Home ಸ್ಥಳೀಯ ಸಮಾಚಾರ ಮುಂಡಾಜೆ ಹಾಗೂ ಚಾರ್ಮಾಡಿಯಲ್ಲಿ ಮುಂದುವರಿದ ಕಾಡಾನೆ ಓಡಾಟ; ಜನರಲ್ಲಿ ಆತಂಕ

ಮುಂಡಾಜೆ ಹಾಗೂ ಚಾರ್ಮಾಡಿಯಲ್ಲಿ ಮುಂದುವರಿದ ಕಾಡಾನೆ ಓಡಾಟ; ಜನರಲ್ಲಿ ಆತಂಕ

297
0

ಬೆಳ್ತಂಗಡಿ; ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಕಾಪಿನ ಬಾಗಿಲು ಎಂಬಲ್ಲಿ ಬುಧವಾರ ರಾತ್ರಿ ಕಾಡಾನೆ ಸಂಚಾರ ನಡೆಸಿ ಲತಾ ಜಿ.ಭಿಡೆಯವರ ಮನೆಂಗಳಲ್ಲಿದ್ದ ಬಾಳೆ ಗಿಡಗಳನ್ನು ನಾಶಪಡಿಸಿದೆ.
ಮಧ್ಯರಾತ್ರಿ 12:30ರ ತನಕ ಮನೆಯವರು ಎಚ್ಚರವಿದ್ದು,ಆ ಬಳಿಕ ಕಾಡಾನೆ ಸಂಚರಿಸಿದೆ. ಇವರ ಮನೆ ರಾಷ್ಟ್ರೀಯ ಹೆದ್ದಾರಿಯಿಂದ 50 ಮೀಟರ್ ದೂರದಲ್ಲಿದ್ದು ಈ ಪರಿಸರದಲ್ಲಿ ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿದೆ‌ ಕಾಮಗಾರಿ ನಡೆಯುತ್ತಿರುವ ಸ್ಥಳದ ಮೂಲಕವೇ ಹೆದ್ದಾರಿಯಿಂದ ಆನೆ ಮನೆಯಂಗಳಕ್ಕೆ ಬಂದಿದೆ.ಹೆದ್ದಾರಿಯ ಚರಂಡಿ,ತಡೆಗೋಡೆ ಕೆಲಸಗಳು ನಡೆಯುತ್ತಿದ್ದು ಅಲ್ಲಿ ಯಾವುದೇ ರೀತಿ ಹಾನಿ ಉಂಟು ಮಾಡದೆ ಕಾಡಾನೆ ಮುಂದೆ ಸಾಗಿದೆ.

ಚಾರ್ಮಾಡಿಯಲ್ಲಿಯೂ ಕಾಡಾನೆ
ಮಂಗಳವಾರ ರಾತ್ರಿ ಚಾರ್ಮಾಡಿಯ ಕೋಡಿ ಹಿತ್ತಿಲು ಎಂಬಲ್ಲಿ ಕಾಡಾನೆ ಕಂಡು ಬಂದಿದ್ದು ಬುಧವಾರ ಬೆಳಿಗ್ಗೆ ಇಲ್ಲಿಯ ಹೊಸಮಠದ ರಬ್ಬರ್ ತೋಟದಲ್ಲಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಕಾಡಿಗೆ ಅಟ್ಟಿತ್ತು.ಬುಧವಾರ ರಾತ್ರಿ ಮತ್ತೆ ಇಲ್ಲಿಯ ಮಾರಂಗಾಯ ಪರಿಸರದಲ್ಲಿ ರಾತ್ರಿ 9ರ ಹೊತ್ತಿಗೆ ಕಾಡಾನೆ ಇರುವುದು ಸ್ಥಳೀಯರಿಗೆ ಕಂಡುಬಂದಿತ್ತು.ಬಳಿಕ ಗುರುವಾರ ಬೆಳಗಿನ ಜಾವ ಅನ್ನಾರು ಪರಿಸರದಲ್ಲಿ ಕಾಡಾನೆ ಓಡಾಟ ನಡೆಸಿದೆ.


-ಎರಡು ಆನೆಗಳು?-
ಚಾರ್ಮಾಡಿ ಪರಿಸರ ಮತ್ತು ಮುಂಡಾಜೆಗೆ ಸುಮಾರು 12 ಕಿಮೀ ಅಂತರವಿದ್ದು, ಎರಡು ಕಡೆ ಕಂಡುಬಂದ ಸಲಗ ಒಂದೇ ಆಗಿರಬಹುದೇ ಅಥವಾ ಎರಡು ಸಲಗಗಳು ಬೇರೆ ಬೇರೆಯಾಗಿ ಓಡಾಟ ನಡೆಸುತ್ತಿವೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಮೃತ್ಯುಂಜಯ ನದಿ ದಾಟಿ ದುಂಬೆಟ್ಟು ಮೂಲಕ ಹೋಗಿರುವ ಕಾಡಾನೆ ಚಿಬಿದ್ರೆ ಅಥವ ಕಡಿರುದ್ಯಾವರಕಡೆ ಹೋಗಿರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಪರಿಸರದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ

LEAVE A REPLY

Please enter your comment!
Please enter your name here