Home ಅಪರಾಧ ಲೋಕ ಉಜಿರೆಯಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ; ಹತ್ತಕ್ಕೂ ಹೆಚ್ವು ಮಂದಿಯ ವಿರುದ್ದ ಪ್ರಕರಣ ದಾಖಲು

ಉಜಿರೆಯಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ; ಹತ್ತಕ್ಕೂ ಹೆಚ್ವು ಮಂದಿಯ ವಿರುದ್ದ ಪ್ರಕರಣ ದಾಖಲು

29
0

ಬೆಳ್ತಂಗಡಿ : ಖಾಸಗಿ ಕಾಲೇಜ್ ವಿದ್ಯಾರ್ಥಿನಿಯೊಬ್ಬಳಿಗೆ ಮೆಸೇಜ್ ಮಾಡಿ ಅಸಭ್ಯವಾಗಿ ವರ್ತಿಸಿರುವುದಾಗಿ ಆರೋಪಿಸಿ ಉಜಿರೆಯಲ್ಲಿ
ಏ.26 ರಂದು ವಾಲಿಬಾಲ್ ಆಟಗಾರ ಸಯ್ಯದ್(24) ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಉಜಿರೆಯ ಪ್ರಜ್ವಲ್ ಹಾಗೂ ಇತರರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ದಾಖಲಿಸಲಾಗಿದೆ.
ಉಜಿರೆಯ ಹಿಂದೂ ಸಂಘಟನೆ ಕಾರ್ಯಕರ್ತರು ಏ.26 ರಂದು ಸೈಯ್ಯದ್ ಮೇಲೆ ಹಿಗ್ಗಮುಗ್ಗ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು.
ಬೆಳ್ತಂಗಡಿ ಠಾಣೆಯಲ್ಕಿ ಸೈಯ್ಯದ್ ವಿರುದ್ದ ಪೋಸ್ಕೋ ಪ್ರಕರಣ ದಾಖಲಿಸಿದ್ದರು.
ಇದೀಗ ಹಲ್ಲೆಗೆ ಒಳಗಾಗಿರುವ ಸೈಯ್ಯದ್ ನೀಡಿದ ದೂರಿನಂತೆ ಪೊಲೀಸರು ಉಜಿರೆಯ ಪ್ರಜ್ವಲ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿಯ ವಿರುದ್ದ ಪ್ರಕರಣ ದಾಖಲಿಸಿದ್ದು ಪ್ರಕರಣದ‌ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here