ಬೆಳ್ತಂಗಡಿ : ಮಿತ್ತಬಾಗಿಲಿನಲ್ಲಿ ಕೋಳಿ ಅಂಕದ ಮೇಲೆ ಬೆಳ್ತಂಗಡಿ ಪೊಲೀಸ್ ದಾಳಿ
ಬೆಳ್ತಂಗಡಿ : ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿ, ಕೋಳಿ ಅಂಕ ನಡೆಸಲು ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ ನೇತೃತ್ವದ ತಂಡ ಆ.4 ರಂದು ಮಧ್ಯಾಹ್ನ 2 ಗಂಟೆಗೆ ದಾಳಿ ಮಾಡಿದ್ದಾರೆ.ಪೊಲೀಸ್ ದಾಳಿ ವೇಳೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಚಂದ್ರಕಾಂತ, ಕುಕ್ಕಾವು ನಿವಾಸಿ ಶೇಖರ, ಕೊಲ್ಲಿ...
ಧರ್ಮಸ್ಥಳ; ಕುಸಿದು ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವು
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಮಂಜುನಾಥ ಹೋಟೆಲ್ ಬಳಿ ಈ ಅಪರಿಚಿತ ವ್ಯಕ್ತಿಯು ಅಸ್ವಸ್ಥ ಸ್ಥಿತಿಯಲ್ಲಿ ಮಲಗಿದ್ದನ್ನು ಸಾರ್ವಜನಿಕರು ಗಮನಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲು ಆ.3 ರಂದು ಬೆಳಿಗ್ಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ವಯಸ್ಸು ಸುಮಾರು 60–65 ವರ್ಷ ಇರಬಹುದು ಎಂದು ಅಂದಾಜಿಸಲಾಗಿದ್ದು, ಮೃತರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಗುರುತು ಅಥವಾ ವಾರಸುದಾರರ ಬಗ್ಗೆ ಮಾಹಿತಿ...
ಬೆಳ್ತಂಗಡಿ; ಪ್ರಚೋದನಾಕಾರಿ ಭಾಷಣ ರಿಯಾಜ್ ಫರಂಗಿ ಪೇಟೆಗೆ ಶಿಕ್ಷೆ ವಿಧಿಸಿದ ಬೆಳ್ತಂಗಡಿ ನ್ಯಾಯಾಲಯ
ಬೆಳ್ತಂಗಡಿ; 2015 ರಲ್ಲಿ ಬೆಳ್ತಂಗಡಿ ತಾಲೂಕು ಕಛೇರಿ ಬಳಿ, ಪಾಪ್ಯುಲ್ಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವಲಯ ಎಂಬ ಸಂಘಟನೆಯ ವತಿಯಿಂದ ನಡೆಯುತ್ತಿದ್ದ ಪ್ರತಿಭಟನಾ ಸಭೆಯಲ್ಲಿ, ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ, ಮಹಮ್ಮದ್ ರಿಯಾಜ್ ಫರಂಗಿಪೇಟೆ ಎಂಬವರ ವಿರುದ್ದ ಆರೋಪ ಸಾಬೀತಾಗಿದ್ದು ಆರೋಪಿಗೆಕಲಂ : 153(A) ಅಡಿಯಲ್ಲಿ 6 ತಿಂಗಳ ಸಾದಾ ಕಾರಗೃಹ ವಾಸ ಮತ್ತು 10,000 ದಂಡ ವಿಧಿಸಿ ಮಾನ್ಯ ಪ್ರಿನ್ಸಿಪಲ್ ಸಿ ಜೆ & ಜೆ ಎಮ್ ಎಫ್ ಸಿ ನ್ಯಾಯಾಲಯ, ಬೆಳ್ತಂಗಡಿ ಅದೇಶ ನೀಡಿದೆ. ದಿನಾಂಕ:...
ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಶಾಸಕ ಹರೀಶ್ ಪೂಂಜಾ ಭೇಟಿ – ವೈಯಕ್ತಿಕ ನೆಲೆಯಲ್ಲಿ ಪರಿಹಾರ
ಬೆಳ್ತಂಗಡಿ : ಕಳೆದ ಎರಡು ದಿನಗಳ ಹಿಂದೆ ಧಾರಕಾರ ಮಳೆಯಿಂದಾಗಿ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸಂಕಷ್ಟ ಎದುರಿಸುತ್ತಿರುವ ಕುಟುಂಬಸ್ಥರಿಗೆ ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದರು. ಗ್ರಾಮದ ಗಾಣದಕೊಟ್ಟಿಗೆ ನಿವಾಸಿ ಗಂಗಾಧರ ಗೌಡ ಎಂಬವರ ಮನೆ ಬಳಿಯ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿತ್ತು. ಮುಂಡಾಜೆ ಗ್ರಾಮದ ನಿವಾಸಿ ಚೋಮು ನಲಿಕೆ ಎಂಬವರ ಮನೆ ಭಾರಿ ಮಳೆಗೆ ಕುಸಿದು ಬಿದ್ದಿತ್ತು. ಸತ್ಯನಪಲ್ಕೆ ನಿವಾಸಿ ಯಮುನಾ […]
ಬೆಳ್ತಂಗಡಿ : ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸರ ದಾಳಿ;ಇಬ್ಬರು ಆರೋಪಿಗಳ ಬಂಧನ, ಸೊತ್ತುಗಳು ವಶಕ್ಕೆ
ಬೆಳ್ತಂಗಡಿ: ಬಂದಾರು ಗ್ರಾಮದ ನಿರ್ಮುಡ ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆ.3ರಂದು ಸಂಜೆ 5.15 ರ ಸುಮಾರಿಗೆ ಬೀಟ್ ಸಿಬ್ಬಂದಿಯಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ಪೊಲೀಸರು ಪಂಚರೊಂದಿಗೆ ನಿರ್ಮುಡ ಪ್ರದೇಶಕ್ಕೆ ದಾಳಿ ನಡೆಸಿದಾಗ ಆರೋಪಿಗಳು ಕೋಳಿಗಳ ಕಾಲುಗಳಿಗೆ ಬಾಳು (ಸಣ್ಣ ಕತ್ತಿ) ಕಟ್ಟಿ ಪರಸ್ಪರ ಕಾದಾಟಕ್ಕೆ ಬಿಡುವುದರ ಮೂಲಕ ಹಣವನ್ನು ಪಣವಾಗಿಟ್ಟುಕೊಂಡು ಸಂಘಟಿತವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿರುವುದು...
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಂದ ಉತ್ತಮ ಶಾಸಕ ಪ್ರಶಸ್ತಿ ಪಡೆದ ಹರೀಶ್ ಪೂಂಜ ಅವರಿಗೆ ಸನ್ಮಾನ
ಬೆಳ್ತಂಗಡಿ; ಸೀರೋ ಮಲಬಾರ್ ಕೆಥೋಲಿಕ್ ಧರ್ಮಪ್ರಾಂತ್ರ್ಯ ಬೆಳ್ತಂಗಡಿ ಯ ಧರ್ಮಧ್ಯಾಕ್ಷರಾದ ಬಿಷಪ್ ಜೇಮ್ಸ್ ಪಟೇರಿಯಲ್ ಹಾಗೂ ಧರ್ಮಪ್ರಾಂತ್ಯದ ಧರ್ಮಗುರುಗಳು ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ವಾರ್ತಾ ವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿಯವರು ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ “ಬೆಸ್ಟ್ ಎಂಎಲ್ಎ” ಅವಾರ್ಡ್ ಪಡೆದ ಶಾಸಕರಾದ ಶ್ರೀ ಹರೀಶ್ ಪೂಂಜರವರನ್ನು ಅವರ ನಿವಾಸಕ್ಕೆ ತೆರಳಿ ಆತ್ಮೀಯವಾಗಿ ಅಭಿನಂದಿಸಿ, ಶುಭ ಹಾರೈಸಿ ಆಶೀರ್ವದಿಸಿದರು.
ಬೆಳ್ತಂಗಡಿ: ಮಾದಕ ವಸ್ತು ಸೇವನೆ & ಮಾರಾಟ ನಾಲ್ವರ ವಿರುದ್ಧ ಪ್ರಕರಣ ದಾಖಲು ; ಓರ್ವನ ಬಂಧನ
ಬೆಳ್ತಂಗಡಿ : ನಗರದ ಜೈನ್ ಪೇಟೆ ಸಮೀಪ ಮಾದಕವಸ್ತು ಸೇವಿಸಿ ಅನುಮಾನಾಸ್ಪದವಾಗಿ ಕುಳಿತಿದ್ದ ಮಾದಕ ವಸ್ತು ಸಾಗಾಟದ ಪ್ರಕರಣದಲ್ಲಿತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆಬಂಧಿತ ಆರೋಪಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆ ನಿವಾಸಿ ಮಹಮ್ಮದ್ ನೌಶಾದ್ (29) ಎಂಬಾತನಾಗಿದ್ದಾನೆ ಗಾಂಜಾ ಮಾರಾಟ ಹಾಗೂ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಈತನ ವಿರುದ್ದ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ವಾರೆಂಟ್ ಜಾರಿಯಾಗಿತ್ತು. ಈತನಿಗೆ ಗಾಂಜಾ ಪೂರೈಕೆ ಮಾಡಿರುವ ಹಮ್ಜತ್ ಖರಾರ್, ಲತೀಫ್ ಹಾಗೂ ಸಿದ್ದೀಕ್ ಅವರ ವಿರುದ್ದವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಅಟೋರಿಕ್ಷಾವೊಂದನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ...
ಪುತ್ತೂರು : ಸಕಲೇಶಪುರದಿಂದ ಮಂಗಳೂರಿಗೆ ಅಕ್ರಮವಾಗಿ ಮರದ ದಿಮ್ಮಿ ಸಾಗಾಟ ಪತ್ತೆ ಆರೋಪಿಗಳ ಬಂಧನ
ಪುತ್ತೂರು : ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿಯ ರಾಷ್ಟ್ರೀಯ ಹೆದ್ದಾರಿ 75 ಯಲ್ಲಿ ಆ.3 ರಂದು ಸಕಲೇಶಪುರದಿಂದ ಅಕ್ರಮವಾಗಿ ಕಾಡು ಜಾತಿಯ ವಿವಿಧ ಮರದ ದಿಮ್ಮಿಗಳನ್ನು KA-13-AA-6340 ನಂಬರಿನ ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಮಂಗಳೂರಿಗೆ ಸಾಗಾಟ ಮಾಡುತ್ತಿರುವುದನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಾಹನ ಮತ್ತು ಮರದ ಮೌಲ್ಯ ಅಂದಾಜು 10 ಲಕ್ಷ ರೂಪಾಯಿ ಅಗಿರುತ್ತದೆ. ಮಂಡ್ಯ ಜಿಲ್ಲೆಯ ಹೊಳೆನರಸೀಪುರ ನಿವಾಸಿ ರೋಹಿತ್.ಎಸ್(20) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಹೆಚ್.ಪಿ.ರಾಘವೇಂದ್ರ ,ಉಪ...
ನಿರ್ಲಕ್ಷ್ಯ ಚಾಲನೆ ಪ್ರಕರಣ: ಆಟೋ ಚಾಲಕನಿಗೆ 6 ತಿಂಗಳ ಜೈಲು,10 ಸಾವಿರ ರೂ. ದಂಡ
ಬೆಳ್ತಂಗಡಿ: ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಪ್ರಕರಣದಲ್ಲಿ ಆಟೋ ಚಾಲಕನಿಗೆ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ನ್ಯಾಯಾಲಯವು ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ. 2022ರ ಏ. 12ರಂದು ರಾತ್ರಿ ಉಜಿರೆ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಬೆಳಾಲು ಕ್ರಾಸ್ ನಲ್ಲಿ ಈ ಅಪಘಾತ ಸಂಭವಿಸಿತ್ತು.ನಾಲ್ಕು ಚಕ್ರದಸ್ಕೂಟಿಯಲ್ಲಿ ಶ್ರೀನಿವಾಸ ಅವರು ಗಿರಿಜಾ ಹಾಗೂ ಗಣೇಶ್ ಅವರನ್ನು ಸಹ ಸವಾರರಾಗಿ ಕೂರಿಸಿಕೊಂಡು ಧರ್ಮಸ್ಥಳದತ್ತ ತೆರಳುತ್ತಿದ್ದರು. ಬೆಳಾಲು ರಸ್ತೆಗೆ ತಿರುಗಲು ಬಲ ಇಂಡಿಕೇಟರ್ ನೀಡಿ...
ಭಾರೀ ಮಳೆ ಹಿನ್ನಲೆ ಆ 4 ಮಂಗಳವಾರ ಶಾಲೆಗಳಿಗೆ ರಜೆ
ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಮುಂದುವರಿದಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಸ್ಟ್ 4 (ಮಂಗಳವಾರ) ದಂದು ಜಿಲ್ಲೆಯ ವಿವಿಧ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಆದೇಶ ಹೊರಡಿಸಿದ್ದಾರೆ.ಆದೇಶದ ಪ್ರಕಾರ, ಮಂಗಳೂರು ಉಪವಿಭಾಗದ ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಮುಲ್ಕಿ ಹಾಗೂ ಉಳ್ಳಾಲ ತಾಲೂಕುಗಳಲ್ಲಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (10ನೇ ತರಗತಿವರೆಗೆ)...















