


ಬೆಳ್ತಂಗಡಿ; ನಡ ಗ್ರಾಮದ ಪೆರ್ಮಾಣು ನಿವಾಸಿ ಯುವತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತ ಯುವತಿ ಸ್ಥಳೀಯ ನಿವಾಸಿ ಸರಸ್ವತಿಬ(30) ಎಂಬವರಾಗಿದ್ದಾರೆ.
ಈ ಬಗ್ಗೆ ಈಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದು ಫೆ.9 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಕೆ ಮನೆಯ ಡೈನಿಂಗ್ ಹಾಲ್ ನಲ್ಲಿ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಲಾಗಿದೆ. ವೈಯುಕ್ತಿಕ ಕಾರಣಗಳಿಂದ ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
