ಆತ್ಮ ನಿರ್ಭರ ಯೋಜನೆಗಳಲ್ಲಿ ಶ್ರೇಷ್ಠತೆ ತೋರಿದ ಉಜಿರೆ ಗ್ರಾಮ ಪಂಚಾಯತ್ ಗೆ ಬೆನಕ ಚಾರಿಟೇಬಲ್ ಟ್ರಸ್ಟ್ ಉಜಿರೆ, ಬೆನಕ ಹೆಲ್ತ್ ಸೆಂಟರ್ ವತಿಯಿಂದ ಸನ್ಮಾನ
ಬೆನಕ ಚಾರಿಟೇಬಲ್ ಟ್ರಸ್ಟ್ ಉಜಿರೆ, ಬೆನಕ ಹೆಲ್ತ್ ಸೆಂಟರ್ - ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್, ಉಜಿರೆವತಿಯಿಂದ ಆತ್ಮ ನಿರ್ಭರ ಯೋಜನೆಗಳಲ್ಲಿ ಶ್ರೇಷ್ಠತೆ ತೋರಿದ ಉಜಿರೆ ಗ್ರಾಮ ಪಂಚಾಯತ್ – ರಾಜ್ಯದ ನಂ.1 ಸ್ಥಾನ ಪಡೆದ ಹಿನ್ನಲೆಯಲ್ಲಿ ಹಾಗೂ ಮಹಾತ್ಮಾ ಗಾಂಧೀಜಿ ಜಯಂತಿ ಪ್ರಯುಕ್ತ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್, ಉಪಾಧ್ಯಕ್ಷ ರವಿಕುಮಾರ್ ಬರಮೇಲು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಎಚ್. ಪ್ರಕಾಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಕಾರ್ಯಕ್ರಮವನ್ನು ನೆರವೇರಿಸಿದರು.ಸಹಾಯಕ ನಿರ್ದೇಶಕರಾದ...
ಬಂಟ್ವಾಳ; ನಿರಂತರ ಜಾನುವಾರು ಹತ್ಯೆ ಆರೋಪಿಯ ಮನೆ ಅಕ್ರಮ ಕಸಾಯಿಖಾನೆ ಮುಟ್ಟುಗೋಲು
ಬೆಳ್ತಂಗಡಿ; ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳದಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಾ ನಿರಂತರವಾಗಿ ಜಾನುವಾರು ಹತ್ಯೆ ಮಾಡುತ್ತಿದ್ದ ಆರೋಪದಲ್ಲಿ ಹಸನಬ್ಬ ಎಂಬಾತನ ಮನೆಯನ್ನು ಹಾಗೂ ಅಕ್ರಮ ಕಸಾಯಿಖಾನೆಯನ್ನು ಮಂಗಳೂರು ವಿಭಾಗಾಧಿಕಾರಿಯವರ ಆದೇಶದಂತೆ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.ಆರೋಪಿಯ ವಿರುದ್ದ ಈಗಾಗಲೆ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಹಲವು ದೂರುಗಳು ಪ್ರಕರಣಗಳು ಇದ್ದು ಆತ ಅದನ್ನು ನಿರಂತರವಾಗಿ ಕಾನೂನನ್ನು ಉಲ್ಲಂಘಿಸಿ ಮಾಡುತ್ತಾ ಬಂದಿದ್ದಾನೆ ಎಂದು ಆರೋಪಿಸಿ ಇದೀಗ ಈತನ ಮನೆಯನ್ನು ಮುಟ್ಟುಗೋಲು ಹಾಕಲಾಗಿದೆ.ಈ ಬಗ್ಗೆ ಸಹಾಯಕ ಆಯುಕ್ತರು ಮತ್ತು ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು...
ಮಾಲಾಡಿ: ರಕ್ತದಾನ ಶಿಬಿರದ ಮೂಲಕ ಅರ್ಥ ಪೂರ್ಣವಾಗಿ ಗಾಂಧೀ ಜಯಂತಿ ಆಚರಣೆ
ಬೆಳ್ತಂಗಡಿ; ವಿದ್ಯಾರ್ಥಿಗಳು ಹಾಗೂ ಯುವಜನರು ರಕ್ತದಾನ ಮಾಡುವ ಮೂಲಕ ತಮ್ಮ ಜೀವನದಲ್ಲಿ ಇತರರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ತ್ಯಾಗ ಮನೋಭಾವನೆ ಬೆಳೆಸಿಕೊಳ್ಳಬೇಕು. ಮಹಾತ್ಮ ಗಾಂಧಿಯವರ ಜನ್ಮದಿನದಂದು ನಡೆಯುತ್ತಿರುವ ರಕ್ತದಾನ ಶಿಬಿರ ಅತ್ಯಂತ ಮಾದರಿ ಕಾರ್ಯಕ್ರಮ ಎಂದು ಮಾಲಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಧ್ಯಾಪಕಿ ಕುಸುಮಾವತಿ ಹೇಳಿದರು. ಅವರು ಇಂದು ಮಾಲಾಡಿಯಲ್ಲಿ ಯುನೈಟೆಡ್ ಮಾಲಾಡಿ , ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ , B.M ಆಪೆ ರಿಕ್ಷಾ ಚಾಲಕ ಮಾಲಕರ ಸಂಘ ಮಡಂತ್ಯಾರು ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಇದರ ಜಂಟಿ...
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಡಿ.ಕೆ ಶಿವಕುಮಾರ್ ಭೇಟಿ; ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ
ಮಂಗಳೂರು: ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ದೇವರ ದರ್ಶನ ಪಡೆದು ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ದೇವರ ಬಲಿ ಉತ್ಸವದ ಶುಭ ಸಂಧರ್ಭದಲ್ಲಿ ದೇವಸ್ಥಾನ ಪ್ರವೇಶಿಸಿದ ಉಪಮುಖ್ಯಮಂತ್ರಿ, ಸಂಪ್ರದಾಯದಂತೆ ದೇವರ ರಥಾರೋಹಣ ನಂತರ ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು, ಭಕ್ತರೊಂದಿಗೆ ರಥೋತ್ಸವದಲ್ಲಿ ಭಾಗಿಯಾದರು. ದೇವಳ ಸ್ಥಾಪಿಸಿದ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸನ್ನಿಧಿಗೆ ನಮಿಸಿ, ಸರ್ವ ದೇವರ ದರ್ಶನ ಪಡೆದು, ದರ್ಬಾರ್ ಮಂಟಪದಲ್ಲಿ ಶಾರದೆ ಮತ್ತು ನವದುರ್ಗೆಯರಿಗೆ ವಂದಿಸಿದರು. ಈ ವೇಳೆ ಉಪಮುಖ್ಯಮಂತ್ರಿಗೆ...
ಧರ್ಮಸ್ಥಳ ಪ್ರಕರಣ ಚಿನ್ನಯ್ಯ ತಂದ ತಲೆಬುರುಡೆ ಸೇರಿದಂತೆ ಮೂರು ಕಳೆಬರಗಳ ಎಪ್.ಎಸ್.ಎಲ್ ವರದಿ ಎಸ್.ಐ.ಟಿ ಕೈಗೆ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಮೊದಲು ಎಸ್.ಐ.ಟಿ ಅಧಿಕಾರಿಗಳು ಪತ್ತೆ ಮಾಡಿದ್ದ ಎರಡು ಮಾನವನ ಅಸ್ಥಿಪಂಜರಗಳು ಮತ್ತು ಚಿನ್ನಯ್ಯ ತಂದ ತಲೆಬರುಡೆಯ ಎಫ್ಎಸ್ಎಲ್ ವರದಿ ಬಂದಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಚಿನ್ನಯ್ಯನ ಜೊತೆ ಎಸ್.ಐ.ಟಿ ಶೋಧದ ವೇಳೆ ಆರನೇ ಗುರುತು ಮಾಡಿದ ಜಾಗದಲ್ಲಿ ಪತ್ತೆಯಾದ ತಲೆಬುರುಡೆ ಸಹಿತ ಅಸ್ಥಿಪಂಜರ 25-30 ವರ್ಷ ವಯಸ್ಸಿನ ಪುರುಷನದ್ದಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಹಾಗೂ 11-A ಗುರುತು ಮಾಡಿದ ಜಾಗದಲ್ಲಿ ಭೂಮಿಯ ಮೇಲ್ಭಾಗದಲ್ಲಿ ಪತ್ತೆಯಾದ ತಲೆಬುರುಡೆ ಸಹಿತ...
ಮಂಗಳೂರು ನಿದ್ಯುತ್ ಸರಬರಾಜು ಕಂಪನಿ ನಿಯಮಿತ(MESCOM) ನೂತನ ಅಧ್ಯಕ್ಷರಿಗೆ ಅಭಿನಂದನೆ.
ಬೆಳ್ತಂಗಡಿ. ಮಂಗಳೂರು ನಿದ್ಯುತ್ ಸರಬರಾಜು ಕಂಪನಿ ನಿಯಮಿತ(MESCOM) ನೂತನ ಅಧ್ಯಕ್ಷರಿಗೆ ಅಧಿಕಾರ ವಹಿಸಿಕೊಂಡ ಮಾಜಿ ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ರವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಶುಭ ಹಾರೈದರು.ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ನ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್, ಪ್ರಮುಖರಾದ ಪ್ರವೀಣ್ ಹಳ್ಳಿ ಮನೆ, ನೇಮಿರಾಜ್ ಕಿಲ್ಲೂರು, ಇಸುಬು ಇಳಂತಿಲ, ಮಹಮದ್ ಶಾಫಿಕಾಶಿಪಟ್ನ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಯುವ ಮೋರ್ಚಾ ವತಿಯಿಂದ ಪ್ರಧಾನಿ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ
ಬೆಳ್ತಂಗಡಿ : ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಸೇವಾಪಾಕ್ಷಿಕ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30 ರಂದು ನಡೆದ ಕಾರ್ಯಕ್ರಮದಲ್ಲಿ ರಕ್ತದಾನ ನೀಡುವ ಮೂಲಕ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಮಂಡಲ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ. ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್, ಪದಾಧಿಕಾರಿಗಳಾದ ಹರೀಶ್ ಗೌಡ ಸಂಭೋಲ್ಯ,ಸುಧೀರ್ ಚಾರ್ಮಾಡಿ,ಪವನ್ ಶೆಟ್ಟಿ ಉಜಿರೆ,ಲೋಕ್ಷತ್...
ಬೆಳ್ತಂಗಡಿ; ಮಹೇಶ್ ಶೆಟ್ಟಿ ಜಾಮೀನು ಅರ್ಜಿ ವಿಚಾರಣೆ ಅ4ಕ್ಕೆ ಮುಂದೂಡಿಕೆ
ಬೆಳ್ತಂಗಡಿ; ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ದ ದಾಖಲಾಗಿರುವ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಸೆ30ರಂದು ಮಂಗಳೂರಿನ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಹಾಗೂ ಸೆಕ್ಷನ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಅ.4 ಕ್ಕೆ ಮುಂದೂಡಲಾಗಿದೆ.ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರಿ ವಕೀಲರು ಇಂದು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದರು.ಇದಾದ ಬಳಿಕ ಮಹೇಶ್ ಶೆಟ್ಟಿ ಪರ ವಕೀಲರು ವಾದ ಮಂಡಿಸಿದ್ದಾರೆ. ಸರಕಾರಿ ವಕೀಲರ ಪ್ರತಿವಾದ ಮಂಡನೆಯ ಕಾರ್ಯ ನಡೆಯಬೇಕಾಗಿದ್ದು ಅದಕ್ಕಾಗಿ ಅ.4ಕ್ಕೆ ವಿಚಾರಣೆಯ ದಿನ ಮೂಂದೂಡಿದ್ದಾರೆ.
ಬೆಳ್ತಂಗಡಿ : ಬಂಗ್ಲೆಗುಡ್ಡೆಕ್ಕೆ ಮತ್ತೆ ಬಂದು ಪರಿಶೀಲನೆ ಆರಂಭಿಸಿದ ಎಸ್.ಐ.ಟಿ ಅಧಿಕಾರಿಗಳು
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಸಂಬಂಧ ಎಸ್.ಐ.ಟಿ ಅಧಿಕಾರಿಗಳು ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂಗ್ಲೆಗುಡ್ಡೆ ಪ್ರದೇಶಕ್ಕೆ ಮಂಗಳವಾರ ಮತ್ತೆ ಆಗಮಿಸಿ ಇಲ್ಲಿನ ಅರಣ್ಯದಲ್ಲಿ ಪರಿಶೀಲನೆ ಆರಂಭಿಸಿದ್ದಾರೆ . ಎಸ್.ಐ.ಟಿ ಅಧಿಕಾರಿಗಳ ಆಗಮನ ಕುತೂಹಲಕ್ಕೆ ಕಾರಣವಾಗಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು PWD ಇಂಜಿನಿಯರ್ ಜೊತೆಯಲ್ಲಿ ಸೆ.30 ರಂದು ಸಂಜೆ 4 ಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿ ಪರಿಶೀಲನೆ ನಡೆಸುವ ವೇಳೆ ಏಳು ಮೃತದೇಹಗಳು ಪತ್ತೆಯಾಗಿದ್ದವು ಈ ಹಿನ್ನಲೆಯಲ್ಲಿ ಸ್ಥಳದ ಮ್ಯಾಪ್ ತಯಾರಿಸುವ ಅಗತ್ಯವಿದ್ದ ಕಾರಣಕ್ಕೆ ಅಧಿಕಾರಿಗಳು...
ಮಹೇಶ್ ಶೆಟ್ಟಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣವೇದಿಕೆಯ ಸ್ಥಾಪಕಾಧ್ಯಕ್ಷ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರ ಗಡಿಪಾರು ಆದೇಶದಲ್ಲಿ ಹೈಕೋರ್ಟ್ ಅ8ರ ವರೆಗೆ ಬಲವಂತದ ಕ್ರಮ ಬೇಡ ಆದೇಶ ನೀಡಿರುವುದಾಗಿ ತಿಳಿದು ಬಂದಿದೆ ಗಡಿಪಾರು ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ವಿಚಾರಣೆ ನಡೆದು ಅ. 8ರವರೆಗೆ ಗಡಿಪಾರು ಆದೇಶ ಜಾರಿಗೊಳಿಸದಂತೆ ನ್ಯಾಯಾಲಯವು ಸೂಚಿಸಿದ್ದು ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಅಲ್ಲದೆ ಪ್ರಕರಣದಲ್ಲಿ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟೀಸ್ ಜಾರಿಮಾಡಿದೆ. ಸೆ.8ರಂದು ವಿಚಾರಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ















