ಮೈಕ್ರೋ ಫೈನಾನ್ಸ್ ಗಳ ನಿಯಂತ್ರಣ ಕಾಯ್ದೆಗೆ ರಾಜ್ಯಪಾಲರ ಅಂಗೀಕಾರ
ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿಗಳನ್ನು ತಡೆ ಗಟ್ಟಲು ಉದ್ದೇಶಿಸಿ ರಾಜ್ಯ ಸರಕಾರ ಕಳುಹಿಸಿ ಕೊಟ್ಟಿದ್ದ ಮಹತ್ವದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಅಂಕಿತ ಹಾಕಿದ್ದಾರೆ. ಈ ಹಿಂದೆ ರಾಜ್ಯ ಸರಕಾರ ಕಳುಹಿಸಿಕೊಟ್ಟಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕದೆ, ಕೆಲವು ಸ್ಪಷ್ಟನೆ ಹಾಗೂ ಸಲಹೆಗಳೊಂದಿಗೆ ಕಡತವನ್ನು ವಾಪಸ್ ಕಳಿಸಿದ್ದರು. ಹೀಗಾಗಿ ರಾಜ್ಯ ಸರಕಾರ ಮತ್ತೊಮ್ಮೆ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಅಂತಿಮವಾಗಿ ಹಲವು ಸಲಹೆಗಳನ್ನು ನೀಡಿ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಅಲ್ಲದೆ, ಸಲಹೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ...
ಪುಲಾಬೆ ಮಸ್ಜಿದ್‌ನಲ್ಲಿ ಸರ್ವಧರ್ಮೀಯರ ಸಂಗಮ; ಆಸ್ತಿಕಪ್ರಧಾನ ಭಾರತ ದೇಶದಲ್ಲಿ ಸೌಹಾರ್ದತೆ ಭದ್ರಗೊಳ್ಳಲಿ; ಡಾ. ಝೈನಿ ಕಾಮಿಲ್ ಸಖಾಫಿ
ಬೆಳ್ತಂಗಡಿ; ದೇಶದ ಸ್ವಾತಂತ್ರ್ಯ ಸಂಗ್ರಾಮ ದೇಶದ ಸರ್ವ ಜನರ ಐಕ್ಯತೆಯ ಸಂಕೇತವಾಗಿತ್ತು. ಅದರ ಹಿಂದೆ ರಾಷ್ಟ್ರ ಕಟ್ಟುವ ಉದ್ದೇಶವಿತ್ತು. ನಮ್ಮ ದೇಶದ ಬಹು ಸಂಸ್ಕೃತಿ, ಆರಾಧ ನಾಲಯಗಳೇ ನಮ್ಮ ಶಕ್ತಿ. ಅವುಗಳು ಉಳಿಯಬೇಕು. ಆಸ್ತಿಕಪ್ರಧಾನವಾದ ಭಾರತದಲ್ಲಿ ಸೌಹಾರ್ದತೆ ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಖ್ಯಾತ ವಾಗ್ಮಿ ಡಾ. ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಹೇಳಿದರು. ಹೊಸಂಗಡಿ ಗ್ರಾಮದ ಪುಲಾಬೆಯಲ್ಲಿ ನವೀಕೃತಗೊಂಡು ಉದ್ಘಾಟನೆಗೊಂಡ ಬದ್ರಿಯಾ ಮಸ್ಜಿದ್ ಮತ್ತು ಮದರಸ ಇದರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಫೆ.9 ರಂದು ನಡೆದ ಸರ್ವಧರ್ಮೀಯ ಸಂಗಮದಲ್ಲಿ ಅವರು ದಿಕ್ಸೂಚಿ...
ಮಹಾ ಕುಂಭ ಮೇಳದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪುಣ್ಯಸ್ನಾನ
ಬೆಳ್ತಂಗಡಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪಾಲ್ಗೊಂಡು ಮಾಘ ಹುಣ್ಣಿಮೆಯ, ಪವಿತ್ರ ದಿನದಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.
ಕಳಿಯ; ಕಳಿಯ ಗೋವಿಂದೂರು ಶಾಲಾ ಬಳಿಯ ಅರಣ್ಯ ಇಲಾಖೆಯ ಗುಡ್ಡಕ್ಕೆ ಬೆಂಕಿ
ಬೆಳ್ತಂಗಡಿ; ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಸಮೀಪದ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.ಗುಡ್ಡಕ್ಕೆ ಬೆಂಕಿ ಬಿದ್ದ ಕುರಿತು ಸ್ಥಳೀಯ ಕೃಷಿಕ ಆದರ್ಶ್ ಕೊರೆಯ ಎಂಬವರು ಗಮನಿಸಿದ್ದು ಕೂಡಲೇ ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ ರವರಿಗೆ ತಿಳಿಸಿದರು. ಆವರು ಕೂಡಲೇ ಅಗ್ನಿಶಾಮಕ ದಳದವರಿಗೆ,ಅರಣ್ಯ ಇಲಾಖೆಯವರಿಗೆ,ಗ್ರಾಮ ಪಂಚಾಯತ್ ಗೆ ತಿಳಿಸಿದ್ದು ಕೂಡಲೇ ಅಗ್ನಿಶಾಮಕ ದಳದವರೊಂದಿಗೆ ಅರಣ್ಯ ಇಲಾಖೆಯಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಬೆಂಕಿ ನಂದಿಸಲು ಸಹಕರಿಸಿದರು. ಸ್ಥಳೀಯರೂ ಇಲಾಖೆಯವರೊಂದಿಗೆ ಸಹಕರಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿದರು.
ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕಲ್ಮಂಜ, ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ರಾಧಾಕೃಷ್ಣ ಗೌಡ, ಸದಸ್ಯರಾಗಿ, ಕೃಷ್ಣ ಮಲೆಕುಡಿಯ, ಶ್ರೀಮತಿ ಸುಂದರಿ,ಶ್ರೀಮತಿ ಮಹಾಲಕ್ಷ್ಮಿ, ಸಂತೋಷ್ ಕಡಂಬು, ಪ್ರವೀಣ್ ಬಿ, ಗಂಗಾಧರ ಗೌಡ, ರಘುಚಂದ್ರ ಗುಡಿಗಾರ್ ಮತ್ತು ಪ್ರಧಾನ ಅರ್ಚಕರಾಗಿ ರಾಜೇಶ್ ಹೊಳ್ಳನೇಮಕವಾಗಿದ್ದಾರೆ.
ಮುಂಡಾಜೆ; ಕಾಡಾನೆ ದಾಳಿ ವ್ಯಾಪಕ ಕೃಷಿ ಹಾನಿ
ಬೆಳ್ತಂಗಡಿ; ಮುಂಡಾಜೆಯ ದುಂಬೆಟ್ಟು ಪರಿಸರದ ಕಜೆ ವೆಂಕಟೇಶ್ವರ ಭಟ್ ಅವರ ತೋಟಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಕಾಡಾನೆ 25 ಅಡಕೆ ಮರ, 5 ತೆಂಗಿನಮರ ಹಾಗೂ ಸುಮಾರು 100ರಷ್ಟು ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ.ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಬಂದ ಕಾಡಾನೆ ಮೃತ್ಯುಂಜಯ ನದಿಯನ್ನು ದಾಟಿ, ನದಿ ಬದಿ ಇರುವ ಕೃಷಿ ತೋಟ ಪ್ರದೇಶದಲ್ಲಿ ಹಾನಿ ಉಂಟು ಮಾಡಿದೆ.
ಶಿರ್ಲಾಲು ಪ್ರದೇಶದಲ್ಲಿ ಕಾಡಿನಲ್ಲಿ ಕಂಡುಬಂದಿದ್ದ ಬೆಂಕಿ ಹತೋಟಿಗೆ
ಬೆಳ್ತಂಗಡಿ:ಬೆಳ್ತಂಗಡಿ ವನ್ಯಜೀವಿ ವಲಯದ ಅರಣ್ಯದಲ್ಲಿ ಕಂಡುಬಂದಿದ್ದ ಬೆಂಕಿ ಹತೋಟಿಗೆ ಬಂದಿದೆ.ಬೆಳ್ತಂಗಡಿ ವನ್ಯಜೀವಿ ವಲಯದ ಅಳದಂಗಡಿ ಶಾಖೆಯ ಶಿರ್ಲಾಲು ಮೇಲಿನ ನಾರಾವಿ ಮೀಸಲು ಅರಣ್ಯದ ಗುಡ್ಡದ ಹುಲ್ಲುಗಾವಲಿಗೆ ಕುದುರೆಮುಖ ಕಡೆಯಿಂದ ಬಂದ ಬೆಂಕಿಯು ಹರಡಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರಿ ಇಡೀ ಶ್ರಮವಹಿಸಿ ನಿಯಂತ್ರಣಕ್ಕೆ ತಂದಿದ್ದಾರೆ. ಬೆಳ್ತಂಗಡಿ ವನ್ಯಜೀವಿ ವಲಯದ ವಲಯ ಆರ್ ಎಫ್ ಒ ಶರ್ಮಿಷ್ಠಾ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಹೇಮಂತ್ ಕುಮಾರ್, ಅರಣ್ಯ ವೀಕ್ಷಕ ಬಸವರಾಜ್, ಸಿಬ್ಬಂದಿಗಳಾದ ಸಂದೇಶ್,...
ಬಂದಾರು;ಗ್ರಾಮ ಪಾಣೆಕಲ್ಲು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನ ದಲ್ಲಿವಾರ್ಷಿಕ ಕಾಲಾವಧಿ ನೇಮೋತ್ಸವ
ಬಂದಾರು; ಗ್ರಾಮ ಪಾಣೆಕಲ್ಲು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನ ದಲ್ಲಿ ನಡೆಯುವವಾರ್ಷಿಕ ಕಾಲಾವಧಿ ನೇಮೋತ್ಸವ ಕಾರ್ಯಕ್ರಮಕ್ಕೆ ಯುವ ಉದ್ಯಮಿಗಳಾದ ಕಿರಣ್ ಚಂದ್ರ ಡಿ ಪುಷ್ಪಗಿರಿ, ಬೆಂಗಳೂರು ಇವರು ಆಗಮಿಸಿ ದೈವದ ಆಶೀರ್ವಾದ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪದ್ಮುಂಜ ಸಿ. ಎಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾದ ಅಶೋಕ ಗೌಡ ಪಾಂಜಾಳ, ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ವಕೀಲರಾದ ಉದಯ ಕುಮಾರ್ ಬಿ.ಕೆ, ಬಂದಾರು ಪಂಚಾಯತ್ ಸದಸ್ಯರಾದ ಚೇತನ್ ಗೌಡ, ಶ್ರೀ ಕ್ಷೇತ್ರ ಪಾಣೆಕಲ್ಲು ದೈವಸ್ಥಾನದ ಆಡಳಿತ...
ನಡ;ಯುವತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ನಡ ಗ್ರಾಮದ ಪೆರ್ಮಾಣು ನಿವಾಸಿ ಯುವತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ಯುವತಿ ಸ್ಥಳೀಯ ನಿವಾಸಿ ಸರಸ್ವತಿಬ(30) ಎಂಬವರಾಗಿದ್ದಾರೆ.ಈ ಬಗ್ಗೆ ಈಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದು ಫೆ.9 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಕೆ ಮನೆಯ ಡೈನಿಂಗ್ ಹಾಲ್ ನಲ್ಲಿ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಲಾಗಿದೆ. ವೈಯುಕ್ತಿಕ ಕಾರಣಗಳಿಂದ ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಕ್ಕಿಂಜೆ ಶ್ರೀ ಇಷ್ಟದೇವತಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ.
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಚಿಬಿದ್ರೆ ಗ್ರಾಮದ ಶ್ರೀ ಕಕ್ಕಿಂಜೆ ಇಷ್ಟದೇವತಾ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಜಯಪ್ರಸಾದ್ ಗೌಡ, ಸದಸ್ಯರಾಗಿ, ಕಿಟ್ಟು ಮುಗೆರ, ಶ್ರೀಮತಿ ಚಂದ್ರಾವತಿ ಕುಲಾಲ್ ಶ್ರೀಮತಿ ದೇವಕಿ, ಭರತ್ ಕುಮಾರ್ ಗೌಡ, ಗೋಪಾಲ್ ಕೃಷ್ಣ ಆಚಾರ್ಯ, ಅಶೋಕ್ ಕುಮಾರ್, ಹರೀಶ್ ಗೌಡ , ಮತ್ತು ಪ್ರಧಾನ ಅರ್ಚಕರಾಗಿ ಮಧು ಭಟ್ನೇಮಕವಾಗಿದ್ದಾರೆ.















