ತಾಲೂಕು ಮಟ್ಟದ ಬಾಲಕಿಯರ ವಾಲಿಬಾಲ್ ಬಂದಾರು ಶಾಲೆಗೆ ಪ್ರಥಮ ಸ್ಥಾನ

0

ಬಂದಾರು :ಶ್ರೀರಾಮ ವಿದ್ಯಾಲಯ ಪಟ್ಟೂರು ಇಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸ. ಹಿ ಪ್ರಾ. ಬಂದಾರು ಶಾಲೆ ಯು 16 ನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.ಉತ್ತಮ‌ ಹೊಡೆತಗಾರ್ತಿಯಾಗಿ ಬಂದಾರು ಶಾಲೆಯ ಕು.ಜಶ್ವಿತಾ ಅಯ್ಕೆಯಾಗಿರುತ್ತಾರೆ. ವಿಜೇತ ಕ್ರೀಡಾಪಟುಗಳಿಗೆ ಮತ್ತು ದೈಹಿಕ ಶಿಕ್ಷಕರಿಗೆ, ಶಾಲಾಭಿವೃದ್ಧಿ ಸಮಿತಿ,ಮುಖ್ಯೋಪಾದ್ಯಾಯರು, ಶಿಕ್ಷಕ ವೃಂದ, ಪೋಷಕ ವೃಂದ ಅಭಿನಂದನೆ ಸಲ್ಲಿಸಿದರು.

ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಬೆಳ್ತಂಗಡಿಅಧ್ಯಕ್ಷರಾಗಿ ರೋನಾಲ್ಡ್ ಲೋಬೊ, ಪ್ರಧಾನ ಕಾರ್ಯದರ್ಶಿಯಾಗಿ ಲ್ಯಾನ್ಸಿ ಎ ಪಿರೇರಾ

0

ಬೆಳ್ತಂಗಡಿ: ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ ಬೆಳ್ತಂಗಡಿ ಇದರ ವಾರ್ಷಿಕ ಬಹಾಸಭೆ ಸೆ 1ರಂದು ಬೆಳ್ತಂಗಡಿ ಸಿ ವಿ ಸಿ ನಿ ಹಾಲ್ ನಲ್ಲಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ರುವರ ಅಧ್ಯಕ್ಷತೆಯಲ್ಲಿ ಜರಗಿತು.ಸಭೆಯಲ್ಲಿ ಮುಂದಿನ 2 ವರ್ಷದ ಅವಧಿಗೆ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರೋನಾಲ್ಡ್ ಲೋಬೊ, ಪ್ರಧಾನ ಕಾರ್ಯದರ್ಶಿಯಾಗಿ ಲ್ಯಾನ್ಸಿ ಎ ಪಿರೇರಾ, ಕೋಶಾಧಿಕಾರಿಯಾಗಿ ಸುನೀಲ್‌ ಶೆಣೈ ಉಪಾಧ್ಯಕ್ಷರಾಗಿ ಶಶಿಧರ ಪೈ ಆಯ್ಕೆಯಾದರು. ಹಾಗೂ 30 ಮಂದಿ ಸದಸ್ಯರನ್ನು ಆಡಳಿತ ಮಂಡಳಿಗೆ ಸದಸ್ಯರಾಗಿ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಘದ...

ಉಜಿರೆ; ಜಾರಿ ಬಿದ್ದು ಗಾಯಗೊಂಡಿದ್ದ ಶಿಕ್ಷಕಿ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು

0

ಬೆಳ್ತಂಗಡಿ: ಮನೆಯಲ್ಲಿ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಶಿಕ್ಷಕಿ, ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.ಉಜಿರೆ ರಥಬೀದಿ ಸಮೀಪದ ನಿವಾಸಿ ಸುಪ್ರಭಾ ಪಿ.(40) ಮೃತ ಶಿಕ್ಷಕಿ. ಚಾರ್ಮಾಡಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ತಮ್ಮ ಮನೆಯಲ್ಲಿ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟರು.ಅವರಿಗೆ ಪತಿ ಹಾಗೂ ಇಬ್ಬರು ಪುತ್ರರಿದ್ದಾರೆ.

ಪಿಲ್ಯ- ಕುದ್ಯಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

0

ಬೆಳ್ತಂಗಡಿ: ಗ್ರಾಮೀಣ ಪ್ರದೇಶಗಳ ಜನರ ಜೀವನದ ನೆರಳಾಗಿರುವ ಧರ್ಮಸ್ಥಳ ಯೋಜನೆಯ ಬಗ್ಗೆ ಸದಾಕಾಲ ಕೃತಜ್ಞತಾ ಭಾವನೆಯನ್ನು ಹೊಂದಿರಬೇಕು ಎಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರರ ಶಿವಪ್ರಸಾದ ಅಜಿಲ ಹೇಳಿದರು.ಅವರು ಪಿಲ್ಯ ಸರಕಾರಿ ಉ.ಪ್ರಾ. ಶಾಲೆಯಲ್ಲಿ ಆದಿತ್ಯವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಿಲ್ಯ- ಕುದ್ಯಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದರು.ಯೋಜನೆಯಿಂದಾಗಿ ಇಂದು ಸಾವಿರಾರು ಕುಟುಂಬಗಳು ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ತಮ್ಮಲ್ಲಿ ಖಾಲಿ ಜಾಗ ಇದ್ದಲ್ಲಿ ಕೃಷಿಯನ್ನು ವಿಸ್ತರಿಸುವ, ಅದರಲ್ಲೂ ಪರಿಪೂರ್ಣಕೃಷಿಯತ್ತ ಎಲ್ಲರೂ ಗಮನಹರಿಸುವ ಅಗತ್ಯತೆಯನ್ನು...

ಮಂಗಳೂರು;ಆಟವಾಡುತ್ತಿದ್ದ ಹೆಣ್ಣು ಮಗುವಿನ ಅಪಹರಣ; ಎರಡೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

0

ಮಂಗಳೂರು: ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಘಟನೆ ನಗರದ ಪಡೀಲ್‌ ಬಳಿ ಸಂಭವಿಸಿದ್ದು ಕಂಕನಾಡಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದೂರು ಬಂದ ಎರಡು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕೇರಳ ಎರ್ನಾಕುಲಂ ಜಿಲ್ಲೆಯ ತಾತಾಪಿಲ್ಲಿ ನಿವಾಸಿ ಅನೀಶ್‌ ಕುಮಾರ್‌(59) ಬಂಧಿತ ಆರೋಪಿ. ಪಡೀಲ್‌ನ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿಯೇ ಕಾರ್ಮಿಕರ ಶೆಡ್‌ನ‌ಲ್ಲಿ ವಾಸವಾಗಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿ ಮೂಲದ ಮಹಿಳೆಯ ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಮತ್ತೊಬ್ಬ ಕಾರ್ಮಿಕರ ಹೆಣ್ಣುಮಗು ಅಲ್ಲಿಯೇ ಪಕ್ಕದಲ್ಲಿ ಆಟವಾಡುತ್ತಿದ್ದವು. ಸಂಜೆ...

ಉಜಿರೆಯಲ್ಲಿ ಬೃಹತ್ ವಿಶ್ವಹಿಂದೂ ಪರಿಷದ್ ಸಮಾವೇಶ

0

ಉಜಿರೆ: ತ್ಯಾಗ, ಬಲಿದಾನ, ಪ್ರತಿಭಟನೆ ಮೂಲಕ ವಿಶ್ವ ಹಿಂದೂ ಪರಿಷದ್ ವಿಶ್ವದ ಹಿಂದೂಗಳ ಧ್ವನಿ ಹಾಗೂ ಪ್ರತಿನಿಧಿಯಾಗಿದೆ ಎಂದು ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಹೇಳಿದರು.ಅವರು ಭಾನುವಾರ ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.ಹಿರಿಯ ಕಾರ್ಯಕರ್ತರ ಶ್ರಮದ ಫಲದಿಂದ ಸಂಘಟನೆ ಶಕ್ತಿಯುತವಾಗಿ ಬೆಳೆದಿದೆ. ದೇಶದಲ್ಲಿ ಹಿಂದೂಗಳಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಬೇಕು. ಧರ್ಮ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ಅವರು ಹೇಳಿದರು. ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ವಿಭಾಗದ...

ಪದ್ಮುಂಜ : ಸಹಕಾರ ಸಂಘದ ಮಹಾಸಭೆ ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾನಿಧಿ ವಿತರಣೆ

0

ಪದ್ಮುಂಜ : ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ,ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಎಸ್, ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಸೆ 1ರoದು ಸಂಘದ ಸಭಾಭವನ ದಲ್ಲಿ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘವು 2023-24 ನೇ ಸಾಲಿನಲ್ಲಿ ರೂ.360.99 ಕೋಟಿ ವ್ಯವಹಾರ, ರೂ.1.81 ಕೋಟಿ ನಿವ್ವಳ ಲಾಭ, ಶೇ.13 ಡಿವಿಡೆಂಡ್ ಘೋಷಿಸಲಾಯಿತು. ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಸ್ವಾಗತಿಸಿ, ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಅಂಕಿತಾ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ಅಶೋಕ...

ಕುವೆಟ್ಟಿನಲ್ಲಿ ಅಕ್ರಮ ಗಾಂಜಾ ಮಾರಾಟ; ಪೊಲೀಸ್ ಕಾರ್ಯಾಚರಣೆ ಆರೋಪಿ ಬಂಧನ, ಗಾಂಜಾ ವಶಕ್ಕೆ

0

ಬೆಳ್ತಂಗಡಿ; ಕುವೆಟ್ಟು ಗ್ರಾಮದ ಸಬರ ಬೈಲು ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನ ನಡೆಸುತ್ತಿದ್ದ ಪ್ರಕರಣವೊಂದನ್ನು ಮಂಗಳೂರಿನ ಸಿ.ಇ.ಎನ್ ಅಪರಾಥ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಮಹಮ್ಮದ್ ರಫೀಕ್ (37) ಎಂಬಾತನಾಗಿದ್ದಾನೆ.ಖಚಿತ ಮಾಹಿತಿಯ ಮೇರೆಗೆ ಆ 31ರಂದು ರಾತ್ರಿಯ ವೇಳೆ ಸಿ‌.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಮಂಜುನಾಥ್ ಟಿ ಹಾಗೂ ತಂಡ ಸಬರಬೈಲು ಬಸ್ ನಿಲ್ದಾಣಕ್ಕೆ ಬಂದಾಗ ಅನುಮಾನಾಸ್ಪದವಾಗಿ ನಿಂತಿದ್ದ ಮಹಮ್ಮದ್ ರೋಫಿಕ್ ನನ್ನು ವಶಕ್ಕೆ...

ಸವಣಾಲಿನಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

0

ಬೆಳ್ತಂಗಡಿ: ಸವಣಾಲು ಬಳಿ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ನಡೆದಿದೆ. ಸವಣಾಲು ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದೆ ಚಿರತೆಯೊಂದು ಕಾಣಿಸಿದ್ದು, ಸ್ಥಳೀಯರಿಗೆ ಆತಂಕ ಎದುರಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಗುರಿಕಂಡ ಆನಂದ ಶೆಟ್ಟಿ ಎಂಬವರ ಮನೆಯ ಬಳಿ ಎರಡು ತಿಂಗಳ ಹಿಂದೆ ಚಿರತೆ ಹಿಡಿಯಲು ಬೋನ್ ಅಳವಡಿಸಿ ಅದರಲ್ಲಿ ಕೋಳಿ ಇಡಲಾಗಿತ್ತು. ಕೊನೆಗೂ ಕಳೆದ ಮಧ್ಯರಾತ್ರಿ ಚಿರತೆ ಕೋಳಿ ಹಿಡಿಯಲು ಬೋನಿನೊಳಗೆ ಹೋಗಿ ಸೆರೆಯಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು,...

ಏಷ್ಯನ್ ಪೆಸಿಫಿಕ್ ಚಾಂಪಿಯನ್ ಶಿಪ್ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಅಕ್ಕಮ್ಮ ಅವರಿಗೆ ಶಾಸಕರಿಂದ ಅಭಿನಂದನೆ

0

ಬೆಳ್ತಂಗಡಿ; ಏಷ್ಯನ್ ಪೆಸಿಫಿಕ್ ಚಾಂಪಿಯನ್ ಶಿಪ್ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕೊಕ್ರಾಡಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ, ಕರಿಮಣೇಲು ಗ್ರಾಮದ ಶ್ರೀಯುತ ಗಂಗಾಧರ ಪಾಟೀಲ್ ರವರ ಧರ್ಮಪತ್ನಿ ಶ್ರೀಮತಿ ಅಕ್ಕಮ್ಮ ರವರನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ತಮ್ಮ ನಿವಾಸದಲ್ಲಿ ಅಭಿನಂದಿಸಿದರು.