ಕಾಂತಾರ ಸಿನಿಮಾದ ಅಭಿನಯಕ್ಕೆ ರಿಷಬ್ ಶೆಟ್ಟಿಗೆ ಒಲಿದ ರಾಷ್ಟ್ರ ಪ್ರಶಸ್ತಿ
ಬೆಂಗಳೂರು;ಕಾಂತಾರ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ಕನ್ನಡದ ಹೆಮ್ಮೆಯ ನಟ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟನೆಗಾಗಿನ ರಾಷ್ಟ್ರಪ್ರಶಸ್ತಿ ಪ್ರಾಪ್ತಿಯಾಗಿದೆ.ಕನ್ನಡ ಚಿತ್ರರಂಗದ ದಶಕಗಳ ರಾಷ್ಟ್ರಪ್ರಶಸ್ತಿ ಬರವನ್ನು ನಟ ರಿಷಬ್ ಶೆಟ್ಟಿ ಇದೀಗ ನೀಗಿಸಿದ್ದಾರೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆಕನ್ನಡ ಸಿನಿಮಾ ನಟರೊಬ್ಬರಿಗೆ ರಾಷ್ಟ್ರಪ್ರಶಸ್ತಿ ದೊರೆತು ದಶಕಗಳೇ ಆಗಿಬಿಟ್ಟಿದ್ದವು. ಆ ಬರವನ್ನು ಈಗ ನೀಗಿದ್ದು, ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಈ ವರ್ಷ...
ಕೂಲಿ ಕಾರ್ಮಿಕ ಕುಸಿದು ಬಿದ್ದು ಸಾವು
ಬೆಳ್ತಂಗಡಿ: ಕೂಲಿ ಕಾರ್ಮಿಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಅರಸಿನಮಕ್ಕಿಯಲ್ಲಿ ಗುರುವಾರ ಸಂಜೆ ನಡೆದಿದೆ. ಬಿ.ಎಸ್.ಎನ್. ಎಲ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಶಿವಮೊಗ್ಗದ ಹೊನ್ನಳ್ಳಿಯಿಂದ ಐವರು ಕಾರ್ಮಿಕರು ಬಂದಿದ್ದು ಇವತ್ತು ಅರಸಿನಮಕ್ಕಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಸತೀಶ್ (44) ಕುಳಿತಲ್ಲೇ ಕುಸಿದು ಬಿದಿದ್ದು ತಕ್ಷಣ ಇತರರು ಕೊಕ್ಕಡ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಪರೀಕ್ಷಿಸಿ ತಕ್ಷಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕೊಂಡು ಹೋಗಲು ಸೂಚಿಸಿದ್ದಾರೆ. ಅದರೆ ಬೆಳ್ತಂಗಡಿ ಆಸ್ಪತ್ರೆಗೆ ತರುವಷ್ಟರಲ್ಲಿ ವ್ಯಕ್ತಿ ಮೃತ ಪಟ್ಟಿರುವುದಾಗಿ...
ಸ್ವಾತಂತ್ರ್ಯ ದಿನಾಚರಣೆಯ ಧ್ವಜ ಇಳಿಸುವ ವೇಳೆ ವಿದ್ಯುತ್ ತಗುಲಿ ಚರ್ಚ್ ಫಾದರ್ ಮೃತ್ಯು
ಕಾಸರಗೋಡು; ಸ್ವಾತಂತ್ರ್ಯ ದಿನಾಚರಣೆಗೆ ಹಾರಿಸಲಾಗಿದ್ದ ಧ್ವಜ ಇಳಿಸುವ ವೇಳೆ ಧ್ವಜ ಸ್ತಂಭ ವಿದ್ಯುತ್ ಲೈನಿಗೆ ತಾಗಿ ವಿದ್ಯುತ್ ಶಾಕ್ ಹೊಡೆದು ಕೇರಳದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದಲ್ಲಿರುವ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಕುಡಿಲಿಲ್ ಮ್ಯಾಥ್ಯು (ಶಿನ್ಸ್ ಅಗಸ್ಟಿನ್) (29) ಮೃತಪಟ್ಟ ಘಟನೆ ಸಂಭವಿಸಿದೆ. ಚರ್ಚ್ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಧ್ವಜಾರೋಹಣ ಮಾಡಲಾಗಿತ್ತು ಸಂಜೆಯ ವೇಳೆ ಧ್ವಜವನ್ನು ಇಳಿಸುತ್ತಿದ್ದಾಗ ಕಬ್ಬಿಣದ ಧ್ವಜ ಸ್ತಂಭ ಮಗುಚಿ ಬಿದ್ದಿದೆ ಮಗುಚಿ ಬಿದ್ದ ಧ್ವಜ ಸ್ತಂಭವು ಹತ್ತಿರದ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು ಇದರ ಪರಿಣಾಮವಾಗಿ ವಿದ್ಯುತ್ ಹರಿದು...
ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ಬೆಳ್ತಂಗಡಿ ವತಿಯಿಂದ: ವಿದ್ಯಾನಿಧಿ ಯೋಜನೆಗೆ ಕೊಡುಗೆ
ಬೆಳ್ತಂಗಡಿ: ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ದೇವಾಲಯ ಇದರ ನೇತೃತ್ವದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಬೆಳ್ತಂಗಡಿ ಧರ್ಮದ್ಯಕ್ಷಧೀಕ್ಷೆಯ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಇವರಿಗೆ ಧರ್ಮ ಕೇಂದ್ರದ ವತಿಯಿಂದ ರೂ .25000/- ಚೆಕ್ಕ್ ಅನ್ನು ಹಸ್ತಾಂತರಿಸಿ, ಡಿ.ಕೆ.ಆರ್.ಡಿ.ಎಸ್ ವಿದ್ಯಾನಿಧಿಗೆ ನೆರವನ್ನು ನೀಡಿದರು.ಪ್ರಧಾನ ದೇವಾಲಯದ ಧರ್ಮಗುರುಗಳಾದ ವಂದನೀಯ ಫಾದರ್ ತೋಮಸ್ ಕಣ್ಣಂಗಲ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಹಕರಿಸಿದರು.
ಬೆಳ್ತಂಗಡಿ ಗ್ರಾಮೀಣ ಮತ್ತು ನಗರ ಕಾಂಗ್ರೆಸ್ ಎಸ್ ಸಿ ಘಟಕದ ನೂತನ ಅಧ್ಯಕ್ಷರ ಮತ್ತು ಜಿಲ್ಲಾ ಉಪಾಧ್ಯಕ್ಷರ ನೇಮಕ
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಎಸ್.ಸಿ ಘಟಕದ ಅಧ್ಯಕ್ಷರು ಮತ್ತು ಜಿಲ್ಲಾ ಉಪಾಧ್ಯಕ್ಷರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ .ಸಿ ಘಟಕದ ಅಧ್ಯಕ್ಷರಾದ ಶೇಖರ ಕುಕ್ಕೆಡಿ ಇವರು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಮಾಡಿದ್ದಾರೆ. ಬೆಳ್ತಂಗಡಿ ಗ್ರಾಮೀಣ ಎಸ್ ಸಿ ಘಟಕದ ಅಧ್ಯಕ್ಷರಾಗಿ ನೇಮಿರಾಜ್ ಕಿಲ್ಲೂರು ಮತ್ತು ನಗರ ಸಮಿತಿಯ ಅಧ್ಯಕ್ಷರನ್ನಾಗಿ ವಿಜಯ್ ಕುಮಾರ್ ಬಜಿರೆ.ಮತ್ತು ಜಿಲ್ಲಾ ಎಸ್.ಸಿ...
ಡಿ. ಕೆ.ಆರ್.ಡಿ.ಎಸ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಬೆಳ್ತಂಗಡಿ;ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ಇದರ ನೇತೃತ್ವದಲ್ಲಿ ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳಿಗೋಸ್ಕರ ನಡೆಸುತ್ತಿರುವ ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಸ್.ಎಂ.ವೈ.ಎಂ ಧರ್ಮಪ್ರಾಂತ್ಯ ಬೆಳ್ತಂಗಡಿ, ಕೃಪ ಸ್ವ-ಸಹಾಯ ಸಂಘ ತೋಟತ್ತಾಡಿ ಇವುಗಳ ಸಹಕಾರದೊಂದಿಗೆ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಎಸ್.ಎಂ.ವೈ .ಎಂ, ಮಾತೃವೇದಿ, ಫ್ಯಾಮಿಲಿ ಅಪೋಸ್ಟೆಲೆಟ್ ಬೆಳ್ತಂಗಡಿ ಈ ಸಂಘಟನೆಗಳ ನಿರ್ದೇಶಕರಾದ ವಂ.ಫಾದರ್ ಜೋಬಿ ಪುಲ್ಲಾಟ್ ಇವರು ಆಗಮಿಸಿ, ಶೋಷಿತ ವರ್ಗದವರಿಗೋಸ್ಕರ ಸಂಸ್ಥೆಯು ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಅಭಿನಂದಿಸಿದರು, ಜೀವನದಲ್ಲಿ ಪರಸ್ಪರ ಜೊತೆಯಾಗಿ ನಿಲ್ಲುವ ಮೂಲಕ...
ಸಮುದಾಯ ಭವನಕ್ಕೆ ಸರಕಾರದಿಂದ ಅನುದಾನ ಒದಗಿಸುವಂತೆ ತೋಟತ್ತಾಡಿ ಗುರುನಾರಾಯಣ ಸೇವಾ ಸಂಘದಿಂದ ರಕ್ಷಿತ್ ಶಿವರಾಂ ಅವರಿಗೆ ಮನವಿ
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ ) ತೋಟತ್ತಾಡಿ,ಚಿಬಿದ್ರೆ ಇದರ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂದಾಜು 80 ಲಕ್ಷದ ಸಮುದಾಯ ಭವನಕ್ಕೆ ಕರ್ನಾಟಕ ಸರ್ಕಾರದಿಂದ ಗರಿಷ್ಠ ಅನುದಾನ ನೀಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮೂಲಕ ಸರ್ಕಾರಕ್ಕೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ತೋಟತ್ತಾಡಿ ಇದರ ಅಧ್ಯಕ್ಷರಾದ ಸನತ್ ಕುಮಾರ್ ಮೂರ್ಜೆ ನಿಯೋಗದಿಂದ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ಹರೀಶ್ ಪೂಜಾರಿ ಚಿಬಿದ್ರೆ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಹೊಸಮನೆ, ಯುವ ಬಿಲ್ಲವ...
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಕೊಡುಗೆ ಮಹತ್ತರದ್ದು.ರಕ್ಷಿತ್ ಶಿವರಾಂ
ಬೆಳ್ತಂಗಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಮಹತ್ತರ ಪಾತ್ರವಹಿಸಿದ್ದು ಅದು ಅಪಾರ ಕೊಡುಗೆ ನೀಡಿದೆ..ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಕೊಡುಗೆ ಶೂನ್ಯ. ಭಾರತವನ್ನು ರಕ್ಷಣೆ ಮಾಡುವ ಬದಲು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕಮಲ ಮುಖಂಡರು ನಕಲಿ ದೇಶ ಭಕ್ತರು. ಧರ್ಮ, ಜಾತಿಗಳ ನಡುವೆ ಜಗಳ ಹಚ್ಚಿ, ವಿಷ ಬೀಜ ಬಿತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿ ಆವರಣದಲ್ಲಿ, 78ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ...
86 ಸಿಮ್ ಗಳೊಂದಿಗೆ ಬೆಳ್ತಂಗಡಿಯ ಇಬ್ಬರು ಯುವಕರನ್ನು ಬಂಧಿಸಿದ ಮಂಗಳೂರು ಪೊಲೀಸರು
ಬೆಳ್ತಂಗಡಿ: ವಿದೇಶ ದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿಯ ಒಬ್ಬ ವಿಧ್ಯಾರ್ಥಿ ಸೇರಿದಂತೆ ಇಬ್ಬರನ್ನು ಮಂಗಳೂರು ನಗರ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಪೊಲೀಸರು ಆರೋಪಿಗಳಿಂದ ಏರ್‌ಟೆಲ್ ಕಂಪೆನಿಯ 86 ಸಿಮ್ ಕಾರ್ಡಗಳು, 2 ಮೊಬೈಲ್ ಪೋನ್‌ಗಳು, ಸ್ವಿಫ್ಟ್ ಕಾರು ಸಹಿತ 5,49,300 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ನಿವಾಸಿ ಗಳಾದ ಶಮದ್ ಮಹಮ್ಮದ್ ಸಮರ್ (26ವ) ಮತ್ತು ಮಹಮ್ಮದ್ ಅಜೀಂ (19ವ) ಬಂಧಿತರು. ಶಮದ್ ಮಂಗಳೂರು ನಗರದ ಕಾಲೇಜೊಂದರ ಬಿಬಿಎ ವಿದ್ಯಾರ್ಥಿಯಾಗಿದ್ದು, ಬಾಡಿಗೆ ಮನೆಯಲ್ಲಿದ್ದ....
ಧರ್ಮಸ್ಥಳದಲ್ಲಿ ಹೆದ್ದಾರಿಗಿಳಿದ ಕಾಡಾನೆ ವಾಹನಗಳು ಜಖಂ
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಇಳಿದ ಕಾಡಾನೆ ವಾಹನಗಳನ್ನು ಜಖಂಗೊಳಿಸಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಗುರುವಾರ ಬೆಳಗ್ಗೆ 7.40 ರ ಸುಮಾರಿಗೆ ಕಾಡನೆ ಬೊಳಿಯಾರು ಸಮೀಪ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ. ರಸ್ತೆ ದಾಟುತ್ತಿದ್ದ ಕಾಡನೆ ರಸ್ತೆಯಲ್ಲಿಯೇ ನಿಂತಿದ್ದು ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಬಂದ ಕೆ.ಎಸ್.ಆರ.ಟಿ.ಸಿ ಬಸ್ಸನ್ನು ಅಡ್ಡಗಟ್ಟಿದ ಕಾಡಾನೆ ಬಸ್ಸಿನ ಮುಂಭಾಗಕ್ಕೆ ತಿವಿದಿದ್ದು ಬಸ್ಸಿನ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದು ಬಂದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಇದೇ ವೇಳೆ ರಸ್ತೆಯಲ್ಲಿ ಬಂದ ದ್ವಿಚಕ್ರ ವಾಹನವನ್ನು ಬಿಟ್ಟು ಅದರ ಸವಾರ ಆನೆಯಿಂದ...















