LATEST ARTICLES

ಸುಮಂತ್ ಕೊಲೆ ಪ್ರಕರಣ ಸಮಗ್ರ ತನಿಖೆ ಶಾಸಕ ಹರೀಶ್ ಪೂಂಜ ಒತ್ತಾಯ

0

ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ ಎನ್ನುವ ಬಾಲಕನ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ತನಿಖೆಯನ್ನು ಅತ್ಯಂತ ಕೂಲಂಕುಷವಾಗಿ ನಡೆಸಿ ಶೀಘ್ರದಲ್ಲಿ ಸತ್ಯಾ ಸತ್ಯತೆಯನ್ನು ಜನರ ಮುಂದಿಡಬೇಕೆಂದು ಶಾಸಕ ಹರೀಶ್ ಪೂಂಜರವರು ಗೃಹ ಸಚಿವರಾದ ಜಿ ಪರಮೇಶ್ವರ್ ರವರಿಗೆ ಆಗ್ರಹಿಸಿದರು. ಸುಮಂತ್‌ನ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಕುಟುಂಬಸ್ಥರು ಹಾಗೂ ಸ್ಥಳೀಯ ಸಾರ್ವಜನಿಕರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ನಡೆಯದಂತೆ, ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಶೀಘ್ರದಲ್ಲೇ ನಿಖರವಾದ ಸತ್ಯವನ್ನು ಜನರ ಮುಂದಿಡಬೇಕು ಎಂದು ಶಾಸಕರು ಗೃಹ ಸಚಿವರನ್ನು...

ಸುಮಂತ್ ಕೊಲೆ ಪ್ರಕರಣ‌ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಫೆ 4 ರಂದು ಸಿಪಿಐಎಂ ಪ್ರತಿಭಟನೆ; ಬಿ.ಎಂ ಭಟ್

0

ಬೆಳ್ತಂಗಡಿ;  ಬಾಲಕ ಸುಮಂತ್ ಕೊಲೆಯಾಗಿ ವಾರಗಳೇ ಕಳೆದವು. ಆದರೆ ಕೊಲೆಗಾರರ ಪತ್ತೆ ಇನ್ನೂ ಆಗಿಲ್ಲ. ಇದು ಅತ್ಯಂತ‌ ವಿಷಾಧನೀಯ ಸಂಗತಿ ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಆಪಾದಿಸಿರುಸುತ್ತಾರೆ.ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಾಚಾರ, ಕೊಲೆಯಾದರೆ ಬಹುತೇಕ ಪ್ರಕರಣಗಳಲ್ಲಿ ಅಪರಾದಿಗಳು ಪತ್ತೆ ಆಗುತ್ತಿಲ್ಲ‌ ಎಂಬುದು ಆಘಾತಕಾರಿಯಾದ ವಿಚಾರ. ಕರ್ನಾಟಕ ಪೋಲೀಸ್ ಯಾವತ್ತೂ ಸೋಲುವ ಇಲಾಖೆ ಅಲ್ಲ.‌ ಅದರಲ್ಲೂ ಈಗಿನ SP ಯವರು ದಕ್ಷ ಎಂದು ಹೆಸರು ಗಳಿಸಿದವರು. ಈ ಹೆಗ್ಗಳಿಕೆಗಳು ಬೆಳ್ತಂಗಡಿ ಪಾಲಿಗೆ ಅಲ್ಲ ಎನ್ನುವಂತೆ ಆಗಬಾರದಲ್ಲವೇ ಎಂದವರು ಪ್ರಶ್ನಿಸಿದರು?**ಇದೀಗ ಸುಮಂತ್ ಕೊಲೆ ಪ್ರಕರಣದಲ್ಲಾದರೂ ಪೋಲೀಸ್...

ಬೆಳ್ತಂಗಡಿ ರೋಷನ್‌ ಕಿರಣ್ ಡಿಸೋಜ ನಾಪತ್ತೆ

0

ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಚರ್ಚ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರೋಷನ್ ಕಿರಣ್ ಡಿಸೋಜ(೩೬) ಅವರು ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿಯ ಸಿಕ್ವೇರಾ ಟ್ರಾವೆಲ್ಸ್‌ನ ಪಿಕಪ್‌ನಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದ ರೋಷನ್ ಡಿಸೋಜ ಅವರು ಜ.24ರಂದು ತನ್ನ ಪತ್ನಿಗೆ ಕರೆ ಮಾಡಿ ಜ.25ರಂದು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದರು.25 ರಂದು ಬೆಳಿಗ್ಗೆ ಬಸ್ ಹತ್ತಿ ಬರುತ್ತಿರುವುದಾಗಿ ತಿಳಿಸಿದ್ದ ಅವರು ನಂತರ ಪತ್ನಿಗೆ ಕರೆ ಮಾಡಿಲ್ಲ. ಪತ್ನಿ 4 ಗಂಟೆಗೆ ಕರೆ ಮಾಡಿದಾಗ ರೋಷನ್ ಕಿರಣ್...

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಂಚರಿಸುತ್ತಿದ್ದ ವಿಮಾನ ಪತನ

0

ಮುಂಬಯಿ: ಮಹಾರಾಷ್ಟ್ರ ಡಿಸಿಎಂ, ಎನ್ ಸಿಪಿ ನಾಯಕ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಬುಧವಾರ ಬೆಳಗ್ಗೆ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ. ಅಪಘಾತದಲ್ಲಿ 66 ವರ್ಷದ ನಾಯಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಅಪಘಾತಕ್ಕೆ ಕಾರಣ, ಹಾನಿಯ ಪ್ರಮಾಣ ಮತ್ತು ಎನ್‌ಸಿಪಿ ಮುಖ್ಯಸ್ಥರ ಸ್ಥಿತಿ ಕುರಿತು ಇನ್ನೂ ತಿಳಿದುಬಂದಿಲ್ಲ.ಬೆಂಕಿ ಹೊತ್ತಿಕೊಂಡಿರುವ ದೃಶ್ಯಗಳು ಲಭ್ಯವಾಗಿದ್ದು ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಪುತ್ತೂರು ಮಾದಕವಸ್ತು ಮಾರಾಟಯತ್ನ ತಂಡದ ನಾಲ್ವರ ಬಂಧನ

0

ಬೆಳ್ತಂಗಡಿ: ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಿ, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹರ್ಷದ್ (33), ಪುತ್ತೂರು, ಮಹಮ್ಮದ್ ಆರೀಶ್ (31), ಪುತ್ತೂರು, ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46), ಪುತ್ತೂರು ಹಾಗೂ ಆರೋಪಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ ನೀಡುತ್ತಿದ್ದ ಬಂಟ್ವಾಳ ನಿವಾಸಿ ಮುಸ್ತಾಫ (46) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಅಂದಾಜು ರೂ. 50,000/- ಮೌಲ್ಯದ 6.39 ,...

ಮಡಂತ್ಯಾರಿನಲ್ಲಿ ಹಿಂದೂ ಸಂಗಮ

0

ಮಡಂತ್ಯಾರು :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಅಂಗವಾಗಿ ಮಡಂತ್ಯಾರು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ   ನಡೆಯಿತು. ಮಡಂತ್ಯಾರು ಗಣಪತಿ ಮಂಟಪದಲ್ಲಿ ಪಾರೆಂಕಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ್ ಭಟ್ ಪೇಜಾವರ ಇವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆಯ ಮುಖೇನ ಶೋಭಾಯಾತ್ರೆಯ ಪ್ರಾರಂಭಗೊಂಡು ಅತ್ಯಂತ ವಿಜೃಂಭಣೆಯಿಂದ ನಡೆಯಿತು.ನಂತರ ಬಸವನಗುಡಿ ಪಂಚಕಟ್ಟೆ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿ ತಯಾರಿಸಿದ ವೇದಿಕೆಯ ಎದುರು ದೀಪಂ ಜ್ಯೋತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಎಂ ಪುಂಜಾಲ್ಕಟ್ಟೆ ಅವರು ಕಾರ್ಯಕರ್ತ ಬಂಧುಗಳೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ...

ಕಾಯರ್ತಡ್ಕ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ  ಬೆನಕ ಹೆಲ್ತ್ ಸಟರ್ ಹಾಗೂ ಎ.ಜೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯತಪಾಸಣೆ ಹಾಗೂ ರಕ್ತದಾನ ಶಿಬಿರ

0

ಬೆಳ್ತಂಗಡಿ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಕಾಯರ್ತ್ತಡ್ಕ ಇದರ ಶತಮಾನೋತ್ಸವದ ಅಂಗವಾಗಿ ಬೆನಕ ಹೆಲ್ತ್ ಸೆಂಟರ್ ಉಜಿರೆ, ಬೆನಕ ಚಾರಿಟೇಬಲ್ ಟ್ರಸ್ಟ್ ಉಜಿರೆ ಮತ್ತು ಎ ಜೆ ರಕ್ತ ಕೇಂದ್ರ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವುಗಳ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಆದಿತ್ಯ ವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಕಾಯರ್ತ್ತಡ್ಕ ಇಲ್ಲಿ ಜರುಗಿತು.ಶಿಬಿರದ ಉದ್ಘಾಟನೆಯನ್ನು ಅವಿನಾಶ್ ಮಾಲಿಕರು ಅಗ್ರಿಲೀಫ್ ಬರಂಗಾಯ ಇವರು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ , ಎಂಜಿ ಭಟ್ ವ್ಯವಸ್ಥಾಪಕರು...

ಬೆಳ್ತಂಗಡಿ : ರೆಖ್ಯದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

0

ಬೆಳ್ತಂಗಡಿ : ದಾವಣಗೆರೆ ನಿವಾಸಿಯೆನ್ನಲಾದ ವ್ಯಕ್ತಿಯೊಬ್ಬರ ಮೃತದೇಹ ರೆಖ್ಯದಲ್ಲಿ ಪತ್ತೆಯಾಗಿದ್ದು‌ . ವಾರಿಸುದಾರರ ಪತ್ತೆಗೆ ಧರ್ಮಸ್ಥಳ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ರೆಕ್ಯಾ ಗ್ರಾಮದ ನೆಲ್ಯಡ್ಕ ಎಂಬಲ್ಲಿ ಜ.26 ರಂದು ಅಪರಿಚಿತ ಸುಮಾರು 40 ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಮೃತದೇಹದ ಬಳಿ ಪತ್ತೆಯಾಗಿರುವ ದಾಖಲೆಗಳಲ್ಲಿ  ದಾವಣಗೆರೆ ನಿವಾಸಿ ಹನುನಂತಪ್ಪ ಎಂದು ದಾಖಲೆಗಳು ಪತ್ತೆಯಾಗಿದೆ. ಮೃತದೇಹ ಅಸೌಕ್ಯದಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು  ಧರ್ಮಸ್ಥಳ ಪೊಲೀಸರು ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಪಟ್ಟ...

ಎಸ್ಡಿಪಿಐ ಯಿಂದ ಗಣರಾಜ್ಯೋತ್ಸವ; ದೇಶ ಹಾಗೂ ದೇಶದ ಬಡಜನತೆ, ಶೋಷಿತರು ಉಳಿಯಬೇಕಾದರೆ, ಸಂವಿಧಾನವನ್ನು ಉಳಿಸಬೇಕು; ಅಬ್ದುಲ್ ಮಜೀದ್ ಮೈಸೂರು

0

  ಬೆಳ್ತಂಗಡಿ (ಜ-26): 77 ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ "ಸಂವಿಧಾನ ಮೌಲ್ಯಗಳ ರಕ್ಷಣೆ - ಗಣರಾಜ್ಯ ಸಂಭ್ರಮ" ಎಂಬ ಘೋಷ ವಾಕ್ಯದೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮವು ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರ ಅಧ್ಯಕ್ತೆಯಲ್ಲಿ ಬೆಳ್ತಂಗಡಿಯಲ್ಲಿ ನಡೆಯಿತು. ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ರವರು ಧ್ವಜಾರೋಹಣ ನೆರೆವೇರಿಸಿ ಮಾತಾಡಿ, ಗಣರಾಜ್ಯೋತ್ಸವ ದಿನಾಚರಣೆಯ ಭಾಗವಾಗಿ ದೇಶ ಹಾಗೂ ದೇಶದ ಬಡಜನತೆ, ಶೋಷಿತರು ಉಳಿಯಬೇಕಾದರೆ, ಸಂವಿಧಾನವನ್ನು ಉಳಿಸಬೇಕು....

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಗಣರಾಜ್ಯೋತ್ಸವ, ನೂತನ ಕಚೇರಿ ಉದ್ಘಾಟನೆ

0

ಬೆಳ್ತಂಗಡಿ; ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ(ರಿ)/ದ ಕ ಜಿಲ್ಲೆ ಬೆಳ್ತಂಗಡಿ ಘಟಕದ ಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ವನ್ನು ಕುಮಾರಕೃಪಾ ವಾಣಿಜ್ಯ ಸಂಕೀರ್ಣ ದಲ್ಲಿ ಆಚರಿಸಲಾಯಿತುಧ್ವಜಾರೋಹಣವನ್ನು ತಾಲೂಕು ಸಮಿತಿಯ ಗೌರವ ಅಧ್ಯಕ್ಷ ಎ.ಕೆ ಶಿವನ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶಪ್ರೇಮವನ್ನು ಬೆಳೆಸಿಕೊಳ್ಳುವಂತೆ ಕರೆನೀಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಘಟನೆಯನ್ನು ಬಲಿಷ್ಠ ಗೊಳಿಸಲು ಹಾಗೂ ಮಾಜಿ ಸೈನಿಕರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು ಎಂದರು.ಇದೇ ಸಂದರ್ಭದಲ್ಲಿ ಸಂಘದ ನೂತನ ಕಚೇರಿಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ಹಿರಿಯ ಸದಸ್ಯರಾದ...