ಬೆಳ್ತಂಗಡಿ; ಬಾರ್ಯ ಗ್ರಾಮಪಂಚಾಯತು ವ್ಯಾಪ್ತಿಯ ಪುತ್ತಿಲ ಗ್ರಮದಲ್ಲಿ ಸ್ಮಶಾನಕ್ಕೆಂದು ಗುರುತಿಸಿರುವ ಜಾಗದ ಗಡಿ ಗುರುತು ಮಾಡಲು ಸರ್ಎ ನಡೆಸುವ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಿಗೆ ಹಾಗೂ ಇತರರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ಬಾರ್ಯ ಗ್ರಾ.ಪಂ ಅಧ್ಯಕ್ಷ ಪಿ ಕೆ ಉಸ್ಮಾನ್ ದೂರು ನೀಡಿದ್ದಾರೆ.
ಪುತ್ತಿಲ ಗ್ರಾಮದ ಸಂ, ನಂ 73/2a ಯಲ್ಲಿ 20ಸೆನ್ಸ್ ಪರಿಶಿಷ್ಟ ಜಾತಿಯವರಿಗೆ ಹಾಗೂ 20ಸೆನ್ಸ್ ಪರಿಶಿಷ್ಟ ಪಂಗಡದವರಿಗೆ ಹಾಗೂ ಸ ನಂ 66/1p ಯಲ್ಲಿ 40 ಸೆನ್ಸ್ ಹಿಂದೂ ರುದ್ರಭೂಮಿಗೆ ಮೀಸಲಿರಿಸಿದ ಜಮೀನಿದೆ. ದಶಕಗಳ ಹಿಂದೆಯೇ ಮೀಸಲಿರಿಸಲಾಗಿದ್ದ ಈ ಜಮೀನನ್ನು ಗಡಿ ಗುರುತು ಮಾಡಲು ಗ್ರಾಮಪಂಚಾಯತಿನಿಂದ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು ಅದರಂತೆ ಜು 20 ರಂದು ಗಡಿಗುರುತಿಗೆ ಬಂದ ಸಂದರ್ಭದಲ್ಲಿ ಸ್ಥಳೀಯರಾದ ಸಂತೋಷ್ , ಕೋಟ್ಯಪ್ಪ ಪೂಜಾರಿ, ಸೂರಜ್ ಅವರು ಗ್ರಾ.ಪಂ ಅಧ್ಯಕ್ಷರ ಮೇಲೆ ಹಲ್ಲೆಗೆ ಮುಂದಾಗಿದ್ದು ಅವಾಚ್ಯವಾಗಿ ನಿಂದಿಸಿ ಜಾಗ ಅಳತೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಿ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದೆ.
ಅದೇರೀತಿ ಸ್ನಶಾನಕ್ಕೆಂದು ಗುರುತಿಸಲಾಗಿರುವ ಜಾಗದಲ್ಲಿ ಇದ್ದ ಮರಗಳನ್ನು ಸದ್ರಿ ವ್ಯಕ್ತಿಗಳು ಗ್ರಾ.ಪಂ ಗೆ ಮಾಹಿತಿ ನೀಡದೆ ಅಕ್ರಮವಾಗಿ ಕಡಿದು ಸಾಗಾಟಮಾಡಿದ್ದಾರೆ ಹಾಗೂ ಜಮೀನನ್ನು ಕಬಳಿಸುವ ಪ್ರಯತ್ನ ನಡೆಸಿರುವುದಾಗಿಯೂ ಇದರ ವಿರುದ್ದ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.ಪೊಲೀಸರು ದೂರನ್ನು ಸ್ವೀಕರಿಸಿದ್ದು ಪರಿಶೀಲನೆ ನಡೆಸುತ್ತುದ್ದಾರೆ.
ಸ್ಮಶಾನದ ಜಾಗ ಉಳಿಸುವ ಯತ್ನ ; ಅಧ್ಯಕ್ಷ ಉಸ್ಮಾನ್
ಸ್ಮಶಾನಕ್ಕೆಂದು ಈ ಹಿಂದೆಯೇ ಮೀಸಲಿರಿಸಲಾಗಿದ್ದ ಜಮೀನನ್ನು ಅಕ್ರಮಿಸುವ ಪ್ರಯತ್ನ ನಡೆಯುತ್ತಿದ್ದ ಹಿನ್ನಲೆಯಲ್ಲಿ ಗಡಿ ಗುರುತು ಮಾಡಲು ಪ್ರಯತ್ನ ಮಾಡಲಾಗಿತ್ತು. ಈ ಹಿಂದೆಯೂ ಪ್ರಯತ್ನಿಸಿದಾಗ ಅದನ್ನು ತಡೆಯಲಾಗಿತ್ತು. ಇದೀಗ ಗ್ರಾಮಪಂಚಾಯತಿನ ಕೋರಿಕೆಯ ಮೇರೆಗೆ ತಹಶೀಲ್ದಾರರ ನೇತೃತ್ವದಲ್ಲಿ ಅಳತೆ ನಡೆಸಲಾಗಿತ್ತು. ಜಮೀನಿನ ಅಳತೆ ಕಾರ್ಯ ಮಾಡಲಾಗಿತ್ತು, ಗಡಿ ಗುರುತುಮಾಡಿ ಅಗಳು ಹಾಕುವ ಮೊದಲು ಅದನ್ನು ತಡೆಯುವ ಕಾರ್ಯ ಮಾಡಿದ್ದಾರೆ.
ಪಿ ಕೆ ಉಸ್ಮಾನ್
ಅಧ್ಯಕ್ಷರು,
ಗ್ರಾ.ಪಂ ಬಾರ್ಯ
