ಬೆಳ್ತಂಗಡಿ; ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ
೧೦೦೮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಸಂಪತ್ ಶುಕ್ರವಾರ ಪ್ರಯುಕ್ತ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಭಗವಾನ್ ೧೦0೮ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಗಂಧ ಅಭಿಷೇಕ.. ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಶ್ರೀ ಸರ್ವಾಹ್ನ ಯಕ್ಷ ಆರಾಧನೆಯನ್ನು ಅಳದಂಗಡಿಯ ಪ್ರತಿಷ್ಠಾಪರೋಹಿತರಾದ ಶ್ರೀ ಪದ್ಮ ಪ್ರಭ ಇಂದ್ರರು, ಅರಹಂತ ಇಂದ್ರ. ಶ್ರೀಕೀರ್ತಿ ಇಂದ್ರ ಹಾಗೂ ಇನ್ನಿತರ ಪುರೋಹಿತರ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಲೋಕ ಕಲ್ಯಾಣರ್ಥವಾಗಿ ಮಾಡಿದ ಆರಾಧನೆ ಪೂಜಾ ಕರ್ತೃಗಳಾಗಿ ನಾರಾವಿ ಮೇಲoಟೆ ಗುತ್ತು ಪ್ರೇಮ ನಿಲಯದ ಶ್ರೀಮತಿ ಪ್ರೇಮ ಕಲಾ ಭಾಗವಹಿಸಿದ್ದರು.
ಈ ಪುಣ್ಯ ಕಾರ್ಯದಲ್ಲಿ ಆಡಳಿತ ಮಂಡಳಿಯ ಡಾ ಕೆ.ಜಯಕೀರ್ತಿ ಜೈನ್, H. ವಿಜಯಕುಮಾರ್, ಜಿನರಾಜ ಪೂವಣಿ, ಫಣಿರಾಜ್ ಜೈನ್ ಗುಣವರ್ಮ, ವೀರೇಂದ್ರ ಕುಮಾರ್ ಜಿತೇದ್ರ ಜೈನ್ ಪಿ. ಯನ್, ರವಿರಾಜ್ ಪರಪ್ಪು ಹಾಗೂ ನೂರಾರು ಶ್ರಾವಕ ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗ್ಯಗಳಾದರು..
