ಬೆಳ್ತಂಗಡಿ; ಭಾರತರತ್ನ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣಾ ಸಮಿತಿ ಮಾಲಾಡಿ, ಇದರ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಮೇ 26 ರಂದು ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಬಹಳ ವಿಜ್ರಂಬಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸೇಕ್ರೇಡ್ ಹಾಟ್೯ ಕಾಲೇಜಿನ ಪ್ರಾಂಶುಪಾಲರಾದ ಪ್ರೋ ಅಲೆಕ್ಸ್ ಐವನ್ ಸಿಕ್ವೇರಾ ಇವರು ಸಂವಿಧಾನದ ಪೀಠಿಗೆ ಓದುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಡಾ! ನಿಯಾಜ್ ಪಣಕಜೆ, ಶ್ರೀ ರಾಮ್ ಫೈನಾನ್ಸ್ ನ ಮಾಜಿ ಕಾರ್ಯಕಾರಿ ನಿರ್ದೇಶಕರಾದ ನಿತ್ಯಾನಂದ ಹೆಗ್ಡೆ, ಬೆಳ್ತಂಗಡಿ ಭೂ ನ್ಯಾಯ ಮಂಡಳಿಯ ಸದಸ್ಯರಾದ ಬಾಬು ಎರ್ಮೆತ್ತೋಡಿ, ಮಾಲಾಡಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ಗುರುಪ್ರಸಾದ್, ಸಾವಿತ್ರಿ ಬಾ ಪುಲೆ ತಂಡದ ಅಧ್ಯಕ್ಷರಾದ ಗುಲಾಬಿ ಇವರುಗಳು ಉಪಸ್ಥಿತರಿದ್ದು ಶುಭಹಾರೈಸಿದರು.

ಕಾರ್ಯಕ್ರಮದ ನಡುವೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿ ಪಡೆದ ರುಕ್ಮಯ ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಸುಶ್ಮೀತಾ ಸ್ವಾಗತಿಸಿ, ಗೌತಮಿ ಧನ್ಯವಾದವಿತ್ತರು. ಸುನೀತಾ ಇವರು ಕಾರ್ಯಕ್ರಮ ನಿರೂಪಿಸಿದರು.
