Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಉಚಿತ ನೇತ್ರ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ

ಬೆಳ್ತಂಗಡಿ ಉಚಿತ ನೇತ್ರ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ

30
0

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ರಿ ದ.ಕ ಬೆಳ್ತಂಗಡಿ ತಾಲೂಕು, ಮತ್ತು ಪಟ್ಟಣ ಪಂಚಾಯತ್ ಬೆಳ್ತಂಗಡಿ ಇವುಗಳ ಸಹಬಾಗಿತ್ವದಲ್ಲಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ( ಅಂದತ್ವ ನಿವಾರಣಾ ವಿಭಾಗ) ,ಶ್ರಿದೇವಿ ಆಪ್ಟಿಕಲ್ ಸಂತೆಕಟ್ಟೆ ಬೆಳ್ತಂಗಡಿ, ಶ್ರಿ ಭಗವಾನ್ ಸಾಯಿಬಾಬಾ ಪೂಜಾ ಸಾಮಾಗ್ರಿಗಳ ಮಳಿಗೆ ಸಂತೆಕಟ್ಟೆ ಇದರ ಎರಡನೇ ವರ್ಷದ ಮಳಿಗೆಯ ಪಾದಾರ್ಪಣೆ ಬಗ್ಗೆ ರಾಜಕೇಸರಿ ಸಂಘಟನೆಯ 552 ನೇ ಸೇವಾಯೋಜನೆಯ ಪ್ರಯುಕ್ತ ಸಂತೆಕಟ್ಟೆ ಒಳಾಂಗಣದಲ್ಲಿ ಸೋಮವಾರ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸೆ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಬಳಂಜ ಶಿಕ್ಷಣ ಟ್ರಷ್ಟ್ ರಿ ಇದರ ಅದ್ಯಕ್ಷ ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ್ ಬಳಂಜ ಉದ್ಘಾಟಿಸಿ ಮಾತನಾಡಿ ರಾಜಕೇಸರಿ ಸಂಘಟನೆಯು ಕಳೆದ ಇಪ್ಪತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಅನಾರೋಗ್ಯ ಪೀಡಿತರಿಗೆ ನೆರವು, ನಿರಾಶ್ರಿತರಿಗೆ ಮನೆ, ಸರಕಾರಿ ಶಾಲಾ ಶೌಚಾಲಯ ಸ್ವಚ್ಚತೆ, ಸರಕಾರಿ ಶಾಲೆಗೆ ಕೊಡುಗೆ, ಉಚಿತ ಸಾಮೂಹಿಕ ವಿವಾಹ, ರಕ್ತದಾನ ಶಿಬಿರ, ಸಾದಕರನ್ನು ಗುರುತಿಸುವ ಕಾರ್ಯಕ್ರಮದೊಂದಿಗೆ ಉಚಿತ ಅರೋಗ್ಯ ಶಿಬಿರಗಳನ್ನು ಮಾಡುತ್ತಿದ್ದು ಇದೊಂದು ಸಮಾಜ ಮೆಚ್ಚುವ ಕಾರ್ಯ.ಇದರ ಸ್ಥಾಪಕಾದ್ಯಕ್ಷ ದೀಪಕ್ ಜೀ ಯವರು ತಮ್ಮ ಜೀವನವನ್ನು ಸಮಾಜಸೇವೆಗೆ ಮೀಸಲಿಟ್ಟ ಸಾದಕರು ಎಂದರು. ಖ್ಯಾತ ನೇತ್ರವೈದ್ಯ ಡಾ ಮದುಕರ್ ಮಾತನಾಡಿ ಇಂದಿನ ಒತ್ತಡದ ಯುಗದಲ್ಲಿ ಕಣ್ಣಿನ ರಕ್ಷಣೆ ಅಗತ್ಯವಿದೆ. ಪ್ರತಿಯೊಬ್ಬರು ಸಮಯಕ್ಕೆ ಸರಿಯಾಗಿ ಕಣ್ಣಿನ ಪರೀಕ್ಷೆ ಮಾಡಬೇಕು.ಇಂದು ರಾಜಕೇಸರಿ ಸಂಘಟನೆ ಹಲವಾರು ವರ್ಷಗಳಿಂದ ಉಚಿತ ನೇತ್ರಚಿಕಿತ್ಸಾ ಶಿಬಿರ ಮಾಡಿ ಜನಸಾಮಾನ್ಯರಿಗೆ ನೆರವು ನೀಡುವ ಕಾರ್ಯ ಮಾಡುತ್ತಿದೆ ಎಂದರು. ರಾಜಕೇಸರಿ ಸಂಘಟನೆಯ ಸಂಚಾಲಕ ಪ್ರೇಮ್ ರಾಜ್ ರೋಶನ್ ಸಿಕ್ವೇರಾ ಪ್ರಾಸ್ತಾವಿಕ ಮಾತನಾಡಿದರು. ನೇತ್ರ ವೈದ್ಯರಾದ ಡಾ ಕ್ರೀನಾ, ತಾ ಪಂ ಸಂಯೋಜಕ ಜಯಾನಂದ ಲಾಯಿಲ, ಬಳಂಜ ಅಟ್ಲಾಜೆ ಸರ್ವೋದಯ ಪ್ರೆಂಡ್ಸ್ ನ ಅದ್ಯಕ್ಷ ಸುರೇಶ್ ಹೇವ, ಉದ್ಯಮಿ ಶ್ತಿಕೇಶ್ ಕೋಟ್ಯಾನ್ ಮುಂದಾದವರು ಉಪಸ್ಥಿತರಿದ್ದರು. ರಾಜಕೇಸರಿ ಸಂಘಟನೆಯ ಸಂಚಾಲಕ ಪ್ರೇಮ್ ರಾಜ್ ಸಿಕ್ವೇರಾ ಪ್ರಾಸ್ತಾವಿಕ ಮಾತನಾಡಿದರು. ಪ್ರತೀಕ್ಷಾ ದೀಪಕ್ ಜಿ ಅಥಿತಿ ಗಣ್ಯರನ್ನು ಸ್ವಾಗತಿಸಿದರು. ನೂರಕ್ಕು ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು

LEAVE A REPLY

Please enter your comment!
Please enter your name here