ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕಲ್ಮಂಜ, ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ರಾಧಾಕೃಷ್ಣ ಗೌಡ, ಸದಸ್ಯರಾಗಿ, ಕೃಷ್ಣ ಮಲೆಕುಡಿಯ, ಶ್ರೀಮತಿ ಸುಂದರಿ,ಶ್ರೀಮತಿ ಮಹಾಲಕ್ಷ್ಮಿ, ಸಂತೋಷ್ ಕಡಂಬು, ಪ್ರವೀಣ್ ಬಿ, ಗಂಗಾಧರ ಗೌಡ, ರಘುಚಂದ್ರ ಗುಡಿಗಾರ್ ಮತ್ತು ಪ್ರಧಾನ ಅರ್ಚಕರಾಗಿ ರಾಜೇಶ್ ಹೊಳ್ಳನೇಮಕವಾಗಿದ್ದಾರೆ.
ಮುಂಡಾಜೆ; ಕಾಡಾನೆ ದಾಳಿ ವ್ಯಾಪಕ ಕೃಷಿ ಹಾನಿ
ಬೆಳ್ತಂಗಡಿ; ಮುಂಡಾಜೆಯ ದುಂಬೆಟ್ಟು ಪರಿಸರದ ಕಜೆ ವೆಂಕಟೇಶ್ವರ ಭಟ್ ಅವರ ತೋಟಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಕಾಡಾನೆ 25 ಅಡಕೆ ಮರ, 5 ತೆಂಗಿನಮರ ಹಾಗೂ ಸುಮಾರು 100ರಷ್ಟು ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ.ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಬಂದ ಕಾಡಾನೆ ಮೃತ್ಯುಂಜಯ ನದಿಯನ್ನು ದಾಟಿ, ನದಿ ಬದಿ ಇರುವ ಕೃಷಿ ತೋಟ ಪ್ರದೇಶದಲ್ಲಿ ಹಾನಿ ಉಂಟು ಮಾಡಿದೆ.
ಶಿರ್ಲಾಲು ಪ್ರದೇಶದಲ್ಲಿ ಕಾಡಿನಲ್ಲಿ ಕಂಡುಬಂದಿದ್ದ ಬೆಂಕಿ ಹತೋಟಿಗೆ
ಬೆಳ್ತಂಗಡಿ:ಬೆಳ್ತಂಗಡಿ ವನ್ಯಜೀವಿ ವಲಯದ ಅರಣ್ಯದಲ್ಲಿ ಕಂಡುಬಂದಿದ್ದ ಬೆಂಕಿ ಹತೋಟಿಗೆ ಬಂದಿದೆ.ಬೆಳ್ತಂಗಡಿ ವನ್ಯಜೀವಿ ವಲಯದ ಅಳದಂಗಡಿ ಶಾಖೆಯ ಶಿರ್ಲಾಲು ಮೇಲಿನ ನಾರಾವಿ ಮೀಸಲು ಅರಣ್ಯದ ಗುಡ್ಡದ ಹುಲ್ಲುಗಾವಲಿಗೆ ಕುದುರೆಮುಖ ಕಡೆಯಿಂದ ಬಂದ ಬೆಂಕಿಯು ಹರಡಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರಿ ಇಡೀ ಶ್ರಮವಹಿಸಿ ನಿಯಂತ್ರಣಕ್ಕೆ ತಂದಿದ್ದಾರೆ. ಬೆಳ್ತಂಗಡಿ ವನ್ಯಜೀವಿ ವಲಯದ ವಲಯ ಆರ್ ಎಫ್ ಒ ಶರ್ಮಿಷ್ಠಾ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಹೇಮಂತ್ ಕುಮಾರ್, ಅರಣ್ಯ ವೀಕ್ಷಕ ಬಸವರಾಜ್, ಸಿಬ್ಬಂದಿಗಳಾದ ಸಂದೇಶ್,...
ಬಂದಾರು;ಗ್ರಾಮ ಪಾಣೆಕಲ್ಲು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನ ದಲ್ಲಿವಾರ್ಷಿಕ ಕಾಲಾವಧಿ ನೇಮೋತ್ಸವ
ಬಂದಾರು; ಗ್ರಾಮ ಪಾಣೆಕಲ್ಲು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನ ದಲ್ಲಿ ನಡೆಯುವವಾರ್ಷಿಕ ಕಾಲಾವಧಿ ನೇಮೋತ್ಸವ ಕಾರ್ಯಕ್ರಮಕ್ಕೆ ಯುವ ಉದ್ಯಮಿಗಳಾದ ಕಿರಣ್ ಚಂದ್ರ ಡಿ ಪುಷ್ಪಗಿರಿ, ಬೆಂಗಳೂರು ಇವರು ಆಗಮಿಸಿ ದೈವದ ಆಶೀರ್ವಾದ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪದ್ಮುಂಜ ಸಿ. ಎಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾದ ಅಶೋಕ ಗೌಡ ಪಾಂಜಾಳ, ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ವಕೀಲರಾದ ಉದಯ ಕುಮಾರ್ ಬಿ.ಕೆ, ಬಂದಾರು ಪಂಚಾಯತ್ ಸದಸ್ಯರಾದ ಚೇತನ್ ಗೌಡ, ಶ್ರೀ ಕ್ಷೇತ್ರ ಪಾಣೆಕಲ್ಲು ದೈವಸ್ಥಾನದ ಆಡಳಿತ...
ನಡ;ಯುವತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ನಡ ಗ್ರಾಮದ ಪೆರ್ಮಾಣು ನಿವಾಸಿ ಯುವತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ಯುವತಿ ಸ್ಥಳೀಯ ನಿವಾಸಿ ಸರಸ್ವತಿಬ(30) ಎಂಬವರಾಗಿದ್ದಾರೆ.ಈ ಬಗ್ಗೆ ಈಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದು ಫೆ.9 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಕೆ ಮನೆಯ ಡೈನಿಂಗ್ ಹಾಲ್ ನಲ್ಲಿ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಲಾಗಿದೆ. ವೈಯುಕ್ತಿಕ ಕಾರಣಗಳಿಂದ ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಕ್ಕಿಂಜೆ ಶ್ರೀ ಇಷ್ಟದೇವತಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ.
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಚಿಬಿದ್ರೆ ಗ್ರಾಮದ ಶ್ರೀ ಕಕ್ಕಿಂಜೆ ಇಷ್ಟದೇವತಾ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಜಯಪ್ರಸಾದ್ ಗೌಡ, ಸದಸ್ಯರಾಗಿ, ಕಿಟ್ಟು ಮುಗೆರ, ಶ್ರೀಮತಿ ಚಂದ್ರಾವತಿ ಕುಲಾಲ್ ಶ್ರೀಮತಿ ದೇವಕಿ, ಭರತ್ ಕುಮಾರ್ ಗೌಡ, ಗೋಪಾಲ್ ಕೃಷ್ಣ ಆಚಾರ್ಯ, ಅಶೋಕ್ ಕುಮಾರ್, ಹರೀಶ್ ಗೌಡ , ಮತ್ತು ಪ್ರಧಾನ ಅರ್ಚಕರಾಗಿ ಮಧು ಭಟ್ನೇಮಕವಾಗಿದ್ದಾರೆ.
ಬೆಳ್ತಂಗಡಿ ಉಚಿತ ನೇತ್ರ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ
ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ರಿ ದ.ಕ ಬೆಳ್ತಂಗಡಿ ತಾಲೂಕು, ಮತ್ತು ಪಟ್ಟಣ ಪಂಚಾಯತ್ ಬೆಳ್ತಂಗಡಿ ಇವುಗಳ ಸಹಬಾಗಿತ್ವದಲ್ಲಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ( ಅಂದತ್ವ ನಿವಾರಣಾ ವಿಭಾಗ) ,ಶ್ರಿದೇವಿ ಆಪ್ಟಿಕಲ್ ಸಂತೆಕಟ್ಟೆ ಬೆಳ್ತಂಗಡಿ, ಶ್ರಿ ಭಗವಾನ್ ಸಾಯಿಬಾಬಾ ಪೂಜಾ ಸಾಮಾಗ್ರಿಗಳ ಮಳಿಗೆ ಸಂತೆಕಟ್ಟೆ ಇದರ ಎರಡನೇ ವರ್ಷದ ಮಳಿಗೆಯ ಪಾದಾರ್ಪಣೆ ಬಗ್ಗೆ ರಾಜಕೇಸರಿ ಸಂಘಟನೆಯ 552 ನೇ ಸೇವಾಯೋಜನೆಯ ಪ್ರಯುಕ್ತ...
ಗರ್ಡಾಡಿ ನಂದಿಬೆಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ.
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಂದಿಬೆಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕೋಟ್ಯಾನ್ ಸದಸ್ಯರಾಗಿ, ರವೀಂದ್ರ ಬಿ ಅಮೀನ್, ಪ್ರಶಾಂತ , ಶ್ರೀಮತಿ ಗಿರಿಜಾ ಶೆಟ್ಟಿ, ಅನಿತಾ ವಸಂತ ಬಿ ಬಂಗೇರ , ರಾಮಣ್ಣಗೌಡ ,ಶ್ರೀನಿವಾಸ ಪೈ ಮತ್ತು ಪ್ರಧಾನ ಅರ್ಚಕರಾಗಿ ಗಣೇಶ್ ಭಟ್ ನಂದಿ ಬೆಟ್ಟ ನೇಮಕವಾಗಿದ್ದಾರೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ ಕಾಶಿಪಟ್ನ ಗ್ರಾಮ...
ಉಜಿರೆ; ಬದುಕು ಕಟ್ಟೋಣ ತಂಡ ಮತ್ತು ವಿವಿಧ ಸಂಘಸಂಸ್ಥೆಗಳ ವತಿಯಿಂದ ಭತ್ತಕಟಾವು ಕಾರ್ಯಕ್ರಮ; 2000 ಯುವಕರು ಭಾಗಿ
ಬೆಳ್ತಂಗಡಿ : ಇಂದಿನ ಯುವ ಪೀಳಿಗೆಗೆ ಅನ್ನದ ಮಹತ್ವ ತಿಳಿಸುವ ಕಾರ್ಯ ಅಗಬೇಕಿದೆ. ಬದುಕುಕಟ್ಟೋಣ ತಂಡ ಮತ್ತು ವಿವಿಧ ಸಂಘ ಸಂಸ್ಥೆಗಳು ವಿದ್ಯಾರ್ಥಿ ಸಮುದಾಯಕ್ಕೆ ಬತ್ತದ ನಾಟಿ, ಬತ್ತದ ಕಟಾವು ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಅರ್ಥಪೂರ್ಣ ಕಾರ್ಯಕ್ರಮ ನೆರೆ ಸಂದರ್ಭದಲ್ಲಿ ನೊಂದವರ ಸೇವೆಗೆಂದೇ ಹುಟ್ಟಿದ ಬದುಕುಕಟ್ಟೋಣ ತಂಡ ನಿರಂತರ ಸಾವಿರಾರು ಕುಟುಂಬದ ಬದುಕು ಕಟ್ಟುವ ಕಾರ್ಯದ ಜೊತೆ ಅನ್ನಬ್ರಹ್ಮನ ಸೇವೆ ಮಾಡುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಹೇಳಿದರು . ಅವರು ಭಾನುವಾರ ಬದುಕು ಕಟ್ಟೋಣ ಬನ್ನಿ...
ಕನ್ಯಾಡಿಯ ಸೇವಾನಿಕೇತನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕನ್ಯಾಡಿಯ ಸೇವಾನಿಕೇತನಕ್ಕೆ ಫೆಬ್ರವರಿ 8 ರಂದು ಭೇಟಿ ನೀಡಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಸಂಸ್ಥೆಯ ಬಗ್ಗೆ ಮಾತನಾಡಿ, ಸಾಮಸ್ಥೆಯ ಕಾರ್ಯ ನಿರ್ವಹಣೆಯ ಬಗ್ಗೆ ವಿವರಿಸಿದರು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ಮಾಡುವಂತೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಂಸದರು ಸಹಕಾರದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸೇವಾಧಾಮ ಸಂಚಾಲಕರಾದ ಕೆ. ಪುರಂದರ ರಾವ್, ಸೇವಾಭಾರತಿ ಟ್ರಸ್ಟಿ ಬಿ....















