Home ಸ್ಥಳೀಯ ಸಮಾಚಾರ ಶ್ರೀ ಕ್ಷೇತ್ರ ಚಂದ್ರಪುರ. ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರ ಶಿಶಿಲದಲ್ಲಿ ಅಷ್ಟಾಹಿನಿಕ. ಪರ್ವ...

ಶ್ರೀ ಕ್ಷೇತ್ರ ಚಂದ್ರಪುರ. ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರ ಶಿಶಿಲದಲ್ಲಿ ಅಷ್ಟಾಹಿನಿಕ. ಪರ್ವ ಪೂಜಾ ಪ್ರಾರಂಭ

115
0

ಬೆಳ್ತಂಗಡಿ;: ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ ೧00೮. ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದಲ್ಲಿ ಪರಮಪೂಜ್ಯ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಕಾರ್ಕಳ ಇವರ ಶುಭ ಆಶೀರ್ವಾದದೊಂದಿಗೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಹೇಮಾವತಿ. ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಅಷ್ಣಹಿನಿಕಾ ಪೂಜಾ ಕಾರ್ಯಕ್ರಮ ಬಹುವಿಜೃಂಭಣೆಯಿಂದ ಪ್ರಾರಂಭವಾಯಿತು. ಉಜಿರೆಯ ಪ್ರಗತಿ ರಾಜಿತ್ ಶೆಟ್ಟಿ ಯವರು ಶ್ರೀ ಕ್ಷೇತ್ರ ಚಂದ್ರಪುರಕ್ಕೆ 52 ಜಿನ ಬಿಂಬಗಳಿರುವ ನಂದೀಶ್ವರ ಮಂಟಪವನ್ನು ದಾನವಾಗಿ ನೀಡಿದ್ದು ಕೊಲ್ಲಾಪುರ ಸಮೀಪ ಉದ್ಗಾವ್ ನಲ್ಲಿ ಆಚಾರ್ಯ ಶ್ರೀ ೧೦೮ ವಿಶುದ್ದ ಸಾಗರ ಮುನಿ ಮಹಾರಾಜರ ಅಮೃತ ಹಸ್ತದಿಂದ ನಂದೀಶ್ವರ ಮಂಟಪಕ್ಕೆಲಘು ಪಂಚಕಲ್ಯಾಣ ನೆರವೇರಿದ್ದು ಇಂದು ಆಷಾಢ ಮಾಸದ ಅಷ್ಟಾಹಿಣಿಕ ಪರ್ವದ ಮೊದಲ ಅಷ್ಟಮಿಯ ದಿನದಂದು ಬೆಳಿಗ್ಗೆ 10.30ಗಂಟೆಗೆ ಜಿನ ಮಂದಿರದಲ್ಲಿ. ವಿಶೇಷ ಆರಾಧನೆ ಹಾಗೂ ವಿಶೇಷ. ಪೂಜೆಗಳು ನೆರವೇರಿದ ನಂತರ ವಿರಾಜಮಾನಗೊಂಡಿದೆ ಈ ಪುಣ್ಯ ಕಾರ್ಯದಲ್ಲಿ ಹಲವಾರು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗಿಗಳಾದರು. ಇದೇ ಸಂದರ್ಭದಲ್ಲಿ ಉಜಿರೆಯ ಎಸ್ ಡಿ.ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.. ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here