
ಬೆಳ್ತಂಗಡಿ; ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇಲ್ಲಿ ಸಾಂಬಾರ ಮಂಡಳಿ (ಸ್ಪೈಸ್ ಬೋರ್ಡ್) ಮೂಡಿಗೆರೆ ವತಿಯಿಂದ ದ.ಕ.ಜಿಲ್ಲೆಯ ರೈತರಿಗೆ ಕಾಳುಮೆಣಸಿನ ಸುಧಾರಿತ ತಾಂತ್ರಿಕತೆಗಳ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಶಿವಶಂಕರ್ ದಾನೆಗೊಂಡರ್, ಪ್ರಭಾರ ಜಂಟಿ ಕೃಷಿ ನಿರ್ದೇಶಕರು ಮಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಂಬಾರ ಮಂಡಳಿಯ ಪ್ರಾದೇಶಿಕ ಕಚೇರಿ ಸಕಲೇಶಪುರ ಇಲ್ಲಿನ ಉಪ ನಿರ್ದೇಶಕ ಶ್ರೀ ಮಹಾಬಲೇಶ್ವರ ವೈ. ಹೊನ್ನೂರು ಇವರು ಭಾರತದಲ್ಲಿ ಸಾಂಬಾರ ಬೆಳೆಗಳ ರಫ್ತು ಮಾಡಲು ಇರುವ ಅವಕಾಶಗಳ ಕುರಿತು ವಿವರಿಸಿದರು.

ಸಹಾಯಕ ಕೃಷಿ ನಿರ್ದೇಶಕರು ಬೆಳ್ತಂಗಡಿ ರಂಜಿತ್ ಕುಮಾರ್ ಟಿ.ಎಂ. ಇವರು ಕೃಷಿ ಇಲಾಖೆಯ ಪ್ರಮುಖ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಡಾ. ಹರ್ಷ ಕೆ ಎನ್, ವಿಜ್ನಾನಿಗಳು, ICRI, ದೋಣಿಗಲ್ ಸಕಲೇಶಪುರ ಇವರು ಕಾಳುಮೆಣಸಿನ ಬೆಳೆಯನ್ನು ಹೇಗೆ ಬೆಳೆಯಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ಸಾಂಬಾರ ಮಂಡಳಿಯ ಪ್ರಾದೇಶಿಕ ಕಚೇರಿ ಸಕಲೇಶಪುರ ಇಲ್ಲಿನ ಕುಮಾರ ಎಸ್,ಇವರು ಕಾಳುಮೆಣಸಿನ ನರ್ಸರಿ ವಿಧಾನಗಳ ಕುರಿತು ತರಬೇತಿಯನ್ನು ನೀಡಿದರು.ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಸುರ್ಯ ಇವರು ಕಾಳುಮೆಣಸಿನ ನಾಟಿ ಕುರಿತು ಪ್ರಾತ್ಯಕ್ಷಿಕೆ ಕೈಗೊಂಡರು. ಹರಿದಾಸ್ ಎಸ್. ಎಂ. , ಅಧ್ಯಕ್ಷರು, ಅಳದಂಗಡಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
