ಉಚ್ಚಿಲದಲ್ಲಿ ಅಪಘಾತ ಮಾಲಾಡಿ ನಿವಾಸಿ ಸ್ಥಳದಲ್ಲಿಯೇ ಸಾವು
ಬೆಳ್ತಂಗಡಿ:ಉಚ್ಚಿಲದಲ್ಲಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಮಾಲಾಡಿ ಕೊಲ್ಪೆದ ಬೈಲು ನಿವಾಸಿ ರಮೇಶ್ ಹೆಗ್ಡೆ ಸ್ಥಳದಲ್ಲೇ ಮೃತಪಟ್ಟ ಘಟನೆ ಉಚ್ಚಿಲ ಕೆನರಾ ಬ್ಯಾಂಕ್ ಎಟಿಎಂ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ ಮೃತ ಬೈಕ್ ಸವಾರನ ತಲೆ ಜಜ್ಜಿ ಹೋಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಬೈಕಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದ್ದು, ನಿಲ್ಲಿಸದೆ ಪರಾರಿಯಾಗಿದೆ ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲೇ ಮೃತಪಟ್ಟರು...
ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ
ಚಾರ್ಮಾಡಿ : ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಅರ್ಚಕರಾದ ಮಧುಸೂಧನ್ ರಾವ್ ಪೌರೋಹಿತ್ಯದಲ್ಲಿ ಶ್ರೀ ದೇವಿಗೆ ಸೆಪ್ಟೆಂಬರ್ 29 ರಂದು ಚಂಡಿಕಾ ಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಪೂರ್ಣಾಹುತಿ ನಡೆದು ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಕಾಶ್ ಹೊಸಮಠ, ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ರಾವ್ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಕಾಶಿಪಟ್ನ ದಾರುನ್ನೂರು ಎಜುಕೇಶನ್ ಸೆಂಟರ್ ಶಿಕ್ಷಣ ಸಂಸ್ಥೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ಮಂಜೂರು
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ದಾರುನ್ನೂರು ಎಜುಕೇಶನ್ ಸೆಂಟರ್, ಈ ಸಂಸ್ಥೆಯ ವತಿಯಿಂದ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗೆ ಒಂದು ಕೋಟಿ ಅನುದಾನ .ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರು ಮಾಡಿರುವುದಾಗಿಮಂಜೂರಾಗಿರುವುದಾಗಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ
ನೆರಿಯ ಪೆಟ್ರೋಲ್ ಲೈನ್ ನಿಂದ ಪೆಟ್ರೋಲ್ ಕಳ್ಳತನ ಪ್ರಕರಣ; 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬೆಳ್ತಂಗಡಿ : ನೆರಿಯ ಪೆಟ್ರೋನೆಟ್ ಪೈಪ್ ಲೈನ್ ನಿಂದ 2010 ರಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ನಿವಾಸಿ ತಮ್ಮಯ್ಯ(35) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಸೆ.28 ರಂದು ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವನನ್ನು ನೋಡಿ ಸುರತ್ಕಲ್ ಪೊಲೀಸ್ ಠಾಣೆಯ ಉಮೇಶ್ ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ...
ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ! ಮಧ್ಯಂತರ ತಡೆ ನೀಡಲು ಹೈಕೋರ್ಟ್ ಗೆ ಅರ್ಜಿ
ಬೆಳ್ತಂಗಡಿ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ 18-09-2025 ರಿಂದ 17-09-2026 ರವರೆಗೆ ಒಂದು ವರ್ಷ ಗಡಿಪಾರು ಮಾಡಿ ಸೆ.18 ರಂದು ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗಿಸ್ ಅವರ ಆದೇಶದ ವಿರುದ್ಧ ಮಧ್ಯಂತರ ತಡೆ ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಮಧ್ಯಂತರ ತಡೆ ನೀಡಲು ತಮ್ಮ ವಕೀಲರ ಮೂಲಕ ಸೆ.29 ರಂದು ಹೈಕೋರ್ಟ್ ನಲ್ಲಿ ರಾಜ್ಯ ಸರಕಾರ, ಪುತ್ತೂರು...
ರಾಜಕೇಸರಿ ಸೇವಾ ಟ್ರಸ್ಟ್ ನಿಂದ ಮತ್ತೊಂದು ಮಾದರಿ ಕಾರ್ಯಕ್ರಮ; ನಾವೂರು ಶಾಲಾ ವಠಾರದಲ್ಲಿ ಬೃಹತ್ ಉಚಿತ ಕಣ್ಣಿನ ಹಾಗೂ ಹೃದಯ ತಪಾಸಣಾ ಶಿಬಿರ
ಬೆಳ್ತಂಗಡಿ: ದೈನಂದಿನ ಚಟುವಟಿಕೆಗಳ ಒತ್ತಡದಲ್ಲಿ ಜೀವನ ಸಾಗಿಸುತ್ತಿರುವ ಜನ ಸಾಮಾನ್ಯರ ಆರೋಗ್ಯದ ಕಾಳಜಿಯ ಬಗ್ಗೆ ಗಮನ ಹರಿಸಿ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವ ರಾಜಕೇಸರಿ ಸೇವಾ ಟ್ರಸ್ಟ್ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಹೇಳಿದರು. ಅವರು ಸರಕಾರಿ ಕಿರಿಯ .ಪ್ರಾಥಮಿಕ ಶಾಲೆ ನಾವೂರು ವಠಾರದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಸಂಸ್ಥಾಪಕ ದೀಪಕ್ ಜಿ ನೇತೃತ್ವದಲ್ಲಿ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ , ಪ್ರಸಾದ್ ನೇತ್ರಾಲಯ ಉಡುಪಿ ಮತ್ತು ಶ್ರೀ...
ಬೆಳ್ತಂಗಡಿ : ಧರ್ಮಸ್ಥಳ ಗ್ರಾ.ಪಂ ನಾಲ್ಕು ಮಂದಿ ಮಾಜಿ ಅಧ್ಯಕ್ಷರು ಎಸ್.ಐ.ಟಿ ವಿಚಾರಣೆಗೆ ಹಾಜರು
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣ ಸಂಬಂಧ ಎಸ್.ಐ.ಟಿ ವಿಚಾರಣೆ ಮುಂದುವರಿದಿದ್ದು ಅಧಿಕಾರಿಗಳು ನಾಲ್ಕು ಮಂದಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಿಗೆ ನೋಟೀಸ್ ನೀಡಿದ್ದು ಅದರಂತೆ ವಿಚಾರಣೆಗೆ ಹಾಜರಾಗಿದ್ದಾರೆ. ಧರ್ಮಸ್ಥಳ ಗ್ರಾಮ ಪಂಚಾಯತ್ ನಾಲ್ಕು ಮಂದಿ ಮಾಜಿ ಅಧ್ಯಕರಾದ ಕೇಶವ್ ಬೆಳಾಲ್ , ಪ್ರಭಾಕರ ಪೂಜಾರಿ , ಗೀತಾ,ಹಾಗೂ ಚಂದನ್ ಕಾಮತ್ ಇವರು ಸೆ.29 ರಂದು ಎಸ್.ಐ.ಟಿ ವಿಚಾರಣೆ ಹಾಜರಾಗಿದ್ದಾರೆ. ಈ ನಾಲ್ಕು ಮಂದಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಯುಡಿಆರ್ ಪ್ರಕರಣದಲ್ಲಿ ಶವ ಹೂತ ಬಗ್ಗೆ ಬಿಲ್ ಪಾವತಿಯಾಗಿದ್ದು ಈ ಬಗ್ಗೆ ಮಾಹಿತಿ...
ನೆಲ್ಯಾಡಿ ಸಮೀಪ ಗುಂಡ್ಯದಲ್ಲಿ ಬಸ್ಸುಗಳ ನಡುವೆ ಅಪಘಾತ ಹಲವರಿಗೆ ಗಾಯ
ಬೆಳ್ತಂಗಡಿ; ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ಮಧ್ಯಾಹ್ನ ಗುಂಡ್ಯ ಸಮೀಪ ಬಸ್ ಗಳನಡುವೆ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲವು ಗಂಟೆಗಳ ಕಾಲಅಸ್ತವ್ಯಸ್ತಗೊಂಡಿತ್ತು.ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರಾಜಹಂಸ ಬಸ್ ಹಾಗೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬಸ್ ನಿರ್ವಾಹಕ ಹಾಸನದ ನಿಂಗರಾಜು (52) ಗಂಭೀರ ಗಾಯಗೊಂಡಿದ್ದಾರೆ. ಜೊತೆಗೆ ಪ್ರಯಾಣಿಕರಾದ ಪಡಂಗಡಿ ಮೂಲದ ಗಿರಿಜಾ (62), ಅವರ ಮಗಳು ಪ್ರಮೀಳ (38), ಮೊಮ್ಮಗ ಮನೀಷ್...
ಧರ್ಮಸ್ಥಳದಲ್ಲಿ ಚಂಡಿಕಾಹೋಮ ಸತ್ಯದರ್ಶನಸಮಾವೇಶ; ಕ್ಷೇತ್ರದ ವಿರುದ್ದದ ಷಡ್ಯಂತ್ರ ತನಿಖೆಯಿಂದ ಹೊರಬಂದಿದೆ. ಡಾ.ಡಿ ವೀರೇಂದ್ರ ಹೆಗ್ಗಡೆಯವರು
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ28 ರಂದು ಬೆಳ್ತಂಗಡಿ ತಾಲೂಕಿನ ಭಕ್ತರಿಂದ ಚಂಡಿಕಾ ಹೋಮ ನಡೆಯಿತು. ಬೆಳಗ್ಗೆ 6 ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಚಂಡಿಕಾ ಹೋಮ ಆರಂಭಗೊಂಡು ಸಾವಿರಾರು ಭಕ್ತರು ಭಾಗವಹಿಸಿದರು. ಬಳಿಕ ಬೆಳಗ್ಗೆ 9:30ಕ್ಕೆ ಶ್ರೀ ಧರ್ಮಸ್ಥಳದ ದ್ವಾರದಿಂದ ಯಾಗ ಮಂಟಪಕ್ಕೆ ಬೃಹತ್ ಮೆರವಣಿಗೆ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರುಸರಕಾರ ಎಸ್.ಐ.ಟಿ ಮಾಡದಿದ್ದರೆ ಸತ್ಯ ಹೊರಬರುತ್ತಿರಲಿಲ್ಲ. ತನಿಖೆಯಿಂದಾಗಿ ಯಾರು ಯಾರು ಅದರ ಹಿಂದೆ ಇದ್ದಾರೆ ಷಡ್ಯಂತ್ರ ಮಾಡಿದ್ದಾರೆ ಎಂದು ಗೊತ್ತಾಗಿದೆ. ಕ್ಷೇತ್ರವನ್ನು ಹೇಗಾದರೂ...
ಪ್ರಪ್ರಥಮ ಬಾರಿಗೆ ಜೈನ ಸಮುದಾಯದ ಅರ್ಚಕರಿಗೆ ಗೌರವ ಧನ ಘೋಷಣೆ ಮಾಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ರಕ್ಷಿತ್ ಶಿವರಾಮ್
ಬೆಳ್ತಂಗಡಿ : ರಾಜ್ಯದ ಎಲ್ಲಾ ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಅರ್ಚಕರು ಹಾಗೂ ಸಹಾಯಕ ಅರ್ಚಕರುಗಳಿಗೆ ಗೌರವಧನ ಮಂಜೂರು ಮಾಡಲಾಗಿದೆ.ಇದಕ್ಕಾಗಿ ರಾಜ್ಯ ಸರಕಾರವನ್ನು ಅಭೊನಂದಿಸುವುದಾಗಿ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂತಿಳಿಸಿದ್ದಾರೆ. ಪ್ರಧಾನ ಅರ್ಚಕರುಗಳಿಗೆ 6000 ಸಾವಿರ ಮತ್ತು ಸಹಾಯಕ ಅರ್ಚಕರಿಗೆ 5000. ಜೈನ ಸಮುದಾಯದ ಅಭಿವೃದ್ಧಿ ಯೋಜನೆಯಡಿ ನೋಂದಾಯಿತ ಜೈನ ಬಸದಿಗಳಲ್ಲಿರುವ ಪ್ರಧಾನ ಅರ್ಚಕರು ಹಾಗೂ ಸಹಾಯಕ ಅರ್ಚಕರುಗಳಿಗೆ ಅವರ ದೈನಂದಿನ ನಿರ್ವಹಣೆಗೆ ಅನುಕೂಲವಾಗುವಂತೆ ಮಂಜೂರು ಆದೇಶ ಹೊರಡಿಸಲಾಗಿದೆ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಸರ್ವ ಧರ್ಮದ ಅಭಿವೃದ್ಧಿಗೆ ತೆಗೆದುಕೊಂಡು ಇರುವಂತಹ ಈ...















