ಬೆಳ್ತಂಗಡಿ : ಪೃಥ್ವಿ ಆಭರಣ ಮಳಿಗೆಯ ಸಿಬ್ಬಂದಿಯಿಂದ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ : ಸಂತೆಕಟ್ಟೆ ಜಯಶ್ರೀ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ 'ಪೃಥ್ವಿ ಆಭರಣ' ಮಳಿಗೆಯ ವ್ಯವಸ್ಥಾಪಕನಾಗಿರುವ ಅಶೋಕ್ ಬಂಗೇರ ಹಾಗೂ ಇತರರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಲ್ಲೆಗೆ ಒಳಗಾದ ವಿಧ್ಯಾರ್ಥಿಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಪೊಲೀಸರಿಗೆ ದೂರು ನೀಡಿದ್ದು ಬೆಳ್ತಂಗಡಿ ಠಾಣೆಯಲ್ಲಿ ಡಿ.16 ರಂದು ಬಿಎನ್ ಎಸ್ u/s 126(2),115(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಮೂವರು ವಿದ್ಯಾರ್ಥಿಗಳು ಡಿ.15 ರಂದು ಸೋಮವಾರ ಶಾಲೆಗೆ ರಜೆ ಹಾಕಿ ಬೆಳ್ತಂಗಡಿ ಪೇಟೆಯಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆಂದು...
ಡಿ.22 ನವೀಕರಣ ಗೊಂಡ ಉಜಿರೆಯ ಸಂತ ಅಂತೋನಿ ಚರ್ಚ್ ನ ಆಶೀರ್ವಚನ
ಪವಾಡ ಪುರುಷರೆಂದು ಜಗತ್ ಪ್ರಸಿದ್ಧರಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ ಉಜಿರೆ ಧರ್ಮಕೇಂದ್ರವು ದುರಸ್ತಿ ಮತ್ತು ನವೀಕರಣಗೊಂಡು ಡಿಸೆಂಬರ್ 22ರಂದು ಆಶೀರ್ವಚನಗೊಳ್ಳಲು ಸಿದ್ಧವಾಗಿದೆ ಎಂದು ಚರ್ಚಿನ ಧರ್ಮಗುರುಗಳಾದ ಫಾ ಆಬೆಲ್ ಲೋಬೋ ಅವರು ತಿಳಿಸಿದ್ದಾರೆ.ಉಜಿರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.1969ರ ತನಕ ಉಜಿರೆ ಕ್ರೈಸ್ತ ವಿಶ್ವಾಸಿಗಳು ಬೆಳ್ತಂಗಡಿಯ ಹೋಲಿ ರಿಡೀಮರ್ ಧರ್ಮಕೇಂದ್ರಕ್ಕೆ ತೆರಳಿ ತಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದರುಅಂದಿನ ದಿನಗಳಲ್ಲಿ ಬೆಳ್ತಂಗಡಿಯ ಧರ್ಮಗುರುಗಳಾಗಿರುವ ವಂದನೀಯ ಇ.ಪಿ.ಡಾಯಸ್ ಸ್ವಾಮಿಯವರು ಈ ಜನರ ಕಷ್ಟಗಳನ್ನು ಮನಗಂಡು ಉಜಿರೆಯಲ್ಲೇ ಒಂದು ದೇವಾಲಯವನ್ನು ನಿರ್ಮಿಸಲು ಯೋಚಿಸಿದರು...
ಬೆಳ್ತಂಗಡಿಯಲ್ಲಿ “ಕೊಂದವರು ಯಾರು” ಬೃಹತ್ ಮಹಿಳಾ ಆಂದೋಲನ
ಬೆಳ್ತಂಗಡಿ: "ಕೊಂದವರು ಯಾರು" ಪ್ರಶ್ನೆಯೊಂದಿಗೆ ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಬೆಳ್ತಂಗಡಿಯಲ್ಲಿ ಆರಂಭಗೊಂಡಿತ್ತು.ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮುಖಂಡೆ ಮಲ್ಲಿಗೆ ಮಾತನಾಡಿ ನ್ಯಾಯ ಕೇಳುವುದು ತಪ್ಪೇ, ಕೊಲೆ ಅತ್ಯಾಚಾರ ನಡೆಸಿದೆ ಆದರೆ ಆರೋಪಿಗಳು ಸಿಗುತ್ತಿಲ್ಲ ಅಂದರೆ ಕೊಂದವರು ಯಾರು ಎಂದು ಪ್ರಶ್ನಿಸಲೇ ಬೇಕಾದ ಅನಿವಾರ್ಯತೆಯಿದೆ ನ್ಯಾಯ ಸಿಗುವ ವರೆಗೂ ಮಹಿಳಾ ಹೋರಾ ನಿರಂತರವಾಗಿ ಮುಂದುವರಿಯುತ್ತದೆ ಎಂದರು. ಹಿರಿಯ ಮಹಿಳಾ ಪರ ಹೋರಾಟಗಾರ್ತಿ ಜ್ಯೋತಿ ಮಾತನಾಡಿ ವೇದವಲ್ಲಿಯಿಂದ ಇಲ್ಲಿಯ ವರೆಗೆ ಮಹಿಳೆಯರ ಕೊಲೆ ಅತ್ಯಾಚಾರ ದೌರ್ಜನ್ಯ ನಡೆದಿದೆ...
ಶಿಶಿಲದಲ್ಲಿ ಬೀಡು ಬಿಟ್ಟಿರುವ ಕಾಡನೆಗಳು ಜನರಲ್ಲಿ ಆತಂಕ
ಬೆಳ್ತಂಗಡಿ; ಶಿಶಿಲ ಗ್ರಾಮದಲ್ಲಿ ಕಳೆದ ಕೆಲದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ನಿರಂತರವಾಗಿ ಕೃಷಿ ಹಾನಿ ಮಾಡುತ್ತಿದೆ.ಶಿಶಿಲದ ಮಲೆಕುಡಿಯರ ಕಾಲೊನಿಯಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ. ಎರಡು ದಿನಗಳಿಂದ ಕಾಡಾನೆ ಇಲ್ಲಿಯೇ ಇದ್ದು ಜನರಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ.ಎರಡು ಮೂರು ಆನೆಗಳು ಇಲ್ಲಿರುವ ಅನುಮಾನ ವ್ಯಕ್ತವಾಗಿದ್ದು ಅರಣ್ಯ ಇಲಾಖೆ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಲು ಕ್ರಮ ಕೂಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ 9 ಶಾಲೆಗಳಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 1. ಕೋಟಿ 71 ಲಕ್ಷ ಅನುದಾನ ಮಂಜೂರು.
ಬೆಳ್ತಂಗಡಿ. ತಾಲೂಕಿನ 9 ಶಾಲೆಗಳಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸರ್ಕಾರ 1. ಕೋಟಿ 71 ಲಕ್ಷ ಅನುದಾನ ಬಿಡುಗಡೆ ಮಾಡಿದೆ.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಕೋಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಜಕೆ, ಸರಕಾರಿ ಪ್ರೌಢ ಶಾಲೆ ನಾವೂರುಸರಕಾರಿ ಪ್ರೌಢ ಶಾಲೆ ಕಲ್ಮಂಜ, ಸರಕಾರಿ ಪ್ರೌಢ ಶಾಲೆ ಮಿತ್ತಬಾಗಿಲು, ಸರಕಾರಿ ಪ್ರೌಢ ಶಾಲೆ ಬಳೆಂಜ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲೇದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆಕರ್ನಾಟಕ ಪಬ್ಲಿಕ್ ಸ್ಕೂಲ್ ಪೂಂಜಾಲಕಟ್ಟೆ- ಶಾಲೆಗಳಲ್ಲಿ,...
ಕಳೆಂಜ 309 ಸರ್ವೆ ನಂಬರ್ ಸರ್ವೆ; ಶಿಶಿಲದಲ್ಲಿ ಪಟ್ಟಾ ಜಾಗದಲ್ಲಿ ಸರ್ವೆಗೆ ಮುಂದಾದ ಅರಣ್ಯ ಇಲಾಖೆ; ಜನರ ಆಕ್ರೋಶ
ಬೆಳ್ತಂಗಡಿ: ಕಳೆಂಜ ಗ್ರಾಮದ ಸರ್ವೇ ನಂಬರ್ 309ರ ಸರ್ವೇ ನಂಬರ್ ನಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯ ಶಿಶಿಲ ಭಾಗದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದೆ ಈ ವೇಳೆ ಶಿಶಿಲ ಗ್ರಾಮದಲ್ಲಿ ಪಟ್ಟಾ ಜಾಗದಲ್ಲಿ ಅರಣ್ಯ ಇಲಾಖೆ ಸರ್ವೆ ನಡೆಸಲು ಮುಂದಾಗಿದ್ದು ಇದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಈ ಹಿನ್ನಲೆಯಲ್ಲಿ ಸ್ಥಳೀಯರು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.ಕಳೆಂಜದ 309 ಸರ್ವೆ ಸಂದರ್ಭದಲ್ಲಿಸಂಧರ್ಭದಲ್ಲಿ ಅರಣ್ಯ ಇಲಾಖೆಯ ಸರ್ವೇ ಅಧಿಕಾರಿಗಳು ಅಲ್ಲಿನ ಪಟ್ಟ ಜಮೀನುಗಳನ್ನು ತಮ್ಮದೆಂದು ಸರ್ವೇ ನಡೆಸಿದ್ದಾರೆ. ಇದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಇದರಿಂದ...
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ ವಿದ್ಯಾನಿಧಿ ಯೋಜನೆ ಲೋಕಾರ್ಪಣೆ
ಬೆಳಾಲು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲೆಯ ಅಭಿವೃದ್ಧಿ ಗಾಗಿ 'ವಿದ್ಯಾನಿಧಿ' ಯೋಜನೆಯನ್ನು ಡಿಸೆಂಬರ್14 ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಲೋಕಾರ್ಪಣೆ ಮಾಡಲಾಯಿತುವಿದ್ಯಾನಿಧಿಯನ್ನು ಲೋಕಾರ್ಪಣೆ ಮಾಡಿದ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿಯವರು ಮಾತನಾಡಿ,' ಶಾಲೆ ಎಂಬ ದೇವಾಲಯದಲ್ಲಿ ಎಲ್ಲಾ ಜಾತಿ,ಜನಾಂಗ,ಧರ್ಮದ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಾರೆ.ಶಾಲೆ ಅಭಿವೃದ್ಧಿ ಹೊಂದಿದಾಗ ಇಡೀ ಊರೇ ಅಭಿವೃದ್ಧಿ ಆಗುತ್ತದೆ.ಹಳೆ ವಿದ್ಯಾರ್ಥಿಗಳ ಈ ಕಾರ್ಯ ಅತ್ಯಂತ ಶ್ರೇಷ್ಠ ವಾದದ್ದು' ಎಂದು ಶುಭ ಹಾರೈಸಿದರು ಮತ್ತು ಮೊದಲ ದೇಣಿಗೆಯಾಗಿ...
ಮಾಚಾರು ಬೈಕ್ ಕಾರಿನ ನಡುವೆ ಅಪಘಾತ
ಉಜಿರೆ: ಇಲ್ಲಿಯ ಮಾಚಾರು ಮಸೀದಿ ಸೇತುವೆಯ ಹತ್ತಿರ ಕಾರು ಮತ್ತು ಬೈಕ್ ಅಪಘಾತ ಸಂಭವಿಸಿದ ಘಟನೆ ಡಿ.15ರಂದು ಬೆಳಿಗ್ಗೆ ನಡೆದಿದೆ. ಮಾಚಾರಿನಿಂದ ಉಜಿರೆ ಕಡೆಗೆ ಬರುತ್ತಿದ್ದ ಬೈಕ್, ಹಾಗೂ ಕಾರು ಉಜಿರೆಯಿಂದ ಬೆಳಾಲು ಕಡೆಗೆ ಹೋಗುವ ಸಂದರ್ಭದಲ್ಲಿ ಚಾಲಕರ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ಬೈಕ್ ಸವಾರನಿಗೆ ಗಾಯಗಳಾಗಿದ್ದುಸ್ಥಳೀಯರ ಸಹಕಾರದೊಂದಿಗೆ ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಸ್ ಹಾಗೂ ಬೈಕ್ ನಡುವೆ ಅಪಘಾತ ವ್ಯಕ್ತಿ ಮೃತ್ಯು
ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಡಂತ್ಯಾರು ಸಮೀಪ ಡಿ.14 ರಂದು ನಡೆದಿದೆ. ಮೃತ ವ್ಯಕ್ತಿ ನೋಯೆಲ್ ಜೋಸೆಫ್ ಪಿಂಟೋ (38) ಎಂಬವರಾಗಿದ್ದಾರೆ. ಇವರು ಮೆಸ್ಕಾಂ ವೇಣೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ತಮ್ಮ ಮನೆಯಲ್ಲಿ ಕೆಲಸದವರಿಗೆ ತಿಂಡಿ ತರಲೆಂದು ಬೆಳಗ್ಗೆ ಮಡಂತ್ಯಾರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಕೆ.ಎಸ್.ಆರ್.ಟಿ. ಸಿ ಬಸ್, ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡುವ ವೇಳೆಗೆ ಬೈಕ್ ಗೆ ಡಿಕ್ಕಿ ಹೊಡೆದಿದೆ ಅಪಘಾತದಲ್ಲಿ ನೋಯೆಲ್...
ಪೂಂಜಾಲಕಟ್ಟೆಯಲ್ಲಿ ಬಸ್ ಹಾಗೂ ಕಾರಿನ ನಡುವೆ ಅಪಘಾತ
ಪುಂಜಾಲಕಟ್ಟೆ; ಮಂಗಳೂರಿನಿಂದ ಧರ್ಮಸ್ಥಳ ಕಡೆ ಬರುತ್ತಿದ್ದ ಬಸ್ ಗೆ ಮಂಗಳೂರು ಕಡೆ ಹೋಗುತ್ತಿದ್ದ ಕ್ರೇಟಾ ಕಾರು ಪುಂಜಾಲಕಟ್ಟೆ ಬಳಿ ಡಿಕ್ಕಿ ಹೊಡೆದಿದ್ದು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ವೇಳೆ ಹಿಂದಿನಿಂದ ಬಂದ ಗೂಡ್ಸ್ ಆಟೋ ಅಪಘಾತ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದಿದೆ. ಘಟನೆಯಲ್ಲಿ ಕಾರು ಮತ್ತು ಬಸ್ ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.














