ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನಗರದಲ್ಲಿ ಕಾರ್ಮಿಕರ ರ್ಯಾಲಿ

0

ಬೆಳ್ತಂಗಡಿ; ಮೇದಿನಾಚರಣೆ ಅಂಗವಾಗಿ ಬೆಳ್ತಂಗಡಿಯಲ್ಲಿ ಸಿ.ಐ.ಟಿ.ಯು ನೇತೃತ್ವದಲ್ಲಿ ಕಾರ್ಮಿಕರು ರ್ಯಾಲಿ ನಡೆಸಿದರು.ಬೆಳ್ತಂಗಡಿ ಸಿಐಟಿಯು ಕಚೇರಿಯಿಂದ ಹೊರಟ ಕಾರ್ಮಿಕರ ರ್ಯಾಲಿ ನಗರದಲ್ಲಿ ಸಂಚರಿಸಿತ್ತು. ಕಾರ್ಮಿಕ ದಿನಾಚರಣೆಯ ಘೋಷಣೆಗಳೊಂದಿಗೆ ಕಾರ್ಮಿಕರು ರ್ಯಾಲಿಯಲ್ಲಿ ಭಾಗಿಗಳಾದರು.ಕಾರ್ಮಿಕ ಮುಖಂಡ ಬಿ.ಎಂ ಭಟ್ ರ್ಯಾಲಿಯ ನೇತೃತ್ವ ವಹಿಸಿದ್ದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಕಾರ್ಮಿಕರು ರ್ಯಾಲಿ ಯಲ್ಲಿ ಭಾಗವಹಿಸಿದ್ದರು.

ಚಾರ್ಮಾಡಿಘಾಟಿಯಲ್ಲಿ ಪ್ರಪಾತಕ್ಕೆ ಉರುಳಿದ ವಾಹನ

0

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಇಲ್ಲಿಯ 7 ನೇ ತಿರುವಿನಲ್ಲಿ ಟಾಟಾ ಏಸ್ ವಾಹನವು ಪ್ರಪಾತಕ್ಕೆ ಉರುಳಿ ಬಿದ್ದ ಘಟನೆ ಎ.30ರಂದು ನಡೆದಿದೆ. ಚಿಕ್ಕಮಗಳೂರಿನಿಂದ ಧರ್ಮಸ್ಥಳ ಕಡೆಗೆ ಮೆಣಸಿನಕಾಯಿ ತುಂಬಿಕೊಂಡು ಬರುತ್ತಿದ್ದ ಟಾಟಾ ಏಸ್ ವಾಹನವು ಚಾಲಕ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

0

ಬೆಳ್ತಂಗಡಿ; ಇತಿಹಾಸ ಪ್ರಸಿದ್ಧ ಧಾರ್ಮಿಕ ಸಮನ್ವಯ ಕೇಂದ್ರ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಕಾಜೂರು ಮಖಾಂ ಶರೀಫ್ ನಲ್ಲಿ ಈ‌ ವರ್ಷದ ಉರೂಸ್ ಮಹಾ ಸಂಭ್ರಮವು ಮೇ.3 ರಿಂದ ಆರಂಭಗೊಂಡು ಮೇ.12 ರ ವರೆಗೆ ನಡೆಯಲಿದ್ದು, ಇದರ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಲು ಪೊಲೀಸ್ ಅಧಿಕಾರಿಗಳ ವಿಶೇಷ ಸಭೆಯು ಏ.30 ರಂದು ಕಾಜೂರಿನ ಆಡಳಿತ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಅವರು ಮಾತನಾಡಿ, ಕಾಜೂರು ಉರೂಸ್ ಸಂಭ್ರಮಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅಲ್ಲದೆ...

ಮೇ 1 ಧರ್ಮಸ್ಥಳದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ

0

May 1 52nd Annual Free Mass Marriage Ceremony at Dharmasthala ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮೇ ಒಂದರಂದು ಬುಧವಾರ ಸಂಜೆ ಗಂಟೆ 6.45 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.ಈಗಾಗಲೆ 123 ಜೊತೆ ವಧು-ವರರು ವಿವಾಹಕ್ಕೆ ಹೆಸರು ನೋಂದಾಯಿಸಿದ್ದು ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲಿದ್ದಾರೆವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮಂಗಳಸೂತ್ರವನ್ನು ನೀಡಲಾಗುವುದು.ಬುಧವಾರ ಬೆಳಿಗ್ಯೆಯಿಂದಲೆ ಧರ್ಮಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಧು-ವರರಿಗೆ ಸೀರೆ, ರವಿಕೆಕಣ, ಧೋತಿ ಮತ್ತು ಶಾಲು ವಿತರಿಸುವರು. ಸಂಜೆ 5...

ಟಿ20ವಿಶ್ವಕಪ್ ಭಾರತ ತಂಡ ಪ್ರಕಟ

0

ಹೊಸದಿಲ್ಲಿ: ಟಿ20 ವಿಶ್ವಕಪ್ ಪಂದ್ಯಾವಳಿ ಭಾರತ ತಂಡ ಪ್ರಕಟಗೊಂಡಿದ್ದು, ತಂಡದಲ್ಲಿ ಸಂಜು ಸ್ಯಾಟ್ಸನ್ ಸ್ಥಾನ ಪಡೆದಿದ್ದಾರೆ. ತಂಡವನ್ನು ಬಿಸಿಸಿಐ ಇಂದು ಘೋಷಿಸಿದೆ. ಕನ್ನಡಿಗ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಐಪಿಎಲ್ 2024ರಲ್ಲಿ ಸಂಜು ಸ್ಯಾಮ್ಪನ್ ಅದ್ಭುತ ನಿರ್ವಹಣೆ ತೋರುವ ಮೂಲಕ 2ನೇ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಕೆ.ಎಲ್. ರಾಹುಲ್ ಮತ್ತು ಜಿತೇಶ್ ಶರ್ಮ ಅವರನ್ನು ಹಿಂದಿಕ್ಕಿದ್ದಾರೆ. ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್‌, ಸಂಜು ಸ್ಯಾಮ್ಪನ್, ಶಿವಂ ದುಬೆ, ರವೀಂದ್ರ ಜಡೇಜಾ,...

ಬೆನಕ ಹೆಲ್ತ್ ಸೆಂಟರ್ ನಲ್ಲಿ ಉನ್ನತೀಕರಿಸಿದ ರೇಡಿಯೋಲಜಿ ವಿಭಾಗ ಹಾಗೂ ಸಿ.ಟಿ ಸ್ಕ್ಯಾನಿಂಗ್ ವಿಭಾಗ ಉದ್ಘಾಟನೆ

0

ಉಜಿರೆ: ಬೆನಕ ಹೆಲ್ತ್ ಸೆಂಟರ್ ನಲ್ಲಿ ಉನ್ನತೀಕರಿಸಿದ ರೇಡಿಯೋಲಜಿ ವಿಭಾಗದ ಮತ್ತು ನೂತನ ಸಿ.ಟಿ.ಸ್ಕ್ಯಾನಿಂಗ್ ಪ್ರಾರಂಭೋತ್ಸವ ಎ.30ರಂದು ನಡೆಯಿತು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಮಂಗಳೂರಿನ ಬಲ್ಮಟ ಸಿಟಿ ಸ್ಕ್ಯಾನಿಂಗ್ ಸಂಸ್ಥೆಯ ಡಾ.ಅತಿಂದ್ರ ಮಂಗಳೂರು, ಡಾ.ಗೋಪಾಲಕೃಷ್ಣರವರ ತಂದೆ ಸೀತಾರಾಮ ಭಟ್, ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಗೋಪಾಲಕೃಷ್ಣ ಪ್ರಸ್ತಾವನೆಗೈದರು, ಡಾ.ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವೈದ್ಯರುಗಳು, ವಿವಿಧ ಸಂಘ ಸಂಸ್ಥೆಗಳು ಪ್ರಮುಖರು, ಸಿಬ್ಬಂದಿ ಗಳು ಹಾಗೂ ಇತರರು ಉಪಸ್ಥಿತರಿದ್ದರು.ಪಿ.ಆರ್.ಒ ಎಸ್.ಜಿ ಭಟ್ ಸ್ವಾಗತಿಸಿದರು.

ಡಾ ಜಯಕೀರ್ತಿ ಜೈನ್ ಅವರಿಗೆ ಸನ್ಮಾನ

0

ಬೆಳ್ತಂಗಡಿ;ದಿನಾಂಕ 26.4.24 ರಿಂದ 28.4.24. ರವರೆಗೆ ಇಚಿಲಂಪಾಡಿ ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಜಿನಮಂದಿರದಲ್ಲಿ ನಡೆದ ಧಾಮ ಸಂಪ್ರೋಕ್ಷಣಾ ಪುನಃ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ಹಾಗೂ ಜೀರ್ಣೋದ್ಧಾರ ಸಂದರ್ಭದಲ್ಲಿ ಸಂಪೂರ್ಣವಾಗಿ ಸಹಕರಿಸಿದ ಬೆಳ್ತಂಗಡಿ ರಾಜ್ಯ ಸರ್ಕಾರಿ ನೌಕರರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಧರ್ಮಸ್ಥಳದ ಡಾ. ಕೆ ಜಯಕೀರ್ತಿ ಅವರನ್ನು ಆಡಳಿತ ಸಮಿತಿ ಹಾಗೂ ಸದ್ಧರ್ಮ ಬಂಧುಗಳ ಪರವಾಗಿ ಕಾರ್ಕಳ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸನ್ಮಾನಿಸಿ ಆಶೀರ್ವದಿಸಿದರು

ಕೆ.ಎಸ್.ಆರ್.ಟಿ.ಸಿ ಚಾಲಕನ ಮೇಲೆ ತಂಡದಿಂದ ಹಲ್ಲೆ ; ಪ್ರಕರಣ ದಾಖಲು

0

ಬೆಳ್ತಂಗಡಿ; ಪುದುವೆಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.ಹಲ್ಲೆಗೆ ಒಳಗಾದ ವ್ಯಕ್ತಿ ಬೊಲ್ಮನಾರು ಮನೆ ನಿವಾಸಿ ಹರೀಶ್ ಕುಮಾರ್ (37) ಎಂಬವರಾಗಿದಗದಾರೆ.ಎ 23ರಂದು ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಾಲಗಿದೆ.ಕರ್ತವ್ಯಕ್ಕೆ ರಜೆ ಇದ್ದ ದಿನ ಹರೀಶ್ ಕುಮಾರ್ ಕಳೆಂಜ ಗ್ರಾಮದ ಮಾಣಿಗೇರಿ ಹೊಳೆ ಎಂಬಲ್ಲಿ ಜೀಪು ತೊಳೆಯುತ್ತಿದ್ದ ವೇಳೆ ರಾತ್ರಿ 8.30ಸುಮಾರಿಗೆ ಸ್ಥಳೀಯರಾದ ಪ್ರಸನ್ನ, ಅಚ್ಚು, ಶಿವಪ್ಪ, ಉಮೇಶ್ ಗೌಡ ಎಂಬವರು ಇಲ್ಲಿಗೆ ಬಂದು...

ಪದ್ಮರಾಜ್ ವಿರುದ್ದ ಅಪಪ್ರಚಾರ ಪೊಲೀಸ್ ಆಯುಕ್ತರಿಗೆ ದೂರು

0

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಅಭ್ಯರ್ಥಿ ಪದ್ಮರಾಜ್‌ ಆರ್ ಪೂಜಾರಿ ವಿರುದ್ಧ ಸಾಮಾಜಿಕ ಜಾಲಾ ತಾಣಗಳಲ್ಲಿ ಅಪಪ್ರಚಾರ ಮಾಡಿರುವ ಮತ್ತು ಮಾನಹಾನಿಕರ ಪೋಸ್ಟ್ ಹಾಕಿರುವ 8 ಪ್ರಕರಣಗಳಿಗೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್‌ನ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗವು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.ಕಾಂಗ್ರೆಸ್‌ನ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗದ ಅಧ್ಯಕ್ಷ ಮನೋರಾಜ್ ರಾಜೀವ್ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ...

ಉಜಿರೆಯಲ್ಲಿ ಭಾರತೀಯ ಕಥೋಲಿಕ್ ಯುವ ಸಂಚಲನ ವತಿಯಿಂದ ರಕ್ತದಾನ ಶಿಬಿರ

0

ಬೆಳ್ತಂಗಡಿ;: ಉಜಿರೆಯ ಸಂತ ಅಂತೋನಿ ಚರ್ಚ್ ಇದರ ಭಾ ರತೀಯ ಕೆಥೋಲಿಕ್ ಯುವ ಸಂಚಲನ ಬೆಳ್ತಂಗಡಿ ವಲಯ ಮತ್ತು ಉಜಿರೆ ಘಟಕ,ಮಂಗಳೂರಿನ ರೆಡ್ ಡ್ರಾಪ್ ಹಾಗು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಉಜಿರೆ ಶಾರದಾ ಮಂಟಪದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರವನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಉದ್ಘಾಟಿಸಿ ರಕ್ತದಾನ ಮಾಡುವುದರಿಂದ ಅಗತ್ಯವುಳ್ಳವರಿಗೆ ಜೀವದಾನ ಮಾಡಿದಂತೆ . ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದುದು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಮತ್ತೆ ಹೊಸ ರಕ್ತ ಉತ್ಪಾದನೆಯಾಗಿ ನವ ಚೈತನ್ಯ ಮೂಡುವುದು...