ಬೆಳ್ತಂಗಡಿ; ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆ

0

ಬೆಳ್ತಂಗಡಿ; ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಣಿಯೂರು ಗ್ರಾಮದ ಪೆರಡಾಳ ಎಂಬಲ್ಲಿ ಆ 8 ರಂದು ಪತ್ತೆಯಾಗಿದೆ.ಮೃತ ವ್ಯಕ್ತಿ ಕೊಯ್ಯೂರು ಗ್ರಾಮದ ಕೊಂಕದಡ್ಕ ನಿವಾಸಿ ಚಿದಾನಂದ ಯಾನೆ ಉಮೇಶ್ ಗೌಡ (52) ಎಂಬವರಾಗಿದ್ದಾರೆ.ಈತ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ಕೆಲಸಕ್ಕೆಂದು ಹೋಗಿದ್ದವರು ಆ 5 ರಂದು ಅಲ್ಲಿಂದ ಮನೆಗೆಂದು ಹೊರಟು ಬಂದಿದ್ದು ಮನೆಗೆ ಬಂದಿರಲಿಲ್ಲ ಇವರಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ನಾಪತ್ತೆಯಾಗಿದ್ದ ಚಿದಾನಂದ ಯಾನೆ ಉಮೇಶ ಅವರ ಮೃತದೇಹ ಆ 8ರಂದು ಕಣಿಯೂರು ಗ್ರಾಮದ ಪೆರಡಾಳ ಎಂಬಲ್ಲಿ ನದಿ...

ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪಡೆದ ಶಾಸಕ ಹರೀಶ್ ಪೂಂಜ ಅವರಿಗೆ ಪ್ರಾಥಮಿಕ ಶಿಕ್ಷಕರ ಸಂಘದಿಂದ ಸನ್ಮಾನ

0

ಬೆಳ್ತಂಗಡಿ: ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ ಅತ್ಯುತ್ತಮ ಶಾಸಕರಾಗಿ ಖಾಸಗಿ ವಾಹಿನಿ ಕರ್ನಾಟಕ ಟಿವಿ ವತಿಯಿಂದ ಇತ್ತೀಚೆಗೆ ನೀಡಲಾದ “ಬೆಸ್ಟ್ ಎಂ.ಎಲ್.ಎ” ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ, ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕರು ನೀಡುತ್ತಿರುವ ಕೊಡುಗೆ ಹಾಗೂ ಜನಪರ ಕಾರ್ಯಗಳನ್ನು ಗುರುತಿಸಿ ಶಿಕ್ಷಕರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ...

ಮೊಗ್ರು ಕಲ್ಲಮಾಡ, ಗುತ್ತಿಲಾರು ದಿ.ಭಾರತಿಯಮ್ಮ ಸ್ಮರಣಾರ್ಥ ನೂತನ ಬಸ್ ತಂಗುದಾಣ ಶಾಸಕ ಹರೀಶ್ ಪೂಂಜಾ ರವರಿಂದ ಲೋಕಾರ್ಪಣೆ

0

ಬೆಳ್ತಂಗಡಿ :ಬಂದಾರು ಗ್ರಾಮಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಕಲ್ಲಮಾಡ ಎಂಬಲ್ಲಿ ಗುತ್ತಿಲಾರು ಡಿ. ಭಾರತಿ ಅಮ್ಮನವರ ಸ್ಮರಣಾರ್ಥವಾಗಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಕೊಡುಗೆಯಾಗಿ ನಿರ್ಮಾಣಗೊಂಡಿರುವ ನೂತನ ಬಸ್ ತಂಗುದಾಣವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಬಂದಾರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಮಾಜಿ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ,ಪದ್ಮುಂಜ ಸಿ.ಎ. ಬ್ಯಾಂಕ್ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ರಘುಪತಿ ಭಟ್ ಅನಾಬೆ, ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ,ನಿರ್ದೇಶಕರಾದ ಪ್ರಭಾಕರ ಗೌಡ ಗುತ್ಯೋಡಿ,ಸ್ಥಳೀಯರಾದ ರಾಮಚಂದ್ರಭಟ್, ಶಂಕರನಾರಾಯಣ ಭಟ್...

ಕಣ್ಣೂರು ಅಮಲ ಭವನದಿಂದ 9 ವರ್ಷದ ಬಳಿಕ ರಾಯಚೂರಿನ ಮನೆ ಸೇರಿದ ಶಿವಾನಿ

0

ಕೇರಳ : ಒಂಬತ್ತು ವರ್ಷಗಳ ಬಳಿಕ ಕೇರಳ ರಾಜ್ಯದ ಕಣ್ಣೂರು ಅಮಲ ಭವನದಿಂದ ಕರ್ನಾಟಕ ಮೂಲದ ಶಿವಾನಿ ಯಾನೆ ಶಿವಮ್ಮ (44) ತಮ್ಮ ಕುಟುಂಬದವರನ್ನು ಸೇರಿಕೊಂಡು ತಾಯ್ನಾಡಿಗೆ ಮರಳಿದ್ದಾರೆ. ಕರ್ನಾಟಕ ನೋಂದಣಿಯ ಕಾರಿನಲ್ಲಿ ಊರಿಗೆ ತೆರಳುವ ಮುನ್ನ ಶಿವಾನಿ, ಕಳೆದ ಒಂಬತ್ತು ವರ್ಷಗಳಿಂದ ತನ್ನೊಂದಿಗೆ ಆತ್ಮೀಯವಾಗಿ ಇದ್ದು ತನಗೆ ಆಶ್ರಯ ನೀಡಿದ್ದ ಅಮಲ ಭವನದ ಸಹೋದರಿಯರು ಹಾಗೂ ನಿವಾಸಿಗಳನ್ನು ಅಪ್ಪಿಕೊಂಡು ಬೀಳ್ಕೊಟ್ಟರು. ಸಹೋದರಿಯರಿಗೆ ಪ್ರೀತಿಯ ಮುತ್ತು ನೀಡಿ, ಕಣ್ಣೀರಿನ ವಿದಾಯದೊಂದಿಗೆ ತನ್ನ ಕುಟುಂಬದವರೊಂದಿಗೆ ತಾಯ್ನಾಡಿನತ್ತ ಪ್ರಯಾಣ ಬೆಳೆಸಿದರು.ಕಣ್ಣೂರು ನಗರದ ಮೇಲೆಚೊವ್ವ ದಲ್ಲಿರುವ ಅಮಲ ಭವನ...

ಕೊಟ್ಟಿಗೆಹಾರ ಭೀಕರ ಅಪಘಾತ; ತುಮಕೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಮೂವರು ಸ್ಥಳದಲ್ಲಿಯೇ ಸಾವು

0

ಚಿಕ್ಕಮಗಳೂರು: ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಬಳಿ ಶನಿವಾರ ಮುಂಜಾನೆ ತುಮಕೂರಿನಿಂದ ಧರ್ಮಸ್ಥಳ ಕ್ಕೆ ಬರುತ್ತಿದ್ದ ಕಾರು ಟ್ಯಾಂಕರ್ ಲಾರಿಗೆ ಡಿಕ್ಕಿಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಳಿಲ್ ಗದ್ದೆ ಗ್ರಾಮದ ಜ್ಞಾನೇಶ್(28), ಮೋಹನ್(30) ಹಾಗೂ ಗುರುಕಿರಣ್(28) ಮೃತಪಟ್ಟ ಯುವಕರು. ಗಂಭೀರವಾಗಿ ಗಾಯಗೊಂಡಿರುವ ಪ್ರೇಮ್ ಹಾಗೂ ಹೃತಿಕ್ ಅವರನ್ನು ತುರ್ತು ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ತುಮಕೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ...

ಪಶ್ಚಿಮ ಘಟ್ಟದ ಜನರ ಬದುಕಿನ ಜೊತೆ ಚೆಲ್ಲಾಟ ಬೇಡ: ಕೇಂದ್ರ ಸರ್ಕಾರ ESA ಕರಡು ಅಧಿಸೂಚನೆಯನ್ನು ಹಿಂಪಡೆಯಲಿ;ಕಸ್ತೂರಿರಂಗನ್ ವರದಿ ಜಾರಿಗೆ ತೀವ್ರ ವಿರೋಧ. ರಕ್ಷಿತ್ ಶಿವರಾಂ

0

ಬೆಳ್ತಂಗಡಿ: ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮತ್ತೆ ಚಾಲನೆ ನೀಡಿರುವುದು ಬೆಳ್ತಂಗಡಿ ತಾಲೂಕಿನ ಜನರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಕರ್ನಾಟಕ ಸರ್ಕಾರದ ವಿರೋಧ ಹಾಗೂ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ತಿಳಿಸಿದ್ದಾರೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳ ಪ್ರದೇಶಗಳನ್ನು ESA ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಕಳಂಜ,...

ಮುದರಂಗಡಿ ಡೇವಿಡ್ ಡಿಸೋಜ ಕೊಲೆ ಪ್ರಕರಣ; ಆರೋಪಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

0

ಉಡುಪಿ: ಜಿಲ್ಲೆಯ ಮುದರಂಗಡಿ ಪೇಟೆಯಲ್ಲಿ ಶುಕ್ರವಾರ (ಆ.07) ಸಂಜೆ ಹಾಡಹಗಲೇ ಉದ್ಯಮಿಯೋರ್ವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿ ಪೇಟೆಯಲ್ಲಿ ಉದ್ಯಮಿ ಡೇವಿಡ್ ಡಿಸೋಜ ಕೊಲೆ ಮಾಡಲಾಗಿತ್ತು. ಇದೀಗ ಪೊಲೀಸರು ಆರೋಪಿ ರಾಜು ಎಂಬಾತನನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ ಘಟನೆಯೂ ನಡೆದಿದೆ. ಆರೋಪಿಯನ್ನು ಕಾಪು ಪಿಎಸ್‌ಐ ತೇಜಸ್ವಿ, ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ತಂಡವು ಬಂಧಿಸಿ ಕರೆತರುತ್ತಿರುವಾಗ ಬೈಂದೂರು ಸಮೀಪ ಒತ್ತಿನೆಣೆ ಪೋಲಿಸರಿಗೆ...

ಮಳೆ ಹಿನ್ನೆಲೆ ಬೆಳ್ತಂಗಡಿ ಸೇರಿದಂತೆ ಪುತ್ತೂರು‌ಬಉಪ ವಿಭಾಗದ  ವಿಭಾಗದಲ್ಲಿ ಶಾಲೆಗಳಿಗೆ ರಜೆ

0

ಬೆಳ್ತಂಗಡಿ; ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ಸೇರಿದಂತೆ‌ ಪುತ್ತೂರು ಉಪವಿಭಾಗ ವ್ಯಾಪ್ತಿಯ ಶಾಲೆಗಳಿಗೆ ಆಗಸ್ಟ್ 8ರಂದು ರಜೆ ನೀಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.ಪುತ್ತೂರು, ಬೆಳ್ತಂಗಡಿ, ಕಡಬ ಮತ್ತು ಸುಳ್ಯ ತಾಲೂಕುಗಳಅಂಗನವಾಡಿಯಿಂದ 12ನೇ ತರಗತಿ (ಪಿಯು)ವರೆಗೆ ರಜೆ ಘೋಷಿಸಲಾಗಿದೆ

ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೊಲೀಸರಿಂದ ಶಾಲಾ ವಾಹನಗಳ ಪರಿಶೀಲನೆ

0

ಬೆಳ್ತಂಗಡಿ : ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಹಾಗೂ ಬಂಟ್ವಾಳ ವಿಭಾಗ ಸಾರಿಗೆ ಇಲಾಖೆ ಜಂಟಿಯಾಗಿ ಬೆಳ್ತಂಗಡಿಯಲ್ಲಿ ವಿವಿದೆಡೆ ಆ 6 ರಂದು ಶಾಲಾ ವಾಹನಗಳ ತಪಸಾಣೆ ನಡೆಸಿದ್ದಾರೆ ರಾಷ್ಟ್ರೀಯ ಹೆದ್ದಾರಿ 73ರಬೆಳ್ತಂಗಡಿ ಮತ್ತು ಉಜಿರೆ ಭಾಗದಲ್ಲಿ ವಾಹನಗಳ ತಪಾಸಣೆ ನಡೆಸಿದ ಅಧಿಕಾರಿಗಳು ಶಾಲಾ ವಾಹನಗಳ ಸರ್ಮಪಕ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಇದಾಗಿಯೂ ಚಾಲಕರಿಗೆ ಸುರಕ್ಷತೆ, ವಾಹನಗಳ ಪಿಟ್ನೆಸ್, ಸಂಚಾರ ನಿಯಮಗಳು ಬಗ್ಗೆ ಮಾಹಿತಿಯನ್ನು ವಿವರಿಸಿದರು. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್.ಪಿ ತಂಡ ಮತ್ತು ಬಂಟ್ವಾಳ ಸಾರಿಗೆ ಇಲಾಖೆ ಇನ್ಸ್‌ಪೆಕ್ಟರ್ ಪ್ರಮೋದ್...

ಭೂಪರಿವರ್ತನೆ ಯಾಗದ ಜಾಗಕ್ಕೆ ಉದ್ಯಮ ಲೈಸೆನ್ಸ್ – ಲೋಕಾಯುಕ್ತ ಠಾಣೆಯಲ್ಲಿ ಪಿಡಿಒ ವಿರುದ್ಧ ದೂರು ದಾಖಲು

0

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಒ) ಭೂ ಪರಿವರ್ತನೆಯಾಗದ ಜಾಗದಲ್ಲಿ ಹೊಟೇಲ್ ಉದ್ಯಮ ನಡೆಸಲು ಕಾನೂನು ಬಾಹಿರವಾಗಿ ವಾಣಿಜ್ಯ ವ್ಯವಹಾರದ ಪರವಾನಿಗೆ ನೀಡಿರುವ ಬಗ್ಗೆ ಆ.6ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸ.ನಂ: 164/2B1B ರಲ್ಲಿ 0.01.50 ಎಕ್ರರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದೇ ವಾಣಿಜ್ಯ ವ್ಯವಹಾರದ ಉದ್ದೇಶಕ್ಕಾಗಿ ಜಾಗದಲ್ಲಿ 30.09.2025 ರಂದು ಲಾಯಿಲಾ ಗ್ರಾಮ ಪಂಚಾಯತ್ ನಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆಗಿದ್ದ ಶ್ರೀನಿವಾಸ ಡಿ.ಪಿ. ಇವರು...