ಕಣಿಯೂರು ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ದಿ ಅಧಿಕಾರಿಯಾಗಿ ಗೀತಾ ಅಧಿಕಾರ ಸ್ವೀಕಾರ

0

ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕಲ್ಮಂಜ ಗ್ರಾಮ ಪಂಚಾಯತ್ ಅಧಿಕಾರಿಯಾಗಿರುವ ಆಗಿರುವ ಗೀತಾ ರವರು ಆ.31ರಂದು ಅಧಿಕಾರ ಸ್ವೀಕರಿಸಿದರು. ಕಣಿಯೂರು ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂತೋಷ್ ಪಾಟೀಲ್ ರವರು ಅಧಿಕಾರ ಹಸ್ತಾಂತರಿಸಿದರು.

ಜಾಗತಿಕ ಕಥೋಲಿಕ್ ಕಾಂಗ್ರೆಸ್ ಯೂತ್ ಕೌನ್ಸಿಲ್‌ ಸಂಯೋಜಕರಾಗಿ ರೋಬಿನ್ ಓಡಂಪಳ್ಳಿ ಆಯ್ಕೆ

0

ಬೆಳ್ತಂಗಡಿ; ಜಾಗತಿಕ ಕಥೋಲಿಕ್ ಕಾಂಗ್ರೆಸ್ ಇದರ ಯುವ ಘಟಕವಾಗಿರುವ ಜಾಗತಿಕ ಯೂತ್ ಕೌನ್ಸಿಲ್‌ ಇದರ ಜಾಗತಿಕ ಸಮಿತಿಯ ಸಂಯೋಜಕರಾಗಿ ಧರ್ಮಸ್ಥಳ ನಿವಾಸಿ ರೋಬಿನ್‌‌ ಓಡಂಪಳ್ಳಿ ಅವರು ಆಯ್ಕೆಯಾಗಿದ್ದಾರೆ.ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರತಿನಿಧಿಯಾಗಿರುವ ರೋಬಿನ್ ಅವರು ಈ ಹಿಂದೆ ಐ.ಸಿ ವೈ ಎಂ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾಗಿ, ಹಾಗೂ ಬೆಳ್ತಂಗಡಿ ಧರ್ಮಪ್ರಾಂತ್ಯದ ಯುವ ಘಟಕದ ಅಧ್ಯಕ್ಷರಾಗಿ ಸೇರಿದಂತೆ ಹಲವಾರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಪೆರಿಯಡ್ಕ ಹಾಲು ಉಉತ್ಪಾದಕರ ಸಂಘದ ಮಹಾ ಸಭೆ

0

ಪೆರಿಯಡ್ಕ: ಚಿಬಿದ್ರೆ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಕೆ ಡಿ ಜಾರ್ಜ್ ರವರ ಅಧ್ಯಕ್ಷತೆಯಲ್ಲಿ ಆ 30 ರಂದು ನಡೆಯಿತು.ಸಂಘದ ಅಭಿವೃದಿಗೆ ಶ್ರಮಿಸಿದ ಹಿರಿಯ ಸದಸ್ಯ ಶ್ರೀ ಶಾಂತಪ್ಪ ಗೌಡ ಮುದ್ಧಿಗೆ ಇವರನ್ನು ಸನ್ಮಾನಿಸಲಾಯಿತು.ಹಾಲು ಒಕ್ಕೂಟದ ಅಧಿಕಾರಿಗಳಾದ ಕು. ಮೋಹಿನಿ, ಡಾ. ಗಣಪತಿ ಹಾಲಿನ ಗುಣಮಟ್ಟದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸೋಮನಾಥ ಗೌಡ ಮಾಕಳ, ರಾಘವ ಗೌಡ ಕುಡುಮಡ್ಕ,ಕಾರ್ಯದರ್ಶಿ ಶ್ರುತಿ ಪ್ರಶಾಂತ್, ನಳಿನಿ ಹಾಗೂ ಸಂಘದ ನಿರ್ದೇಶಕರು, ಸದಸ್ಯರು ಪಾಲ್ಗೊoಡಿದ್ದರು.

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾ ಸಭೆರೂ.43..41 ಲಕ್ಷ ನಿವ್ವಳ ಲಾಭ, ಶೇ.15 ಡಿವಿಡೆಂಟ್ ಘೋಷಣೆ.

0

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ 2023-24 ನೇ ಸಾಲಿನ 14 ನೇ ವಾರ್ಷಿಕ ಮಹಾಸಭೆ ಆಗಸ್ಟ್ 31 ರಂದು ಸಂಘದ ಕಛೇರಿ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ.ಅನಿಲ್ ಎ.ಜೆ ರವರ ಅಧ್ಯಕ್ಷತೆಯಲ್ಲಿ ಜರುಗಿತು. 2023-24 ನೇ ಸಾಲಿನಲ್ಲಿ ರೂ 106 ಕೋಟಿ ವ್ಯವಹಾರ ನಡೆಸಿ ನಿವ್ವಳ ರೂ 43.41 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರಿ. ಅನಿಲ್ ಎ.ಜೆ ರವರು ತಿಳಿಸಿದರು.ಸಂಘದ ಉಪಾಧ್ಯಕ್ಷ ಶ್ರೀ. ಜಾರ್ಜ್ ಎಮ್. ವಿ...

ಧರ್ಮಸ್ಥಳ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

0

ಬೆಳ್ತಂಗಡಿ; ಧರ್ಮಸ್ಥಳ ಗೇಟ್ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಆ 29 ರಂದು ಪತ್ತೆಯಾಗಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಧರ್ಮಸ್ಥಳ ಗೇಟಿನ ಸಮೀಪ ಅಪರಿಚಿತ ವ್ಯಕ್ತಿ ಬಿದ್ದಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಆತ ಮೃತಪಟ್ಟಿರುವುದು ಕಂಡು ಬಂದಿದೆ. ಮೃತ ವ್ಯಕ್ತಿಗೆ ಸುಮಾರು 40ರಿಂದ 45ವರ್ಷ ಪ್ರಾಯ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮೃತರ ಬಗ್ಗೆ ಯಾವುದೆ ಗುರುತುಗಳು ಪತ್ತೆಯಾಗಿಲ್ಲ. ವಾರಿಸುದಾರು ಇದ್ದಲ್ಲಿ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ‌.

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

0

ಉಜಿರೆ; ವ್ಯಾಯಾಮದ ಕೊರತೆಯಿಂದ ಹೃದಯಾಘಾತದ ಸಾಧ್ಯತೆ ಹೆಚ್ಚಿದ್ದು, ಯುವಜನತೆ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವ ಅಗತ್ಯವಿದೆ ಎಂದು ಉಜಿರೆ ಧ. ಮಂ. ಕಾಲೇಜಿನ ಎಸ್.ಡಿ.ಎಂ. ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್. ಅಭಿಪ್ರಾಯಪಟ್ಟರು.ಅವರು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕಗಳು ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.“ಈಗಿನ ಆಹಾರ ಪದ್ಧತಿ ಮತ್ತು ಜೀವನ ಶೈಲಿಗೆ ವ್ಯಾಯಾಮ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ 18 ವರ್ಷದ ಯುವಜನತೆ ಕ್ರೀಡೆಯಲ್ಲಿ ತೊಡಗಿಕೊಳ್ಳುವ ಮೂಲಕ ದೇಹಕ್ಕೆ ಅಗತ್ಯ ವ್ಯಾಯಾಮ ದಕ್ಕಿಸಿಕೊಳ್ಳಬೇಕು. ಆ...

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದಲ್ಲಿ ಆರಾಧನೆ

0

ಬೆಳ್ತಂಗಡಿ; ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಸಂಪತ್ ಶುಕ್ರವಾರ ಪ್ರಯುಕ್ತ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಭಗವಾನ್ ೧೦0೮ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಗಂಧ ಅಭಿಷೇಕ.. ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಶ್ರೀ ಸರ್ವಾಹ್ನ ಯಕ್ಷ ಆರಾಧನೆಯನ್ನು ಅಳದಂಗಡಿಯ ಪ್ರತಿಷ್ಠಾಪರೋಹಿತರಾದ ಶ್ರೀ ಪದ್ಮ ಪ್ರಭ ಇಂದ್ರರು, ಅರಹಂತ ಇಂದ್ರ. ಶ್ರೀಕೀರ್ತಿ ಇಂದ್ರ ಹಾಗೂ ಇನ್ನಿತರ ಪುರೋಹಿತರ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ನೆರವೇರಿಸಲಾಯಿತು. ಲೋಕ ಕಲ್ಯಾಣರ್ಥವಾಗಿ ಮಾಡಿದ ಆರಾಧನೆ ಪೂಜಾ ಕರ್ತೃಗಳಾಗಿ ನಾರಾವಿ...

ಕೆ.ಪಿ.ಎಸ್ ಪುಂಜಾಲಕಟ್ಟೆ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ; ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿಯಲ್ಲಿ "ಸಹಪಠ್ಯ ಚಟುವಟಿಕೆಗಳ ಮೂಲಕ ಜೀವನ ಕೌಶಲ್ಯ ಅಭಿವೃದ್ಧಿ" ಎನ್ನುವ ಧ್ಯೇಯ ವಾಕ್ಯದ ಪರಿಕಲ್ಪನೆಯಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸೂಚನೆಯಂತೆ ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ವತಿಯಿಂದ ಹಮ್ಮಿಕೊಂಡ ಬೆಳ್ತಂಗಡಿ ತಾಲೂಕು ಮಟ್ಟದ ಸ್ಪರ್ಧೆಯು ವೇಣೂರು ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನೇತೃತ್ವದಲ್ಲಿ ವೇಣೂರು ಪ್ರೌಢಶಾಲಾ ಸಭಾಂಗಣದಲ್ಲಿ ಆಗಸ್ಟ್ 30ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಪೂಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ತಂಡ ರಾಷ್ಟ್ರೀಯ...

ಕಳಿಯ ಗ್ರಾ.ಪಂ ವತಿಯಿಂದ ನಿವೇಶನಕ್ಕೆ ಜಾಗ ಕಾದಿರಿಸುವಂತೆ ಅಧಿಕರಿಗಳಿಗೆ ಮನವಿ

0

ಬೆಳ್ತಂಗಡಿ; ಕಳಿಯ ಗ್ರಾಮ ಪಂಚಾಯತ್ ನಲ್ಲಿ ಹಲವಾರು ವರ್ಷಗಳಿಂದ ಬಡವರು ನಿವೇಶನಕ್ಕೆ ಅರ್ಜಿ ಸಲ್ಲಿಸುತ್ತಲೇ ಬರುತ್ತಿದ್ದು ಯಾವುದೇ ಹಕ್ಕು ಪತ್ರವನ್ನು ನೀಡಲು ಸಾದ್ಯವಾಗುತ್ತಿರಲಿಲ್ಲ.ಪಂಚಾಯತ್ ಆಡಳಿತ ಮಂಡಳಿಯು ಇದನ್ನು ಗಂಭೀರವಾಗಿ ಪರಿಗಣಿಸಿ ಸಾಮಾನ್ಯ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಆಡಳಿತ ಮಂಡಳಿಯ ಒಮ್ಮತದ ತೀರ್ಮಾನದಂತೆ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗ ಗುರುತಿಸುವಿಕೆಗಾಗಿ ಮಾನ್ಯ ಜಿಲ್ಲಾಧಿಕಾರಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಮತ್ತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯನ್ನು ಬೇಟಿ ಮಾಡಿ ಮನವಿ ಸಲ್ಲಿಸಿದರು. ಬೇಟಿಯ ನಿಯೋಗದಲ್ಲಿ ಅಧ್ಯಕ್ಷರಾದ ದಿವಾಕರ ಎಂ, ಉಪಾದ್ಯಕ್ಷೆ ಶ್ರೀಮತಿ ಇಂದಿರಾ, ಕಾರ್ಯದರ್ಶಿ ಕುಂಙ ಕೆ, ಸದಸ್ಯರಾದ ಅಬ್ದುಲ್ ಕರೀಮ್,ಸುದಾಕರ...

ಧರ್ಮಸ್ಥಳದಲ್ಲಿ ಕಾಡಾನೆ ದಾಳಿ ವ್ಯಾಪಕ‌ ಕೃಷಿ ಹಾನಿ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ವಿವಿದೆಡೆಗಳಲ್ಲಿ ಕಾಡಾನೆಗಳು ಕೃಷಿ ಭೂಮಿಗೆ ನುಗ್ಗಿ ಕೃಷಿಗೆ ಹಾನಿಯುಂಟುಮಾಡಿದ ಘಟನೆ ಸಂಭವಿಸಿದೆ.ಇಲ್ಲನ ನೇರ್ತನೆ ನಿವಾಸಿ ಜೋಸೆಫ್ ಪಿ.ಕೆ ಎಂಬವರ ತೋಟಕ್ಕೆ ನುಗ್ಗಿದ ಅನೆಗಳು ಅಡಿಕೆ ಹಾಗೂ ಬಾಳೆ ಗಿಡಗಳನ್ನು ನೆಲಸಮ ಗೊಳಿಸಿದೆ. ಜೇಮ್ಸ್ ಎಂಬವರ ತೋಟದಲ್ಲಿ ಎರಡು ತೆಂಗಿನ ಮರಗಳನ್ನು ನಾಶಗೊಳಿಸಿದ್ದು ಅಡಿಕೆ ಹಾಗೂ ಬಾಳೆಗಿಡಗಳನ್ನು ನಾಶಗೊಳಿಸಿದೆ. ಅಲ್ಲದೆ ರಾಜನ್ ಎಂಬವರ ತೋಟಕ್ಕೆ‌ನುಗ್ಗಿ ಅಲ್ಲಿ ನೆಡಲಾಗಿದ್ದ ಸುಮಾರು 100ಕ್ಕೂ ಹೆಚ್ಚು ಮರಗೆಣಸಿನ ಗಿಡಗಳನ್ನು ಸಂಲೂರ್ಣವಾಗಿ ನಾಶಗೊಳಿಸಿದೆ, ಬಿಜು ಎಂಬವರ ತೋಟಕ್ಕೂ ನುಗ್ಗಿ ಕೃಷಿಗೆ ಹಾನಿಯುಂಟುಮಾಡಿದೆೆ. ಒಂದು ಮರಿಯಾನೆ ಸೇರಿದಂತೆ ಎರಡು...