ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಜ್ವಲ್ ರೇವಣ್ಣ ಪೊಲೀಸ್ ವಶಕ್ಕೆ
ಬೆಂಗಳೂರು: ಲೈಂಗಿಕ ದೌರ್ಜನ್ಯ ಅಶ್ಲೀಲ ವಿಡಿಯೋ, ಪೆನ್‌ಡ್ರೈವ್ ಸೇರಿ ಮೂರು ಪ್ರಕರಣಗಳ ಸಂಬಂಧ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ಮಧ್ಯರಾತ್ರಿಗೆ ಬೆಂಗಳೂರಿಗೆ ಆಗಮಿಸಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ವಿಶೇಷ ತನಿಖಾ ದಳ(ಎಸ್‌ಐಟಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲೋಕಸಭಾ ಚುನಾವಣೆಯ ದಿನ (ಎ.26)ದಂದು ಮತಚಲಾಯಿಸಿ ಎ.27ರ ಬೆಳಗ್ಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದ ಸಂಸದ ಪ್ರಜ್ವಲ್ ರೇವಣ್ಣ ಬರೋಬ್ಬರಿ 34 ದಿನಗಳ ಬಳಿಕ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಮೇ 30ರ ಮಧ್ಯಾಹ್ನದ ವೇಳೆಗೆ ಜರ್ಮನಿಯ ಮ್ಯೂನಿಕ್ ನಗರದಿಂದ ಲುಫ್ತಾನ್ನಾ ಏರ್ ಲೈನ್ಸ್...
ಬೆಳ್ತಂಗಡಿಯಲ್ಲಿ ಕಾರ್ಮಿಕ ದಿನಾಚರಣೆ ಹಾಗೂ ಕಾನೂನು ಮಾಹಿತಿ ಕಾರ್ಯಕ್ರಮ
ಬೆಳ್ತಂಗಡಿ; ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ ವಕೀಲರ ಸಂಘ (ರಿ) ಬೆಳ್ತಂಗಡಿ ಹಾಗೂ ಸ್ಪಂದನ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಬೆಳ್ತಂಗಡಿ ಹಾಗೂ ಕಾರ್ಮಿಕ ಇಲಾಖೆ ಇವರ ಜಂಟಿ ಆಶಯದಲ್ಲಿ ಮೇ 30 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಮಹತ್ವ ಮತ್ತು ವಿಶ್ವ ತಂಬಾಕು ನಿಷೇಧ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತಾಡಿದ ಬೆಳ್ತಂಗಡಿ ನ್ಯಾಯಾಲಯದ...
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ರಜತ ಮಹೋತ್ಸವ ಧರ್ಮಸ್ಥಳದಲ್ಲಿ ಉದ್ಘಾಟನೆ, “ಮಹಿಳೆಯರಿಗೆ ಪುರುಷರಿಂದ ಆಶ್ರಯ ಬೇಕಾಗಿಲ್ಲ, ಸಕಾಲಿಕ ಪ್ರೋತ್ಸಾಹ ಬೇಕಾಗಿದೆ” ಡಾ.ಹೆಗ್ಗಡೆ
ಉಜಿರೆ: ಮಹಿಳೆಯರು ಬುದ್ಧಿವಂತರಾಗಿದ್ದು, ಸದಾ ಜಾಗೃತರಾಗಿರುತ್ತಾರೆ. ಅವರಲ್ಲಿ ಅದ್ಭುತ ಶಕ್ತಿ ಇದೆ. ಆದುದರಿಂದಲೆ ಇಂದು ಅವರು ತಮಗೆ ಸಿಗುವ ಎಲ್ಲಾ ಅವಕಾಶ, ಸೌಲಭ್ಯಗಳ ಸದುಪಯೋಗ ಪಡೆದು ಸ್ವಾವಲಂಬಿಗಳಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರಿಗೆ ಪುರುಷರಿಂದ ಆಶ್ರಯ ಬೇಕಾಗಿಲ್ಲ. ಸದಾ ಸಕಾಲಿಕ ಪ್ರೋತ್ಸಾಹ, ಪ್ರೇರಣೆ ಅಗತ್ಯವಾಗಿದೆ.ಕುಟುಂಬ ಮತ್ತು ಸಮಾಜದ ಸುಗಮ ನಿರ್ವಹಣೆಯಲ್ಲಿ ಮಹಿಳೆಯರು...
ನೆಲಮಂಗಲದಲ್ಲಿ ಅಪಘಾತ ಎಂಜಿರದ ಯುವಕ ಮೃತ್ಯು
ಬೆಳ್ತಂಗಡಿ; ನೆಲಮಂಗಲದಲ್ಲಿ ನಡೆದ ಅಪಘಾತದಲ್ಲಿ ಎಂಜಿರ ನಿವಾಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.ಎಂಜಿರ ನಿವಾಸಿ ಸ್ಕರಿಯ ಎಂಬವರ ಪುತ್ರ ಥೋಮಸ್ ಎಂಬಾತನೇ ಮೃತ ಯುವಕನಾಗಿದ್ದಾನೆ.ಇಂದು ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಥಾಮಸ್ ತಮ್ಮ ಮನೆಯಿಂದ ಬೆಂಗಳೂರಿಗೆ ಬೈಕ್ ನಲ್ಲಿ ಹೊರಟಿದ್ದ ನೆಲಮಂಗಲದಲ್ಲಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಥಾಮಸ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ದಿನೇಶ್ ಅಮೀನ್ ಮಟ್ಟು ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ಒತ್ತಾಯಿಸಿ ಅಭಿಯಾನ
ಮಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ ನ ಹನ್ನೊಂದು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅವಕಾಶ ಪಡೆಯಲು ಈಗಾಗಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಲಾಬಿ ಶುರುವಾಗಿದೆ.ಆದರೆ ಇದೀಗ ಅದರ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ, ದಿನೇಶ್ ಅಮಿನ್ ಮಟ್ಟು ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಬಲವಾದ ಆಗ್ರಹ ಕರಾವಳಿ ಜಿಲ್ಲೆಗಳಿಂದ ಕೇಳಿ ಬಂದಿದೆ. ದಿನೇಶ್ ಅಮೀನ್ ಮಟ್ಟು ಅಭಿಮಾನಿ ಬಳಗ ಎಂದು ಪೋಸ್ಟರ್ ಗಳನ್ನು ಸಮಾಜಿಕ ಜಾಲತಾಣದಮೂಲಕ ಹರಿಬಿಡಲಾಗಿದೆ. , ಸಿದ್ದರಾಮಯ್ಯ ಅವರು...
ಕೊಕ್ಕಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಬೆಳ್ತಂಗಡಿ; ಕೊಕ್ಕಡ ಸೌತಡ್ಕದ ಬಳಿಯ ಗೇರು ತೋಟದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.ಸ್ಥಳೀಯರು ಇದನ್ನು ಗಮನಿಸಿದ್ದು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಎರಡುಮೂರು ದಿನಗಳ ಹಿಂದೆ ಈ ವ್ಯಕ್ತಿಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಅನುಮಾನಿಸಲಾಗಿದ್ದು ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ.ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ.ಕೊಳೆತ ಸ್ಥಿತಿಯಲ್ಲಿದ್ದಮೃತದೇಹವನ್ನು ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳಾದ ಸಚಿನ್ ಭಿಡೆ...
ಮಾಲಾಡಿಯಲ್ಲಿ ಅಂಬೇಡ್ಕರ್ ಜಯಂತಿ
ಬೆಳ್ತಂಗಡಿ; ಭಾರತರತ್ನ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣಾ ಸಮಿತಿ ಮಾಲಾಡಿ, ಇದರ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಮೇ 26 ರಂದು ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಬಹಳ ವಿಜ್ರಂಬಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಸೇಕ್ರೇಡ್ ಹಾಟ್೯ ಕಾಲೇಜಿನ ಪ್ರಾಂಶುಪಾಲರಾದ ಪ್ರೋ ಅಲೆಕ್ಸ್ ಐವನ್ ಸಿಕ್ವೇರಾ ಇವರು ಸಂವಿಧಾನದ ಪೀಠಿಗೆ ಓದುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಡಾ! ನಿಯಾಜ್ ಪಣಕಜೆ, ಶ್ರೀ ರಾಮ್ ಫೈನಾನ್ಸ್ ನ ಮಾಜಿ ಕಾರ್ಯಕಾರಿ ನಿರ್ದೇಶಕರಾದ ನಿತ್ಯಾನಂದ ಹೆಗ್ಡೆ, ಬೆಳ್ತಂಗಡಿ ಭೂ ನ್ಯಾಯ ಮಂಡಳಿಯ ಸದಸ್ಯರಾದ ಬಾಬು...
ಶಿಬಾಜೆಯಲ್ಲಿ ಕಾಡಿಗೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ 6ದಿನಗಳ ಬಳಿಕ ಪತ್ತೆ
ಬೆಳ್ತಂಗಡಿ: ಕಳೆದ ಮಂಗಳವಾರ ಕಟ್ಟಿಗೆ ತರಲೆಂದು ಮನೆ ಸಮೀಪದ ಗುಡ್ಡೆಗೆ ಹೋಗಿದ್ದ ಶಿಬಾಜೆ ಗ್ರಾಮದ ಐoಗುಡ ನಿವಾಸಿ ವಾಸು ರಾಣ್ಯ(83) ಆರು ದಿನಗಳ ಬಳಿಕ ತಮ್ಮ ಮನೆ ಸೇರಿಕೊಂಡಿದ್ದಾರೆ. ಶಿಬಾಜೆ ಗ್ರಾಮದ ವಾಸು ರಾಣ್ಯ ಎಂಬವರು ಮೇ 21ರ ಬೆಳಗ್ಗೆ ಕೈಯಲ್ಲೊಂದು ಕತ್ತಿ ಹಿಡಿದು, ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಮನೆಗೆ ಬರದೇ ಇದ್ದಾಗ, ಸ್ಥಳೀಯರ ಜತೆ ಹುಡುಕಾಟ ನಡೆಸಿದರು. ಸುಮಾರು ಐದು ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು...
ಯಡಿಯೂರಪ್ಪ ವಿರುದ್ದ ಪೋಕ್ಸೋ ದೂರು ಸಲ್ಲಿಸಿದ ಮಹಿಳೆಯ ಅನೀರೀಕ್ಷಿತ ಅನುಮಾನಾಸ್ಪದ ಸಾವು ತನಿಖೆಗೆ ದಲಿತ ಹಕ್ಕು ಸಮಿತಿ ಆಗ್ರಹ
ಬೆಳ್ತಂಗಡಿ; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತನ್ನ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೋಲೀಸ್ ಠಾಣೆಗೆ ದೂರು ದಾಖಲಿಸಿ ಪ್ರಕರಣದಾಖಲಾಗಿರುವಾಗ ದೂರು ನೀಡಿದ ಮಹಿಳೆಯ ಸಾವು ಅನುಮಾನಕ್ಕೆಡೆಮಾಡಿದೆ ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ದಲಿತ ಹಕ್ಕು ಸಮಿತಿಯ ಬೆಳ್ತಂಗಡಿ ತಾಲೂಕು ಮುಖಂಡರೂ, ರಾಜ್ಯ ಸಮಿತಿ ಸದಸ್ಯೆಯೂ ಆಗಿರುವ ಈಶ್ವರಿ ಪದ್ಮುಂಜ ಅವರು ಒತ್ತಾಯಿಸಿದ್ದಾರೆ.ಅವರು ಈ ಬಗ್ಗೆ ಸರಕಾರಕ್ಕೆ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಮೂಲಕ ಮನವಿ ಮಾಡಿ ನೀಡಿದ ಬಳಿಕ ಮಾತನಾಡಿದರು. ಮರಣ ಹೊಂದಿದ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನೂ ಮಾಡದೆ...
ಕಡಿರುದ್ಯಾವರದಲ್ಲಿ ಮುಂದುವರಿದ ಒಂಟಿ ಸಲಗ ಸಂಚಾರ
ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹಲವೆಡೆ ಸೋಮವಾರ ರಾತ್ರಿ ಒಂಟಿ ಸಲಗನ ಸಂಚಾರ ಮುಂದುವರಿದಿದೆ.ಇಲ್ಲಿನ ಮಿತ್ತಕಟ್ಟಾಜೆ ಮೋಹನ ನಾಯ್ಕ ಎಂಬವರ ಮನೆಯಂಗಳಕ್ಕೆ ಬಂದು ಬಾಳೆ ಗಿಡ ತಿಂದು ಹಾಕಿದ ಬಳಿಕ ಸಲಗ ಫಣಿಕಲ್ಲು ಕಡೆ ಮುಂದುವರೆದಿದೆ.ಅಲ್ಲಿ ರಾಘವೇಂದ್ರ ಪಟವರ್ಧನ್ ರವರ ತೋಟಕ್ಕೆ ಕಾಡಾನೆ ಬರುತ್ತಿದ್ದಂತೆ ಮನೆಯವರಿಗೆ ತಿಳಿದು ಬಂದ ಕಾರಣ ಸ್ಥಳೀಯರು ಸೇರಿ ಆನೆಯನ್ನು ಓಡಿಸಿ, ಬೆಳಗಿನವರೆಗೆ ಗಸ್ತು ತಿರುಗಿದ ಕಾರಣ ಯಾವುದೇ ಕೃಷಿಹಾನಿ ಸಂಭವಿಸಿಲ್ಲ. ಸಲಗ ಇಲ್ಲಿಗೆ ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.ಭಾನುವಾರ ರಾತ್ರಿ ಕಾಡಾನೆ ಇದೇ ಗ್ರಾಮದ ಬಸವದಡ್ಡು...















