ಬಂದಾರು: ಹಿರಿಯ ಕಾಂಗ್ರೇಸ್ ಮುಂದಾಳು ಲಿಂಗಪ್ಪ ಗೌಡ ನಿಧನ

0

ಕಾಂಗ್ರೇಸ್ ಪಕ್ಷದ ಕಟ್ಟಾಳು ಬಂದಾರು ಗ್ರಾಮದ ಚಕೋಟೆದಡಿ ನಿವಾಸಿ ಲಿಂಗಪ್ಪ ಗೌಡ (85) ಇಂದು ನಿಧನ ಹೊಂದಿದರು. ಅವರು ಪುತ್ರಿ, ಮಕ್ಕಳು ಮತ್ತು ಬಂದು ವರ್ಗದವರನ್ನು ಅಗಲಿದ್ದಾರೆ. ಪಕ್ಷದ ಪರವಾಗಿ ಕಾಂಗ್ರೇಸ್ ಉಸ್ತುವಾರಿ ಜಯವಿಕ್ರಮ ಕಲ್ಲಾಪು, ಶಂಕರ ವಿಠಲ ಭಟ್, ನ್ಯಾಯವಾದಿ ಮನೋಹರ ಕುಮಾರ್ ಅಂತಿಮ ನಮನ ಸಲ್ಲಿಸಿದರು.

ಜೆಡಿಎಸ್ ನಿಂದ ಪ್ರಜ್ವಲ್ ಉಚ್ಚಾಟನೆ. ಪೆನ್ ಡ್ರೈವ್ ಹಂಚಿಕೆ ಬಗ್ಗೆಯೂ ತನಿಖೆಯಾಗಲಿ; ಕುಮಾರಸ್ವಾಮಿ

0

ಹಾಸನ; ಹಾಸನ ಪೆನ್ ಡ್ರೈವ್ ಪ್ರಕರಣದ‌ ಹಿನ್ನಲೆಯಲ್ಲಿ ಜೆಡಿಎಸ್ ನಿಂದ ಸಂಸದ ಪ್ರಜ್ವಲ್ ರೇವಣ್ಣ ಉಚ್ಚಾಟನೆ ಮಾಡಲಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಅವರು ಈ ಬಗ್ಗೆ ರಾತ್ರಿಯೇ ದೇವೇಗೌಡರ ಬಳಿ ಚರ್ಚೆ ಮಾಡಿದ್ದೆ. ನಿನ್ನೆಯೇ ಈ ಬಗ್ಗೆ ತೀರ್ಮಾನ ಆಗಿತ್ತು. ನಾಳೆ ಕೋರ್ ಕಮಿಟಿ ಸಭೆಯಲ್ಲಿ ಉಚ್ಚಾಟನೆ ಬಗ್ಗೆ ತೀರ್ಮಾನ ಆಗಬೇಕಿತ್ತು. ಆದರೆ ಅದಕ್ಕೂ ಮೊದಲೇ ದೇವೇಗೌಡರು ಉಚ್ಚಾಟನೆ ಮಾಡಿದ್ದಾರೆ ಎಂದಿದ್ದಾರೆ.ಈ ನೆಲದ ಕಾನೂನಿನಲ್ಲಿ ತಪ್ಪು ಆಗಿದ್ರೆ ಶಿಕ್ಷೆ ಆಗಬೇಕು.ಈ ಪ್ರಕರಣದಲ್ಲಿ ದೇವೇಗೌಡರನ್ನ,...

ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ; ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

0

ಬೆಂಗಳೂರು; ಮಾಜಿ ಕೇಂದ್ರ ಸಚಿವ ಹಿರಿಯ ದಲಿತ ಮುಖಂಡ ಶ್ರೀನಿವಾಸ ಪ್ರಸಾದ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಹಳೇ ಮೈಸೂರು ಪ್ರದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅವರು ಸಂಸದರಾಗಿ ಶಾಸಕರಾಗಿ ಕೇಂದ್ರ ಸಚಿವರಾಗಿ ಜನಪ್ರಿಯ ರಾಜಕಾರಣಿಯಾಗಿದ್ದರು. ಬಿಜೆಪಿ ಸಂಸದರಾಗಿದ್ದ ಅವರು ಇತ್ತೀಚೆಗೆ ಬಿಜೆಪಿಯಿಂದ ದೂರವಾಗಿ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರು,ಸಂಸದ ಶ್ರೀನಿವಾಸ ಪ್ರಸಾದ್ ಅವರ ನಿಧನಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದ್ದಾರೆ. "ದಲಿತ ದಮನಿತರ ಪರವಾದ ದಿಟ್ಟ ದನಿ ಮಾಜಿ ಸಚಿವ ಮತ್ತು ಹಿರಿಯ...

ಬೆಳ್ತಂಗಡಿ ಧರ್ಮಪ್ರಾಂತ್ಯ ಕೇಶದಾನ ಕಾರ್ಯಕ್ರಮ:

0

ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ಫ್ಯಾಮಿಲಿ ಅಪೋಸ್ತಲೇಟ್ ಹಾಗೂ ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಇವುಗಳ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಶದಾನ ಕಾರ್ಯಕ್ರಮವು ಎಪ್ರಿಲ್ 28 ರಂದು ಬೆಳ್ತಂಗಡಿ ಜ್ಞಾನನಿಲಯದಲ್ಲಿ ನಡೆಯಿತು. ಬೆಳ್ತಂಗಡಿ ಧರ್ಮಪ್ರಾಂತ್ಯದ ಮಾತೃವೇದಿ ಅಧ್ಯಕ್ಷೆ ಮೇರ್ಸಿ ಕಾಡಶ್ಶೇರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ‌ ಶುಭ ಹಾರೈಸಿದರು. ಬೆಳ್ತಂಗಡಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಇದರ ಅಧ್ಯಕ್ಷೆ ಮಂಜುಳಾ ಜೋನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ. ಎಲ್ಲರಿಗೂ ಸ್ವಾಗತ ಕೋರಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಫ್ಯಾಮಿಲಿ...

ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಜ್ವಲ್‌ ರೇವಣ್ಣ ವಿರುದ್ದ ಪ್ರಕರಣ ದಾಖಲು

0

ಹಾಸನ : ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್.ಐ.ಆ‌ರ್. ದಾಖಲಾಗಿದೆ. ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ಸಂಖ್ಯೆ: 107/2024 ಕಲಂ 354A, 354D, 506, 509 ಐಪಿಸಿ ರ ಅಡಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣವು ಗಂಭೀರ ಸ್ವರೂಪ ಪಡೆದಿದ್ದು, ಶೀಘ್ರವೇ ತನಿಖಾ ತಂಡ ಪ್ರಜ್ವಲ್ ಅವರ ಹುಡುಕಾಟಕ್ಕೆ ಮುಂದಾಗಲಿದೆ ಎನ್ನಲಾಗುತ್ತಿದೆ. ಎಸ್.ಐ.ಟಿ ರಚನೆ ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಹಾಸನ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣಕ್ಕೆ...

ಚಾರ್ಮಾಡಿಯಲ್ಲಿ ವಿದ್ಯುತ್ ಲೈನಿನ ಮೇಲೆ ಮರ ಉರುಳಿಸಿದ ಕಾಡಾನೆ, ವಿದ್ಯುತ್ ವ್ಯತ್ಯಯ

0

ಬೆಳ್ತಂಗಡಿ; ಚಾರ್ಮಾಡಿಯಲ್ಲಿ ಕಾಡಾನೆ ರಸ್ತೆಬದಿಯಲ್ಲಿದ್ದ ಮರವನ್ನು ವಿದ್ಯುತ್ ಲೈನಿನ ಮೇಲೆ ದೂಡಿಹಾಕಿದ ಪರಿಣಾಮ ಈ ಪರಿಸರದಲ್ಲಿ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.ಶನಿವಾರ ರಾತ್ರಿಯವೇಳೆ ಚಾರ್ಮಾಡಿ ಮಠದಮಜಲು ಸಮೀಪ ಕಾಡಾನೆ ರಸ್ತೆಬದಿಯಲ್ಲಿದ್ದ ಈಚಲು ಮರವನ್ನು ಉರುಳಿಸಿದೆ. ಮರ 33ಕೆ.ವಿ ತ್ರಿನೇತ್ರ ಲೈನಿನ ಮೇಲೆ ಹಾಗೂ 11ಕೆ.ವಿ ಲೈನ್ ಚಾರ್ಮಾಡಿ ಫೀಡರಿನ ಮೇಲೆ ಬಿದ್ದಿದ್ದು ಲೈನಿಗೆ ಹಾನಿಯುಂಟಾಗಿದ್ದು ಕೆಲವು ಬಿಡಿ ಭಾಗಗಳು ಸುಟ್ಟು ಹೋಗಿದೆ. ಮೆಸ್ಕಾಂ ಸಿಬ್ಬಂದಿಗಳು ಪರಿಶ್ರಮಪಟ್ಟು ವಿದ್ಯುತ್ ಪೂರೈಕೆಗೆ ವ್ಹವಸ್ಥೆ ಮಾಡಿದ್ದಾರೆ.

ಕೊಕ್ಕಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕ ಸಾವು

0

ಬೆಳ್ತಂಗಡಿ : ಸಂಶಯಾಸ್ಪದವಾಗಿ ಯುವಕನೋರ್ಮ ಸಾವನ್ನಪ್ಪಿರುವ ಘಟನೆ ಕೊಕ್ಕಡ ಗ್ರಾಮದ ಡೆಂಜ ಸಮೀಪದ ಪೊಯ್ಯಲೆ ಎಂಬಲ್ಲಿ ನಡೆದಿದೆ. ಹರೀಶ್ (35) ಎಂಬಾತನೇ ಸಂಶಯಾಸ್ಪದ ವಾಗಿ ಮೃತಪಟ್ಟ ಯುವಕನಾಗಿದ್ದಾನೆ . ಘಟನೆ ಏ.25ರಂದು ಮಧ್ಯಾಹ್ನ ನಡೆದಿದೆ, ತಡವಾಗಿ ಬೆಳಕಿಗೆ ಬಂದಿದೆ. ಮೃತ ಹರೀಶ್(35) ಮತ್ತು ಆತನ ತಂದೆ ಚೋಮ ಎಂಬವರು ಮನೆಯಲ್ಲಿ ಇಬ್ಬರೆ ವಾಸವಾಗಿದ್ದು, ತಾಯಿ ಈ ಹಿಂದೆ ನಿಧನ ಹೊಂದಿದ್ದರು.ಹರೀಶ್ ಏ.25ರಂದು ಮಧ್ಯಾಹ್ನ ಮೃತಪಟ್ಟಿದ್ದರು. ತಂದೆ ಚೋಮರವರು ಯಾರನ್ನು ಹತ್ತಿರಕ್ಕೆ ಬಿಡದ ಕಾರಣ ಎ.26 ರಂದು ಮಧ್ಯಾಹ್ನ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತ...

ಕಟ್ಟದಬೈಲು ಸಂತಾನಪ್ರದ‌ ನಾಗಕ್ಷೇತ್ರದಲ್ಲಿ‌ ಶ್ರೀ ನಾಗದೇವರ ಪ್ರತಿಷ್ಠೆ ಹಾಗೂ ದೈವಗಳ ಪುನರ್ ಪ್ರತಿಷ್ಠೆ

0

ಧರ್ಮಸ್ಥಳ; ಸಂತಾನ ಪ್ರದ ನಾಗಕ್ಷೇತ್ರ ಕಟ್ಟದಬೈಲು ಇಲ್ಲಿ ಎ 26 ಶುಕ್ರವಾರದಂದು ಶ್ರೀ ನಾಗದೇವರ ಬಿಂಬ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠೆ ಹಾಗೂ ಡೆಕ್ಕರತ್ತಾಯ (ರಕ್ತೇಶ್ವರಿ ), ಪಂಜುರ್ಲಿ ದೈವಗಳ ಪುನರ್ಪ್ರತಿಷ್ಠೆ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಹಿರಿಯಮುಖಂಡರೂ ವಿಧಾನ ಪರುಷತ್ ಸದಸ್ಯರೂ ಆದ ಪ್ರತಾಪ್ ಸಿಂಹ ನಾಯಕ್ ಅವರು ಶ್ರೀ ನಾಗಸನ್ನಿದಿ ಕಟ್ಟದಬೈಲು ಶ್ರೀ ನಾಗಕ್ಷೇತ್ರಕ್ಕೆ ಆಗಮಿಸಿ ಅರ್ಚಕರಾದ ರವಿ ಕುಮಾರ್ ಭಟ್ ಪಜೀರಡ್ಕ ಅವರಿಂದ ಶ್ರೀ ನಾಗದೇವರ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದೆಯೂ...

ತಾಲೂಕಿನಲ್ಲಿ ಶೇ 81.34 ಮತದಾನ

0

ಬೆಳ್ತಂಗಡಿ; ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದು ತಾಲೂಕಿನಲ್ಲಿ 1,89,296 ಮಂದಿ ಮತ ಚಲಾಯಿಸಿದ್ದು 81.34ಶೇ ಮತದಾನವಾಗಿದೆ.ತಾಲೂಕಿನಲ್ಲಿ 115331ಮಂದಿ ಪುರುಷ ಮತದಾರರಿದ್ದು ಅವರಲ್ಲಿ 93,728ಮತ ಚಲಾಯಿಸಿದ್ದಾರೆ. 1,17,485ಮಂದಿ ಮಹಿಳಾ ಮತದಾರರಿದ್ದು ಅವರಲ್ಲಿ 95,568ಮಂದಿ ಮತಚಲಾಯಿಸಿದ್ದಾರೆ. ಒಟ್ಟು 2,32,817 ಮತದಾರರಿದ್ದು ಅವರಲ್ಲಿ 1,89,296 ಮಂದಿ ಮತ ಚಲಾಯಿಸಿದ್ದು 81.34 ಶೇ ಮತದಾನವಾಗಿದೆ.ಬೆಳಗ್ಗಿನಿಂದಲೇ ತಾಲೂಕಿನ 241ಮತಗಟ್ಟೆಗಳಲ್ಲಿಯೂ ಮತದಾರ ಸರತಿಯ ಸಾಲು ಕಂಡುಬಂದಿತ್ತು. ಜನರು ಉತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಭಾಗಿಗಳಾದರು.

ಶಾಸಕ ಹರೀಶ್ ಪೂಂಜ ಅವರಿಂದ ತಾಲೂಕಿನಾದ್ಯಂತ ಕಾರ್ಯಕರ್ತರ ಭೇಟಿ

0

ಬೆಳ್ತಂಗಡಿ; ಲೋಕಸಭಾ ಚಿನಾವಣೆಯ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ನಡೆಸಿದರು. ತಾಲೂಕಿನ ವಿವಿಧ ಬೂತ್ ಗಳಿಗೆ ಭೇಟಿ ನೀಡಿದ ಶಾಸಕರು ಕಾರ್ಯಕರ್ತರು, ಮುಖಂಡರುಗಳೊಂದಿಗೆ ಮಾತುಕತೆ ನಡೆಸಿದರು. ಬೂತ್ ಗಳಿಗೆ ತರಳಿ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಿದರು.