Home ಅಪರಾಧ ಲೋಕ ಬೆಳಾಲು ಕೊಲೆ ಪ್ರಕರಣ ಆರೋಪಿಗಳಿಬ್ಬರ ಬಂಧನ

ಬೆಳಾಲು ಕೊಲೆ ಪ್ರಕರಣ ಆರೋಪಿಗಳಿಬ್ಬರ ಬಂಧನ

1275
0

ಬೆಳ್ತಂಗಡಿ: ಬೆಳಾಲಿನ ಎಸ್ ಪಿ ಬಿ ಕಾಂಪೌ ಆವೃತ್ತ ಶಿಕ್ಷಕ ಎಸ್ ಪಿ ಬಾಲಕೃಷ್ಣ ಭಟ್(83) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಪೊಲೀಸರಿಗೆ ಸಿಕ್ಕಿದ್ದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು,
ಮೃತ ಬಾಲಕೃಷ್ಣ ಭಟ್ ಅವರ ಕುಟುಂಬದ ಹತ್ತಿರದ ಸಂಬಂಧಿಗಳಾಗಿರುವ ಕೇರಳ ಕಾಸರಗೋಡಿನ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಒಬ್ಬ ಆರೋಪಿ ಕೇರಳದಲ್ಲಿ ಈ ಹಿಂದೆ ಅಪರಾಥ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನಲೆಯಿದೆ ಎಂದು ತಿಳಿದು ಬಂದಿದೆ ಅಪರಾಥ ಪ್ರಕರಣ ದಾಲ್ಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಜೀವಂತ ಇರುವ ವರೆಗೆ ಜಾಗ ಪಾಲು ಮಾಡಿ ಕೊಡುವುದಿಲ್ಲ ಎಂದು ಮೃತರು ಹೇಳಿದ್ದರು ಎನ್ನಲಾಗಿದೆ ಈ ಹಿನ್ನಲೆಯಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗ ಗೊಂಡಿದೆ. ಕೊಲೆಯಲ್ಲಿ ಯಾರೆಲ್ಲ ಭಾಗಿಗಳಾಗಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ

LEAVE A REPLY

Please enter your comment!
Please enter your name here