Home ಅಪರಾಧ ಲೋಕ ಮಾಚಾರಿನಲ್ಲಿ ಜಾತಿ ನಿಂದನೆ ಮಾಡಿ ಯುವಕನಿಗೆ ಹಲ್ಲೆ ಪ್ರಕರಣ ಆರೋಪಿ ಕರುಣಾಕರ ಗೌಡನನ್ನು ಬಂಧಿಸಿದ ಬೆಳ್ತಂಗಡಿ...

ಮಾಚಾರಿನಲ್ಲಿ ಜಾತಿ ನಿಂದನೆ ಮಾಡಿ ಯುವಕನಿಗೆ ಹಲ್ಲೆ ಪ್ರಕರಣ ಆರೋಪಿ ಕರುಣಾಕರ ಗೌಡನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

318
0

ಬೆಳ್ತಂಗಡಿ : ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಪ್ರಕರಣ ಆರೋಪಿ ಕರುಣಾಕರ ಗೌಡ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಾಚಾರು ನಿವಾಸಿ ಅಶ್ವಥ್(21) ಎಂಬಾತನಿಗೆ ಜೂ.2 ರಂದು ಸಂಜೆ ಮೇಲಿನ ಮಾಚಾರು ಎಂಬಲ್ಲಿರುವಾಗ ಸದ್ರಿ ಸ್ಥಳಕ್ಕೆ ಆರೋಪಿಗಳಾದ ಕರುಣಾಕರ ಗೌಡ, ನಿತಿನ್ ಮತ್ತು ಇನ್ನೊಬ್ಬ ವ್ಯಕ್ತಿ ಬಂದು, ಅವರುಗಳ ಪೈಕಿ ಕರುಣಾಕರ ಗೌಡ(26) ಎಂಬಾತ ಅಶ್ವಥ್ ಗೆ ಜಾತಿ ನಿಂದನೆ ಮಾಡಿರುತ್ತಾರೆ ಹಾಗೂ ಮತ್ತೂರ್ವ ಆರೋಪಿತ ನಿತಿನ್ ಎಂಬವರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 64/2024, ಕಲಂ: 341,323,324,ಜೊತೆಗೆ 34 ಬಾ ದಂ ಸಂ ಮತ್ತು ಕಲಂ 3(1)(S) SC/ST ACT 2015 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ ನೇತೃತ್ವದಲ್ಲಿ ಪ್ರಕರಣದ ಆರೋಪಿ ಕರುಣಾಕರ ಗೌಡ(26)ನನ್ನು ಜೂ.5 ರಂದು ರಾತ್ರಿ ಬಂಧಿಸಿ ಮಂಗಳೂರು ಸೆಷನ್ಸ್ ಕೋರ್ಟ್ ನ್ಯಾಯಾಧೀಶರ‌ ಮನೆಗೆ ಹಾಜರುಪಡಿಸಿದ್ದು.‌ನ್ಯಾಯಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದರು. ಜೂ.6 ರಂದು ಮಂಗಳೂರು ಕೋರ್ಟ್ ಗೆ ಹಾಜರು ಪಡಿಸಲು ಸೂಚಿಸಿದ್ದ ಕಾರಣ ಆರೋಪಿಯನ್ನು ಕೋರ್ಟ್ ಗೆ ಜೂ.6 ರಂದು ಹಾಜರುಪಡಿಸಿದ್ದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

LEAVE A REPLY

Please enter your comment!
Please enter your name here