
ವೇಣೂರು; ಪದವಿ ಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ,ರಾಷ್ಟೀಯ ಸೇವಾ ಯೋಜನೆ,ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜು ಮೂಡಬಿದ್ರಿ ರಾಷ್ಟೀಯ ಸೇವಾ ಯೋಜನೆ ಘಟದ 7 ದಿನಗಳ ವಾರ್ಷಿಕ ವಿಶೇಷ ಶಿಬಿರ ಪಡ್ಡಂದಡ್ಕ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಪ್ರಗತಿಪರ ಕೃಷಿಕ ಬಾಲ್ಯ ಶಂಕರ್ ಭಟ್ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತಾಡಿ ಈ ಶಿಬಿರವು ವಿದ್ಯಾರ್ಥಿಗಳಿಗೆ ಜೀವನಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತೆ ಮತ್ತು ಜನಸಾಮಾನ್ಯರೊಂದಿಗೆ ಬೆರೆಯುವ ಅವರ ಸಮಸ್ಯೆಯನ್ನು ಅರಿಯುವ ಅವಕಾಶ ಈ ಶಿಬಿರ ನೀಡುತ್ತೆ ಎಂದರು
ಅತಿಥಿಯಾಗಿ ಆಗಮಿಸಿದ ಉದ್ಯಮಿ ಧರಣೇಂದ್ರ ಕುಮಾರ್, ಈ ಶಿಬಿರವು ವಿದ್ಯಾರ್ಥಿಗಳಿಗೆ ಹಳ್ಳಿಯ ಜೀವನ, ವ್ಯೆಕ್ತಿವಿಕಸನ,ಬಾವೈಕತೆ ಇತ್ಯಾದಿ ಬಗ್ಗೆ ಅನುಭವ ನೀಡುತ್ತೆಂದರು.
ಪಡ್ಡಂದಡ್ಕ ನೂರುಲ್ ಹುಧಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಶುಭ ಹಾರೈಸಿ ಈ ಶಿಬಿರವನ್ನು ಯಶಸ್ವಿ ಮಾಡುವ ಜವಾಬ್ದಾರಿ ಈ ಊರಿನ ನಾಗರೀಕರದ್ದು ಮತ್ತು ಶಿಬಿರಾರ್ಥಿಗಳನ್ನು ಸುಂದರ ನೆನಪುಗಳು ಬರುವಂತೆ ಎಲ್ಲಾ ವಿಧದ ಸಹಕಾರ ನೀಡತ್ತೇವೆ ಎಂದರು.

ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಅಧಿಕಾರಿ ಎಚ್ ಎನ್ ಜಗದೀಶ್ ಮಾತಾಡಿ,ಭವಿಷ್ಯದಲ್ಲಿ ಎದುರಾಗುವಂತ ಸಂದರ್ಭ ಅನುಭವಿಸಲು ಈ ಶಿಬಿರ ಸಹಕಾರಿ ಮತ್ತು ಯಾವುದೇ ಆತಂಕ ಹಿಂಜರಿಕೆ ಇಲ್ಲದೆ ಭಾಗವಹಿಸಿ ಮತ್ತು ನಿಮ್ಮ ನಡೆ ,ನುಡಿ ಪ್ರಾಮಾಣಿಕವಾಗಿರಲಿ ಎಂದು ಶಿಬಿರತಿಗಳಿಗೆ ಕಿವಿ ಮಾತು ಹೇಳಿ ಶುಭ ಹಾರೈಸಿದರು.
ಹೊಸಂಗಡಿ ಗ್ರಾ ಪಂ ಪಿಡಿಒ ಮಾತಾಡಿ ಶುಭ ಹಾರೈಸಿದರು.
ಪ್ರೊ ರಮೇಶ್ ಭಟ್ , ಪ್ರಾಂಶುಪಾಲರು ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜು ಮೂಡಬಿದ್ರೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ / ರಾಧಾಕೃಷ್ಣ, ಪ್ರಾಂಶುಪಾಲರು ಹಾಗು ಕಾರ್ಯದರ್ಶಿಗಳು ಎಸ್ ಎಮ್ ಸಿ ಟ್ರಸ್ಟ್ ಶ್ರೀ ಮಹಾವೀರ ಕಾಲೇಜು ಮೂಡಬಿದ್ರೆ ಮಾತಾಡಿ,ಶಿಬಾರ್ಥಿಗಳಿಗೆ ಜೀವನ ಪರಿಯಂತ ನೆನಪುಡುವಂತಹ ಸುಂದರ ಅನುಭವಗಳನ್ನು ಮತ್ತು ಜೀವನದ ಮೌಲ್ಯಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತೆ ಮತ್ತು ಅವುಗಳನ್ನು ಮುಂದಿನ ಜೀವನದಲ್ಲಿ ಅಳವಡಿಸುವಂತೆ ಶಿಬಿರಾರ್ಥಿಗಳಿಗೆ ಕರೆನೀಡಿದರು.

ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ಹೊಸಂಗಡಿ, ಪ್ರಕಾಶ್ ದೇವಾಡಿಗ ,ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ವಿನೋಧ ಕುಮಾರಿ , ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ಹರೀಶ್ , ರಾಷ್ಟ್ರೀಯಾ ಸೇವಾ ಯೋಜನೆ ಕಾರ್ಯದರ್ಶಿಗಳಾದ ಪೂಜಾ, ಶಿವಾನಂದ ಉಪಸ್ಥಿತರಿದ್ದರು.ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಧಿಕಾರಿ ಶ್ರೀಮತಿ ರಶ್ಮಿತಾ ಸ್ವಾಗತಿಸಿದರು.ಉಪನ್ಯಾಸಕಿ ಕುಮಾರಿ ಕವಿತಾ ಮತ್ತು ಶ್ರೀಮತಿ ಸುಪ್ರಿತಾ ಕಾರ್ಯಕ್ರಮ ಸಂಯೋಜಿಸಿದರು.