ತೋಟತ್ತಾಡಿಯಲ್ಲಿ ಮಹಿಳಾ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ
ತೋಟತ್ತಾಡಿ: ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ (ರಿ ) ತೋಟತ್ತಾಡಿ, ಚಿಬಿದ್ರೆ ಇದರ ಮಹಿಳಾ ಬಿಲ್ಲವ ವೇದಿಕೆಯ ನೂತನ ಸಮಿತಿ ರಚಿಸಲಾಯಿತು ಅಧ್ಯಕ್ಷೆಯಾಗಿ ಪ್ರೇಮಾ ಲಿಂಗಪ್ಪ ಪೂಜಾರಿ ಬರಮೇಲು, ಪ್ರಧಾನ ಕಾರ್ಯದರ್ಶಿಯಾಗಿ ನಿಶ್ಮಿತಾ ಪ್ರದೀಪ್ ಪರಾರಿ, ಉಪಾಧ್ಯಕ್ಷರಾಗಿ ಪ್ರೇಮ ಕೇಶವ ಪೂಜಾರಿ ಬರಮೇಲು, ಜೊತೆ ಕಾರ್ಯದರ್ಶಿಯಾಗಿ ವಿನುತಾ ಶ್ರೀನಿವಾಸ ಪೂಜಾರಿ ಡಿ ಮಜಲು. ಗೌರವ ಸಲಹೆಗಾರರಾಗಿ ಉಷಾ ರಮಾನಂದ ಪೂಜಾರಿ ಡಿ ಮಜಲು. ಸಮಿತಿಯ ಕಾರ್ಯಕಾರಣಿ ಸದಸ್ಯರಾಗಿ ಶೋಭಾ ಲೋಕಯ್ಯ ಪೂಜಾರಿ ಬರಮೇಲು, ಸುಂದರಿ ಶೇಖರ ಪೂಜಾರಿ ಕಳೆಂಜೊಟ್ಟು, ಹರಿಣಿ ಮೋಹನ್...
ಭಗವಾನ್ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ
Maha Mastakabhishek of Lord Baahubali ಬೆಳ್ತಂಗಡಿ: ವೇಣೂರಿನ ತಿಮ್ಮಣ್ಣ ಅಜಿಲರು 1604ರಲ್ಲಿ ಪ್ರತಿಷ್ಠಾಪಿಸಿದ ಬಾಹುಬಲಿ ಮೂರ್ತಿ ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕವು ಸಕಲ ಸಿದ್ಧತೆಗಳೊಂದಿಗೆ ವಿದ್ಯುಕ್ತವಾಗಿ ಗುರುವಾರ ಆರಂಭಗೊಂಡಿತು.ಪಶ್ಚಿಮದಲ್ಲಿ ಸೂರ್ಯನು ಅಸ್ತಮಿಸುತ್ತಿದ್ದಂತೆ ಫಲ್ಗುಣಿ ತೀರದಲ್ಲಿನ ತ್ಯಾಗಮೂರ್ತಿಗೆ 108 ಕಲಶಗಳ ಅಭಿಷೇಕ ಸಂಜೆ 7 ಗಂಟೆಗೆ ಆರಂಭಗೊಂಡಿತು. ಜಿನ ಭಕ್ತರ ಹಲವಾರು ವರ್ಷಗಳ ಆಸೆ, ಆಕಾಂಕ್ಷೆ, ನಿರೀಕ್ಷೆಗಳಿಗೆ ಫಲ ದೊರಕಿದ್ದು ಬೋಲೋ ಭಗವಾನ ಬಾಹುಬಲಿ ಕೀ ಎಂಬ ಜಯಘೋಷ ವೇಣೂರಿನ ದಶ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು. ಸರ್ವೇಶ್ ಜೈನ್ ಮತ್ತು ತಂಡದವರ ಸುಮಧುರ ಸಂಗೀತ ಅಭಿಷೇಕದ...
ಅಪಘಾತ ಸ್ಕೂಟರ್ ಸವಾರ ಸಾವು
ಪುತ್ತೂರು; ಟಿಪ್ಪರ್ ಹಾಗೂ ಡಿಯೋ ಸ್ಕೂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಡಿಯೋ ಸವಾರ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತವ್ಯಕ್ತಿ ಗೋಳಿತ್ತೊಟ್ಟಿನ ತೇಜಸ್ (24) ಎಂದು ಗುರುತಿಸಲಾಗಿದೆ.ಇನ್ನೋರ್ವ ಸವಾರ ಪವನ್ ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟಿಪ್ಪರ್ ಹಾಗೂ ಡಿಯೋ ದ್ವಿಚಕ್ರ ವಾಹನಗಳ ನಡುವೆ ಮುರದಲ್ಲಿ ಗುರುವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಕಬಕ ಕಡೆ ತೆರಳುತ್ತಿದ್ದ ಡಿಯೋ ಹಾಗೂ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ.
ವೇಣೂರಿನಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕಕ್ಕೆ ಚಾಲನೆ
ವೇಣೂರು: ವೇಣೂರು ಭಗವಾನ್ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಫೆ 22 ರಿಂದ ಮಾ 1ರವರೆಗೆ ನಡೆಯಲಿದ್ದು ಶತಮಾನದ 3 ಮಹಾ ಮಸ್ತಕಾಭಿಷೇಕ ಮಹೋತ್ಸವಕ್ಕೆ ಫೆ22ರಂದು ಚಾಲನೆ ನೀಡಲಾಯಿತು.ಸಂಜೆ ನಡೆದ ಸಮಾರಂಭದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದರು.ಕಾರ್ಯಕ್ರಮದಲ್ಲಿ 108 ಶ್ರೀ ಅಮೋಘಕೀರ್ತಿಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರು. ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಮೂಡುಬಿದಿರೆ, ಹಾರಿಕಾಮಾತಾಜಿ, ಕುಲಿಕಾ ಮಾತಾಜಿ ಪಾವನ ಸಾನ್ನಿಧ್ಯ ವಹಿಸಿ, ಆಶೀರ್ವದಿಸಿದರು. ಅಳದಂಗಡಿ...
ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಸಮಾರೋಪ
ಬೆಳ್ತಂಗಡಿ: ಕಠಿಣ ಪರಿಶ್ರಮವೇ ಯಶಸ್ಸಿನ ಗುಟ್ಟು, ಯಶಸ್ಸು ಎಂಬುದು ಸುಲಭವಾಗಿ ದಕ್ಕುವಂತದ್ದಲ್ಲ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಕು, ಇಚ್ಛಾಶಕ್ತಿ ಬೇಕು, ಜೊತೆಗೆ ಕೆಲಸವನ್ನು ಕಷ್ಟವೆನ್ನದೆ ಇಷ್ಟಪಟ್ಟು ಮಾಡಿ ಎಂದರು. ಅನೇಕ ಯುವಕ/ಯುವತಿಯರು ರುಡ್‌ಸೆಟ್ ಸಂಸ್ಥೆಯಲ್ಲಿ ಕಲಿತು ಸಾದನೆ ಮಾಡಿದವರ ಸಾಲಿಗೆ ನೀವು ಬರಬೇಕು, ನಿಮ್ಮ ಬದುಕಿನ ಕಥೆಗಳೇ ನಾಳೆ ಸಾಧನೆಯ ಕಥೆಗಳಾಗಿ ಬದಲಾಗಬೇಕು ಎಂದು ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನ್ ರವರು ಅಭಿಪ್ರಾಯ ಪಟ್ಟರು. ಅವರು ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಸಮಾರೋಪ...
ಎಸ್.ಎ ಫ್ರೆಂಡ್ಸ್ ವತಿಯಿಂದ ಪೂಂಜಾಲಕಟ್ಟೆಯಲ್ಲಿ ಕಬಡ್ಡಿ ಪಂದ್ಯಾಟ
ಪುಂಜಾಲಕಟ್ಟೆ : ಎಸ್ ಎ ಫ್ರೆಂಡ್ಸ್ ಇದರ ವತಿಯಿಂದ ಶಬ್ಬೀರ್ ಮಾಲಾಡಿ ಮತ್ತು ಅಕ್ಷಯ್ ಕಲ್ಲೆಗ ಟೈಗರ್ಸ್ ಪುತ್ತೂರು ಇವರ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲಾ ಕಬ್ಬಡಿ ಅಮೆಚೂರ್ ಯಶೋಶಿಯನ್ ಇವರ ಸಂಯೋಗದಲ್ಲಿ ಪುರುಷರ ಕಬ್ಬಡಿ ಪಂದ್ಯಾಟ ಬಂಗ್ಲೆಗುಡ್ಡೆ ಮೈದಾನ ಪುಂಜಾಲ್ ಕಟ್ಟೆಯಲ್ಲಿ ಫೆ. 18ರಂದು ನಡೆಯಿತು. ಕಬ್ಬಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವರು ಕೆಪಿಸಿಸಿ ಉಪಾಧ್ಯಕ್ಷರಾದ ಸನ್ಮಾನ್ಯ ರಮನಾಥ್ ರೈ ಅವರು ಹಾಗೂ ಮಾಜಿ ಸಚಿವರು ಕೆಪಿಸಿಸಿ ಉಪಾಧ್ಯಕ್ಷರಾದ ಸನ್ಮಾನ್ಯ ಕೆ ಗಂಗಾಧರ ಗೌಡ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ...
ಮಾ.1ರಿಂದ ರಾಜ್ಯದಾದ್ಯಂತ ಗ್ರಾಪಂ ನೌಕರರಿಂದ ಚಳವಳಿ; ರಾಜ್ಯ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ
ಬೆಂಗಳೂರು: ಪಂಚಾಯತ್ ನೌಕರರು ತಮಗಾಗುತ್ತಿರುವ ಶೋಷಣೆ ಮತ್ತು ಸಮಸ್ಯೆಗಳ ವಿರುದ್ದ ಜನರ ಸೇವೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಚೇರಿಯಲ್ಲಿ ಕಪ್ಪು ಪಟ್ಟಿ ಧರಿಸಿ ಇಲಾಖೆಯಿಂದ ಬೇಡಿಕೆ ಈಡೇರುವವರೆಗೂ ಮಾ.1ರಿಂದ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ ತಿಳಿಸಿದ್ದಾರೆ. ಈ ಸಂಬಂಧ ಪ್ರಕಟನೆ ನೀಡಿರುವ ಅವರು, ರಾಜ್ಯದ ಗ್ರಾ.ಪಂ. ಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಸಿಬ್ಬಂದಿ ಹಲವು ವರ್ಷಗಳಿಂದ ಸಂಘಟನೆಯ ಮೂಲಕ ಇಲಾಖೆಗೆ ಹಲವು ಬೇಡಿಕೆಗಳನ್ನು ಮಂಡಿಸುತ್ತಾ ಬಂದಿದ್ದಾರೆ. ಆದರೆ ಇಲಾಖೆಯು...
ಕಾಂಗ್ರೆಸ್ – ಸಮಾಜವಾದಿ ಪಕ್ಷದ ನಡುವೆ ಸೀಟು ಹಂಚಿಕೆ ಅಂತಿಮ
ಲಕ್ನೋ: ಮುಂಬರುವ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟುಗಳ ಹೊಂದಾಣಿಕೆಯ ವಿಚಾರದಲ್ಲಿ ಇದ್ದ ಗೊಂದಲಗಳು ಪರಿಹಾರಗೊಂಡಿದ್ದು ಕಂಗ್ರೆಸ್ 17 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಉಳಿದ 63ಕ್ಷೇತ್ರಗಳನ್ನು ಸಮಾಜವಾದಿ ಪಕ್ಷಕ್ಕೆ ನೀಡಲಾಗಿದ್ದು ಇದರಲ್ಲಿ ಕೆಲವು ಕ್ಷೇತ್ರ ಗಳಲ್ಲಿ ಈ ಮೈತ್ರಿಯೊಂದಿಗೆ ಇರುವ ಸಣ್ಣ ಪಕ್ಷಗಳು ಸ್ಪರ್ಧಿಸಲಿದೆ. "ನಾವು ಕಾಂಗ್ರೆಸ್ ಜೊತೆಗಿದ್ದೇವೆ ಮತ್ತು ಬಿಜೆಪಿಯನ್ನು ಸೋಲಿಸುವುದು ನಮ್ಮ ಮೈತ್ರಿ ಉದ್ದೇಶ" ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿರುವುದಾಗಿ ಮಾದ್ಯಮಗಳು ವರದಿ ಮಾಡಿದೆ. ರಾಯ್...
ಮಹೇಶ್ ಶೆಟ್ಟಿ ತಿಮರೋಡಿ ಅವರಿಂದ ನ್ಯಾಯಾಂಗ ನಿಂದನೆ, ಅಧಿಕಾರಿಗಳಿಗೆ ಹೈಕೋರ್ಟ್ ನೋಟೀಸ್ ಜಾರಿ
Contempt of Court by Mahesh Shetty Timarodi, High Court issues notice to officials ಬೆಳ್ತಂಗಡಿ; ಮಹೇಶ್ ಶೆಟ್ಟಿ ತಿಮರೋಡಿ ಮಾಡುತ್ತಿರುವ ನ್ಯಾಯಾಲಯದ ಆದೇಶಗಳ ಉಲ್ಲಂಘನೆ ತಡೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ, ಪೋಲೀಸ್ ಮಹಾ ನಿರ್ದೇಶಕರು ಹಾಗೂ ಇನ್ನಿತರ ಉನ್ನತ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಹೇಶ್ ಶೆಟ್ಟಿ ತಿಮರೋಡಿ ಮಾಡುತ್ತಿದ್ದ ಭಾಷಣಗಳ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ, ಹೈಕೋರ್ಟ್ ಮತ್ತೊಂದು ಮಹತ್ವದ ಆದೇಶ ಮಾಡಿದೆ. ಈಗಾಗಲೇ...
ವೇಣೂರು ಮಹಾಮಸ್ತಕಾಭಿಷೇಕ ಮಾಧ್ಯಮ ಕೇಂದ್ರ ಉದ್ಘಾಟನೆ
Inauguration of Venur Mahamastakabhisheka Media Center ವೇಣೂರು ; ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಸಮಿತಿ ಇದರ ಎಲ್ಲಾ ಕಾರ್ಯಕ್ರಮಗಳು ವಿಶ್ವವ್ಯಾಪಕವಾಗಿ ಪ್ರಸಾರವಾಗಲಿ, ಈ ಮೂಲಕ ಅಹಿಂಸೆ ಮತ್ತು ಶಾಂತಿ ಸಂದೇಶಗಳು ವಿಶ್ವವ್ಯಾಪಕವಾಗಿ ಪಸರಿಸಬೇಕು ಎಂದು ಪುತ್ತೂರು ಸಹಾಯಕ ಅಯುಕ್ತಜುಬಿನ್ ಮಹಾಪಾತ್ರ ಹೇಳಿದರು.ಅವರು ಇಂದು ವೇಣೂರು ಮಹಾಮಸ್ತಕಾಭಿಷೇಕ ಸಮಿತಿಯ ಮಾಧ್ಯಮಕೇಂದ್ರವನ್ನು ಉದ್ಘಾಟಿಸಿ,ಶುಭ ಹಾರೈಸಿದರು.ಮಾಧ್ಯಮಗಳು ಸಾಕಷ್ಟು ಪ್ರಸಾರ ಕಾರ್ಯ ಮಾಡಿದಲ್ಲಿ ಅದೂ ಒಂದು ಉತ್ತಮ ಕಾರ್ಯ ಸರಕಾರ ಮಸ್ತಕಾಭಿಷೇಕ ಸಮಿತಿಯುಂದಿಗೆ ಇದ್ದು ಇಲ್ಲಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಹಲವು ಸವಲತ್ತುಗಳನ್ನು ನೀಡಿದೆ. ನಿರ್ವಿಘ್ನವಾಗಿ ಈ ಮಂಗಳಕಾರ್ಯ...





