ಚಾರ್ಮಾಡಿ ಕೊಳಂಬೆಯಲ್ಲಿ ಬದುಕು ಕಟ್ಟೋಣ ಬನ್ನಿ ತಂಡದಿಂದ ಪ್ರವಾಹದ ನೆನಪು ಮೃತ್ಯುಂಜಯ ನದಿಗೆ ಹಾಲು ಸಮರ್ಪಣೆ; ವಯನಾಡ್ ನಲ್ಲಿ ಮಡಿದವರಿಗೆ ಶ್ರದ್ದಾಂಜಲಿ

0

ಬೆಳ್ತಂಗಡಿ; "ಐದು ವರ್ಷಗಳ ಹಿಂದಿನ ಅನಿರೀಕ್ಷಿತ ಪ್ರವಾಹದಿಂದ ತತ್ತರಿಸಿದ್ದ ಕೊಳಂಬೆ ಪ್ರದೇಶದ ಜನರು ಇಂದು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ. ಇಂತಹ ಘಟನೆಗಳು ಇನ್ನು ಮರಕಳಿಸದಿರಲಿ. ಅಂದಿನ ಕಹಿ ಘಟನೆಗಳನ್ನು ಮರೆತು ಮುಂದುವರಿಯೋಣ" ಎಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.ಅವರು ಚಾರ್ಮಾಡಿ ಕೊಳಂಬೆಯಲ್ಲಿ 5 ವರ್ಷಗಳ ಹಿಂದೆ ಆಗಸ್ಟ್ 9ರಂದು ಪ್ರವಾಹದಿಂದ ಅವಾಂತರ ಸೃಷ್ಟಿಸಿದ್ದ ಮೃತ್ಯುಂಜಯ ನದಿಗೆ ಹಾಲೆರೆಯುವ ಹಾಗೂ ವಯನಾಡು ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು."ಅಂದು ಇಲ್ಲಿನ ಜನ ಊರನ್ನು ತೊರೆಯಲು...

ಕಾಶಿಬೆಟ್ಟುವಿನಲ್ಲಿ ಹೆದ್ದಾರಿ ಮಧ್ಯೆ ಕೈಕೊಟ್ಟ ಟ್ರಕ್: ಉಜಿರೆ ಬೆಳ್ತಂಗಡಿ ನಡುವೆ ವಾಹನ ಸಂಚಾರ ಅಸ್ತವ್ಯಸ್ತ

0

ಬೆಳ್ತಂಗಡಿ: ಹೊಂಡಮಯವಾಗಿರುವ ರಾಷ್ಟ್ರೀಯ ಹೆದ್ದಾರಿಯ ನಡುವೆ ಟ್ರಕ್ ಜಾಮ್ ಆಗಿ ಕಿ.ಮೀ ವಾಹನ ಸವಾರರರು ಗಂಟೆಗಟ್ಟಲೆ ಕಾಯವೇಕಾಗಿ ಬಂದ ಘಟನೆ ಆ.08 ಗುರುವಾರ ಕಾಶಿಬೆಟ್ಟುವಿನಲ್ಲಿ ಸಂಭವಿದೆ.ಮಧ್ಯಾಹ್ನ ಸುಮಾರು 1:50ರ ವೇಳೆಗೆ ಬೆಳ್ತಂಗಡಿಯಿಂದ ಉಜಿರೆಗೆ ಬರುತ್ತಿದ್ದ ಟ್ರಕ್ ರಸ್ತೆಯಲ್ಲೆ ಜಾಮ್ ಆಗಿದ್ದು ಆ ಬಳಿಕ ಎರಡೂ ಕಡೆ ಸಾಗುವ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದೆ.ಉಜಿರೆ ಹಾಗೂ ಬೆಳ್ತಂಗಡಿ ಕಡೆ ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು ಈ ಮಧ್ಯೆ ಬಂದ ಆ್ಯಂಬುಲೆನ್ಸ್ ಟ್ರಾಫಿಕ್‌ನಲ್ಲಿ ಪರದಾಡಿದೆ.ಉಜಿರೆಯಿಂದ ಬಂದ ಖಾಸಗಿ ಬಸ್ಸೊಂದು ಕಾಶಿಬೆಟ್ಟು ಬಸ್ ಸ್ಟಾಪ್...

ವಿನೇಶ್ ಫೊಗಟ್ ಫೈನಲ್ ಸ್ಪರ್ಧೆಯಿಂದ ಹೊರಕ್ಕೆ; ಭಾರತದ ಚಿನ್ನದ ಕನಸು ಭಗ್ನ

0

ಪ್ಯಾರಿಸ್ : ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿಸ್ಪರ್ಧೆಯಿಂದ ಅನರ್ಹಗೊಂಡಿರುವ ಬಗ್ಗೆ ವರದಿಯಾಗಿದ್ದು, ಫೈನಲ್ ನಲ್ಲಿ ಆಡಿ ಬಂಗಾರದ ಪದಕದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರೀಕ್ಷಿಸಲಾಗದ ಭಾರೀ ಆಘಾತ ಇದಾಗಿದೆ. ಮಹಿಳಾ ಕುಸ್ತಿ 50 ಕೆಜಿ ತರಗತಿಯಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಸುದ್ದಿಯನ್ನು ಭಾರತೀಯ ತಂಡವು ವಿಷಾದದಿಂದ ಹಂಚಿಕೊಂಡಿದೆ. ರಾತ್ರಿಯಿಡೀ ತಂಡವು ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು ಇಂದು ಬೆಳಿಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ತೂಕವನ್ನು ಹೊಂದಿದ್ದರು. ಈ ಸಮಯದಲ್ಲಿ ತಂಡದಿಂದ ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಕಂಪೆನಿಯ ಕಾರ್ಮಿಕ ಆತ್ಮಹತ್ಯೆಗೆ ಯತ್ನ

0

ಬೆಳ್ತಂಗಡಿ ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಗುತ್ತಿಗೆ ದಾರ ಡಿ.ಪಿ. ಜೈನ್ ಕಂಪನಿಯ ಕಾರ್ಮಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅ 06 ರ ಸಂಜೆ ನಡೆದಿದೆ. ಕಂಪನಿಯಲ್ಲಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತಿದ್ದ ನಾಗಪುರ ಮೂಲದ ಪ್ರಮೋದ್ ಜಾಡೆ (31) ಲಾರಿಯಲ್ಲಿ ಸೀಟ್ ಬೆಲ್ಟ್ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಅಲ್ಲಿದ್ದ ಇತರರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಕಳೆದ ಎರಡು ದಿನಗಳ ಹಿಂದೆ ಈತನ ತಂದೆ ಸಾವನ್ನಪ್ಪಿದ್ದು ಈ ಬೇಸರದಲ್ಲಿ ಮನನೊಂದು...

ಬಂದಾರಿನಲ್ಲಿ ಕೋಳಿಅಂಕಕ್ಕೆ ಪೊಲೀಸ್ ದಾಳಿ; ಹಲವರು ವಶಕ್ಕೆ

0

ಬಂದಾರು; ಬಂದಾರು ಗ್ರಾಮದ ಪೇರಲ್ದಪಲ್ಕೆ ಎಂಬಲ್ಲಿನ ಗುಡ್ಡೆಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ನಡೆಸುತ್ತಿದ್ದ ಕೋಳಿ ಅಂಕಕ್ಕೆ ಧರ್ಮಸ್ಥಳ‌ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.ಕೋಳಿ ಅಂಕ ನಡೆಯುತ್ತಿರುವ ಬಗ್ಗರ ಖಚಿತ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸ್‌ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಕಿಶೋರ್ ಪಿ. ರವರು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದು, ಈ ವೇಳೆ ಕೋಳಿ ಅಂಕದಲ್ಲಿ ನಿರತರಾಗಿದ್ದ ದೇವಪ್ಪ ಉಮ್ಮನ ಗೌಡ, ಪರಮೇಶ್ವರ, ರಾಮಣ್ಣ ಬಾಲಕೃಷ್ಣ ಎಂಬ 5 ಮಂದಿಯನ್ನು ವಶಪಡಿಸಿಕೊಂಡಿದ್ದಾರೆ. ಸದ್ರಿಯವರ ವಶದಿಂದ ಒಟ್ಟು ನಗದು ರೂ. 5410/- ರೂಪಾಯಿ, 3...

ಲಾಯಿಲ, ಕಾಲೇಜ್ ಕಂಪೌಂಡಿಗೆ ಕಾರು ಡಿಕ್ಕಿ:ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಚಾಲಕ

0

ಬೆಳ್ತಂಗಡಿ: ಕಾರೊಂದು ಕಾಲೇಜಿನ ಕಂಪೌಂಡಿಗೆ ಡಿಕ್ಕಿ ಹೊಡೆದ ಘಟನೆ ಲಾಯಿಲದಲ್ಲಿ ನಡೆದಿದೆ.ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿಯ ಖಾಸಗಿ ಕಾಲೇಜಿನ ಕಂಪೌಂಡಿಗೆ ಧರ್ಮಸ್ಥಳ ಕಡೆಯಿಂದ ಬೆಳ್ತಂಗಡಿಗೆ ಬರುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆವರಣ ಗೋಡೆ ಮಗುಚಿ ಬಿದ್ದು ಪಕ್ಕದಲ್ಲೇ ಇದ್ದ ಮರ ತಾಗಿ ಕಾರು ನಿಂತಿದೆ. ಒಂದು ವೇಳೆ ಮರ ಇರದಿದ್ದರೆ ಕಾರು ಕಾಲೇಜಿನ ಆವರಣದೊಳಗೆ ಬಿದ್ದು ಅನಾಹುತ ಸಂಭವಿಸುತಿದ್ದು ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.‌ಕಾರು ಚಾಲಕ ಪಡಂಗಡಿ ನಿವಾಸಿ ಎಂದು ತಿಳಿದು ಬಂದಿದೆ.

ಆ11ಮಡಂತ್ಯಾರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರಿಗೆ ಕ್ರೈಸ್ಥ ಸಂಘಟನೆಗಳಿಂದ ಸನ್ಮಾನ

0

ಬೆಳ್ತಂಗಡಿ; ಸಂಯುಕ್ತ ಕ್ರೈಸ್ತ ಸಂಘಟನೆ ಬೆಳ್ತಂಗಡಿ ವತಿಯಿಂದ ಆ11 ರವಿವಾರ ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್ ಮಡಂತ್ಯಾರು ಇಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾಗಿ ದ್ವಿತೀಯ ಅವಧಿಗೆ ಆಯ್ಕೆಯಾದ ಗೌರವಾನ್ವಿತ ಐವನ್ ಡಿಸೋಜಾ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಗಾರವನ್ನು ಅದ್ದೂರಿಯಿಮದ ಏರ್ಪಡಿಸಲಾಗಿದೆ ಎಂದು ಕಥೋಲಿಕ್ ಸಭಾ ಬೆಳ್ತಂಗಡಿಯ ಅಧ್ಯಕ್ಷರಾದ ಲಿಯೋ ರೋಡ್ರಿಗಸ್ ತಿಳಿಸಿದ್ದಾರೆಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.ಕಥೋಲಿಕ್ ಸಭಾ ಬೆಳ್ತಂಗಡಿ ವಲಯ, ಚರ್ಚ್ ಪಾಲನಾ ಮಂಡಳಿ ಬೆಳ್ತಂಗಡಿ ವಲಯ, ಆಲ್ ಇಂಡಿಯಾ ಕಥೋಲಿಕ್ ಯೂನಿಯನ್, ಕೆ.ಎಸ್.ಎಂ.ಸಿ.ಎ...

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಚಲನಚಿತ್ರ ನಟ ಯಶ್ ಭೇಟಿ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ಚಲನಚಿತ್ರ ನಟ ಯಶ್ ಕುಟುಂಬಸ್ಥರೊಂದಿಗೆ ಮಂಗಳವಾರ ಭೇಟಿ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಆಗಮಿಸಿದ ಅವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಮಣ್ಣಿನ ಹರಕೆಗೆಂದೇ ಪ್ರಸಿದ್ದವಾಗಿರುವ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೂ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಹೆದ್ದಾರಿ ಕಾಮಗಾರಿ ಅವಾಂತರ: ತಾಲೂಕಿನ ಏಕೈಕ ಇಂಡಸ್ಟ್ರಿಯಲ್ ಎಸ್ಟೇಟ್ ಮುಚ್ಚುವ ಭೀತಿ, ಉದ್ದಿಮೆದಾರರಿಂದ ಪ್ರತಿಭಟನೆಯ ಎಚ್ಚರಿಕೆ

0

ಬೆಳ್ತಂಗಡಿ; ತಾಲೂಕಿನಲ್ಲಿ ಪೂಂಜಾಲಕಟ್ಟೆಯಿಂದ ಚಾರ್ಮಾಡಿಯ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಪ್ರಯಾಣಿಕರು ಅನುಭವಿಸುತ್ತಿರುವ ಸಂಕಟಗಳು ಒಂದೆಡೆಯಾದರೆ ರಸ್ತೆಯ ಬದಿಗಳಲ್ಲಿ ವಾಸಿಸುವ ಮನೆಗಳಿಗೆ ನೀರು ನುಗ್ಗಿ ಸಂಕಷ್ಟದಲ್ಲಿದ್ದಾರೆ. ಇದೀಗ ಕಾಶೀಬೆಟ್ಟುವಿನಲ್ಲಿರುವ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಲಕ್ಷಾಂತರ ಸಾಲಮಾಡಿ ವ್ಯವಹಾರಗಳನ್ನು ನಡೆಸುತ್ತಿರುವವರ ಬದುಕನ್ನೂ ಈ ಹೆದ್ದಾರಿ ಕಾಮಗಾರಿ ಕಸಿದುಕೊಳ್ಳುತ್ತಿದೆ.ಕಾಶಿಬೆಟ್ಟುವಿನಲ್ಲಿ ಹೆದ್ದಾರಿಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಲಾಗಿದೆ, ಇದೀಗ ಇವರಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿದೆ ನೀರು ಕೆಸರು ನೇರವಾಗಿ ಇವರ ಅಂಗಡಿಗಳಿಗೆ ಫ್ಯಾಕ್ಟರಿ ಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಯಾರಲ್ಲಿ ದೂರು ನೀಡಿದರೂ ಯಾರೂ ಇವರ ಸಮಸ್ಯೆಗಳಿಗೆ...

ಬೆಳ್ತಂಗಡಿ ಐ.ಬಿ ಕಾಮಗಾರಿ ಅವ್ಯವಹಾರ; ಎಸ್.ಐ.‌ಟಿ ತನಿಖೆಗೆ ರಕ್ಷಿತ್ ಶಿವರಾಂ ಒತ್ತಾಯ

0

ಬೆಳ್ತಂಗಡಿ; ನಗರದಲ್ಲಿ ನಡೆದಿರು ಐ ಬಿ ಕಾಮಗಾರಿಯಲ್ಲಿ ಕೋಟ್ಯಾಂತರ ರುಪಾಯಿ ಅವ್ಯವಹಾರವಾಗಿದ್ದು ಈ ಬಗ್ಗೆ ಸರಕಾರ ಎಸ್.ಐ.ಟಿ ತನಿಖೆ ನಡೆಸಬೇಕು ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಒತ್ತಾಯಿಸಿದ್ದಾರೆ.ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಐ.ಬಿ ಕಾಮಗಾರಿ ಪೂರ್ಣಗೊಂಡ ಬಳಿಕ ಎರಡು ಕೋಟಿ ರೂ ಹೆಚ್ಚುವರಿ ಅನುದಾನವನ್ನು ಮಂಜೂರು ಗೊಳಿಸಲಾಗಿದೆ ಯಾವುದೇ ರೀತಿಯಲ್ಲಿ ಕಾನೂನನ್ನು ಪಾಲಿಸದೆ ಈ ಅನುದಾನವನ್ನು ಮಂಜೂರು ಗೊಳಿಸಲಾಗಿದೆ ಇದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದರು. ಐ ಬಿ ಕಾಮಗಾರಿಯ ಅವ್ಯವಹಾರದ ಬಗ್ಗೆ ಲೋಕಾಯುಕ್ತರಿಗೂ ದೂರು ನೀಡಲಾಗಿದೆ‌...