Home ಅಪರಾಧ ಲೋಕ ಕಳಿಯ; ಅಕ್ರಮ ಗೋ ಸಾಗಾಟ ಪತ್ತೆ 12ದನಗಳ ರಕ್ಷಣೆ

ಕಳಿಯ; ಅಕ್ರಮ ಗೋ ಸಾಗಾಟ ಪತ್ತೆ 12ದನಗಳ ರಕ್ಷಣೆ

19
0

ಬೆಳ್ತಂಗಡಿ: ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ವಾಹನವನ್ನು ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ತಡೆಹಿಡಿಯಲಾಗಿದ್ದು ದನಗಳನ್ನು ರಕ್ಷಿಸಲಾಗಿದೆ
ತರಕಾರಿ ಸಾಗಾಟದ ವಾಹನದಲ್ಲಿ ಹಿಂಸಾತ್ಮಕವಾಗಿ ಹಸುಗಳನ್ನು ಗೋವಧೆಗೆಂದು ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆಹಿಡಿದಿದ ಘಟನೆ ಸಂಭವಿಸಿದೆ.

ದನ ಸಾಗಾಟದ ವಾಹನವನ್ನು ಯುವಕರು ಬೆನ್ನು ಹತ್ತಿದ್ದು ಇದನ್ನು ಗಮನಿಸಿದ ಚಾಲಕರ ವಾಹನ ಬಿಟ್ಟು ಪರಾರಿಯಾಗಿದ್ದಾನೆ, ಬೆಳ್ತಂಗಡಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತು ಕೂಡಲೇ ಸ್ಥಳಕ್ಕೆ ಧಾವಿಸಿ ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದ ವಾಹನ ಗೋವುಗಳನ್ನು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಘಟನೆಗೆ ಸೇರಿದ ಯುವಕರು ಅಕ್ರಮ ದನ ಸಾಗಾಟವನ್ನು ತಡೆದಿರುವುದಾಗಿ ತಿಳಿದು ಬಂದಿದ್ದು ವಾಹನದಲ್ಲಿದ್ದ 12 ದನಗಳನ್ನು ರಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here