ನಡದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ನಡ ಗ್ರಾಮದ ಮಂಜೊಟ್ಟಿ ಪಣಿಕ್ಕಲ ನಿವಾಸಿಯಾದ ದರ್ಣಷ್ಟ ಪೂಜಾರಿ(55 ವರ್ಷ) ಇವರು ಸೆ.4ರಂದು ಸಂಜೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಡ ಗ್ರಾಮದ ಪಣಿಕ್ಕಲ ನಿವಾಸಿ ಲಲಿತ ರವರ ದೂರಿನಂತೆ ಲಲಿತ ರವರ ಪತಿ ದರ್ಣಪ್ಪ ಪೂಜಾರಿ ರವರು ಮದುವೆಯಾಗಿ 28 ವರ್ಷಗಳಾಗಿದ್ದು ಮಕ್ಕಳಾಗಿರುವುದಿಲ್ಲ ಇದೇ ವಿಚಾರದಲ್ಲಿ ಲಲಿತ ಪತಿ ಧರ್ಣಪ್ಪ ಪೂಜಾರಿ ರವರು ಮಾನಸಿಕವಾಗಿ ಮನನೊಂದು ಮಾನಸಿಕ ಖಾಯಿಲೆಗೆ ತುತ್ತಾಗಿದ್ದವರು ಸುಮಾರು 10 ವರ್ಷಗಳಿಂದ ಮಾನಸಿಕ ತಜ್ಞರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದವರು ಸುಮಾರು 5 ತಿಂಗಳಿನಿಂದ ಯಾವುದೇ...
ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಗಂಡಿಬಾಗಿಲಿನ ಯುವತಿ ಮೃತ್ಯು
ಬೆಳ್ತಂಗಡಿ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಗಂಡಿಬಾಗಿಲಿನ ದೇವಗಿರಿಯ ಪೈಕಾಟ್ ನಿವಾಸಿ ಜೋಸ್ ಎಂಬವರ ಪುತ್ರಿ ಟಿನು(27) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಬೆಂಗಳೂರಿನಲ್ಲಿ ನರ್ಸ್ ಆಗಿದ್ದ ಅವರಿಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಯುವಕನೊಂದಿಗೆ ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಒಂದು ವಾರದಿಂದ ಅಸ್ವಸ್ಥಗೊಂಡಿದ್ದ ಅವರನ್ನು ಬೆಂಗಳೂರಿನ ಸೈಂಟ್ ಜೋನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತದೇಹರ ಅಂತ್ಯ ಸಾಮಸ್ಕಾರ ಪತಿಯ ಊರಾದ ಸಾಗರದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಅವರು ತಂದೆ-ತಾಯಿ, ಪತಿ, ಸಹೋದರಿಯನ್ನು ಅಗಲಿದ್ದಾರೆ.
ಬೆಳ್ತಂಗಡಿ; ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕಾಳು ಮೆಣಸು ಕೃಷಿ ಬಗ್ಗೆ ತರಬೇತಿ ಕಾರ್ಯಾಗಾರ
ಬೆಳ್ತಂಗಡಿ; ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇಲ್ಲಿ ಸಾಂಬಾರ ಮಂಡಳಿ (ಸ್ಪೈಸ್ ಬೋರ್ಡ್) ಮೂಡಿಗೆರೆ ವತಿಯಿಂದ ದ.ಕ.ಜಿಲ್ಲೆಯ ರೈತರಿಗೆ ಕಾಳುಮೆಣಸಿನ ಸುಧಾರಿತ ತಾಂತ್ರಿಕತೆಗಳ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಶಿವಶಂಕರ್ ದಾನೆಗೊಂಡರ್, ಪ್ರಭಾರ ಜಂಟಿ ಕೃಷಿ ನಿರ್ದೇಶಕರು ಮಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಂಬಾರ ಮಂಡಳಿಯ ಪ್ರಾದೇಶಿಕ ಕಚೇರಿ ಸಕಲೇಶಪುರ ಇಲ್ಲಿನ ಉಪ ನಿರ್ದೇಶಕ ಶ್ರೀ ಮಹಾಬಲೇಶ್ವರ ವೈ. ಹೊನ್ನೂರು ಇವರು ಭಾರತದಲ್ಲಿ ಸಾಂಬಾರ ಬೆಳೆಗಳ ರಫ್ತು ಮಾಡಲು ಇರುವ ಅವಕಾಶಗಳ ಕುರಿತು ವಿವರಿಸಿದರು. ಸಹಾಯಕ ಕೃಷಿ ನಿರ್ದೇಶಕರು...
ಭಾರತದ ಪುರುಷ ಮಹಿಳಾ ತಂಡಗಳಿಗೆ ಅಂತಾರಾಷ್ಟ್ರೀಯ ತ್ರೋಬಾಲ್ ಪ್ರಶಸ್ತಿ; ತಂಡದಲ್ಲಿ ಮಡಂತ್ಯಾರು ಕಾಲೇಜಿನ ಆರು ಆಟಗಾರರು
ಮಡಂತ್ಯಾರು: ಆಗಸ್ಟ್ 31 ರಿಂದ ಸಪ್ಟೆಂಬರ್ 02 ರ ವರೆಗೆ ನೇಪಾಳದ ಪೋಖಾರದಲ್ಲಿ ನಡೆದ ಅಂತರಾಷ್ಟೀಯ ತ್ರೋಬಾಲ್ ಪಂದ್ಯಾಟದಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಮುಡಿ ಗೇರಿಸಿಕೊಂಡಿದೆ. ಸೆಕ್ರೇಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ವಿದ್ಯಾರ್ಥಿಗಳಾದ ಯುನಿತ್.ಕೆ, ಶಾನ್ ಲಿಂಟನ್ ವೇಗಸ್ ಮತ್ತು ಅವಿನಾಶ್ ಹಾಗೂ ವಿದ್ಯಾರ್ಥಿನಿಂಯರಾದ ಡ್ಯಾಫ್ನಿ ವೆರೊನಿಕ ಮಿಸ್ಕಿತ್, ಸುಪ್ರಿಯಾ ಎಸ್.ಪಿ., ಮತ್ತು ಭೂಮಿಕಾ ಇವರು ಕ್ರಮವಾಗಿ ಭಾರತದ ಪುರುಷರ ಮತ್ತು ಮಹಿಳೆಯರ ವಿಜೇತ ತಂಡವನ್ನು ಪ್ರತಿನಿಧಿಸಿದ ಕೀರ್ತಿಗೆ ಪಾತ್ರರಾದರು. ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆದ ಈ...
ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಗೆ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿ – ಎಸ್ರ ಫೌಂಡೇಶನ್ ವತಿಯಿಂದ ಸನ್ಮಾನ
ಬೆಳ್ತಂಗಡಿ: ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿ ಜನ ಮೆಚ್ಚುಗೆಯ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಮೂಡಬಿದಿರೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಸಂದೇಶ್ ಪಿ.ಜಿ. ಅವರಿಗೆ ತಮ್ಮ ಸೇವೆಗಾಗಿ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿಬಂದಿದ್ದು ಈ ಹಿನ್ನಲೆಯಲ್ಲಿ ಎಸ್ರ ಫೌಂಡೇಶನ್ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.ತಮ್ಮ ಅಧಿಕಾರ ಅವಧಿಯಲ್ಲಿ ಕಾನೂನು ಹಾಗೂ ನ್ಯಾಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಹತ್ತಿರದಿಂದ ಕೆಲಸ ಮಾಡಿದ್ದು, ಜನರಿಗೆ ನ್ಯಾಯ ಸಿಗುವಂತೆ ಜಾಗ್ರತೆ ವಹಿಸಿದ್ದುಈ ಕಾರಣಕ್ಕಾಗಿ ಮುಖ್ಯಮಂತ್ರಿಗಳ ವಿಶೇಷ ಸೇವಾ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ ಪ್ರಶಸ್ತಿ ಪಡೆದ ಸಂದೇಶ್...
ನಾರಾವಿಯಲ್ಲಿ ಕೊರಗ ಕುಟುಂಬಗಳಿಗೆ ದಾಖಲೆಗಳ ನೊಂದಣಿ ಶಿಬಿರ
ಬೆಳ್ತಂಗಡಿ; ನಾರಾವಿ ಗ್ರಾಮ ಪಂಚಾಯತ್ ನಲ್ಲಿ ಪಿಎಂ ಜನ್ ಮನ್ ಕಾರ್ಯಕ್ರಮದ ಅಂಗವಾಗಿ ಕೊರಗ ಕುಟುಂಬಗಳಿಗೆ ದಾಖಲೆಗಳ ನೊಂದಣೆ ಕಾರ್ಯಕ್ರಮ ನಡೆಯಿತು.ನೈಜ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಮೂಲಭೂತ ದಾಖಲೆಗಳ ನೋಂದಣಿ ಕಾರ್ಯಕ್ರಮದ ಮಹಾ ಅಭಿಯಾನ-2 ಕಾರ್ಯಕ್ರಮದಲ್ಲಿ ಕೊರಗ ಸಮುದಾಯಕ್ಕೆ ಅವಶ್ಯವಿರುವ ಸರ್ಕಾರಿ ದಾಖಲೆಗಳಾದ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ ಹಾಗೂ ಅಭಾಕಾರ್ಡ್* ಗಳನ್ನು ಒದಗಿಸಲು ವಿವಿಧ ಇಲಾಖೆಗಳ ಸಮ್ಮುಖದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.ಈಈ ಸಂದರ್ಭದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಸೂಕ್ತ ದಾಖಲೆಗಳನ್ನು ಪಡೆಯಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ...
ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲದ ವತಿಯಿಂದ ಶಿಕ್ಷಕರ ದಿನಾಚರಣೆ
ಬೆಳ್ತಂಗಡಿ; ಭಾರತೀಯ ಜನತಾ ಪಾರ್ಟಿ, ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಮಾಡುವ ಮೂಲಕ ಆಚರಿಸಲಾಯಿತು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಮಂಡಲದ ಅಧ್ಯಕ್ಷರಾದ ಶ್ರೀ ಕುಶಾಲಪ್ಪ ಗೌಡ ಪೂವಾಜೆ ಭಾಗವಹಿಸಿ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾಮರ್ಚಾದ ಪ್ರಭಾರಿಗಳಾದ ಜಯಾನಂದ ಗೌಡ ಭಾಗವಹಿಸಿ...
ಶಿರ್ಲಾಲು ಗ್ರಾಮಸಭೆಯಲ್ಲಿ ಹೊಡೆದಾಟ ಎರಡೂ ಗುಂಪಿನ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ: ಶಿರ್ಲಾಲು ಗ್ರಾಮಸಭೆಯಲ್ಲಿ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆನಂದ ಪೂಜಾರಿ ಎಂಬವರು ನೀಡಿರು ದೂರಿನಲ್ಲಿ ಗ್ರಾಮಸಭೆಯಲ್ಲಿ ಕುಶಾಲಪ್ಪ ಗೌಡ ಮತ್ತು ನವೀನ್ ನಡುವೆ ದೇವಸ್ಥಾನದ ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ ಈ ಸಂದರ್ಭದಲ್ಲಿ ಆನಂದ ಪೂಜಾರಿ ಇದನ್ನು ಆಕ್ಷೇಪಿಸಿದಾಗ ಅವರ ಮೇಲೆ ನವೀನ್ ಸಾಲ್ಯಾನ್, ರಾಮ್ ಕುಮಾರ್, ರವೀಂದ್ರ, ದಿನೇಶ್ ಹಾಗೂ ಪುರುಷೋತ್ತಮ ಅವರು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುವುದಲ್ಲದೆ ಗಲಾಟೆ ತಡೆಯಲು ಬಂದ ಮಹಿಳೆಯೊಬ್ಬರಿಗೆ ಪುರುಷೋತ್ತಮ ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು...
ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ
ಕನ್ಯಾಡಿ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 16ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಸಮಾರಂಭ ಶ್ರೀ ರಾಮ ಕ್ಷೇತ್ರ ಕನ್ಯಾಡಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ಕೇಶವದಾಸ ಮಹರಾಜ್, ಉಪಸ್ಥಿತರಿದ್ದರು, ಸಚಿವರಾದ ಮಾಂಕಾಳ ವೈದ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿಧಾನ ಪರಿಷತ್ ಶಾಸಕರಾದ ಪ್ರತಾಪಸಿಂಹ ನಾಯಕ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಭಟ್ಕಳ ಕರಿಕಲ್ ಚಾತುರ್ಮಾಸ್ಯ ಸಮಿತಿ ಅದ್ಯಕ್ಷ ಕೃಷ್ಣ ನಾಯ್ಕ ಬೆಳ್ತಂಗಡಿ...
ಕೊಕ್ಕಡ; ಅಂಗಡಿಯ ಜಗಲಿಯಲ್ಲಿ ಸುಸ್ತಾಗಿ ಕುಳಿತ ದಲಿತ ವ್ಯಕ್ತಿಗೆ ಜಾತಿ ನಿಂದನೆ ಮಾಡಿ ಹಲ್ಲೆ
ಬೆಳ್ತಂಗಡಿ; ಕೊಕ್ಕಡದಲ್ಲಿ ಅಂಗಡಿಯ ಜಗಲಿಯಲ್ಲಿ ಮಳೆ ಬಂದ ಕಾರಣಕ್ಕೆ ಕುಳಿತ ದಲಿತ ವೃದ್ದನ ಮೇಲೆ ಅಂಗಡಿ ಮಾಲಿಕ ಜಾತಿ ನಿಂದನೆ ಮಾಡಿ ಮರದ ರೀಪಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಹಲ್ಲೆಗೆ ಒಳಗಾದ ವ್ಯಕ್ತಿ ಕೊಕ್ಕಡ ಗ್ರಾಮದ ಮಂಚ ಮೊಗೇರ (67) ಎಂಬವರಾಗಿದ್ದಾರೆ.ಕೊಕ್ಕಡ ನಿವಾಸಿಯಾಗಿರುವ ರಾಮಣ್ಣ ಗೌಡ ಎಂಬವರೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾರೆ. ಕೊಕ್ಕಡ ಪೇಟೆಗೆ ಹೋಗಿದ್ದ ಮಂಚ ಮೊಗೇರ ಅವರು ಅಲ್ಲಿಂದ ಮನೆಗೆ ಹಿಂತಿರುಗುವ ವೇಳೆ ಮಳೆ ಬಂದಿದೆ ಸುಸ್ತು ಆಗಿದ್ದು ಕೊಕ್ಕಡ ಹಳ್ಳಿಂಗೇರಿಯಲ್ಲಿ ಅಂಗಡಿಯೊಂದರ...















