ವೇಣೂರು; ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿ
ಬೆಳ್ತಂಗಡಿ; ವೇಣೂರಿನ ಕರಿಮಣೇಲು ಸನಿಹದ ಗಾಂಧಿನಗರದ ಎರಡು ಮನೆಗಳಿಗೆ ಬುಧವಾರ ಸಂಜೆ ಸಿಡಿಲು ಬಡಿದು ಭಾರೀ ನಷ್ಟ ಉಂಟಾಗಿದೆ.ಇಸುಬು ಮತ್ತು ಅಬ್ದುಲ್ ರಹಿಮಾನ್ ಎಂಬವರ ಮನೆಗೆ ಸಂಜೆಯ ವೇಳೆ ಸಿಡಿಲುಬಡಿದ ಪರಿಣಾಮ ಮನೆಯ ವಿದ್ಯುತ್ ಉಪಕರಣಗಳೆಲ್ಲವೂ ಸುಟ್ಟು ಕರಕಲಾಗಿದೆ. ಅಲ್ಲದೆ ಹಿಂಭಾಗದ ಶೀಟಿನ ಮೇಲ್ಛಾವಣಿ ಕೂಡ ಪುಡಿಪುಡಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಅಬ್ದುಲ್ ರಹಿಮಾನ್ ಅವರ ಮನೆಯವರು ಘಟನೆಯ ವೇಳೆ ಕುಟುಂಬ ಸಮೇತ ಮೂಡಬಿದ್ರೆಗೆ ತೆರಳಿದ್ದರಿಂದ ಜೀವಾಪಾಯದಿಂದ ಪಾರಾಗಿದ್ದಾರೆ. ಇಸುಬು ಅವರ ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿದ್ದರಾದರೂ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ....
ಯಾಮಾತೋ ಶೋಟೋಕಾನ್ ಕರಾಟೆ ಸಂಸ್ಥೆಯಿಂದ ಬ್ಲಾಕ್ ಬೆಲ್ಟ್ ಪದವಿ ಪ್ರಧಾನ
ಬೆಳ್ತಂಗಡಿ; ಯಾಮಾತೋ ಶೋಟೋಕಾನ್ ಕರಾಟೆ ಸಂಸ್ಥೆಯ ಆಶ್ರಯದಲ್ಲಿ ಬಿಸಿ ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ಎರಡು ದಿನ ನಡೆದ ಕರಾಟೆ ಶಿಬಿರದಲ್ಲಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಸುಮಾರು 9 ವಿದ್ಯಾರ್ಥಿಗಳು ಬ್ಲಾಕ್ ಬೆಲ್ಟ್ ಪದವಿಯನ್ನು ಪಡೆದುಕೊಂಡಿರುತ್ತಾರೆ ಯಮತೋ ಶೋಟೋಕಾನ್ ಕರಾಟೆ ಸಂಸ್ಥೆಯ ಅಂತರಾಷ್ಟ್ರೀಯ ತರಾಟೆ ತರಬೇತುದರದ ಶಿಹಾನ್ ನಿಮೋರ ಮಸಾಕಿ ಜಪಾನ್ ಇವರು ಪರೀಕ್ಷೆಯನ್ನು ನಡೆಸಿದರು ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶಾಜು ಮೂಲವಾನ ಹಾಗೂ ನಾರಾಯಣ ಪೂಜಾರ್ ತರಬೇತಿದಾರರಾದ ಅಶೋಕ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು
ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ
ಪೊಲೀಸ್ ಇಲಾಖೆಯ ದಕ್ಷ ಸೇವೆಗಾಗಿ ನೀಡಲ್ಪಡುವ ಮುಖ್ಯಮಂತ್ರಿ ಪದಕಕ್ಕೆ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಭಾಜನರಾಗಿದ್ದಾರೆ.ರಾಜ್ಯದ ಸುಮಾರು 126 ಮಂದಿ ಪೊಲೀಸ್ ಅಧಿಕಾರಿಗಳು 2023 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದು ಅದರಲ್ಲಿ ಸಂದೇಶ್ ಪಿ.ಜಿ.ಅವರೂ ಇದ್ದಾರೆ.ದ.ಕ ಹಾಗೂ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಸಂದೇಶ್ ಅವರು ತಮ್ಮ ಡೇರಿಂಗ್ ಮೂಲಕ ನಿಷ್ಠಾವಂತ ಅಧಿಕಾರಿಯಾಗಿ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಗಮನಸೆಳೆದಿದ್ದಾರೆ.ಈ ಹಿಂದೆ ಬೆಳ್ತಂಗಡಿಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ಅವರು ಪ್ರಸ್ತುತ ಮೂಡುಬಿದಿರೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ...
ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳಿಂದ ರಕ್ಷಿತ್ ಶಿವರಾಂ ಬೇಟಿ.
ಬೆಳ್ತಂಗಡಿ .ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಪುನರಾರಂಭಗೊಂಡಿದ್ದು ಅತಿಥಿ ಉಪನ್ಯಾಸಕರನ್ನು ನಿಯೋಜನೆಗೊಳಿಸದೆ ಇರುವುದರಿಂದ ಪಾಠ ಪ್ರವಚನಗಳಿಲ್ಲದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಒಳಗಾಗಿದ್ದಾರೆ. ಅಲ್ಲದೆ ಜಿಲ್ಲೆಯ ಸಾವಿರಾರು ಅತಿಥಿ ಉಪನ್ಯಾಸಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದು ಅತಿಥಿ ಉಪನ್ಯಾಸಕರನ್ನು ಕರ್ತವ್ಯಗೆ ನಿಯೋಜನೆಗೊಳಿಸುವ ಬಗ್ಗೆ ಸಂಬಂಧಪಟ್ಟ ಸಚಿವರನ್ನು ಸಂಪರ್ಕಿಸಿ ನಮ್ಮ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಬೇಕೆಂದು ಮನವಿಯನ್ನು ಸಲ್ಲಿಸಿದರು.. ಈ ಮನವಿಗೆ ರಕ್ಷಿತ್ ಶಿವರಾಂ ರವರು ಪೂರಕವಾಗಿ ಸ್ಪಂದಿಸಿ ಸಚಿವರೊಂದಿಗೆ ಮಾತನಾಡಿ ಮುಂದಿನ ಕ್ರಮದ ಸೂಕ್ತವಾಗಿ ಸ್ಪಂದಿಸುವ ಭರವಸೆ ನೀಡಿದರು.ಈ...
ಭ್ರಷ್ಟಾಚಾರ ಮಾಡಿಲ್ಲ ಶಾಸಕ ಹರೀಶ್ ಪೂಂಜ ಅವರಿಂದ ಮಾರಿಗುಡಿಯಲ್ಲಿ ಪ್ರಮಾಣ
ಬೆಳ್ತಂಗಡಿ ಒಂದು ರೂಪಾಯಿ ಮುಟ್ಟಿಲ್ಲ ಭ್ರಷ್ಟಾಚಾರ ಮಾಡಿಲ್ಲ ಒಂದು ವೇಳೆ ತಪ್ಪು ಮಾಡಿದ್ದರೆ ತಕ್ಕ ಶಿಕ್ಷೆಯನ್ನು ಮಾರಿಗುಡಿಯ ಮಹಾದೇವಿ ನೀಡಲಿ, ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಮಾಣ ಮಾಡಿದ್ದಾರೆ. ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಇಂದು ಈ ಬಗ್ಗೆ ಮಾರಿಗುಡಿಯಲ್ಲಿ ಪ್ರಮಾಣ ಮಾಡುವುದಾಗಿ ಹೇಳಿದ್ದರು.ಐ.ಬಿ ಯ ಕಾಮಗಾರಿಯಲ್ಲಿನ ಭ್ರಷ್ಠಾಚಾರ, ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಸೇರಿದಂತೆ ಹಲವು ಆರೋಪಗಳನ್ನು ರಕ್ಷಿತ್ ಶಿವರಾಂ ಶಾಸಕರ ವಿರುದ್ದ ಮಾಡಿದ್ದರು ಇದಕ್ಕೆ ಉತ್ತರಿಸಿದ ಶಾಸಕರು ಈ ಆರೋಪಗಳೆಲ್ಲ ಸುಳ್ಳು, ತಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಈ...
ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದದ ಅಭಿವೃದ್ಧಿಗೆ 20 ಲಕ್ಷ ಅನುದಾನ ಮಂಜೂರು ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ.
ಬೆಳ್ತಂಗಡಿ .ತಾಲೂಕಿನ ಚಾರ್ಮಾಡಿ ಆಸ್ಪತ್ರೆಯ ಮೂಲಭೂತ ಸೌಕರ್ಯ ಹಾಗೂ ಉನ್ನತ್ತೀಕರಣ ಅಭಿವೃದ್ಧಿ ಕಾಮಗಾರಿಗೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ 20 ಲಕ್ಷ ರೂಪಾಯಿಗಳ ಅನುದಾನ ಮಂಜೂರಾತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ಚಾರ್ಮಾಡಿ ಗ್ರಾಮದ ಪ್ರಮುಖರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಿತಾ ಪೂಜಾರಿ ,ಹಾಗೂ ಪ್ರಮುಖರಾದ ಯಶೋಧರ ಚಾರ್ಮಾಡಿ, ಜಾರ್ಜ್ ಎಮ್ ವಿ ಚಿಬಿದ್ರೆ, ಸಂಶುದ್ದಿನ್ ಚಾರ್ಮಾಡಿ ,ನಿತಿನ್ ಚಾರ್ಮಾಡಿ ಅನಿಲ್ ಚಾರ್ಮಾಡಿ, ಉಸ್ಮಾನ್ ಚಾರ್ಮಾಡಿ ,ರಮೇಶ್ ಕತ್ತರಿಗುಡ್ಡೆ,ಹರೀಶ್ ದೇವಾಡಿಗ,ಹರೀಶ್ ಪರ್ಲಾಣಿ, ರಘುನಾಥ್...
ಮಲೆಬೆಟ್ಟುವಿನಲ್ಲಿ ಬೈಕ್ ಪಿಕಪ್ ಅಪಘಾತ ವಿದ್ಯಾರ್ಥಿಗೆ ಗಂಭೀರ ಗಾಯ
ಬೆಳ್ತಂಗಡಿ: ಬೈಕ್-ಪಿಕಪ್ ಅಪಘಾತ- ಬೈಕ್ ಸವಾರ ಗಂಭೀರಬೆಳ್ತಂಗಡಿ: ಮಲೆಬೆಟ್ಟು ನಿನ್ನಿಕಲ್ಲು ರಸ್ತೆ ಬಳಿ ಬೈಕ್ ಮತ್ತು ಪಿಕಪ್ ವಾಹನ ಅಪಘಾತದಲ್ಲಿ ಕಾಲೇಜು ವಿಧ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಆ.13ರಂದು ಬೆಳಿಗ್ಗೆ ನಡೆದಿದೆ.ಅಪಘಾತದಲ್ಲಿ ಗುರುವಾಯನಕೆರೆ ಖಾಸಗಿ ಕಾಲೇಜು ವಿದ್ಯಾರ್ಥಿ ಬೆಳಾಲು ಗ್ರಾಮದ ಮಂಜೂತ್ತು ಉಮೇಶ್ ಎಂ.ಜಿ. ಯವರ ಪುತ್ರ ಜೀವ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಅವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿಸಲಾಗಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಲಾಯಿಲದಲ್ಲಿ ನೆರೆಗೆ ಕಾರಣವಾಗಿದ್ದ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ತೆರವು
ಬೆಳ್ತಂಗಡಿ; ಲಾಯಿಲ ಗ್ರಾಮದ ಗುರಿಂಗಾನ ಎಂಬಲ್ಲಿ ಮಳೆಗಾಲದಲ್ಲಿ ಕೃತಕ ನೆರೆಗೆ ಕಾರಣವಾಗಿದ್ದ ನದಿ ಒತ್ತುವರಿ ಅಕ್ರಮ ತಡೆಗೋಡೆ ಕೊನೆಗೂ ಒತ್ತುವರಿದಾರರೇ ತೆರವುಗೊಳಿಸಿದ್ದಾರೆ. ಇತ್ತೀಚೆಗೆ ಸುರಿದ ಬಾರಿ ಮಳೆಗೆ ಗುರಿಂಗಾನ ಎಂಬಲ್ಲಿ ನೆರೆ ಬಂದು ಸ್ಥಳೀಯ 14 ಕುಟುಂಬಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಸ್ಥಳೀಯ ವ್ಯಕ್ತಿಯೊಬ್ಬ ನದಿ ಸೇರಿದಂತೆ ಪರಂಬೋಕು ಸ್ಥಳವನ್ನು ಅತಿಕ್ರಮಣ ಮಾಡಿ ಅದಕ್ಕೆ ಅಕ್ರಮವಾಗಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಈ ಬಗ್ಗೆ ಲಾಯಿಲ ಗ್ರಾಮ ಪಂಚಾಯತ್ ಸೇರಿದಂತೆ ಕಂದಾಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು. ಇತ್ತೀಚೆಗೆ ನೆರೆ ಪೀಡಿತ ಗುರಿಂಗಾನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ...
ರಕ್ಷಿತ್ ಶಿವರಾಂ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ
ಬೆಳ್ತಂಗಡಿ: ಪುಂಜಾಲಕಟ್ಟೆ -ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಗ್ಗೆ ನಾಗರಿಕರನ್ನು ಕತ್ತಲಲ್ಲಿರಿಸಿರುವ ಇಲಾಖೆಯ ಧೋರಣೆಯನ್ನು ಖಂಡಿಸಲು ಹಾಗೂ ಆಗುವ ರಸ್ತೆ ಕಾಮಗಾರಿಯ ಬಗ್ಗೆ ನಿಗಾ ಇರಿಸಲು ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆಯನ್ನು ರಕ್ಷಿತ್ ಶಿವರಾಂ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಆಗಸ್ಟ್ 12ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆಯನ್ನು ರಚಿಸಲಾಯಿತು. ವೇದಿಕೆಯ ಪ್ರಥಮ ಸಭೆಯಲ್ಲಿ ಕಾಮಗಾರಿಯ ಗುತ್ತಿಗೆ ಹಾಗೂ ಒಡಂಬಡಿಕೆ ಮತ್ತು ಒಳ ಒಪ್ಪಂದಗಳ ಬಗ್ಗೆ ಕಾನೂನು ಹೋರಾಟ ನಡೆಸಲು ತಜ್ಞರ ಜೊತೆ...
ಕಾರ್ಮಿಕರ ಹಕ್ಕು ಕಸಿಯುವ ಬಂಡವಾಳಶಾಹಿಗಳೇ ದೇಶ ಬಿಟ್ಟು ತೊಲಗಿ; ಸಿಐಟಿಯು ಪ್ರತಿಭಟನೆ
ಬೆಳ್ತಂಗಡಿ; ಅಂದು ಭಾರತೀಯರನ್ನು ಗುಲಾಮರನ್ನಾಗಿರಿಸಿದ, ದೇಶದ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದ್ದ ಬ್ರಿಟೀಶರನ್ನು ಬಾರತ ಬಿಟ್ಟು ತೊಲಗಲು ಕರೆ ನೀಡಿ ಯಶಸ್ವಿಯಾದ ದೇಶದ ದುಡಿಯುವ ವರ್ಗಕ್ಕೆ, ಇಂದು ಶ್ರಮಜೀವಿಗಳನ್ನು ಶೋಷಿಸುವ, ಅವರ ಬದುಕನ್ನು ಕಸಿಯುವ ಕಾರ್ಪರೇಟು ಸಂಸ್ಥೆಗಳ ಮಾಲಕರೇ ಭಾರತ ಬಿಟ್ಟು ತೊಲಗಿರಿ ಎಂದು ಹೋರಾಡುವುದು ಅನಿವಾರ್ಯವಾಗಿದೆ ಎಂದು ಸಿಐಟಿಯು ಜಿಲ್ಲಾ ಉಪಾದ್ಯಕ್ಷರಾದ ಬಿ.ಎಂ.ಭಟ್ ಹೇಳಿದರು.ಅವರು ಕ್ವಿಟ್ ಇಂಡಿಯಾ ಚಳವಳಿಯ ವರ್ಷಾಚರಣೆಯ ಭಾಗವಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟುಯು ನೇತೃತ್ವದಲ್ಲಿ ಕಾರ್ಮಿಕರ ಹಕ್ಕು ಕಸಿಯುವವರೇ ಭಾರತ ಬಿಟ್ಟು ತೊಲಗಿರಿ ಎಂದು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ...















