ತಾಲೂಕಿನ ವಿವಿಧ ಮತಗಟ್ಟೆಗಳಿಗೆ ರಕ್ಷಿತ್ ಶಿವರಾಂ ಭೇಟಿ
ಬೆಳ್ತಂಗಡಿ; ಲೊಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು ಎರಡೂ ಪ್ರಮುಖ ಪಕ್ಷಗಳ ನಡುವೆ ಸಮಬಲದ ಸ್ಪರ್ಧೆ ನಡೆಯುತ್ತಿದೆ. ಕೆ.ಪಿಸಿಸಿ ಕಾರ್ಯದರ್ಶಿ ರಕ್ಷಿತ್ಬಶಿವರಾಂ ಅವರು ತಾಲೂಕಿನ ವಿವಿಧ ಮತಗಟ್ಟೆಗಳಿಗೆ ತೆರಳಿ ಕಾಂಗ್ರೆಸ್ ಕಾರ್ಯ ಕರ್ತರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದರು. ರಕ್ಷಿತ್ ಶಿವರಾಂ ಅವರು ತಾಲೂಕಿನಾಧ್ಯಂತ ಸಂಚರಿಸಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ
ನಗರದಲ್ಲಿ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರಿಂದ ಮತದಾನ
ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಲಾರೆನ್ಸ್ ಮುಕ್ಕುಯಿ ಅವರು ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ನಗರದ ಬೂತ್ ಸಂಖ್ಯೆ 106ರಲ್ಲಿ ತಮ್ಮ ಮತದಾನ ದ ಹಕ್ಕನ್ನು ಚಲಾಯಿಸಿದರು.ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಬಿಷಪ್ ಅವರು ಕರೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರಿಂದ ಮತದಾನ
ಉಜಿರೆ; ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿರುವ ಬೂತ್ ಸಂಖ್ಯೆ 95 ರಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿ ಲೋಕಸಭಾ ಚುನಾವಣೆಯ ಮತದಾನ ಮಾಡಿದರು
ತಾಲೂಕಿನಲ್ಲಿ ಶೇ 32.39 ಮತದಾನ
ಬೆಳ್ತಂಗಡಿ; ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಬಿರುಸಿನ ಮತದಾನವಾಗುತ್ತಿದೆ.ಬೆಳಿಗ್ಗೆ 11ಗಂಟೆಯ ವರೆಗೆ ತಾಲೂಕಿನಲ್ಲಿ ಶೇ 32.39 ಮತದಾನವಾಗಿದೆ.ಬೆಳಗ್ಗೆ 7ಗಂಟೆಗೆ ಮತದಾನದ ಪ್ರಕ್ರಿಯ ಆರಂಭಗೊಂಡಿತ್ತು. ಆರಂಭದಿಂದಲೇ ಮತಗಟ್ಟೆಗಳ ಎದುರು ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು. ಮೊದಲ ಎರಡು ಗಂಟೆಯಲ್ಲಿ ತಾಲೂಕಿನಲ್ಲಿ 15.28 ಶೇ ಮತದಾನವಾಗಿತ್ತು. ಇದೀಗ 11ಗಂಟೆಯ ವೇಳೆಗೆ ಶೇ 32.39 ಮತದಾನವಾಗಿದೆ
ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ
ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಶುಕ್ರವಾರ ಮಂಗಳೂರಿನ ಕಪಿತಾನಿಯೋ ಶಾಲೆಯ ಮಂಗಟ್ಟೆಯಲ್ಲಿ ಮತ ಚಲಾಯಿಸಿದರು.ಪತ್ನಿ ಸಾಯಿರಶ್ಮಿರಾಜ್ ಪೂಜಾರಿ ಹಾಗೂ ಪುತ್ರಿ ರಿತುರಾಜ್ ಹಾಗೂ ಹಿತೈಷಿಗಳೊಂದಿಗೆ ಆಗಮಿಸಿದ ಅವರು, ಮತ ಚಲಾಯಿಸಿದರು.
ಧರ್ಮಸ್ಥಳದಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಮತದಾನ
ಬೆಳ್ತಂಗಡಿ: ಲೋಕಸಭಾ ಚುನಾವಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮತದಾನದ ಹಕ್ಕು ಚಲಾಯಿಸಿದರು.ಧರ್ಮಸ್ಥಳ ಶ್ರೀ ಮಂಜನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಲೆಯ 164 ಮತಗಟ್ಟೆಯಲ್ಲಿ ಪತ್ನಿ ಹೇಮಾವತಿ ವಿ ಹೆಗ್ಗಡೆಯವರೊಂದಿಗೆ ಆಗಮಿಸಿ ಮತದಾನ ನೆರವೇರಿಸಿದರು.
ತಾಲೂಕಿನಲ್ಲಿ15.28 ಶೇ ಮತದಾನ
ಬೆಳ್ತಂಗಡಿ; ಲೋಕಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು ಮೊದಲ ಎರಡು ಗಂಟೆಯಲ್ಲಿ ಶೇ15.28 ಮತದಾನವಾಗಿದೆ.ತಾಲೂಕಿನ 241 ಮತಗಟ್ಟೆಗಳಲ್ಲಿ ಬೆಳಿಗ್ಗೆ 7ಗಂಟೆಯಿಂದ ಮತದಾನ ಆರಂಭಗೊಂಡಿದ್ದು ಮತದಾರರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಬೆಳಿಗ್ಗೆ 9ಗಂಟೆಯ ವರೆಗೆ 15.28ಶೇ ಮತದಾನವಾಗಿದೆ.
ಶಾಸಕ ಹರೀಶ್ ಪೂಂಜ ಅವರಿಂದ ಮತದಾನ
ಬೆಳ್ತಂಗಡಿ; ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ತಮ್ಮ ಗ್ರಾಮ ಗರ್ಡಾಡಿಯ ಮತಗಟ್ಟೆ ಸಂಖ್ಯೆ 123ರಲ್ಲಿ ಬೆಳಗ್ಗೆಯೇ ಮತದಾನ ನೆರವೇರಿಸಿದರು.ಮತದಾನದ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ರಾಷ್ಟ್ರದ ನಿರ್ಮಾಣದಲ್ಲಿ ತೊಡಗಿರುವ ಪಕ್ಷಕ್ಕೆ ಮತ ನೀಡಿಗೆಲ್ಲಿಸಿ ಎಂದು ಮತದಾರರಲ್ಲಿ ವಿನಂತಿಸಿದ್ದಾರೆ
ತಾಲೂಕಿನಲ್ಲಿ ಮತದಾನಕ್ಕೆ ಚಾಲನೆ; ಉತ್ಸಾಹದಿಂದ ಭಾಗವಹಿಸುತ್ತಿರುವ ಮತದಾರರು
ಬೆಳ್ತಂಗಡಿ; ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡಿದ್ದು ಜನರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಗಳಾಗುತ್ತಿದ್ದಾರೆ. ತಾಲೂಕಿಕಿನ 241 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆತಿದೆ.ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಮತಗಟ್ಟೆಗಳ ಹೊರಗೆ ಇದ್ದು ಮತದಾರರ ಮೇಲೆ ಪ್ರಭಾವ ಬೀರುವ, ಮತದಾರರಿಗೆ ನೆರವಾಗುವ ಕಾರ್ಯ ಮಾಡುತ್ತಿದ್ದಾರೆ.ತಾಲೂಕಿನ ಒಂದೆರಡು ಮತಗಟ್ಟೆಗಳಲ್ಲಿ ಮತಯಂತ್ರದ ಸಣ್ಣ ಸಮಸ್ಯೆಗಳು ಆಗಿರುವುದನ್ನು ಹೊರತು ಪಡಿಸಿದರೆ ಮತದಾನ ಸುಗಮವಾಗಿಯೇ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ 232817 ಮತದಾರರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,17,603 ಮತದಾರರು ಮತ...
ಮುಂಡಾಜೆಯಲ್ಲಿ ಮತಯಂತ್ರದ ಸಮಸ್ಯೆ ತಡವಾಗಿ ಆರಂಭಗೊಂಡ ಮತದಾನ
ಬೆಳ್ತಂಗಡಿ; ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ತಾಲೂಕಿನ ಮುಂಡಾಜೆಯ 74 ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟು ವಿಳಂಬವಾಗಿ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು. ಬೆಳಿಗ್ಗೆ 7ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಬೇಕಾಗಿತ್ತು. ಆರು ಗಂಟೆಯಿಂದಲೇ ಮತದಾರರು ಸರತಿಯ ಸಾಲಿನಲ್ಲಿ ನಿಂತಿದ್ದರು. ಆದರೆ ಏಳು ಗಂಟೆಯ ವೇಳೆ ಮತಯಂತ್ರ ಸರಿಯಿಲ್ಲದ ಕಾರಣ ಮತ ಮತದಾನ ಆರಂಭಿಸಲು ಸಾಧ್ಯವಾಗಲಿಲ್ಲ. ನೂರಾರು ಸಂಖ್ಯೆಯಲ್ಲಿ ಜನರು ಮತಗಟ್ಟೆಯ ಎದುರು ಕಾಯುವಂತಾಯಿತು. 7.30ರ ಬಳಿಕ ಮತಯಂತ್ರವನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಒದಗಿಸಲಾಯಿತು. ಸರತಿಯ ಸಾಲಿನಲ್ಲಿ ನಿಂತು ಕಾಯುತ್ತಿದ್ದ ಮತದಾರರು ಅವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ...














