ಧರ್ಮಸ್ಥಳ ಅಜಿಕುರಿಯಲ್ಲಿ ಹೆಜ್ಜೇನು ದಾಳಿ; ಹಲವರು ಆಸ್ಪತ್ರೆಗೆ ದಾಖಲು
ಧರ್ಮಸ್ಥಳ; ಧರ್ಮಸ್ಥಳ ಗ್ರಾಮದ ಅಜಿಕುರಿಯಲ್ಲಿ ಹಜ್ಜೇನು ದಾಳಿ ನಡೆಸಿದ್ದು ಹಲವರು ಅಸ್ವಸ್ಥರಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.ಬುಧವಾರ ಬೆಳಗ್ಗೆ ಎಂಟು ಗಂಟೆಯ ವೇಳೆ ಹೆಜ್ಜೇನು ದಾಳಿ ಆರಂಭವಾಗಿದ್ದು ಅಜಿಕುರಿಯಲ್ಲಿ ಹಲವರ ಮೇಲೆ ಹಜ್ಜೇನು ದಾಳಿ ನಡೆಸಿದೆ. ಮನೆಗಳಲ್ಲಿ ಇದ್ದವರ ಮೇಲೂ ಹೆಜ್ಜೇನು ದಾಳಿ ನಡೆಸಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಪರಿಸರದಲ್ಲಿ ಹತ್ತಾರು ಮಂದಿಗೆ ಹಜ್ಜೇನು ಕಚ್ವಿದ್ದು ಆರು ಮಂದಿಯ ಮೇಲೆ ಗಂಭೀರ ದಾಳಿ ನಡೆಸಿದ್ದು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗ್ಗೆ ಒಂದು ಸುತ್ತು ದಾಳಿ ನಡೆಸಿದ ಹೆಜ್ಜೇನು ಬಳಿಕ ಹತ್ತು ಗಂಟೆಯ ಸುಮಾರಿಗೆ ಮತ್ತೊಮ್ಮೆ...
ನಡ; ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಒಂದು ಕೋಟಿ ಅನುದಾನ; ರಕ್ಷಿತ್ ಶಿವರಾಂ
ಬೆಳ್ತಂಗಡಿ; ತಾಲೂಕಿನ ನಡ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಕ್ಕೆ, 2024-25 ನೇ ಸಾಲಿನ ಜೈನ್,ಬೌದ್ಧ ಮತ್ತು ಸಿಖ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಸರ್ಕಾರದಿಂದ ಒಂದು ಕೋಟಿ ಅನುದಾನ ಮಂಜೂರುಗೊಂಡಿದೆ ಎಂದು ಕೆ.ಪಿ.ಸಿ.ಸಿಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂಡಿಂಜೆ; ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕನಿಗೆ ಕಾರು ಡಿಕ್ಕಿ, ಬಾಲಕ ಸಾವು
ಬೆಳ್ತಂಗಡಿ; ಅಂಡಿಂಜೆಯಲ್ಲಿ ಕಾರು ಡಿಕ್ಕಿ ಹೊಡೆದು ಬಾಲಕನೋರ್ವ ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.ಮೃತ ಬಾಲಕ ಅಂಡಿಂಜೆ ಗ್ರಾಮದ ನಿವಾಸಿ ದಿನೇಶ್ ಶರ್ಮ ಎಂಬವರ ಪುತ್ರ ಇಮಾಂಶು ಶರ್ಮ(5ವ) ಎಂಬಾತನಾಗಿದ್ದಾನೆ.ಸೋಮವಾರ ಸಂಜೆ ಅಂಡಿಂಜೆಯಲ್ಲಿ ವೇಣೂರು ನಾರಾವಿ ರಸ್ತೆಯಲ್ಲಿ ಬಂದ ಕೆ.ಎ 05 ಎನ್.ಎಲ್ 9644 ನಂಬರಿನ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕನಿಗೆ ಡಿಕ್ಕಿ ಹೊಡೆದಿದೆ ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಬಾಲಕನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಬಾಲಕ ಮೃತಪಟ್ಟಿದ್ದ. ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.
ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಬಹುಮಾನ ವಿತರಣೆ
ಬಂದಾರು : ಫೆ 23 ಕುಂಬಾರರ ಸೇವಾ ಸಂಘ (ರಿ.) ಹಾಗೂ ಜೈ ಶ್ರೀರಾಮ್ ಗೆಳೆಯರ ಬಳಗ (ರಿ.) ಶ್ರೀರಾಮನಗರ ಬಂದಾರು. ಧರ್ಮ ಸಂಸ್ಕಾರ ಶಿಕ್ಷಣ ಇವುಗಳ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ, ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಬಹುಮಾನ ವಿತರಣೆ ಕಾರ್ಯಕ್ರಮ ಫೆ 23 ಬಂದಾರು ಶ್ರೀರಾಮನಗರ ಶಿವಪ್ರಿಯ ಮೈದಾನದಲ್ಲಿ ನಡೆಯಿತು.ಬಾಲಕಿಯರ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಶಾಂತ್ ಸುವರ್ಣ ಮಾಲಕತ್ವ ದ ಶಿವಾಕ್ಷರ ಆಟ್ಯಾಕರ್ಸ್ ಮರೋಡಿ ಪ್ರಥಮ,ಗುಣಪಾಲ್...
ರಸ್ತೆ ಕಳಪೆ ಕಾಮಗಾರಿ ವಿರುದ್ಧ ಟಿ.ಬಿ ಕ್ರಾಸ್ ಜಂಕ್ಷನ್ ನಲ್ಲಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ.
ಬೆಳ್ತಂಗಡಿ; ಲಾಯಿಲ ಗ್ರಾಮದ ಟಿ.ಬಿ ಕ್ರಾಸ್-ಕುತ್ರೋಟ್ಟು ರಸ್ತೆ ಕಳಪೆ ಕಾಮಗಾರಿ ವಿರುದ್ಧ ಎಸ್‌ಡಿಪಿಐ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು. ಉಜಿರೆ ಬ್ಲಾಕ್ ಸಮಿತಿ ಸದಸ್ಯರಾದ ಆರೀಫ್ ಕುಂಟಿನಿ, ರಫೀಕ್ ಕುಂಟಿನಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಲಾಯಿಲ ಗ್ರಾಮ ಪಂಚಾಯತ್ ಎಸ್‌ಡಿಪಿಐ ಬೆಂಬಲಿತ ಸದಸ್ಯರಾದ ಸಲೀಂ ಕುಂಟಿನಿ ಹಾಗೂ ಇತರ ಮುಖಂಡರು ಇದ್ದರು ಪ್ರತಿಭಟನಾ ಸ್ಥಳಕ್ಕೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಕ್ಕಪ್ಪ ಎಚ್ ಆಗಮಿಸಿ ಪರಿಶೀಲನೆ ನಡೆಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಸಮರ್ಪಕ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಗುತ್ತಿಗೆ ದಾರರಿಗೆ...
ಆರಂಬೋಡಿ; ಬಾಲಕ ನದಿಗೆ ಬಿದ್ದು ಸಾವು
ಬೆಳ್ತಂಗಡಿ : ಬಾಲಕನೋರ್ವ ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ಮೃತಪಟ್ಟ ಘಟನೆ ಆರಂಬೋಡಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.ಉಪ್ಪಿನಂಗಡಿಯ ರಾಮಕುಂಜ ಸಮೀಪದ ಅತೂರು ವಸಂತ ಮತ್ತು ವಿಜಯ ದಂಪತಿಯ ಮಗ ಪವನ್ ( 16) ಮೃತ ಬಾಲಕ. ಈತ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಮನೆಯ ಅಜ್ಜಿಯ ಮನೆಯಲ್ಲಿದ್ದು ಸಿದ್ಧಕಟ್ಟೆ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಕ್ರಿಯಗೊಳಿಸಿ ಎಂ ಸಿ ವೇಣುಗೋಪಾಲ್
ಬೆಳ್ತಂಗಡಿ .ಬ್ಲಾಕ್ ಕಾಂಗ್ರೆಸ್ ಗೆಕೆಪಿಸಿಸಿ ಉಪಾಧ್ಯಕ್ಷರು,ಪಕ್ಷದ ಜಿಲ್ಲೆಯ ಉಸ್ತುವಾರಿ ಎಂ ಸಿ ವೇಣುಗೋಪಾಲ್ ಬೇಟಿ, ನೀಡಿ ಮುಂಬರುವ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ, ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ, ಇದು ಕಾರ್ಯಕರ್ತರ ಚುನಾವಣೆ, ಇಂದಿನಿಂದಲೇ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ, ನಾಯಕರು ಕಾರ್ಯಕರ್ತರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು, ಎಂದರು,ಉಸ್ತುವಾರಿ ಎಂ ಸಿ ವೇಣುಗೋಪಾಲ್ ರವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಕೆ ಎಂ ನಾಗೇಶ್...
ಶಿವರಾತ್ರಿ ಪಾದಯಾತ್ರಿಗಳ ಸ್ವಾಗತಕ್ಕೆ ಸಿದ್ಧತೆ ಸಭೆ
ಬೆಳ್ತಂಗಡಿ:ಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳ ಸ್ವಾಗತಕ್ಕೆ ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಸಿದ್ಧತೆ ಸಭೆ ಜರಗಿತು.ಪಾದಯಾತ್ರಿಗಳಿಗೆ ಅಡುಗೆ,ವಸತಿ ಇತ್ಯಾದಿಗಳಿಗೆ ದೇವಸ್ಥಾನದಲ್ಲಿ ವ್ಯವಸ್ಥೆ ಕಲ್ಪಿಸುವುದು,ಸ್ವಚ್ಛತೆ ಕುರಿತು ಮಾಹಿತಿ, ಕುಡಿಯುವ ನೀರಿನ ವ್ಯವಸ್ಥೆ,ಅಗತ್ಯ ಸಂದರ್ಭಕ್ಕೆ ವಾಹನ, ಆರೋಗ್ಯ ಮುನ್ನೆಚ್ಚರಿಕೆ ಇತ್ಯಾದಿಗಳ ಕುರಿತು ತೀರ್ಮಾನಿಸಲಾಯಿತು.ಯೋಜನೆಯ ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಮಹಾಬಲ ಕುಲಾಲ್, ಯೋಜನಾಧಿಕಾರಿ ಸುರೇಂದ್ರ, ಸುರೇಶ ಮೊಯ್ಲಿ, ಜನಜಾಗೃತಿ ವೇದಿಕೆಯ ತಾಲೂಕು ಮಾಜಿ ಅಧ್ಯಕ್ಷ ವೆಂಕಟ್ರಾಯ ಅಡೂರು, ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ಕಜೆ ವೆಂಕಟೇಶ್ವರ...
ಕರ್ನಾಟಕ ಮುಸ್ಲಿಮ್ ಜಮಾ ಅತ್ ನ (ಕೆ.ಎಂ.ಜೆ) ಗುರುವಾಯನಕೆರೆ ಸರ್ಕಲ್ ನ ವಾರ್ಷಿಕ ಮಹಾಸಭೆ
ಬೆಳ್ತಂಗಡಿ; ಕರ್ನಾಟಕ ಮುಸ್ಲಿಮ್ ಜಮಾ ಅತ್ ನ (ಕೆ.ಎಂ.ಜೆ) ಗುರುವಾಯನಕೆರೆ ಸರ್ಕಲ್ ನ 2025 ನೇ ಸಾಲಿನ ವಾರ್ಷಿಕ ಮಹಾಸಭೆಯು ಮದ್ದಡ್ಕದ ಸುನ್ನೀ ಸೆಂಟರ್ ನಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಸರ್ಕಲ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ವಹಿಸಿದ್ದರು.ಸಭೆಯ ವೀಕ್ಷಕರಾಗಿ ಇಬ್ರಾಹಿಂ ಕಕ್ಕಿಂಜೆ, ವಿಷಯ ಮಂಡನೆಯನ್ನು ಗುರುವಾಯನಕೆರೆ ಖತೀಬ್ ಎ.ಕೆ.ರಝಾ ಅಮ್ಜದಿ ನಡೆಸಿಕೊಟ್ಟರು.ವೇದಿಕೆಯಲ್ಲಿ ಎಸ್.ವೈ.ಎಸ್ ಗುರುವಾಯನಕೆರೆ ಸರ್ಕಲ್ ಅಧ್ಯಕ್ಷರಾದ ಹಾಜಿ ಹಸೈನಾರ್ ಬಿ.ಬಿ.ಎಸ್.,ಉಸ್ಮಾನ್ ಸಖಾಫಿ ಲಾಡಿ,ಹಮೀದ್ ಮುಸ್ಲಿಯಾರ್ ಉಳ್ತೂರು, ಮದ್ದಡ್ಕ ಮಸೀದಿ ಅಧ್ಯಕ್ಷರಾದ ಅಶ್ರಫ್ ಚಿಲಿಂಬಿ,ಅಬ್ಬೋನು ಮದ್ದಡ್ಕ,ಉಮ್ಮರ್ ಮಾಸ್ಟರ್ ಮದ್ದಡ್ಕ, ಉಮ್ಮರಬ್ಬ ಮದ್ದಡ್ಕ,ಪರಪ್ಪು ಮಸೀದಿ ಅಧ್ಯಕ್ಷರಾದ...
ಕುಕ್ಕೇಡಿ ಡಾ. ಬಿ. ಆರ್ ಅಂಬೇಡ್ಕರ್ ಭವನದ ಕಾಮಗಾರಿ ಗೆ ಹೆಚ್ಚುವರಿ 50 ಲಕ್ಷ ಅನುದಾನ ಮಂಜೂರು ರಕ್ಷಿತ್ ಶಿವರಾಂ
ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು, ಕುಕ್ಕೇಡಿ ಡಾ. ಬಿ. ಆರ್. ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ ಹೆಚ್ಚುವರಿಯಾಗಿ ರೂ 50 ಲಕ್ಷ ಮಂಜೂರಾತಿಗೆ ಸರಕಾರ ಆದೇಶ ನೀಡಿದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿರಕ್ಷಿತ್ ಶಿವರಾಂ ತಿಳಿಸಿದ್ದಾರೆ.














