LATEST ARTICLES

ಮರ್ಹೂಮ್ ಹಸನ್ ಗಿಂಡಾಡಿ ಇವರ ಸ್ಮರಣಾರ್ಥ ಎಸ್‌ಡಿಪಿಐ ವತಿಯಿಂದ ಪೇರಲ್ದರಕಟ್ಟೆಯಲ್ಲಿ ಇಫ್ತಾರ್ ಮೀಟ್

0

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ತೆಂಕಕಾರಂದೂರು ಬ್ರಾಂಚ್ ಸಮಿತಿ ವತಿಯಿಂದ, ಮರ್ಹೂಮ್ ಹಸನ್ ಗಿಂಡಾಡಿ ಇವರ ಸ್ಮರಣಾರ್ಥ ಶುಕ್ರವಾರ, ಬದ್ರಿಯಾ ಜುಮ್ಮಾ ಮಸೀದಿ ಪೇರಲ್ದರಕಟ್ಟೆಯಲ್ಲಿ ಇಫ್ತಾರ್ ಮೀಟ್ ಕಾರ್ಯಕ್ರಮ ನಡೆಯಿತು. ಎಸ್‌ಡಿಪಿಐ ತೆಂಕಕಾರಂದೂರು ಬ್ರಾಂಚ್ ಅಧ್ಯಕ್ಷರಾದ ನವಾಝ್ ಮಂಜೊಟ್ಟಿ ನೇತೃತ್ವದಲ್ಲಿ ಇಫ್ತಾರ್ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಕ್ಷೇತ್ರ ನಾಯಕರಾದ ಮುಸ್ತಾಫಾ ಜಿ. ಕೆರೆ, ಅಶ್ರಫ್ ಕಟ್ಟೆ, ರೌಫ್ ಪುಂಜಾಲಕಟ್ಟೆ, ಹಾಜಿ...

ದಿ.ಎನ್ ಪದ್ಮನಾಭ ಮಾಣಿಂಜರಿಗೆ ಗುರುದೇವ ಸಹಕಾರಿ ಸಂಘದಿಂದ ನುಡಿನಮನ

0

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ ನಿವೃತ್ತ ಡಿಎಫ್‌ಓ, ಆಗಿದ್ದ ದಿ.ಎನ್.ಪದ್ಮನಾಭ ಮಾಣಿಂಜರವರಿಗೆ ಶ್ರೀ ಗುರುದೇವ ಸಹಕಾರಿ ಸಂಘದಿಂದ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮ ಮಾ.15 ರಂದು ಬೆಳ್ತಂಗಡಿ ಶ್ರೀಗುರು ಸಾನಿಧ್ಯ ಸಭಾಭವನದಲ್ಲಿ ನಡೆಯಿತು. ಬೆಂಗಳೂರು ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆರ್ಶೀವಚನ ನೀಡಿ ನಿರಂತರ ಉನ್ನತಿ ಹಾಗೂ ಒಳಿತಿನ ಚಿಂತನೆ ಮಾಡುವ ಮನಸ್ಸು ಪದ್ಮನಾಭರವರು. ಸಮಾಜದ ಬಗ್ಗೆ ಕಾಳಜಿ,ಹಿತ ಚಿಂತನೆ ಮಾಡಿದ ನಿಜವಾದ ರಾಜರ್ಷಿ ಪದ್ಮನಾಭರವರು ಎಂದರು.ಸಂಘದ ಉಪಾಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆ...

ವೇಣೂರು ಸೂರ್ಯ ಚಂದ್ರ ಜೋಡುಕರೆ ಕಂಬಳ ಪೂರ್ವಭಾವಿ ಸಭೆ

0

ವೇಣೂರು: 32ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳ ಕೂಟ ದಿನಾಂಕ 30/3/2025ನೇ ಆದಿತ್ಯವಾರ ನಡೆಯಲಿದ್ದು. ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಕಂಬಳ ಸಮಿತಿಯ ಅಧ್ಯಕ್ಷರಾದ ನಿತೀಶ್ ಎಚ್ ಕೋಟ್ಯಾನ್ ರ ಅಧ್ಯಕ್ಷತೆಯಲ್ಲಿ ನಡೆಯಿತು, ಕಂಬಳ ಸಮಿತಿಯ ಗೌರವಾಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ, ಕಂಬಳದ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರಿದರು, ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಶೇಖರ್ ಕುಕ್ಕೆಡಿ, ಪ್ರಧಾನ ಕಾರ್ಯದರ್ಶಿ ಭರತರಾಜ್ ಜೈನ್ ಪಾಪುದಡ್ಕಗುತ್ತು, ಕೋಶಾಧಿಕಾರಿ ಅಶೋಕ್ ಪಾಣೂರು, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ...

ಬಂದಾರು; ಮನೆಯಿಂದ ಪೇಟೆಗೆಂದು ಹೋಗಿದ್ದ ವ್ಯಕ್ತಿಯ ಮೃತದೇಹ ಬಸ್ ನಿಲ್ದಾಣದಲ್ಲಿ ಪತ್ತೆ

0

ಬೆಳ್ತಂಗಡಿ; ಬಂದಾರಿನಲ್ಲಿ ಮನೆಯಿಂದ ಪೇಟೆಗೆಂದು ಹೋದ ವ್ಯಕ್ತಿಯ ಮೃತದೇಹ ಪದ್ಮುಂಜ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.ಮೃತ ವ್ಯಕ್ತಿ ಬಂದಾರು ಗ್ರಾಮದ ನೂಜಿ ಮನೆ ನಿವಾಸಿ ಚೆನ್ನಪ್ಪ ಪರವ (58) ಎಂಬವ ರಾಗಿದ್ದಾರೆ.ಮಾ 11ರಂದು ಚೆನ್ನಪ್ಪ ಪರವ ಉಪ್ಪಿನಂಗಡಿ ಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಅವರು ಮನೆಗೆ ಹಿಂತಿರುಗಿರಲಿಲ್ಲ. ಮಾ12 ರಂದು ಅವರು ಪದ್ಮುಂಜ ಬಸ್ ನಿಲ್ದಾಣದಲ್ಲಿ ಬಿದ್ದುಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು ಅಲ್ಲಿಗೆ ತೆರಳಿ ನೋಡಿದಾಗ ಅವರು ಮೃತಪಟ್ಟಿರುವುದು ಕಂಡುಬಂದಿದೆ. ವಿಪರೀತ ಮದ್ಯಸೇವನೆಯ ಚಟ ಹೊಂದಿದ್ದ...

ಉಜಿರೆ ಎಸ್‌.ಡಿ.ಎಂ. ಕಾಲೇಜಿನಲ್ಲಿ  ‘ಮಾಧ್ಯಮ ಪರ್ವ’ ಉತ್ಸವ; ಮಾದ್ಯಮಗಳು ನಂಬಿಕೆ ಉಳಿಸ ಬೇಕಾದರೆ ದಮನಿತರ ಧ್ವನಿಯಾಗಬೇಕು; ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ

0

ಬೆಳ್ತಂಗಡಿ: ನಂಬಿಕೆ, ವಿಶ್ವಾಸ ಮತ್ತು ನಿರೀಕ್ಷೆಗಳನ್ನು ಸಮಾಜದಲ್ಲಿ ಮೂಡಿಸುವುದು ಮಾಧ್ಯಮಗಳ ಕೆಲಸವಾಗಿದೆ. ಮಾಧ್ಯಮಗಳು ಸಮಾಜದ ನಂಬಿಕೆ ಉಳಿಸಿಕೊಳ್ಳಬೇಕಾದರೆ ದಮನಿತರ ಧ್ವನಿಯಾಗಬೇಕು. ಆಗ ಅವುಗಳ ಅಸ್ತಿತ್ವವೂ ಉಳಿಯುತ್ತದೆ ಎಂದುಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಹೇಳಿದರು.ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದೊಂದಿಗೆ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ (ಪದವಿ ಮತ್ತು ಸ್ನಾತಕೋತ್ತರ), ಬಿ.ವೋಕ್ ವಿಭಾಗ (ಡಿಜಿಟಲ್ ಮೀಡಿಯಾ ಆ್ಯಂಡ್ ಫಿಲ್ಮ್ ಮೇಕಿಂಗ್) ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ 'ಸಮೂಹ ಮಾಧ್ಯಮ ವೃತ್ತಿಪರತೆ ಮತ್ತು ಸದ್ಯದ ಸವಾಲುಗಳು' ಕುರಿತ ಎರಡು ದಿನಗಳ ರಾಷ್ಟ್ರೀಯ...

ಬಂದಾರು: ಮಾರ್ಚ್ 16 ಮೈರೋಳ್ತಡ್ಕ ಸರಕಾರಿ ಶಾಲೆಯಲ್ಲಿ ಎಸ್ಡಿ. ಎಮ್. ಹಾಸ್ಪಿಟಲ್ ಉಜಿರೆ  ಇದರ ವತಿಯಿಂದ ಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರ

0

ಬಂದಾರು: ಎಸ್ಡಿ. ಎಮ್. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸರಕಾರಿ ಉನ್ನತಿಕರಿಸೀದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ, ಅಮೃತ ಮಹೋತ್ಸವ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘ ಮೈರೋಳ್ತಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಪ್ರಗತಿಬಂಧು ಒಕ್ಕೂಟ ಮೈರೋಳ್ತಡ್ಕ ಇದರ ಸಹಯೋಗದಲ್ಲಿ ಮಾರ್ಚ್ 16 ಭಾನುವಾರ ದಂದು ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಪ್ರಮುಖ ಗಣ್ಯರು ಆಗಮಿಸಲಿದ್ದಾರೆ. ಶಿಬಿರದಲ್ಲಿ ಮೂಳೆ...

ಗೇರುಕಟ್ಟೆ; ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

0

ಬೆಳ್ತಂಗಡಿ; ಗೇರುಕಟ್ಟೆ ಜನತಾ ಕಾಲೊನಿ ಸಮೀಪ ಗೇರು ತೋಟದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.ಮೃತ ವ್ಯಕ್ತಿ ತಣ್ಣೀರು ಪಂತ ಗ್ರಾಮದ ಕಲ್ಲೇರಿ ನಿವಾಸಿ ರವಿ ಯಾನೆ ವಾಸುದೇವ ನಾಯ್ಕ (44)ಎಂದು ಗುರುತಿಸಲಾಗಿದೆ.ಈತ ರಸ್ತೆ ಬದಿಯಲ್ಲಿ ಹಣ್ಣುಗಳ ವ್ಯಾಪಾರ ನಡೆಸುತ್ತಿದ್ದು ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಸ್ಥಳೀಯ ಗ್ರಾ.ಪಂ ಸದಸ್ಯ ಅಬ್ದುಲ್ ಕರೀಂ ಅವರಿಗೆ ಹಾಗೂ ಇತರರಿಗೆ ಮಾಹಿತಿ ನೀಡಿದ್ದಾರೆ. ಅವರು ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ...

ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಹಾಗೂ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0

ಬೆಳ್ತಂಗಡಿ; ಮಹಿಳಾ ಶಕ್ತಿ ದೇಶದ ಶಕ್ತಿ, ಮಹಿಳೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಬೆಳೆಸಿ ಮುಂದೆ ಬಂದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ, ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಅಧ್ಯಕ್ಷರು ಆಗಿರುವ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಹೇಳಿದರು.ಅವರು ಬೆಳ್ತಂಗಡಿಯಲ್ಲಿ ಡಿ.ಕೆ ಆರ್. ಡಿ.ಎಸ್ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ವಲ್ಸಮ್ಮ ಎ.ಜೆ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಅನ್ನಮ್ಮ ಡೆಪ್ಯೂಟಿ ಕಮಾಂಡಂಟ್...

ಬೆಳ್ತಂಗಡಿ; ಗುಡುಗು ಸಿಡಿಲು, ಗಾಳಿಯ ಅಬ್ಬರದೊಂದಿಗೆ ಸುರಿದ ಭಾರೀ ಮಳೆ

0

ಬೆಳ್ತಂಗಡಿ: ತಾಲೂಕಿನಾದ್ಯಂತ ಬುಧವಾರ ಸಂಜೆಯ ವೇಳೆಗೆ ಸಿಡಿಲು ಗುಡುಗು, ಗಾಳಿಯೊಂದಿಗೆ ಅಬ್ಬರದಿಂದ ಮಳೆ ಸುರಿದಿದ್ದು ಕಳೆದ ಒಂದುವಾರದಿಂದ ಇದ್ದ ಬಿಸಿಯೇರಿದ ವಾತಾತವರಣವನ್ನು ತಂಪಾಗಿಸಿದೆ.ಮಳೆಯೊಂದಿಗೆ ಭಾರೀ ಗಾಳಿಯೂ ಬೀಸಿದ್ದುತಾಲೂಕಿನ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಅಸ್ತ ವ್ಯಸ್ತಗೊಂಡಿದೆ. ಅಲ್ಲಲ್ಲಿ ಮರಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ.ಸಂಜೆ ಸುಮಾರು 5.30 ಗಂಟೆಯಿಂದ 6-30 ರವರೆಗೆ ಮಳೆ ಗುಡುಗು-ಸಿಡಿಲು, ಗಾಳಿ ಸಹಿತ ಸುರಿಯತೊಡಗಿತ್ತು. ತಾಲೂಕಿನ ಶಿಶಿಲ, ಅರಸಿನಮಕ್ಕಿ, ಧರ್ಮಸ್ಥಳ, ಮುಂಡಾಜೆ, ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಬಳಂಜ, ಅಳದಂಗಡಿ, ಫಂಡಿಜೆ, ನಾರಾವಿ, ವೇಣೂರು ಪರಿಸರದಲ್ಲಿ...

ಬೆಳ್ತಂಗಡಿ ಉದಯವಾಣಿ ವರದಿಗಾರರಾಗಿದ್ದ ಅಶೋಕ್ ಶೆಟ್ಟಿ ಅವರ ಪತ್ನಿ ಶಕುಂತಲ ಶೆಟ್ಟಿ ನಿಧನ

0

ಬೆಳ್ತಂಗಡಿ; ಬೆಳ್ತಂಗಡಿಯ ಉದಯವಾಣಿ ಪತ್ರಿಕೆಯ, ಅರೆಕಾಲಿಕ ವರದಿಗಾರರಾಗಿ, ಪತ್ರಿಕಾ ವಿತರಕರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಪಿ.ಎಸ್. ಅಶೋಕ್ ಶೆಟ್ಟಿಯವರ ಪತ್ನಿ ಭುಡ್ಡಾರು ಶಕುಂತಲಾ ಶೆಟ್ಟಿ(68ವ)ರವರು ಇಂದು(ಮಾ.12) ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.