

ಬಂದಾರು : ಫೆ 23 ಕುಂಬಾರರ ಸೇವಾ ಸಂಘ (ರಿ.) ಹಾಗೂ ಜೈ ಶ್ರೀರಾಮ್ ಗೆಳೆಯರ ಬಳಗ (ರಿ.) ಶ್ರೀರಾಮನಗರ ಬಂದಾರು. ಧರ್ಮ ಸಂಸ್ಕಾರ ಶಿಕ್ಷಣ ಇವುಗಳ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ, ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಬಹುಮಾನ ವಿತರಣೆ ಕಾರ್ಯಕ್ರಮ ಫೆ 23 ಬಂದಾರು ಶ್ರೀರಾಮನಗರ ಶಿವಪ್ರಿಯ ಮೈದಾನದಲ್ಲಿ ನಡೆಯಿತು.
ಬಾಲಕಿಯರ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಶಾಂತ್ ಸುವರ್ಣ ಮಾಲಕತ್ವ ದ ಶಿವಾಕ್ಷರ ಆಟ್ಯಾಕರ್ಸ್ ಮರೋಡಿ ಪ್ರಥಮ,
ಗುಣಪಾಲ್ ಎಂ. ಎಸ್ ಮಾಲಕತ್ವದ ಅನಗ್ ಅಟ್ಯಾಕರ್ಸ್ ಉಜಿರೆ ದ್ವಿತೀಯ,ಸಮನ್ವಿ ಸಾದ್ವಿ ಪಂಜ ತೃತೀಯ, ಕುಂಭ ಶ್ರೀ
ಬಂದಾರು ಚತುರ್ಥ ಸ್ಥಾನವನ್ನು ತಣ್ಣದಾಗಿಸಿಕೊಂಡಿತು, ಪುರುಷರ ವಿಭಾಗದಲ್ಲಿ ಶ್ರೀ ಮಾತೃಶ್ರೀ ಅಲಂಕಾರು ತಂಡ ಪ್ರಥಮ, ಜೈ ಶ್ರೀರಾಮ್ ಗೆಳೆಯರ ಬಳಗ( ರಿ) ಬಂದಾರು ದ್ವಿತೀಯ, ಧರ್ಮಶ್ರೀ ನಾವೂರು ತೃತೀಯ, ರಾಜನ್ ಫ್ರೆಂಡ್ಸ್ ಉಜಿರೆ ಚತುರ್ಥ ಸ್ಥಾನದ ಪಡೆದು ನಗದು ಹಾಗೂ ಜೈ ಶ್ರೀರಾಮ್ ಟ್ರೋಫಿ ತಣ್ಣದಾಗಿಸಿಕೊಂಡಿತು.ಉತ್ತಮ ಹೊಡೆತಗಾರನಾಗಿ ಪ್ರದೀಪ್ ಆಲಂಕಾರು, ಬೆಸ್ಟ್ ಪಾಸರ್ ಆಗಿ ಸಂದೀಪ್ ಅಲಂಕಾರು ಬೆಸ್ಟ್ ಆಲ್ ರೌಂಡರ್ ಆಗಿ ನೀತಿನ್ ಬಂದಾರು, ಇವರುಗಳು ವೈಯಕ್ತಿಕ ಬಹುಮಾನ ಪಡೆದುಕೊಂಡರು.


ಈ ಸಂದರ್ಭದಲ್ಲಿ ಬಂದಾರು ಕುಂಬಾರರ ಸೇವಾ ಸಂಘ (ರಿ.) ಇದರ ಅಧ್ಯಕ್ಷರಾದ ಕೆಂಚಪ್ಪ ಕುಂಬಾರ,ಬಂದಾರು ಶ್ರೀರಾಮ ನಗರ ಗುರಿಕಾರರಾದ ಬಾಬು ಕುಂಬಾರ, ಶೀನಪ್ಪ ಕುಂಬಾರ, ಬಂದಾರು ಕುಂಬಾರರ ಸೇವಾ ಸಂಘ (ರಿ ) ಇದರ ಕಾರ್ಯದರ್ಶಿ ವಿಶ್ವನಾಥ ಕುಂಬಾರ ಶ್ರೀರಾಮನಗರ, ಜೈ ಶ್ರೀರಾಮ್ ಗೆಳೆಯರ ಬಳಗ (ರಿ.) ಅಧ್ಯಕ್ಷರಾದ ಶ್ರೀಧರ ಬಿ. ಕೆ, ಕಾರ್ಯದರ್ಶಿ ಚಂದ್ರಶೇಖರ ಬಿ. ಕೆ, ಕ್ರೀಡಾಕೂಟದ ಕಾರ್ಯಾಧ್ಯಕ್ಷರಾದ ಉದಯ ಬಿ. ಕೆ, ಕಾರ್ಯದರ್ಶಿ ಪ್ರಕಾಶ್ ಬಿ. ಕೆ, ಕ್ರೀಡಾ ಸಂಚಾಲಕರಾದ ಕೃಷ್ಣ ಬಿ. ಎಸ್, ಸುರಕ್ಷಿತ್ ಬಿ.ಕೆ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

