Home ಅಪರಾಧ ಲೋಕ ಜಿಲ್ಲೆಯಲ್ಲಿ ಪ್ರತಿ ನಿತ್ಯ ವಂಚನಾ ಜಾಲಗಳಿಗೆ ಬಲಿಯಾಗಿ ಲಕ್ಷಾಂತರ ಹಣ ಕಳೆದು ಕೊಳ್ಳುತ್ತಿರುವ ಜನರು

ಜಿಲ್ಲೆಯಲ್ಲಿ ಪ್ರತಿ ನಿತ್ಯ ವಂಚನಾ ಜಾಲಗಳಿಗೆ ಬಲಿಯಾಗಿ ಲಕ್ಷಾಂತರ ಹಣ ಕಳೆದು ಕೊಳ್ಳುತ್ತಿರುವ ಜನರು

254
0

ಬೆಳ್ತಂಗಡಿ; ವಂಚನೆ ಜಾಲಗಳಿಗೆ ಬಲಿಯಾಗಿ ಜನರು ಪ್ರತಿನಿತ್ಯ ಲಕ್ಷಾಂತರ ಹಣ ಕಳೆದುಕೊಂಡು ವಂಚಿತರಾಗುತ್ತಿದ್ದರೂ ಮತ್ತೆ ಮತ್ತೆ ಇಂತಹ ಜಾಲಗಳಿಗೆ ಬಲಿಯಾಗುತ್ತಿರುವ ಘಟನೆಗಳು ಸಂಭವಿಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಇಂತಹ ಹಲವು ಘಟನೆಗಳು ನಡೆದಿದ್ದು ಈಬಗ್ಗೆ ಜಿಲ್ಲೆಯ ಹಲವು ಠಾಣೆಗಳಲ್ಲಿ ಹಾಗೂ ಸಿ.ಎನ್.ಎನ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಾಲಗಿದೆ. ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿದೆರೆ ಲಕ್ಷಾಂತರ ಹಣವನ್ನು ಕಳೆದುಕೊಂಡಿರುವುದು ಕಂಡುಬರುತ್ತಿದೆ.
ಸೈಬರ್ ಕ್ರೈಮ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಮೀಶೋದಲ್ಲಿ ನಗದು ಬಹುಮಾನ ಬಂದಿರುವುದಾಗಿ ತಿಳಿಸಿ ಹಣ ಪಡೆಯಬೇಕಾದರೆ ಟಿ.ಡಿ ಎಸ್. ಜಿ.ಎಸ್.ಟಿ ಸೇರಿದಂತೆ ವಿವಿಧ ರೀತಿಯ ಚಾರ್ಜುಗಳಿಗೆ ಹಣ ಹಾಕುವಂತೆ ತಿಳಿಸಿದ್ದು ಅದರಂತೆ ವ್ಯಕ್ತಿಯೊಬ್ಬ 6,62,450 ಹಣವನ್ನು ವಿವಿಧ ಖಾತೆಗಳಿಗೆ ಕಳುಹಿಸಿ ಕೊಟ್ಟು ಇದೀಗ ವಂಚನೆಗೆ ಈಡಾಗಿದ್ದಾರೆ ಎಂದು ದೂರು ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ ನೀಡುವುದಾಗಿ ಹೇಳಿ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು ಅವರು ಸೂಚಿಸಿದ ಖಾತೆಗಳಿಗೆ ರೂ. 9,20,000 ಹಣವನ್ನು ವರ್ಗಾವಣೆ ಮಾಡಿದ್ದು ಅಂತಿಮವಾಗಿ ವಂಚನೆಗೆ ಈಡಾಗಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಇಎನ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಪಾರ್ಟ್ ಟೈಂ ಕೆಲಸ ಕೊಡಿಸುವುದಾಗಿ ಸುಳ್ಯದ ವ್ಯಕ್ತಿಯೊಬ್ಬರಿಗೆ ನಂಬಿಸಿದ ವಂಚಕರ ಜಾಲ ಅವರಿಂದ 2,18,000 ಹಣವನ್ನು ಅಪರಿಚಿತ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆದರೆ ಬಳಿಕ ಅವರಿಂದ ಯಾವುದೇ ಉತ್ತರ ಬರದ ಹಿನ್ನಲೆಯಲ್ಲಿ ವಂಚನೆಗೆ ಒಳಗಾಗಿರುವ ಬಗ್ಗೆ ಪೊಲೋಸರಿಗೆ ದೂರು ನೀಡಿದ್ದಾರೆ‌.
ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಟೆಲಿಗ್ರಾಂ ಆಪ್ ನಲ್ಲಿ ಬಂದ ಸಂದೇಶವನ್ನು ನಂಬಿ ವಿವಿಧ ಖಾತೆಗಳಿಗೆ ಒಟ್ಟು 10 ಲಕ್ಷ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ಷೇರ್ ಮಾರ್ಕೆಟ್ ಬಗ್ಗೆ ಮಾಹಿತಿ ನೀಡುವುದಾಗಿ ನಂಬಿಸಿ ಮಾರ್ಕೆಟ್ ನಲ್ಲಿ ಹೂಡಿಕೆಯ ನೆಪದಲ್ಲಿ 3,30,000 ಹಣವನ್ನು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

ಕೊಕ್ಕಡ ಗ್ರಾಮದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಅವರಿಂದ ಬ್ಯಾಂಕ್ ಮಾಹಿತಿಗಳನ್ನು ಪಡೆದುಕೊಂಡು ಒಂದು ಲಕ್ಷ ಹಣ ವಂಚನೆ ಮಾಡಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೆಲ್ಲವೂ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಾಗಿದೆ. ಪೊಲೀಸರಿಗೆ ದೂರು ನೀಡದೆ ಇರುವ ಪ್ರಕರಣಗಳು ಇನ್ನೂ ಎಷ್ಟಿದೆ ಎಂಬುದು ಯಾರಿಗೂ ತಿಳಿಯದ ವಿಚಾರವಾಗಿದೆ‌.

LEAVE A REPLY

Please enter your comment!
Please enter your name here