ಕಲ್ಮಂಜದಲ್ಲಿ ಕಿರು ಸೇತುವೆ ಕುಸಿತ ಸಂಪರ್ಕ ಕಡಿತ; ಸ್ಥಳಕ್ಕೆ ರಕ್ಷಿತ್ ಶಿವರಾಂ ಹಾಗೂ ಅಧಿಕಾರಿಗಳ ಭೇಟಿ
ಬೆಳ್ತಂಗಡಿ; ಕಲ್ಮಂಜ ಗ್ರಾಮದ ಗುತ್ತುಬೈಲು ಸಂಪರ್ಕ ರಸ್ತೆಯ ಕಿರು ಸೇತುವೆ ತೀವ್ರ ಮಳೆಗೆ ಮುರಿದು ಸಂಪರ್ಕ ಕಡಿತಗೊಂಡಿದೆ. ಕಿತು ಸೇತುವೆ ಭಾಗಶ ಕುಸಿದು ಬಿದ್ದಿದ್ದು ಜನರ ಸಂಚಾರ ಅಸಾಧ್ಯವಾಗಿದೆ.ಇದರಿಂದ ಸುಮಾರು 50 ಮನೆಗಳಿಗೆ ಸಂಪರ್ಕಕ್ಕೆ ತೊಂದರೆ ಆಗಿದ್ದು ಹೊರ ಪ್ರದೇಶದಿಂದ ಸಂಪರ್ಕ ಕಳೆದುಕೊಂಡಿದೆ.ಪುತ್ತೂರು ಸಹಾಯಕ ಕಮಿಷನರ್,ಬೆಳ್ತಂಗಡಿ ತಹಶಿಲ್ದಾರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹನ ಅಧಿಕಾರಿ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.. ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ ಘಟನ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಬಗ್ಗೆ ಶೀಘ್ರವಾಗಿ...
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸಮೀಪ ಆವರಣ ಗೋಡೆ ಕುಸಿತ; ಹಲವು ವಾಹನಗಳು ಜಖಂ
ಬೆಳ್ತಂಗಡಿ; ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯ ಸಮೀಪ ಆವರಣಗೋಡೆ ಕುಸಿದು ಬಿದ್ದಿದ್ದು ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.ಭಾರೀ ಮಳೆಗೆ ಆವರಣಗೋಡೆಯ ಒಂದು ಭಾಗ ಕುಸಿದು ಬಿದ್ದಿದ್ದು ದ್ವಿಚಕ್ರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ತಡಗೋಡೆಯ ಅಡಿಗೆ ಸಿಲುಕಿದ್ದು ಜಖಂಗೊಂಡಿದೆ. ಜನರಿಗೆ ಯಾರಿಗೂ ಯಾವುದೇ ತೊಂದರೆಗಳಾಗಿಲ್ಲ ಎಂದು ತಿಳಿದು ಬಂದಿದೆ
ಶಿರಾಡಿ ಘಾಟಿಯಲ್ಲಿ ಭೂಕುಸಿತ ಮಣ್ಣಿನಡಿ ಸಿಲುಕಿದ ವಾಹನಗಳು; ರಸ್ತೆ ಸಂಚಾರ ಸ್ಥಗಿತ
ಸಕಲೇಶಪುರ: ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತವಾದ ಹಿನ್ನೆಲೆಯಲ್ಲಿ ರಸ್ತೆ ಬಂದ್ ಮಾಡಲಾಗಿದೆ. ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ದೊಡ್ಡತಪ್ಪಲು ಸಮೀಪ ಭೂಕುಸಿತ ಉಂಟಾಗಿ ಎರಡು ಕಾರು, ಒಂದು ಟಿಪ್ಪರ್ ಹಾಗೂ ಒಂದು ಟ್ಯಾಂಕರ್ ಕೆಸರಿನಲ್ಲಿ ಸಿಲುಕಿದ್ದು ಅದೃಷ್ಟವಷಾತ್ ಯಾವುದೆ ಜೀವಹಾನಿ ಸಂಭವಿಸಿಲ್ಲ.ಭಾರಿ ಭೂಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ನ್ನು ಬಂದ್ ಮಾಡಲಾಗಿದ್ದು ಇದರಿಂದಾಗಿ ವಾಹನಗಳು ಹಲವು ಕಿ.ಮೀ ದೂರ ನಿಂತಲ್ಲೆ ನಿಲ್ಲುವಂತಾಗಿದೆ. ಊಟ ತಿಂಡಿ ಇಲ್ಲದೆ...
ಭಾರೀ ಮಳೆ ಹಿನ್ನಲೆ ಜು.30ಮಂಗಳವಾರ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ
ಬೆಳ್ತಂಗಡಿ: ತಾಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಈ ಹಿನ್ನಲೆಯಲ್ಲಿ ಜು. 30ಮಂಗಳವಾರ ಬೆಳ್ತಂಗಡಿ ತಾಲೂಕಿನಲ್ಲಿ ಎಲ್ಲ ಶಾಲೆಗಳಿಗೆ ರಜೆ ನೀಡಿ ಬೆಳ್ತಂಗಡಿ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.ತಾಲೂಕಿನಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ನದಿಗಳಲ್ಕಿ ನೀರಿನ ಮಟ್ಟ ಏರುತ್ತಿದ್ದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ ಈ ಹಿನ್ನಲೆಯಲ್ಲಿ ರಜೆ ನೀಡಲಾಗಿದೆ
ಕೇರಳದ ವಯನಾಡ್ ನಲ್ಲಿ ಭೀಕರ ಭೂಕುಸಿತ ಏಳು ಮಂದಿ ಸಾವು ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ
ಬೆಳ್ತಂಗಡಿ; ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕಕ ಭೂಕುಸಿತ ಸಂಭವಿಸಿದ ಘಟನೆ ಮಂಗಳವಾರ ಮಧ್ಯರಾತ್ರಿ ಹಾಗೂ ಬೆಳ್ಳಂಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಈವರೆಗೆ ಏಳು ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಲಯಾಳಂ ಮಾಧ್ಯಮಗಳು ವರದಿ ಮಾಡಿದೆ. ವಯನಾಡ್ ಜಿಲ್ಲೆಯ ಮೇಪ್ಪಾಡಿ, ಮುಂಡಕ್ಕೆ ಪಟ್ಟಣ ಮತ್ತು ಚೂರಲ್ ಮಲ ಎಂಬ ಮೂರು ಪ್ರದೇಶದಲ್ಲಿ ರಾತ್ರಿಯ ವೇಳೆ ಭಾರೀ ಭೂಕುಸಿತ ಸಂಭವಿಸಿದೆ.ಮಧ್ಯರಾತ್ರಿಯ ವೇಳೆ ಮೊದಲ ಭೂಕುಸಿತ ಸಂಭವಿಸಿದ್ದುಮುಂಡಕ್ಕೆ ಪೇಟೆಯಲ್ಲಿ ಬೆಳಗಿನ ಜಾವ ಸರಿಸುಮಾರು 4 ಗಂಟೆಗೆ ಮತ್ತೆ ಭೂ ಕುಸಿತ ಸಂಭವಿಸಿದೆ. ಹಲವು ಸೇತುವೆಗಳು ಕೊಚ್ಚಿ ಹೋಗಿರುವುದಾಗಿ ತಿಳಿದು ಬಂದಿದ್ದು ಕೆಲವು...
ಸೈಂಟ್ ಸೆಬಸ್ಟಿಯನ್ ಚರ್ಚ್ ಕಳಂಜ; ಕಾರ್ಗಿಲ್ ವಿಜಯೋತ್ಸವ ಸಂಭ್ರಮ
ಕಳಂಜ: ಸಂತ ಸೆಬಾಸ್ಟಿಯನ್ ರವರ ದೇವಾಲಯ ಕಳಂಜ ಇಲ್ಲಿ ದಿನಾಂಕ 28 ಜುಲೈ 2024 ರಂದು 1999 ರಲ್ಲಿ ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ 527 ಸೈನಿಕರು ಹಾಗೂ 1300 ಗಾಯಾಳುಗಳಾದ ಸೈನಿಕರಿಗೋಸ್ಕರ ಪ್ರಾರ್ಥನೆಯು ನೆರವೇರಿತು. ತದನಂತರ 25 ನೆಯ ವಿಜಯೋತ್ಸವದ ಸಂಭ್ರಮ ಸೂಚಕವಾಗಿ ಧಾರ್ಮಿಕ ಕೇಂದ್ರದಿಂದ ಭಾರತ ದೇಶದ ಸೈನಿಕ ಸೇವೆಯಿಂದ ನಿವೃತ್ತರಾದ ಥೋಮಸ್ ಪುತಿಯುಕುಲಂಗರ, ಮ್ಯಾಥ್ಯೂ ಉರಿಯಲ್ಪಡಿಕ್ಕಲ್ , ವಿನೋಯ್ ಚೆಮ್ಮಟ್ಟಕುಯಿ ಇವರುಗಳಿಗೆ ಗೌರವ ಸನ್ಮಾನವನ್ನು ನೀಡಲಾಯಿತು . ಹಾಗೂ ಪ್ರಸ್ತುತ ಸೇವೆಯಲ್ಲಿ ನಿರತರಾಗಿರುವ ಥೋಮಸ್ ಪೀಡಿಗೆಯಿಲ್, ಜೋಮೊನ್ ಪುವತಿಂಗಲ್...
ಬಟ್ಟಿಯಲ್ ಸಂತ ಮರಿಯಮ್ಮನವರ ದೇವಾಲಯದ ಲ್ಲಿ ಕೆ.ಎಸ್. ಎಮ್. ಸಿ.ಎವತಿಯಿಂದ ಸೈನಿಕರಿಗೆ ಸನ್ಮಾನ
ಬೆಳ್ತಂಗಡಿ; ಕಾರ್ಗಿಲ್ ವಿಜಯದ 25 ನೇ ವಾರ್ಷಿಕೋತ್ಸವದ ಅಂಗವಾಗಿ ಬಟ್ಟಿಯಲ್ ಸಂತ ಮರಿಯಮ್ಮನವರ ದೇವಾಲಯದ ಲ್ಲಿ ಕೆ.ಎಸ್. ಎಮ್. ಸಿ.ಎವತಿಯಿಂದ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಧರ್ಮ ಕೇಂದ್ರ ದ ನಿವೃತ್ತ ಸೈನಿಕನಾದ ಸಿಂಡೋಯ್ ಇಪನ್ ಅವರ ಅನುಪಸ್ಥಿತಿಯಲ್ಲಿ ಯೋಧನ ಹೆತ್ತವರ ರನ್ನು ಶಾಲು ಹೋದೆಸಿ ಗೌರವಿಸಲಾಯಿತು.ಈ ಕಾರ್ಯಕ್ರಮ ದಲ್ಲಿ ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂಧನಿಯ ಫಾ ಜೋಸೆಫ್ ವಾಲೂಕಾರನ್, ಕೆ ಸ್ ಮ್ ಸಿ ಎ ವಲಯ ಅಧ್ಯಕ್ಷರಾದ ಜೈಸನ್ ಪಟ್ಟೆರಿಲ್, ಘಟಕ ಅಧ್ಯಕ್ಷರಾದ ಜೋಮೇಶ್ ಕೆ ಜೆ, ಟ್ರಸ್ಟಿ ಗಳಾದ...
ಬೆಳ್ತಂಗಡಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಖಂಡಿಸಿ ಮಂಗಳವಾರ ಪ್ರತಿಭಟನೆ
ಬೆಳ್ತಂಗಡಿ; ಕಣಿಯೂರಿನಲ್ಲಿ ಬಿಜೆಪಿ ಮುಖಂಡ ಗ್ರಾಮಪಂಚಾಯತು ಸದಸ್ಯ ಪ್ರವೀಣ್ ಗೌಡ ಅವರ ಮೇಲೆ ನಡೆದ ಹಲ್ಲೆ ಹಾಗೂ ದರೋಡೆಯನ್ನು ಖಂಡಿಸಿ ಬಿಜೆಪಿ ಬೆಳ್ತಂಗಡಿ ಮಂಡಲದ ನೇತೃತ್ವದಲ್ಲಿ ಜು30 ಮಂಗಳವಾರ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ.ಆರೋಪಿಗಳ ವಿರುದ್ದ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು ಶಾಸಕ ಹರೀಶ್ ಪೂಂಜ ಸೇರಿದಂತೆ ವಿವಿಧ ಮುಖಂಡರು ಗಳು ಭಾಗವಹಿಸಲಿದ್ದಾರೆ.
ಕೆ.ಎಸ್. ಎಂ.ಸಿ ಎ ನೇತೃತ್ವದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ಕಾರ್ಗಿಲ್ ವಿಜಯ ದಿನ ಆಚರಣೆ
ಬೆಳ್ತಂಗಡಿ; ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ( ಕೆ.ಎಸ್.ಎಂ.ಸಿ.ಎ) ನೇತೃತ್ವದಲ್ಲಿಕಾರ್ಗಿಲ್ ವಿಜಯ್ ದಿವಸ್ 25 ನೇ ವರ್ಷದ ಆಚರಣೆಯನ್ನು ಜೂಲೈ 28ನೇ ಭಾನುವಾರ ಬೆಳ್ತಂಗಡಿ ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು . ಬೆಳ್ತಂಗಡಿ ಧರ್ಮಧ್ಯಕ್ಷರಾದಬಿಷಪ್ ಲೋರೆನ್ಸ್ ಎಂ. ಟಿ ಅವರ ಆಶೀರ್ವಾದದೊಂದಿಗೆ ನಿರ್ದೇಶಕರಾದ ವಂದನೀಯ ಆದರ್ಶ್ ಜೋಸೆಫ್ ಪುತಿಯೇಡತ್ ರವರ ನಿರ್ದೇಶನಗಳೊoದಿಗೆ ಅಧ್ಯಕ್ಷರಾದ ಬೆಟ್ಟಿ ನೆಡುನಿಲಂ ಹಾಗೂ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಆಯಾ ಧರ್ಮ ಕೇಂದ್ರಗಳ ಧರ್ಮಗುರುಗಳ ಸಹಕಾರದಿಂದ, ಸ್ಥಳೀಯ ಸಮಿತಿಗಳ ನೇತೃತ್ವದಲ್ಲಿ ಕೆಎಸ್ಎಂಸಿಎ ವಲಯ ಮಟ್ಟದ ಅಧ್ಯಕ್ಷರು ಹಾಗೂ...
ಮಾಲಾಡಿ ಗ್ರಾ.ಪಂ ಅಧ್ಯಕ್ಷರ ನೇತೃತ್ವದ ತಂಡದಿಂದ ಮಳೆ ಹಾನಿಯಾದ ಪ್ರದೇಶಗಳ ಭೇಟಿ
ಬೆಳ್ತಂಗಡಿ; ಮಾಲಾಡಿ ಗ್ರಮಾಪಂಚಾಯತು ವ್ಯಾಪ್ತಿಯಲ್ಲಿ ಬಿರುಗಾಳಿ ಮಳೆಯಿಂದಾಗಿ ವ್ಯಾಪಕ ಹಾಮಿ ಸಂಭವಿಸಿದ್ದು ಹಾನಿಗೀಡಾದ ಪ್ರದೇಶಗಳಿಗೆ ಮಾಲಾಡಿ ಗ್ರಾಪಂ ಅಧ್ಯಕ್ಷರ ನೇತೃತ್ವದ ತಂಡ ಭೇಟಿ ನೀಡಿ ಸಂಕಷ್ಟಕ್ಕೆ ಈಡಾದ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.ಗ್ರಾಮಪಂಚಾಯತು ವತಿಯಿಂದ ಹಾಗೂ ಸರಕಾರದಿಂದ ಸಾಧ್ಯವರಿವ ಎಲ್ಲ ರೀತಿಯ ಸಹಕಾರವನ್ನೂ ಒದಗಿಸುವುದಾಗಿ ಸಂತ್ರಸ್ಥರಿಗೆ ಭರವಸೆ ನೀಡಿದರು. ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್, ಸದಸ್ಯರಾದ ಬೇಬಿ ಸುವರ್ಣ, ಉಮೇಶ್, ಬೆನಡಿಕ್ಟಾ ಮಿರಾಂದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಿನ್ಸೆಂಟ್ ಡಿಸೋಜಾ, ಪ್ರಮುಖರಾದ ಮಹಮ್ಮದ್ ಆಲಿ, ಅಲ್ತಾಫ್, ಹೈದರ್ ಆಲಿ ಮುಂತಾದವರು ಇದ್ದರು















