ಬೆಳ್ತಂಗಡಿ; ದಕ್ಷಣ ಕನ್ನಡ ಜಿಲ್ಲೆಯನ್ನೂ ಒಳಗೊಂಡಿರುವ ವಿಧಾನ ಪರಿಷತ್ ನ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಯಾಗಿದ್ದ ಜೆಡಿಎಸ್ ನ ಎಸ್.ಎಲ್. ಭೋಜೇಗೌಡ ಗೆಲುವನ್ನು ಪಡೆದಿದ್ದಾರೆ.
ಭೋಜೇಗೌಡ ಅವರು 5,267 ಮತಗಳ ಅಂತರದಿಂದ ಗೆಲುವು ಲಭಿಸಿದೆ. ಮೊದಲ ಪ್ರಾಶಸ್ತ್ಯ ದ ಮತಗಳ ಎಣಿಕೆಯಲ್ಲಿಯೇ ಗೆಲ್ಲಲು ಅಗತ್ಯವಿರುವ ಮತಗಳು ಅವರಿಗೆ ಲಭಿಸಿದೆ.
ಭೋಜೇಗೌಡ ಅವರಿಗೆ 9,829ಮತಗಳು ಲಭಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ ಮಂಜುನಾಥ್ ಅವರಿಗೆ 4,562 ಮತಗಳು ಮಾತ್ರ ಲಭಿಸಿದವು.
ಗೆಲುವಿನ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬರಬೇಕಾಗಿದೆ.
