ಬೆಳ್ತಂಗಡಿ; ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದು ತಾಲೂಕಿನಲ್ಲಿ 1,89,296 ಮಂದಿ ಮತ ಚಲಾಯಿಸಿದ್ದು 81.34ಶೇ ಮತದಾನವಾಗಿದೆ.
ತಾಲೂಕಿನಲ್ಲಿ 115331ಮಂದಿ ಪುರುಷ ಮತದಾರರಿದ್ದು ಅವರಲ್ಲಿ 93,728ಮತ ಚಲಾಯಿಸಿದ್ದಾರೆ. 1,17,485ಮಂದಿ ಮಹಿಳಾ ಮತದಾರರಿದ್ದು ಅವರಲ್ಲಿ 95,568ಮಂದಿ ಮತಚಲಾಯಿಸಿದ್ದಾರೆ. ಒಟ್ಟು 2,32,817 ಮತದಾರರಿದ್ದು ಅವರಲ್ಲಿ 1,89,296 ಮಂದಿ ಮತ ಚಲಾಯಿಸಿದ್ದು 81.34 ಶೇ ಮತದಾನವಾಗಿದೆ.
ಬೆಳಗ್ಗಿನಿಂದಲೇ ತಾಲೂಕಿನ 241ಮತಗಟ್ಟೆಗಳಲ್ಲಿಯೂ ಮತದಾರ ಸರತಿಯ ಸಾಲು ಕಂಡುಬಂದಿತ್ತು. ಜನರು ಉತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಭಾಗಿಗಳಾದರು.