

ಧರ್ಮಸ್ಥಳ; ಧರ್ಮಸ್ಥಳ ಗ್ರಾಮದ ಅಜಿಕುರಿಯಲ್ಲಿ ಹಜ್ಜೇನು ದಾಳಿ ನಡೆಸಿದ್ದು ಹಲವರು ಅಸ್ವಸ್ಥರಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಬುಧವಾರ ಬೆಳಗ್ಗೆ ಎಂಟು ಗಂಟೆಯ ವೇಳೆ ಹೆಜ್ಜೇನು ದಾಳಿ ಆರಂಭವಾಗಿದ್ದು ಅಜಿಕುರಿಯಲ್ಲಿ ಹಲವರ ಮೇಲೆ ಹಜ್ಜೇನು ದಾಳಿ ನಡೆಸಿದೆ. ಮನೆಗಳಲ್ಲಿ ಇದ್ದವರ ಮೇಲೂ ಹೆಜ್ಜೇನು ದಾಳಿ ನಡೆಸಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಪರಿಸರದಲ್ಲಿ ಹತ್ತಾರು ಮಂದಿಗೆ ಹಜ್ಜೇನು ಕಚ್ವಿದ್ದು ಆರು ಮಂದಿಯ ಮೇಲೆ ಗಂಭೀರ ದಾಳಿ ನಡೆಸಿದ್ದು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗ್ಗೆ ಒಂದು ಸುತ್ತು ದಾಳಿ ನಡೆಸಿದ ಹೆಜ್ಜೇನು ಬಳಿಕ ಹತ್ತು ಗಂಟೆಯ ಸುಮಾರಿಗೆ ಮತ್ತೊಮ್ಮೆ ಗುಂಪಾಗಿ ಬಂದು ಸ್ಥಳೀಯರ ಮೇಲೆ ದಾಳಿ ನಡೆಸಿದೆ ಹಜ್ಜೇನುಗಳು ಈಗಲೂ ಈ ಪರಿಸರದಲ್ಲಿ ಹಾರಾಡುತ್ತಿದ್ದು
ಅಜಿಕುರಿ ಪರಿಸರದಲ್ಲಿ ಜನರು ಮನೆಯಿಂದ ಹೊರಗೆ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
