

ವೇಣೂರು; ಇಲ್ಲಿನ ಅಂಡಿಂಜೆ ನಿವಾಸಿ ಮಂಗಳಾದೇವಿ ಮೇಳದ ಯಕ್ಷಗಾನ ಭಾಗವತ ರಾದ ಸತೀಶ್ ಆಚಾರ್ಯ ವೇಣೂರು(ಅಂಡಿಂಜೆ) ಅಂಡಿಂಜೆ ಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ,ದಿವಂಗತರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನೆಗೆ ಭೇಟಿ ನೀಡಿ ಸತೀಶ್ ಆಚಾರ್ಯ ತಾಯಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು,. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪೂಜಾರಿ,ಪರಮೇಶ್ವರ್ , ಪ್ರಮುಖರಾದ ತೋಮಸ್ ನೊರೊನ್ನ, ರಾಜೇಶ್ ಅಂಡಿಂಜೆ ಉಪಸ್ಥಿತರಿದ್ದರು.
