ಬೆಳ್ತಂಗಡಿ; ಉಜಿರೆ ಪೇಟೆಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನುಕಳ್ಳತನ ಮಾಡಿದ ಘಟನೆ ಸಂಭವಿಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಜಿರೆ ಗ್ರಾಮದ ನಿವಾಸಿ ರಾಜು ಎಂಬವರು ತನ್ನ ಬೈಕ್ ( ಕೆ.ಎ 19 ಹೆಚ್ ಸಿ 0606ನಂಬರ್ ನ ಹೋಂಡಾ ಯೂನಿಕಾರ್ನ್ ) ಅನ್ನು ಉಜಿರೆ ಪೇಟೆಯ ದಿಶಾ ಬೇಕರಿಯ ಮುಂಭಾಗದಲ್ಲಿ ಫೆ. 29ರಂದು ರಾತ್ರಿ ವೇಳೆ ನಿಲ್ಲಿಸಿ ಹೋಗಿದ್ದು ಒಂದು ಗಂಟೆಯ ಬಳಿಕ ಮರಳಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಕಳವಾದ ಬೈಕಿನ ಮೌಲ್ಯ ಸುಮಾರು 75,000 ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.