ಬೆಳ್ತಂಗಡಿ; ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಜೂನ್ 2 ರಂದು ಮರಾಠಿ ನಾಯ್ಕ ಸಮುದಾಯದ ಅಶ್ವಥ್ ಎಂಬ ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಖಂಡನೀಯ ನಮ್ಮ ಸಮುದಾಯದ ಮೇಲೆ ಈ ರೀತಿಯ ಘಟನೆಗಳು ಮುಂದುವರಿದರೆ ಬೀದಿಗಿಳಿಯುವುದು ಅನಿವಾರ್ಯ ಎಂದು ತಾಲೂಕು ಮರಾಠಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ವಸಂತ ನಡ ಹೇಳಿದರು
ಮಾಚಾರು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದ ಕರುಣಾಕರ ಗೌಡ ಎಂಬಾತ ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಕಿರುಕುಳವನ್ನು ನಮ್ಮ ಸಮುದಾಯದ ಅಶ್ವಥ್ ಪ್ರಶ್ನಿಸಿದ ಕಾರಣಕ್ಕಾಗಿ ಈ ಹಲ್ಲೆ ನಡೆಸಲಾಗಿದೆ. ಈತ ಈ ಹಿಂದೆ ಅಕ್ರಮ ಕಪ್ಪುಕಲ್ಲು ಗಣಿಗಾರಿಕೆ ಕೂಡ ನಡೆಸುತ್ತಿದ್ದ. ಸಣ್ಣಪುಟ್ಟ ಹಲ್ಲೆ, ದಾಂದಲೆ, ಗೂಂಡಾಗಿರಿ ನಡೆಸುತ್ತಿದ್ದ ಈತನ ಮೇಲೆ ಹಲವು ಕೇಸ್ ಗಳು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದು ಅಶ್ವಥ್ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರ ತಿಳಿದುಕೊಂಡ ಕರುಣಾಕರ ಗೌಡ ತನ್ನ ತಾಯಿಯನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಮಾನಭಂಗಕ್ಕೆ ಯತ್ನ ನಡೆದಿದೆ ಎಂದು ನಮ್ಮ ಸಮುದಾಯದ ಅಶ್ವಥ್ ಮತ್ತು ಮೇಲೆ ಸುಳ್ಳು ಕೇಸ್ ದಾಖಲಿಸಿರುವುದು ಅತ್ಯಂತ ಕಟು ಶಬ್ದಗಳಿಂದ ಖಂಡಿಸುತ್ತೇವೆ ಎಂದರು
ಎಂದರು.
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ ಲಾಯಿಲ ಮಾತನಾಡಿ ತನಗೆ ರಾಜಕೀಯ ಬೆಂಬಲವಿದೆ ಎಂದು
ಆರೋಪಿ ಕರುಣಾಕರ ಗೌಡ ಅಲ್ಲಿನ ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿಂದಿನ ಎಲ್ಲಾ ಕೇಸ್ ಗಳ ಆಧಾರದಲ್ಲಿ ಆತನನ್ನು ರೌಡಿಶೀಟರ್ ಪಟ್ಟಿಗೆ ಸೇರಿಸುವ ಕಾರ್ಯಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ
ಸಂಚಾಲಕ ಪ್ರಶಾಂತ್,ಮಾಚಾರ್ ವಿಶ್ವನಾಥ ನಾಯ್ಕ, ಉಪಸ್ಥಿತರಿದ್ದರು
