಯದಲ್ಲಿ ಕಾಂಗ್ರೆಸ್ ಅದಿಕಾರಕ್ಕೆ ಬಂದ ನಂತರ ಬರಗಾಲ ತಾಂಡವಾಡುತ್ತಿದೆ.ಜಾನುವಾರುಗಳಿಗೆ ಮೇವಿನ ಕೊರತೆಯಾಗುತ್ತಿದೆ. ಕಾನೂನು...

ಕರಾಯದಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

0

ಕರಾಯ; ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಮನೆ ನಿವಾಸಿ ನಂದನ್ (13) ಎಂಬಾತ ಮನೆಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ತನ್ನ ಮಾವನ ಮನೆಯಲ್ಲಿದ್ದು ಉಪ್ಪಿನಂಗಡಿಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ. ಈತ ಏಳನೇ ತರಗತಿ ಉತ್ತೀರ್ಣನಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ.ಶುಕ್ರವಾರದಂದು...

ಎ.20 ಉಜಿರೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ರೋಡ್ ಶೋ

0

ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ರವರಿಂದ ಬೃಹತ್ ರೋಡ್ ಶೋ ಎ.20ರಂದು ಸಂಜೆ 3.30ಕ್ಕೆ ಉಜಿರೆ ಎಸ್.ಡಿ.ಎಂ ಕಾಲೇಜು ಬಳಿಯಿಂದ ಶ್ರೀ ಜನಾರ್ದನ ದೇವಸ್ಥಾನದವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಲೋಕಸಭಾದ ಬಿಜೆಪಿ ಅಭ್ಯರ್ಥಿ ಕ್ಯಾ, ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಹಾಗೂ ಬಿಜೆಪಿ ಪ್ರಮುಖರು ಭಾಗವಹಿಸಲಿದ್ದಾರೆ.

ನ್ಯಾಯವಾದಿ ಕೆ ಪ್ರಕಾಶ್ ಶೆಣೈ ಕಾಂಗ್ರೇಸ್ ಸೇರ್ಪಡೆ.

0

ಬೆಳ್ತಂಗಡಿಯ ನ್ಯಾಯವಾದಿ, ಜಿ ಎಸ್ ಬಿ ಮುಖಂಡ ಕೆ ಪ್ರಕಾಶ್ ಶೆಣೈ ಯವರು ಇಂದು ಬೆಳ್ತಂಗಡಿಯ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮಾಜಿ ಶಾಸಕರಾದ ಜೆ.ಆರ್ ಲೋಬೋ ಮತ್ತು ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರ ಜೊತೆಯಲ್ಲಿ ಇವರ ಸಹೋದರ ಪದ್ಮನಾಭ ಶೆಣೈ, ಸಹೋದರಿ ದಿವ್ಯಾಲಕ್ಷ್ಮಿ ಮತ್ತು ರೋಹಿತ್ ನಾಯ್ಕ ರವರು ಕಾಂಗ್ರೇಸ್ ಪಕ್ಷವನ್ನು ಸೇರಿದರು. ಈ ಸಂದರ್ಭದಲ್ಲಿ ಮಾಜಿ ಕೆ ಪಿ ಸಿ ಸಿ...

ಮೀರಾಲ್ಯಾಬ್ ನ ಜೋಸೆಫ್ ಹೃದಯಾಘಾತದಿಂದ ನಿಧನ

0

ಬೆಳ್ತಂಗಡಿ; ಉಜಿರೆ ನಿವಾಸಿ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳದಲ್ಲಿ ಮೀರಾ ಲ್ಯಾಬ್ ನಡೆಸುತ್ತಿದ್ದ ಜೋಸೆಫ್ ಮೇಲಾಟ್(63) ಅವರು ಉಜಿರೆಯ ಮನೆಯಲ್ಲಿ ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ ನಿನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಇತ್ತೀಚೆಗೆ ಮನೆಯಲ್ಲಿಯೇ ಇದ್ದರು. ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಪತ್ನಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು , ಪತ್ನಿ ಓರ್ವ ಪುತ್ರ , ಓರ್ವ ಪುತ್ರಿಯನ್ನು ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರ ಶುಕ್ರವಾರ ಸಂಜೆ 4ಗಂಟೆಗೆ ಉಜಿರೆಯ ಸೈಂಟ್ ಜಾರ್ಜ್ ಚರ್ಚ್ ನಲ್ಲಿ ನಡೆಯಲಿದೆ

ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ

0

ಗದಗ; ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿರುವ ಘಟನೆ ನಗರದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.ನಗರದ ಚನ್ನಮ್ಮ ವೃತ್ತದ ಸಮೀಪ ಇರುವ ದಾಸರ ಓಣಿಯಲ್ಲಿ ಈ ಘಟನೆ ನಡೆದಿದ್ದು, ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ ಬಾಕಳೆ (27), ಕೊಪ್ಪಳದ ಪರುಶುರಾಮ (55), ಲಕ್ಷ್ಮಿ (45) ಮತ್ತು ಆಕಾಂಕ್ಷ (17) ಕೊಲೆಯಾದವರು. ಸುನಂದ ಬಾಕಳೆ ಪುತ್ರ ಕಾರ್ತಿಕ ಬಾಕಳೆ ಮದುವೆ ನಿಶ್ಚಯ ಕಾರ್ಯಕ್ರಮದ ನಿಮಿತ್ತ ಸಂಬಂಧಿಗಳು ಏ. 17ರಂದು ಮನೆಗೆ ಬಂದಿದ್ದರು. ಏ.18ರಂದು ರಾತ್ರಿ...

ತಾಲೂಕಿನ ವಿವಿದೆಡೆ ಜಿಲ್ಲಾಧಿಕಾರಿ ಭೇಟಿ; ಚುನಾವಣಾ ಸಿದ್ದತೆಗಳ ಪರಿಶೀಲನೆ

0

ಬೆಳ್ತಂಗಡಿ; ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಗುರುವಾರ ನಾರಾವಿ ಚೆಕ್ ಪೋಸ್ಟ್ ಹಾಗೂ ಎಳನೀರು ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆಳ್ತಂಗಡಿ ತಾಲೂಕಿನಲ್ಲಿ ನಾರಾವಿ ಮತ್ತು ಚಾರ್ಮಾಡಿಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವುದಕ್ಕಾಗಿ ತೆರೆದುಕೊಂಡಿರುವ ಈ ಚೆಕ್ ಪೋಸ್ಟ್ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು,ಇಲ್ಲಿಂದ ಹೋಗುವ ಪ್ರತಿ ವಾಹನವನ್ನು ತಪಾಸಣೆ ನಡೆಸಿ ಮುಂದುವರಿಯಲು ಅವಕಾಶ ನೀಡಲಾಗುತ್ತದೆ. ನಾರಾವಿ ಚೆಕ್ ಪೋಸ್ಟ್ ನ ಕಾರ್ಯನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಹಲವು ಸಲಹೆ...