
ಬೆಳ್ತಂಗಡಿ; ನಡ ಗ್ರಾಮದ ಮಂಜೊಟ್ಟಿ ಪಣಿಕ್ಕಲ ನಿವಾಸಿಯಾದ ದರ್ಣಷ್ಟ ಪೂಜಾರಿ(55 ವರ್ಷ) ಇವರು ಸೆ.4ರಂದು ಸಂಜೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಡ ಗ್ರಾಮದ ಪಣಿಕ್ಕಲ ನಿವಾಸಿ ಲಲಿತ ರವರ ದೂರಿನಂತೆ ಲಲಿತ ರವರ ಪತಿ ದರ್ಣಪ್ಪ ಪೂಜಾರಿ ರವರು ಮದುವೆಯಾಗಿ 28 ವರ್ಷಗಳಾಗಿದ್ದು ಮಕ್ಕಳಾಗಿರುವುದಿಲ್ಲ ಇದೇ ವಿಚಾರದಲ್ಲಿ ಲಲಿತ ಪತಿ ಧರ್ಣಪ್ಪ ಪೂಜಾರಿ ರವರು ಮಾನಸಿಕವಾಗಿ ಮನನೊಂದು ಮಾನಸಿಕ ಖಾಯಿಲೆಗೆ ತುತ್ತಾಗಿದ್ದವರು ಸುಮಾರು 10 ವರ್ಷಗಳಿಂದ ಮಾನಸಿಕ ತಜ್ಞರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದವರು ಸುಮಾರು 5 ತಿಂಗಳಿನಿಂದ ಯಾವುದೇ ಕೆಲಸಕ್ಕೂ ಹೋಗದೆ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಸೆ.04 ರಂದು ಲಲಿತ ರವರು ಸಂಜೆ 4.30 ಗಂಟೆಗೆ ಮಂಜೊಟ್ಟಿ ಹಾಲಿನ ಡಿಪೊಗೆ ಹೋಗಿದ್ದು ಸಂಜೆ 5.30 ಗಂಟೆಗೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಲಲಿತ ಗಂಡ ಮನೆಯ ಛಾವಡಿಗೆ ಹಾಕಿದ ಮರದ ಅಡ್ಡಕ್ಕೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಬಂದಿದೆ. ಕೂಡಲೇ ನೆರೆಮನೆಯವರ ಸಹಾಯದಿಂದ ಅವರನ್ನು ಇಳಿಸಿ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ