Home ಅಪರಾಧ ಲೋಕ ಸುಳ್ಯ ಆಕಸ್ಮಿಕವಾಗಿ ಬಾವಿಗೆ ಬಿದ್ದು ಅವಳಿ ಮಕ್ಕಳಿಬ್ಬರು ಮೃತ್ಯು

ಸುಳ್ಯ ಆಕಸ್ಮಿಕವಾಗಿ ಬಾವಿಗೆ ಬಿದ್ದು ಅವಳಿ ಮಕ್ಕಳಿಬ್ಬರು ಮೃತ್ಯು

70
0

ಸುಳ್ಯ; ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರದಲ್ಲಿ ಅವಳಿ ಮಕ್ಕಳಿಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಸ್ಥಳೀಯ ನಿವಾಸಿ ವಸಂತ್ ಎಂಬವರ ಮಕ್ಕಳಾದ ಜಸ್ವಿತ್ ಹಾಗೂ ಜಾವಿನ್ (5) ಮೃತ ಮಕ್ಕಳಾಗಿದ್ದಾರೆ. ಮನೆಯ ಸಮೀಪದಲ್ಲಿದ್ದ ಸುಮಾರು 15 ಅಡಿ ಆಳದ ಬಾವಿಗೆ ಇವರಿಬ್ಬರೂ ಆಟವಾಡುವ ವೇಳೆ ಕಾಲು ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮಕ್ಕಳ ತಂದೆ ವಸಂತ ಅವರು ವೆಲ್ಡಿಂಗ್ ಕೆಲಸಕ್ಕೆ ತೆರಳಿದ್ದರೆ, ತಾಯಿ ಅವರು ಕೂಲಿ ಕೆಲಸಕ್ಕೆ ಹೋಗಿದ್ದರು. ಘಟನೆ ನಡೆದ ವೇಳೆ ಮನೆಯಲ್ಲಿ ಅಜ್ಜ ಹಾಗೂ ಅಜ್ಜಿ ಮಾತ್ರ ಇದ್ದರೆನ್ನಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಳ್ಯ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಬಾವಿಯಿಂದ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ.

LEAVE A REPLY

Please enter your comment!
Please enter your name here