ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ದ ದ್ವೇಷದ ರಾಜಕಾರಣ; ಶ್ರೀನಿವಾಸ ರಾವ್ ಆರೋಪ

0

ಬೆಳ್ತಂಗಡಿ; ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳುಕೇಸುಗಳನ್ನು ದಾಖಲಿಸುವ ಮೂಲಕ ದೈಹಿಕ ದಾಳಿ ನಡೆಸುವ ಮೂಲಕ ಭಯದ ವಾತಾವರಣ ರೂಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀ ನಿವಾಸ ರಾವ್ ಆರೋಪಿಸಿದ್ದರೆ.ಬೆಳ್ತಂಗಡಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯುವ ಮೋರ್ಚಾ ಅಧ್ಯಕ್ಷನ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದು. ಅದನ್ನು ಪ್ರಶ್ನಿಸಿದ ಶಾಸಕರ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಿ ಅವರನ್ನು ಬಂಧಿಸುವ ನಾಟಕ ಇದೀಗ ಕಳೆಂಜದಲ್ಲಿ ಎಸ್.ಟಿ ಮೋರ್ಚಾ ಅಧ್ಯಕ್ಷನ ಮೇಲೆ ನಡೆದ ಕೊಲೆಯತ್ನ ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿದೆ ಎಂದರು.ಇದೀಗ ಕಳೆಂಜದಲ್ಲಿ...

ರಾಜಕೇಸರಿ‌ ಟ್ರಸ್ಟ್ ವತಿಯಿಂದ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

0

ಬೆಳ್ತಂಗಡಿ; ಮನೋಜ್ ಕಟ್ಟೆಮರ್ ಇವರ ಹುಟ್ಟಿದಬ್ಬದ ಪ್ರಯುಕ್ತ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ ) ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣ ಕಾರ್ಯಕ್ರಮ ನಡೆಯಿತುಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾಕ್ಟರ್ ಚಂದ್ರಕಾಂತ್ ಇವರು ಶ್ರೀ ಮನೋಜ್ ಕಟ್ಟೆಮರ್ ಧರ್ಮದರ್ಶಿಗಳು ಶ್ರೀಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮರ್ ಇವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಆಸ್ಪತ್ರೆಯಲ್ಲಿ ಇರುವಂತಹ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು .. ಈ ಸಂದರ್ಭದಲ್ಲಿ ರಾಜ ಕೇಸರಿ ಟ್ರಸ್ಟಿನ ಸಂಸ್ಥಾಪಕರಾದ ದೀಪಕ್...

ನೈರುತ್ಯ ಶಿಕ್ಷಕರ ಕ್ಷೇತ್ರ ಜೆಡಿಎಸ್ ನ ಭೋಜೇಗೌಡ ಗೆಲುವು

0

ಬೆಳ್ತಂಗಡಿ; ದಕ್ಷಣ ಕನ್ನಡ ಜಿಲ್ಲೆಯನ್ನೂ ಒಳಗೊಂಡಿರುವ ವಿಧಾನ ಪರಿಷತ್ ನ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಯಾಗಿದ್ದ ಜೆಡಿಎಸ್ ನ ಎಸ್.ಎಲ್. ಭೋಜೇಗೌಡ ಗೆಲುವನ್ನು ಪಡೆದಿದ್ದಾರೆ.ಭೋಜೇಗೌಡ ಅವರು 5,267 ಮತಗಳ ಅಂತರದಿಂದ ಗೆಲುವು ಲಭಿಸಿದೆ. ಮೊದಲ ಪ್ರಾಶಸ್ತ್ಯ ದ ಮತಗಳ ಎಣಿಕೆಯಲ್ಲಿಯೇ ಗೆಲ್ಲಲು ಅಗತ್ಯವಿರುವ ಮತಗಳು ಅವರಿಗೆ ಲಭಿಸಿದೆ.ಭೋಜೇಗೌಡ ಅವರಿಗೆ 9,829ಮತಗಳು ಲಭಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ ಮಂಜುನಾಥ್ ಅವರಿಗೆ 4,562 ಮತಗಳು ಮಾತ್ರ ಲಭಿಸಿದವು.ಗೆಲುವಿನ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬರಬೇಕಾಗಿದೆ.

ಮಾಚಾರಿನಲ್ಲಿ ಹಲ್ಲೆ‌ ದಲಿತ ದೌರ್ಜನ್ಯ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ; ವಸಂತ ನಡ

0

ಬೆಳ್ತಂಗಡಿ; ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಜೂನ್ 2 ರಂದು ಮರಾಠಿ ನಾಯ್ಕ ಸಮುದಾಯದ ಅಶ್ವಥ್ ಎಂಬ ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಖಂಡನೀಯ ನಮ್ಮ ಸಮುದಾಯದ ಮೇಲೆ ಈ ರೀತಿಯ ಘಟನೆಗಳು ಮುಂದುವರಿದರೆ ಬೀದಿಗಿಳಿಯುವುದು ಅನಿವಾರ್ಯ ಎಂದು ತಾಲೂಕು ಮರಾಠಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ವಸಂತ ನಡ ಹೇಳಿದರು ಮಾಚಾರು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದ ಕರುಣಾಕರ ಗೌಡ ಎಂಬಾತ ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಕಿರುಕುಳವನ್ನು ನಮ್ಮ ಸಮುದಾಯದ ಅಶ್ವಥ್ ಪ್ರಶ್ನಿಸಿದ ಕಾರಣಕ್ಕಾಗಿ ಈ ಹಲ್ಲೆ...

ಮಾಚಾರಿನಲ್ಲಿ ಜಾತಿ ನಿಂದನೆ ಮಾಡಿ ಯುವಕನಿಗೆ ಹಲ್ಲೆ ಪ್ರಕರಣ ಆರೋಪಿ ಕರುಣಾಕರ ಗೌಡನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

0

ಬೆಳ್ತಂಗಡಿ : ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಪ್ರಕರಣ ಆರೋಪಿ ಕರುಣಾಕರ ಗೌಡ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಾಚಾರು ನಿವಾಸಿ ಅಶ್ವಥ್(21) ಎಂಬಾತನಿಗೆ ಜೂ.2 ರಂದು ಸಂಜೆ ಮೇಲಿನ ಮಾಚಾರು ಎಂಬಲ್ಲಿರುವಾಗ ಸದ್ರಿ ಸ್ಥಳಕ್ಕೆ ಆರೋಪಿಗಳಾದ ಕರುಣಾಕರ ಗೌಡ, ನಿತಿನ್ ಮತ್ತು ಇನ್ನೊಬ್ಬ ವ್ಯಕ್ತಿ ಬಂದು, ಅವರುಗಳ ಪೈಕಿ ಕರುಣಾಕರ ಗೌಡ(26) ಎಂಬಾತ ಅಶ್ವಥ್ ಗೆ ಜಾತಿ ನಿಂದನೆ ಮಾಡಿರುತ್ತಾರೆ ಹಾಗೂ ಮತ್ತೂರ್ವ ಆರೋಪಿತ ನಿತಿನ್ ಎಂಬವರೊಂದಿಗೆ ಸೇರಿ ಹಲ್ಲೆ...

ಕಣಿಯೂರಿನ ಪಿಲಿಗೂಡು ಶಾಲೆಯ ಬೀಗ ಒಡೆದು‌ ಕಳ್ಳತನ:

0

ಬೆಳ್ತಂಗಡಿ: ಕಣಿಯೂರು ಗ್ರಾಮದ ಪಿಲಿಗೂಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ ನಡೆದಿದ್ದು, ಖದೀಮರು ಶಾಲೆಯ ಬೀಗ ಒಡೆದು ಮಿಕ್ಸಿ, ಗ್ಯಾಸ್ ಹಂಡೆ ದೋಚಿದ್ದಾರೆ.ಬುಧವಾರ ರಾತ್ರಿ ಘಟನೆ ನಡೆದಿದೆ. ಅಕ್ಷರ ದಾಸೋಹ ಕೊಠಡಿಗೆ ನುಗ್ಗಿ ಅಲ್ಲಿಂದ ಗ್ಯಾಸ್ ಹಂಡೆ ಹಾಗೂ ಸುಮಾರು 8 ಸಾವಿರ ರೂ ಮೌಲ್ಯದ ಹೊಸ ಮಿಕ್ಸಿಯನ್ನು ಕದ್ದಿದ್ದಾರೆ. ಪಿಕ್ಕಾಸಿನಿಂದ ಮುಖ್ಯಶಿಕ್ಷಕರ ಕಚೇರಿಯನ್ನು ಒಡೆದು ಬಳಿಕ ಅಲ್ಲಿದ್ದ ಕಪಾಟನ್ನು ಜಾಲಾಡಿದ್ದಾರೆ. ಬಳಿಕ ತರಗತಿಗಳಲ್ಲಿಯೂ ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆ ಶಾಲಾ ಮಕ್ಕಳು ಬೀಗ ತೆರೆಯಲು ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ...

ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನ ಬಿಜೆಪಿ ಮುಖಂಡ ರಾಜೇಶ್ ವಿರುದ್ಧ ಫೋಕ್ಸೋ ಪ್ರಕರಣ ದಾಖಲು

0

ಬೆಳ್ತಂಗಡಿ : ಗಲಾಟೆ ವೇಳೆ ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನಿಸಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು. ಆರೋಪಿ ಬಿಜೆಪಿ ಮುಖಂಡನ ಮೇಲೆ ಮಾನಭಂಗ ಯತ್ನ, ಅವ್ಯಾಚ ಶಬ್ದಗಳಿಂದ ನಿಂದನೆ ಹಾಗೂ ಪೋಕ್ಸೋ ಅಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನಿಸಿದ ಪ್ರಕರಣ ಸಂಬಂಧ ಆರೋಪಿ ಬೆಳ್ತಂಗಡಿ ಬಿಜೆಪಿ ಮಂಡಲದ ಎಸ್ಟಿ ಮೊರ್ಚಾದ ಅಧ್ಯಕ್ಷ ರಾಜೇಶ್.ಎಮ್.ಕೆ ವಿರುದ್ಧ ಜೂ.5 ರಂದು ಮಾನಭಂಗ,ಅವ್ಯಾಚ ಶಬ್ದಗಳಿಂದ ನಿಂದನೆ ಹಾಗೂ ಫೋಕ್ಸೋ ಅಡಿಯಲ್ಲಿ...

ಕಳೆಂಜ ಬಿಜೆಪಿ ಮುಖಂಡನ ಕೊಲೆ‌ ಯತ್ನ ಪ್ರಕರಣ ಕಾಂಗ್ರೆಸ್ ಮುಖಂಡ ಕುಶಾಲಪ್ಪ ಗೌಡ ಬಂಧನ

0

ಬೆಳ್ತಂಗಡಿ : ಬಿಜೆಪಿ ಬೆಳ್ತಂಗಡಿ ತಾಲೂಕು ಮಂಡಲದ ಎಸ್ಟಿ ಮೋರ್ಚಾದ ಅಧ್ಯಕ್ಷ ಕಳೆಂಜ ಗ್ರಾಮದ ನಿವಾಸಿ ರಾಜೇಶ್ ಎಮ್.ಕೆ(33) ಮೇಲೆ ಜೂ.4 ರಂದು ರಾತ್ರಿ ಕೊಲೆ ಯತ್ನ ನಡೆಸಿದ ಆರೋಪಿಯನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾರ್ಯರ್ತಡ್ಕದಲ್ಲಿ ಕಾಂಗ್ರೆಸ್ ಮುಖಂಡ ಕಳೆಂಜ ನಿವಾಸಿ ಕುಶಲಪ್ಪ ಗೌಡ ಕಜೆ(48) ಎಂಬಾತನು ರಾಜೇಶ್ ಎಮ್.ಕೆ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಾತಿ‌ ನಿಂದನೆ ಮಾಡಿ, ಮರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ, ಚಿನ್ನ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.5 ರಂದು ಆರೋಪಿ...

ನೇಲ್ಯಡ್ಕದಲ್ಲಿ ಬೈಕ್ ಹಾಗೂ ಕಾರು ನಡುವೆ ಅಪಘಾತ ರೆಖ್ಯ ನಿವಾಸಿ‌ ಬೈಕ್ ಸವಾರ ಸ್ಥಳದಲ್ಲಿಯೇ ಸಾವು

0

ಬೆಳ್ತಂಗಡಿ: ಬೈಕ್‌ ಹಾಗೂ ಮಹೀಂದ್ರಾ ಎಕ್ಸ್'ಯುವಿ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪದ ನೇಲ್ಯಡ್ಕ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಮೃತ ಸವಾರನನ್ನು‌ ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ ನಾಳಾಲು ನಿವಾಸಿ ರವಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಹೀಂದ್ರಾ ಎಕ್ಸ್'ಯುವಿ ಕಾರು ಹಾಗೂ ಬೈಕ್ ನಡುವೆ ನೇಲ್ಯಡ್ಕ ಸಮೀಪ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ...

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಚ್ಚಿನದಲ್ಲಿ ವಿಶ್ವ ಪರಿಸರ ದಿನಾಚರಣೆ

0

ಬೆಳ್ತಂಗಡಿ; ಮನುಷ್ಯನಿಗೆ ಹಾಗು ಪರಿಸರಕ್ಕೆ ಅವಿನಾವ ಸಂಬಂದ ಇದೆ ಹಾಗಾಗೀ ಮನುಷ್ಯ ಪರಿಸರಕ್ಕೆ ಋಣಿಯಾಗಿ ಬದುಕಲೇಬೇಕೂ ಪರಿಸರ ವನ್ನೂ ಉಳಿಸಿ ಬೆಳೆಸುವ ದೃಷ್ಟಿಯಿಂದ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪರಿಸರಕ್ಕೆ ಪೂರಕವಾದ ಬೀಜದ ಉಂಡೆ ತಯಾರಿ, ಸಾಲು ಮರ ಕೆ ಗಿಡ ನಾಟಿ, ಶಾಲಾ ವನ ರಚನೆ, ದೇವರ ಕಾಡು ನಿರ್ಮಾಣ , ಕಾಡಿನಲ್ಲಿ ಹಣ್ಣಿನ ಗಿಡಗಳ ನಾಟಿ ಯ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆಯನ್ನು ನೀಡುತ್ತಿದ್ದಾರೆ ಎಂದು ಶ್ರೀ...