ಮತದಾನಕ್ಕೆ ಸಿದ್ದತೆಗಳು ಪೂರ್ಣ; ಮತಗಟ್ಟೆ ತಲುಪಿದ ಮತಯಂತ್ರಗಳು
ಬೆಳ್ತಂಗಡಿ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 241 ಮತಗಟ್ಟೆಗಳ ಚುನಾವಣೆಯ ಮಸ್ಟರಿಂಗ್ ಕಾರ್ಯ ಉಜಿರೆಯ ಎಸ್ ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದು ತಲೂಕಿನ ಎಲ್ಲ ಮತಗಟ್ಟೆಗಳಿಗೆ ಅಧಿಕಾರಿಗಳು ಮತಯಂತ್ರಗಳೊಂದಿಗೆ ತೆರಳಿದ್ದಾರೆ.ಬೆಳ್ತಂಗಡಿ ತಾಲೂಕಿಗೆ ಓರ್ವ ಡಿವೈಎಸ್ ಪಿ, ನಾಲ್ವರು ಇನ್ಸ್ ಪೆಕ್ಟರ್ ಗಳು, 15 ಸಬ್ ಇನ್ಸ್ ಪೆಕ್ಟರ್ ಗಳು, ಒಂದು ಅರಸೇನಾಪಡೆ,ಒಂದು ಕೆಎಸ್ ಆರ್ ಪಿ ತುಕಡಿ, ಗೃಹ ರಕ್ಷಕ ದಳ ಸೇರಿದಂತೆ 400 ಪೊಲೀಸರು ಹಾಗೂ 1,156 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಒಂದು ಮತಗಟ್ಟೆಗೆ 7 ಮಂದಿ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು 1,200ಕ್ಕಿಂತ ಹೆಚ್ಚು ಮತದಾರರಿರುವ...
ಉಜಿರೆಯಲ್ಲಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ
ಬೆಳ್ತಂಗಡಿ; ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದ.ಕ ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮಲೈ ಮುಗಿಲನ್ ಅವರು ಉಜಿರೆಯ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ರಚಿಸಲಾಗಿರುವ ಮಸ್ಟರಿಂಗ್ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚುನಾವಣಾ ಕರ್ತವ್ಯಕ್ಕೆ ತೆರಳಲು ಸಿದ್ದರಾದ ಸಿಬ್ಬಂದಿ ಗಳೊಂದಿಗೆ ಮಾತುಕತೆ ನಡೆಸಿದ ಅವರು ವಿವಿಧ ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಕೆಂಪೇಗೌಡ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಹಾಗೂ ಇತರ ಅಧಿಕಾರಿಗಳು ಇದ್ದರು
ಧರ್ಮಸ್ಥಳ; ಅಪರಿಚಿತ ಮಹಿಳೆ ಬಸ್ಸಿನಡಿಗೆ ಸಿಲುಕಿ ಸಾವು
ಧರ್ಮಸ್ಥಳ: ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಸುಬ್ರಹ್ಮಣ್ಯಕ್ಕೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ಸು ರಿವರ್ಸ್ ತೆಗೆಯುವ ವೇಳೆ ಮಹಿಳೆಯೊಬ್ಬರು ಬಸ್ ನಡಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಎ24ಬುಧವಾರ ಮಧ್ಯಾಹ್ನ ನಡೆದಿದೆ. ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿರುವ ಮಹಿಳೆ ಆಕಸ್ಮಿಕವಾಗಿ ಟಯರ್ ನಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಿಳೆಯ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಿದ್ದು, ಶವವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ತನಿಖೆ ನಡೆಸುತ್ತಿದ್ದಾರೆ.
ಚಾರ್ಮಾಡಿ; ಅಕ್ರಮ ಮರಳು ಸಾಗಾಟ ಪತ್ತೆ, ವಾಹನ ಹಾಗೂ ಮರಳು ಪೊಲೀಸ್ ವಶಕ್ಕೆ
ಬೆಳ್ತಂಗಡಿ; ಅಕ್ರಮವಾಗಿ ಮರಳು ಸಂಗ್ರಹಿಸಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದು ವಾಹನವನ್ನು ಹಾಗೂ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.ಕಕ್ಕಿಂಜೆಯಿಂದ ಚಾರ್ಮಾಡಿ ಕಡೆಗೆ ಆರೋಪಿ ಚಾರ್ಮಾಡಿ ನಿವಾಸಿಯಾಗಿರುವ ಫಯಾಜ್ ಎಂಬಾತ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಪೊಲೀಸರು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಮರಳನ್ನು ಮೃತ್ಯುಂಜಯ ನದಿಯಿಂದ ತೆಗೆದು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ .ವಾಹನ ಹಾಗೂ ಮರಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಮುಂಡಾಜೆ; ರಾಷ್ಟ್ರೀಯ ಹೆದ್ದಾರಿ ಬದಿ ಕಾಡಾನೆ ಪ್ರತ್ಯಕ್ಷ
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ರಸ್ತೆ ಬದಿ ಕಾಡಾನೆ ಕಂಡುಬಂದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.ಮುಂಡಾಜೆಯಿಂದ ಕಕ್ಕಿಂಜೆ ಕಡೆ ತೆರಳುತ್ತಿದ್ದ ಬೈಕ್ ಮೆಕ್ಯಾನಿಕ್ ಒಬ್ಬರು ಬೆಳಿಗ್ಗೆ 9ಗಂಟೆ ಸಮಯ ಮುಂಡಾಜೆಯ ಕಾಪು ಬಳಿ ಹೆದ್ದಾರಿ ಬದಿಯ ಪೊದೆಯಲ್ಲಿ ನಿಂತುಕೊಂಡಿದ್ದ ಕಾಡಾನೆಯನ್ನು ಕಂಡಿದ್ದಾರೆ.ಅವರು ತಕ್ಷಣ ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು ಚಿಬಿದ್ರೆ ವಿಭಾಗದ ಡಿ ಆರ್ ಎಫ್ ಒ ಭವಾನಿ ಶಂಕರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಕಾಡಾನೆ ರಸ್ತೆಯ ಇನ್ನೊಂದು ಬದಿ ಇರುವ ಅರಣ್ಯ...
ದೇಶದ ಸುಸ್ಥಿರತೆಗೆ ಮೋದಿ ನಾಯಕತ್ವ ಅಗತ್ಯ ಪ್ರತಾಪ ಸಿಂಹ ನಾಯಕ್
ಬೆಳ್ತಂಗಡಿ; ಕಳೆದ ಹತ್ತು ವರ್ಷಗಳಲ್ಲಿ ಎನ್ ಡಿಎ ನೇತೃತ್ವದ ಬಿಜೆಪಿ ಸರಕಾರ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದಿದೆ. ದೇಶದ ಇನ್ನಷ್ಟು ಅಭಿವೃದ್ಧಿಗೆ ಈ ಬಾರಿಯ ಚುನಾವಣೆ ನಿರ್ಣಾಯಕವಾಗಿದೆ. ದೇಶದ ಸುಸ್ಥಿರತೆಗೆ ಮೋದಿಯವರ ನಾಯಕತ್ವ ಅಗತ್ಯವಾಗಿದ್ದು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪಕ್ಷ ಅಧಿಕಾರಕ್ಕೆಬರಲಿದೆ" ಎಂದು ಎಂ ಎಲ್ ಸಿ ಪ್ರತಾಪ್ ಸಿಂಹ ನಾಯಕ್ ಹೇಳಿದರು.ಅವರು ಬೆಳ್ತಂಗಡಿಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು"ಜಾಗತಿಕ ಮಟ್ಟದಲ್ಲಿ ಶೇ.7ರ ಬೆಳವಣಿಗೆಯೊಂದಿಗೆ ಭಾರತ ಪ್ರಮುಖ ಚಾಲಕ ಶಕ್ತಿಯಾಗಿ ಮುಂದುವರೆದಿದೆ. ಕೇಂದ್ರ ಸರಕಾರದ ಗಟ್ಟಿ ನಿರ್ಧಾರಗಳಿಂದ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು...
ರಿಂಗ್ ಅಳವಡಿಸಲು ಬಾವಿಗಿಳಿದ ಕಾರ್ಮಿಕರಿಬ್ಬರು ಆಕ್ಸಿಜನ್ ಸಿಗದೆ ಸಾವು
ವಿಟ್ಲ: ಬಾವಿಗೆ ರಿಂಗ್ ಹಾಕುವಾಗ ಆಕ್ಸಿಜನ್ ಸಿಗದೇ ಇಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ.ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40) ಮತ್ತು ಮಲಾರ್ ನಿವಾಸಿ ಅಲಿ(24) ಎಂದು ಗುರುತಿಸಲಾಗಿದೆ.ಸುಮಾರು30 ಫೀಟ್ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾವಿಗೆ ಇಳಿದವನು ಮೇಲಕ್ಕೆ ಬಾರದೇ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕ ಇಳಿದಿದ್ದು, ಇಬ್ಬರೂ ಆಕ್ಸಿಜನ್ ಸಿಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಸ್ಥಳೀಯರ...
ಮೂಲಭೂತ ಸೌಲಭ್ಯಗಳಿಂದ ವಂಚಿತ ಆದಿವಾಸಿಗಳಿಂದ ನೋಟಾ ಅಭಿಯಾನ
ಬೆಳ್ತಂಗಡಿ; ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ತಾಲೂಕಿನ ನಾವೂರು ಗ್ರಾಮದ ಮೂಲನಿವಾಸಿ ಮಲೆಕುಡಿಯ ಸಮುದಾಯದವರು ತಮನ್ನು ಎಲ್ಲ ರಾಜಕೀಯ ಪಕ್ಷಗಳೂ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಈ ಬಾರಿ ನೋಟ ಚಲಾಯಿಸಲು ನಿರ್ಧರಿಸಿದ್ದು ಈ ಬಗ್ಗೆ ತಮ್ಮ ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.ನಾವೂರು ಗ್ರಾಮದ ಅಲ್ಯ, ಪುಳಿತ್ತಡಿ, ಎರ್ಮಲೆ ಮಂಜಲ,ಕುದ್ಕೊಳಿ, ಕಾಸರೋಳಿ ಪರಿಸರದ ಆದಿವಾಸಿ ಕುಟುಂಬಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತವನ್ನು ಚಲಾಯಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.ಈ ಪರಿಸರದಲ್ಲಿ 22 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳು ಜೀವನ ನಡೆಸುತ್ತಿದ್ದು ಸುಮಾರು 100ಮಂದಿ...
ನೇಹಾ ಕೊಲೆ ಪ್ರಕರಣ ಉಜಿರೆಯಲ್ಲಿ ಎ.ಬಿ.ವಿ.ಪಿ ಪ್ರತಿಭಟನೆ
ಉಜಿರೆ : ಹುಬ್ಬಳ್ಳಿ ಕೆಬಿವಿ ಕಾಲೇಜಿನಲ್ಲಿ ನಡೆದ ನೇಹಾ ಹೀರೆಮಠ ಹತ್ಯೆ ಖಂಡಿಸಿ ಎ.22 ರಂದು ಉಜಿರೆ ಸರ್ಕಲ್ ನಲ್ಲಿ ಎಬಿವಿಪಿ ಬೆಳ್ತಂಗಡಿ ಘಟಕದ ವತಿಯಿಂದ ಕಪ್ಪುಪಟ್ಟಿ ಪ್ರದರ್ಶಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಸಂಘಟನೆಯ ಮುಖಂಡ ಸುವಿತ್ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಉಡುಪಿಯ ಪ್ರಕರಣಗಳಿರಬಹುದು, ಕಡಬದಲ್ಲಿ ಮೂವರು ಹೆಣ್ಣು ಮಕ್ಕಳ ಮೇಲೆ ಒಬ್ಬ ಜಿಹಾದಿ ಆಸಿಡ್ ದಾಳಿ ಮಾಡಿದ ಪ್ರಕರಣ ಇರಬಹುದು, ಹಾಗೇ ಮೊನ್ನೆ ಕೆವಿಬಿ ಕಾಲೇಜ್ ನಲ್ಲಿ ನೇಹಾಳ...
ಕೆರೆಯಲ್ಲಿ ಕಾಡುಕೋಣದ ಮೃತದೇಹ ಪತ್ತೆ
ಕೊಯ್ಯೂರು ಗ್ರಾಮದ ಬದ್ಯಾರು ಎಂಬಲ್ಲಿ ಕೃಷಿಕರೊಬ್ಬರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ ದೇಹ ಕಂಡುಬಂದ ಘಟನೆ ಭಾನುವಾರ ನಡೆದಿದೆ.ಕಾಡುಕೋಣದ ಮೃತ ದೇಹವನ್ನು ಅರಣ್ಯ ಇಲಾಖೆ, ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಹಾಗೂ ಸ್ಥಳೀಯರು ಸೇರಿ ಸೋಮವಾರ ಕೆರೆಯಿಂದ ಮೇಲೆತ್ತಿದರು. ನೀರು ಅರಸಿಕೊಂಡು ಬಂದ ಸುಮಾರು 6 ವರ್ಷ ಪ್ರಾಯದ ಕಾಡುಕೋಣ ನೀರು ಕುಡಿದ ಬಳಿಕ ಕೆರೆಯ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾರದೆ ಎರಡು ದಿನಗಳ ಹಿಂದೆ ಮೃತಪಟ್ಟಿರುವ ಕುರಿತು ಶಂಕಿಸಲಾಗಿದೆ. ಘಟನೆ ಮನೆಯವರಿಗೆ ತಡವಾಗಿ ತಿಳಿದು ಬಂದಿದ್ದು ಅವರು ತಕ್ಷಣ...















