ಬೆಳ್ತಂಗಡಿ; ಚಾರ್ಮಾಡಿಯಲ್ಲಿ ಕಾಡಾನೆ ರಸ್ತೆಬದಿಯಲ್ಲಿದ್ದ ಮರವನ್ನು ವಿದ್ಯುತ್ ಲೈನಿನ ಮೇಲೆ ದೂಡಿಹಾಕಿದ ಪರಿಣಾಮ ಈ ಪರಿಸರದಲ್ಲಿ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ಶನಿವಾರ ರಾತ್ರಿಯವೇಳೆ ಚಾರ್ಮಾಡಿ ಮಠದಮಜಲು ಸಮೀಪ ಕಾಡಾನೆ ರಸ್ತೆಬದಿಯಲ್ಲಿದ್ದ ಈಚಲು ಮರವನ್ನು ಉರುಳಿಸಿದೆ. ಮರ 33ಕೆ.ವಿ ತ್ರಿನೇತ್ರ ಲೈನಿನ ಮೇಲೆ ಹಾಗೂ 11ಕೆ.ವಿ ಲೈನ್ ಚಾರ್ಮಾಡಿ ಫೀಡರಿನ ಮೇಲೆ ಬಿದ್ದಿದ್ದು ಲೈನಿಗೆ ಹಾನಿಯುಂಟಾಗಿದ್ದು ಕೆಲವು ಬಿಡಿ ಭಾಗಗಳು ಸುಟ್ಟು ಹೋಗಿದೆ. ಮೆಸ್ಕಾಂ ಸಿಬ್ಬಂದಿಗಳು ಪರಿಶ್ರಮಪಟ್ಟು ವಿದ್ಯುತ್ ಪೂರೈಕೆಗೆ ವ್ಹವಸ್ಥೆ ಮಾಡಿದ್ದಾರೆ.
