Inauguration of Venur Mahamastakabhisheka Media Center
ವೇಣೂರು ; ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಸಮಿತಿ ಇದರ ಎಲ್ಲಾ ಕಾರ್ಯಕ್ರಮಗಳು ವಿಶ್ವವ್ಯಾಪಕವಾಗಿ ಪ್ರಸಾರವಾಗಲಿ, ಈ ಮೂಲಕ ಅಹಿಂಸೆ ಮತ್ತು ಶಾಂತಿ ಸಂದೇಶಗಳು ವಿಶ್ವವ್ಯಾಪಕವಾಗಿ ಪಸರಿಸಬೇಕು ಎಂದು ಪುತ್ತೂರು ಸಹಾಯಕ ಅಯುಕ್ತಜುಬಿನ್ ಮಹಾಪಾತ್ರ ಹೇಳಿದರು.
ಅವರು ಇಂದು ವೇಣೂರು ಮಹಾಮಸ್ತಕಾಭಿಷೇಕ ಸಮಿತಿಯ ಮಾಧ್ಯಮಕೇಂದ್ರವನ್ನು ಉದ್ಘಾಟಿಸಿ,ಶುಭ ಹಾರೈಸಿದರು.
ಮಾಧ್ಯಮಗಳು ಸಾಕಷ್ಟು ಪ್ರಸಾರ ಕಾರ್ಯ ಮಾಡಿದಲ್ಲಿ ಅದೂ ಒಂದು ಉತ್ತಮ ಕಾರ್ಯ ಸರಕಾರ ಮಸ್ತಕಾಭಿಷೇಕ ಸಮಿತಿಯುಂದಿಗೆ ಇದ್ದು ಇಲ್ಲಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಹಲವು ಸವಲತ್ತುಗಳನ್ನು ನೀಡಿದೆ. ನಿರ್ವಿಘ್ನವಾಗಿ ಈ ಮಂಗಳಕಾರ್ಯ ನಡೆಯಲಿ ಎಂದರು.
ಮೂಡಬಿದರೆ ತಹಶೀಲ್ದಾರ್ ಮುಕುಲ್ ಜೈನ್, ಸಮಿತಿಯ ಸರಕಾರೀ ನೋಡೆಲ್ ಅಧಿಕಾರಿ ಮಾಣಿಕ್ಯಜೈನ್, ಜಯಕೀರ್ತಿ ಜೈನ್, ಉದ್ಯಮಿ ಅಭಿಜಿತ್ ಮೂಡಬಿದ್ರಿ, ಸಮಿತಿ ಸಂಚಾಲಕ ಡಾ| ಅಮೃತ ಮಲ್ಲ ಉಪಸ್ಥಿತರಿದ್ದರು. ಸಂಯೋಜಕ ವಿನಯಕುಮಾರ್ ಸೇಮಿತ ಸ್ವಾಗತಿಸಿ, ವಂದಿಸಿದರ
